Skip to main content

Posts

Showing posts from January, 2019

ಮುಖವಾಡದ ಮರೆಯಲ್ಲಿ....

ಸಂತೆಯಲ್ಲಿ ಬೆತ್ತಲಾದ ಸಂತ........ ಮುಖವಾಡದ ನೆರಳಿನಲ್ಲಿ ನಿಂತು ಬೆಚ್ಚಿಬಿದ್ದರು ಜನ.......... ಬೆಲೆ ಕಟ್ಟುತ್ತಿದ್ದರು ವ್ಯಾಪಾರಿಗಳು....... ಪ್ರೀತಿಗಿಷ್ಟು - ಕರುಣೆಗಿಷ್ಟು - ಗೆಳೆತನಕ್ಕಿಷ್ಟು - ಮನುಷ್ಯತ್ವಕ್ಕಿಷ್ಟು ರೂಪಾಯಿಗಳು.....‌‌..‌ ಕೊಳ್ಳುತ್ತಿದ್ದರು ಜನಗಳು ಚೌಕಾಸಿ ಮಾಡಿ ತಮಗೆಟುಕಿದ ಬೆಲೆಕೊಟ್ಟು........ ಸಂಬಂಧಗಳು ಕೂಡ ಮಾರಾಟವಾಗುತ್ತಿದ್ದವು ಹರಾಜಿನಲ್ಲಿ...... ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ಬೆತ್ತಲೆ ದೇಹ ಕಂಡು ದಂಗಾದರು ನೆರೆದವರು............ ಸಂತ ಜೋರು ಧ್ವನಿಯಲ್ಲಿ ಹಾಡುತ್ತಿದ್ದ........ ಇವು ಮಾರಾಟದ ಸರಕುಗಳಲ್ಲ - ನಿಮ್ಮೊಳಗಡಗಿರುವ ಭಾವಗಳು ...... ವ್ಯಾಪಾರ ಮಾಡಬೇಡಿ ಹಣಕೊಟ್ಟು ಕೊಳ್ಳಬೇಡಿ............. ಜನರು ಗೊಂದಲಕ್ಕೊಳಗಾದರು, ವ್ಯಾಪಾರಿಗಳು ಆಕ್ರೋಶಗೊಂಡರು...... ಸಂತೆಯ ಸುಂಕದವನಿಗೆ ಬದುಕೇ ಕುಸಿದಂತಾಯಿತು........ ಅಲ್ಲಿಯೇ ಇದ್ದ ಕುಲುಮೆಯಿಂದ ಮಚ್ಚನ್ನು ಎತ್ತಿಕೊಂಡು ಸಂತನೆಡೆಗೆ ಬೀಸಿದ........ ಆಕಾಶ ನೋಡಿ ಹಾಡುತ್ತಿದ್ದ ಸಂತನ ತಲೆ ಸೀಳಿ ಸ್ಥಳದಲ್ಲೇ ಕುಸಿದು ಸತ್ತ............. ವ್ಯಾಪಾರಿಗಳು ಗಹಗಹಿಸಿ ನಗುತ್ತಾ ಕುಣಿದು ಕುಪ್ಪಳಿಸಿದರು......... ಸುಧಾರಿಸಿಕೊಂಡ ಜನರು ಮತ್ತೆ ವ್ಯಾಪಾರದಲ್ಲಿ ತೊಡಗಿದರು....... ಈಗ ಅವುಗಳ ಬೆಲೆಯನ್ನು ದುಪ್ಪಟ್ಟು ಮಾಡಿದರು ದಲ್ಲಾಳಿಗಳು......... ಸಂತೆ ಮತ್ತೆ ಭರ್ಜರಿಯಾಗಿ ನಡೆಯತೊಡಗಿತು....... ಬೆತ್...

ಮಧ್ಯಪಾನವನ್ನು ನಿಷೇಧಿಸಿ - ನಮ್ಮ ಸಂಸಾರಗಳನ್ನು ಉಳಿಸಿ"

'ದುಡಿಯವ ತಾಯಂದಿರ ಕಾಲುಗಳನ್ನು ಮತ್ತಷ್ಟು ದಣಿಸದಿರಿ' 'ಮದ್ಯಪಾನ ನಿಷೇಧಿಸಿ ನಮ್ಮ ಸಂಸಾರಗಳನ್ನು ಉಳಿಸಿ' ಎಂಬ ಅಹವಾಲಿನೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿನತ್ತ ಬರಿಗಾಲಲ್ಲಿ ಇಲ್ಲವೆ ಹರಿದ ಚಪ್ಪಲಿಗಳಲ್ಲಿ ನಡೆದು ಬರುತ್ತಿರುವ ಮಹಿಳೆಯರ ನೋವಿಗೆ ಕಿವಿಗೊಟ್ಟು, ಸಮಸ್ಯೆಗೆ ಪರಿಹಾರ ಸೂಚಿಸಿ' ಎಂದು ಸಾಹಿತಿ ದೇವನೂರ ಮಹಾದೇವ ಹಾಗೂ ಎಸ್‌.ಆರ್‌. ಹಿರೇಮಠ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ. 'ದುಡಿದ ಗ್ರಾಮೀಣ ಮಹಿಳೆಯರ ಕಾಲುಗಳನ್ನು ಮತ್ತಷ್ಟು ದಣಿಸದಿರಿ, ಬೆಂದಿರುವ ಮನಸುಗಳನ್ನು ಮತ್ತಷ್ಟು ಬಳಲಿಸದಿರಿ. ಮೊದಲು ಅವರ ಜೊತೆ ಕೂತು ಮಾತನಾಡಿ' ಎಂದು ಅವರು ಪತ್ರದಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ. ಪತ್ರದ ಪೂರ್ಣಪಾಠ ** ಮಾನ್ಯ ಮುಖ್ಯಮಂತ್ರಿ ಶ್ರೀ ಎಚ್.ಡಿ.ಕುಮಾರಸ್ವಾಮಿಯವರೇ, ತುರ್ತು ಸಾಮಾಜಿಕ ಅಳಲೊಂದನ್ನು ತಮ್ಮ ಗಮನಕ್ಕೆ ತರಲೇಬೇಕಿರುವುದರಿಂದ ನಾವು ಈ ಬಹಿರಂಗ ಪತ್ರ ಬರೆಯುತ್ತಿದ್ದೇವೆ. ನಮ್ಮ ಗ್ರಾಮೀಣ ತಾಯಂದಿರು ಬರಿಗಾಲಲ್ಲಿ ಅಥವಾ ಹರಿದ ಚಪ್ಪಲಿಗಳಲ್ಲಿ, "ಮಧ್ಯಪಾನವನ್ನು ನಿಷೇಧಿಸಿ - ನಮ್ಮ ಸಂಸಾರಗಳನ್ನು ಉಳಿಸಿ" ಎಂಬ ಅಹವಾಲಿನೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ನಿಮ್ಮನ್ನು ಕಾಣಲು ಬೆಂಗಳೂರಿನತ್ತ ನಡೆದು ಬರುತ್ತಿದ್ದಾರೆ. ಅವರು ನಡೆಯಲು ಪ್ರಾರಂಭಿಸಿ ಇಂದಿಗೆ 5 ದಿನಗಳಾದುವು. ಇದೇ 19ರಂದು ಚಿತ್ರದುರ್ಗದಿಂದ ಅವರು ಪಾದಯ...

ನೇತಾಜಿ ನಿಮಗಿದೋ ನಮನ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತಾ ................... ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮತ್ತು ನೇತಾಜಿಯವರನ್ನು ವಿಭಿನ್ನ ನೆಲೆಯಲ್ಲಿ ನೋಡುವ ಪ್ರಯತ್ನ....... ಭಾವನೆಗಳನ್ನು - ಫಲಿತಾಂಶಗಳನ್ನು ಪಕ್ಕಕ್ಕಿಟ್ಟು ವಾಸ್ತವ ಮತ್ತು ಸತ್ಯದ ಆಧಾರದ ಮೇಲೆ ಒಂದು ಹುಡುಕಾಟ. ನಮ್ಮ ಸ್ವಾತಂತ್ರ್ಯ ಹೋರಾಟದ ಅತ್ಯಂತ ನತದೃಷ್ಟ ವ್ಯಕ್ತಿ ಬೋಸ್. ಗಾಂಧಿ ನಂತರದ ಮಹತ್ವದ ವ್ಯಕ್ತಿಯೂ ಸಹ. ನೆಹರು ಮತ್ತು ಬೋಸರ ಆಯ್ಕೆಯಲ್ಲಿ ಗಾಂಧಿ ತಮ್ಮ ಅಜ್ಞಾಪಾಲಕರು - ಸೌಮ್ಯ ಸ್ವಭಾವದವರು - ಸೂಕ್ಷ್ಮ ಮತಿಗಳು ಆದ ನೆಹರು ಅವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದಷ್ಟು ಆಕ್ರಮಣಕಾರಿಯೂ ದುಡುಕು ಸ್ವಭಾವದವರೂ ಆದ ಸುಭಾಷರು ಸಹಜವಾಗಿ ಗಾಂಧಿಯವರ ಅಸಹನೆ, ಅಸಮಾಧಾನ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. .ಅದು ಆ ಕ್ಷಣದ ಸರಿಯಾದ ಆಯ್ಕೆ ಇರಬಹುದು. ಗಾಂಧಿಯವರ ಅಹಿಂಸೆಯಷ್ಟೇ ಪ್ರಬಲ ಅಸ್ತ್ರವಾದ ಅಂದರೆ " ಸ್ವಾಭಿಮಾನದ ರಕ್ಷಣೆಗಾಗಿ, ಈ ನೆಲದ ಉಳಿವಿಗಾಗಿ " ಆಕ್ರಮಣದ - ಕೆಚ್ಚೆದೆಯ ( ಖಂಡಿತ ಅದು ಹಿಂಸೆಯಲ್ಲ - ರಕ್ಷಣಾತ್ಮಕ ವಿಧಾನ ) ಸೈನಿಕ ಹೋರಾಟ ಮಾಡಿದವರು ನೇತಾಜಿ. ಗಾಂಧಿಯಂತ ಅತ್ಯಂತ ಪ್ರಬಲ ಮತ್ತು ಆಗಿನ ಬಹುತೇಕ ಜನರ ಆರಾಧ್ಯದೈವವಾಗಿದ್ದ, ತಮ್ಮ ಚಿಂತನೆಗಳಿಂದ ಇಡೀ ದೇಶವನ್ನೇ ಆಕ್ರಮಿಸಿದ್ದ ವ್ಯಕ್ತಿಯ ಇಷ್ಟಕ್ಕೆ ವಿರುಧ್ಧವಾಗಿ ಎರಡು ಬಾರಿ ರಾಷ್ಟ್ರೀಯ ಕಾಂಗ್ರೇಸ್ ಪಕ್ಷ...

ಆಕಸ್ಮಿಕ ಪ್ರಧಾನ ಮಂತ್ರಿ

" ಆಕಸ್ಮಿಕ ಪ್ರಧಾನ ಮಂತ್ರಿ " " Accidental prime minister " ಎಂಬ ಸಿನಿಮಾ ಮತ್ತು ಮುಂದಿನ ದಿನಗಳಲ್ಲಿ ಸಿನಿಮಾಗಳ ಮುಖಾಂತರವೇ ಇತಿಹಾಸವನ್ನು ಅರ್ಥೈಸುವ ಹೊಸ ಜನಾಂಗ ಮತ್ತು ಅದರಿಂದಾಗುವ ಘನಘೋರ ಪರಿಸ್ಥಿತಿಯನ್ನು ನೆನೆದು ಮನಸ್ಸು ಮುದುಡಿಹೋಯಿತು. ಈ ಕ್ಷಣದಲ್ಲಿ ನಿಂತು ನೋಡಿದಾಗ, ಸಾಮಾನ್ಯ ಜನರ ಭಾವನೆಯಲ್ಲಿ ಸಿನಿಮಾ ಎಂಬುದು ಮನರಂಜನೆಯನ್ನೇ ಮುಖ್ಯವಾಗಿ, ಸಂದೇಶಗಳನ್ನು ನೆರಳಾಗಿ, ವ್ಯಾಪಾರವನ್ನು ಧ್ಯೇಯವಾಗಿ, ಪ್ರಶಸ್ತಿಯನ್ನು ಉದ್ದೇಶವಾಗಿ ಇಟ್ಟುಕೊಂಡು ನಿರ್ಮಿಸುವ ದೃಶ್ಯ ಮಾಧ್ಯಮ ಎಂದೇ ಪರಿಗಣಿಸಲಾಗಿದೆ. ಯಾವುದೇ ಅಧೀಕೃತತೆ, ಖಚಿತತೆ, ಉತ್ತರದಾಯಿತ್ವ ಇಲ್ಲದೆ ನಿರ್ದೇಶಕನ ಕ್ರಿಯಾತ್ಮಕತೆಯ ಮೇಲೆಯೇ ಬಹುತೇಕ ಸಿನಿಮಾಗಳು ಸೃಷ್ಟಿಯಾಗುತ್ತವೆ. ಸಿನಿಮಾ ಕಥೆ ಕಾದಂಬರಿಗಳ ಮೂಲಗುಣ ಅದನ್ನು ರಚಿಸುವವರ ಭಾವನೆಯಂತೆಯೇ ಅದರ ಎಲ್ಲಾ ಪಾತ್ರಗಳನ್ನು ನಿಯಂತ್ರಿಸುತ್ತಾರೆ. ಸರಸ, ವಿರಸ, ಹೊಡೆದಾಟ,ಅಸೂಯೆ, ವಂಚನೆ, ವಿದ್ರೋಹ...... ಎಲ್ಲಾ ಘಟನೆಗಳು ಆತನದೇ ಸೃಷ್ಟಿ ಮತ್ತು ಪಾತ್ರಗಳು ಅವನು ಹೇಳಿದಂತೆಯೇ ಕೇಳುತ್ತವೆ. ಇಂತಹ ಒಂದು ಮಾಧ್ಯಮ ಅಶೋಕ, ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ಶಿವಾಜಿ, ಸಚಿನ್ ತೆಂಡೂಲ್ಕರ್, ಮೇರಿಕೋಮ್, ವೀರಪ್ಪನ್, ಇಂದಿರಾಗಾಂಧಿ, ಮನಮೋಹನ್ ಸಿಂಗ್, ನರೇಂದ್ರ ಮೋದಿ........ ಹೀಗೆ ಇತಿಹಾಸ ಮತ್ತು ವರ್ತಮಾನದ ಪಾತ್ರಗಳನ್ನು ಅದರ ಸಜಹ ರೂಪದಲ್ಲಿ ನಮ್ಮ ಮುಂದೆ ಇಡಲು ಸಾಧ್ಯವೇ....

ಯುವಕರ ಐಕಾನ್ - ಸ್ವಾಮಿ ವಿವೇಕಾನಂದ

ಯುವಕರ ಐಕಾನ್ - ಭಾರತೀಯತೆಯ ವಿಶ್ವದ ರಾಯಭಾರಿ - ಸಾಂಸ್ಕೃತಿಕ ಚಿಂತನೆಯಲ್ಲಿ ವೈಚಾರಿಕತೆ ಅಳವಡಿಸಿದ - ಆರೋಗ್ಯವಂತ ಬಲಿಷ್ಠ ಭಾರತದ ಕನಸು ಕಂಡ - ಸ್ವಾಮಿ ವಿವೇಕಾನಂದರನ್ನು ( ಜನವರಿ ೧೨ ) ಜನುಮದಿನದ ಸಂಧರ್ಭದಲ್ಲಿ ನೆನೆಯುತ್ತಾ.............. ಇಂದಿನ ಆಧುನಿಕ ಯುವ ಸಮೂಹ ಅವರಿಂದ ಪ್ರೇರಣೆ ಹೊಂದಿ ಪ್ರಗತಿಯ ಕಡೆಗೆ ಮುನ್ನಡೆಯುವ ಬದಲು ಅದರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದು ದುರಂತವಾಗಿದೆ. ವಾಸ್ತವದಲ್ಲಿ ಒಂದಷ್ಟು ಭಾರತೀಯ ಯುವ ಶಕ್ತಿ ಇಂದಿನ ದಿನಗಳಲ್ಲಿ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿರುವುದು ನನಗೆ ಹೀಗೆ ಕಾಣುತ್ತಿದೆ .............‌‌‌‌‌ ಯುವಕನೊಬ್ಬ ತನ್ನ ಕ್ರಿಯಾಶೀಲತೆಯಿಂದ ಸಮಾಜಕ್ಕೆ ಕೊಡುಗೆ ನೀಡುವುದನ್ನು ಮರೆತು, ಮಧ್ಯರಾತ್ರಿ ಬೈಕನ್ನು Wheeling ಮಾಡುತ್ತಾ, ತಾನು ಮೋಜು ಅನುಭವಿಸಿ ಇತರರಿಗೆ ತೊಂದರೆ ಕೊಡುತ್ತಾನೋ, ಸಮಾಜಕ್ಕೆ ಕಂಟಕ ಪ್ರಾಯವಾಗುತ್ತಾನೋ, ಅವನನ್ನೇ ಬದುಕನ್ನು ಸಂಪೂರ್ಣ Enjoy ಮಾಡುವ ನಿಜವಾದ ಆಧುನಿಕ ಭಾರತೀಯ ಯುವಕ ಎಂಬ ಅಭಿಪ್ರಾಯ ಮೂಡಿಸಲಾಗಿದೆ . ಯುವತಿಯೊಬ್ಬಳು ತನ್ನ ಧೈರ್ಯ ಸಾಮರ್ಥ್ಯ ಶ್ರಮ ಸಹನೆಯಿಂದ ಪುರುಷರೊಂದಿಗೆ ಸಮಾನತೆ ಸಾಧಿಸದೆ, ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇದಿ, ಎಣ್ಣೆ ಹೊಡೆದು, ಕುಣಿದು ಕುಪ್ಪಳಿಸಿ ಸ್ವೇಚ್ಚೆ ಮೆರೆಯುತ್ತಾಳೋ, ಆಕೆಯೇ ನಿಜವಾದ ಆಧುನಿಕ ಭಾರತೀಯ ಯುವತಿಯರ ಪ್ರತಿನಿಧಿ ಎಂದು ಭ್ರಮಿಸುವಂತಾಗಿದೆ. ಯಾವ ವಿದ್ಯಾರ್ಥಿ ಕಾಲೇಜಿನಲ್ಲಿ ಕ...