KGF ನ ನಿಜ ರಕ್ತಪಾತ : ಎಲ್ಲರೂ ಓದಲೇ ಬೇಕಾದ ಲೇಖನ..! ಅಂಬೇಡ್ಕರ್ ರವರಿಗು,ಕೆಜಿಎಫ್‌ಗು,ದಲಿತರಿಗೂ ಮತ್ತು ಶೋಷಿತವರ್ಗಕ್ಕು ಇರುವ ನೇರ ನೇರ ಸಂಬಂಧ
ಮೂಲ: ಸುದ್ದಿಮನೆ KGF ಎಂಬ ಸಿನೆಮಾ ಇನ್ನೇನು ತೆರೆಯ ಮೇಲೆ ಬರಲಿದೆ.ಸಿನೆಮಾದ ನಾಯಕ ಯಶ್ ಎಂಬ ಕಾರಣದಿಂದ ಅದಕ್ಕೆ ಭಾರೀ ಪ್ರಚಾರ ಮತ್ತು ನಿರೀಕ್ಷೆ ಎರಡೂ ನಡೆದಿದೆ.ಆದರೆ ಈ ಹೆಸರಿನ ಹಿಂದೆ ದಲಿತರ ರಕ್ತಸಿಕ್ತ ಅಧ್ಯಾಯ ಮತ್ತು ಚಳುವಳಿಯನ್ನು ದಿಟ್ಟವಾಗಿ ಮುನ್ನಡೆಸಿದ ಇತಿಹಾಸ ಇರುವ ವಿಚಾರ ಎಷ್ಟು ಜನರಿಗೆ ಗೊತ್ತಿದೆ? ಸುಮಾರು ಹದಿಮೂರು ಸಾವಿರ ಅಡಿಗಳಷ್ಟು ಆಳವಿರುವ ಜಗತ್ತಿನ ಏಕೈಕ ಆಳದ ಗಣಿತೋಡಿದ ಅವರು ಎಷ್ಟು ನರಕ ಹಿಂಸೆ ಅನುಭವಿಸಿದರೋ ಯಾರಿಗೆ ಗೊತ್ತು? 1881 ರಿಂದ1930 ರ ಅವಧಿಯಲ್ಲಿ ಜಗತ್ತಿಗೆ ಮೂರುಲಕ್ಷಕ್ಕೂ ಹೆಚ್ಚು ಕಿಲೋಗ್ರಾಂ ತೂಕದ ಚಿನ್ನವನ್ನು ಸಂಪಾದಿಸಿಕೊಟ್ಟ ಅವರ ಶ್ರಮ ಬೆವರಿಗೆ ಸಿಕ್ಕ ಬೆಲೆಯೇನು ಗೊತ್ತಾ 12000 ಕಾರ್ಮಿಕರ ಬಲಿ, ಇದು ಯಾರಿಗೆ ಗೊತ್ತು? ಹೌದು 1881 ರಲ್ಲಿ ಚಿನ್ನದ ಗಣಿಗಾರಿಕೆ ಕೆಲಸಕ್ಕೆ ಬ್ರಿಟೀಷ್ ಸರ್ಕಾರ ದಲಿತರನ್ನ ಆಯ್ಕೆ ಮಾಡಿತು, ಅದು ಮುಂದಾಲೋಚನೆ ಮಾಡಿ, ಕೇವಲ ಕೂಲಿಗಾಗಿ ಹಗಲು-ರಾತ್ರಿಯನ್ನದೆ ದುಡಿಯುತ್ತಿದ್ದ ಶ್ರಮಿಕವರ್ಗವಾಗಿತ್ತು, ಬೇರೆ ಪ್ರಭಾವಿ ಜನಾಂಗದವರಂತೆ ಯಾವ ಪಾಲನ್ನು ಅಪೇಕ್ಷಿಸದೆ ಇದ್ದ ಕಾರಣ ಅವರಿಗೆ ಇಂತಿಷ್ಟು ಕೂಲಿ ನಿಗದಿಪಡಿಸಿ, ಗಣಿಯ ಸುತ್ತ ವಸತಿ ವ್ಯೆವಸ್ತೆ ಕಲ್ಪಿಸಿ ದುಡಿಸಿಕೊಳ್ಳಲಾಗಿತ್ತು, ಅದು ಯಾವ ಮಟ್ಟದಲ್ಲಿ ಅಂದರೆ ಗಣಿ ಸುತ್ತಲಿನ ಸುಮಾರು 10-15 ಕಿ ಮೀ ಪ್ರದೇಶದಲ್ಲಿ ಬೇರೆ ಜನಾಂಗಗಳ ಪ್ರವೇಶಕ್ಕೆ ಅವಕಾಶವೇ ಇಲ್ಲದ ಮಟ್ಟಿಗೆ ನಿರ್ಭಂಧಿಸಿದ್ದರೂ, ( ಅದನ್ನು...