ಮಲೆಯಾಳಂ ಸಿನಿಮಾದಲ್ಲಿ ಒಂದು ದೃಶ್ಯ ಬರುತ್ತದೆ ಅದರಲ್ಲಿ ಮೊಮ್ಮಗ ಅಜ್ಜೀನಾ ಕೇಳ್ತಾನೆ "ಅಜ್ಜೀ ನೀನ್ಯಾಕೆ ದೇವರನ್ನ ನಂಬಲ್ಲ" ಅಂತಾ ಅಜ್ಜೀ ನಕ್ಕು ಹೇಳ್ತಾಳೆ "ಮಗಾ ದೇವರು ಕಲ್ಲಲ್ಲೂ ಇದಾನೆ ಮಣ್ಣಲ್ಲು ಇದಾನೆ ನೀರಲ್ಲು ಇದಾನೆ" ಪ್ರತಿಬಾರಿ ಸೇತುವಿಗೆ ಬಂದಾಗಲೆಲ್ಲ ನಾನು ಆ ಮಾತುಗಳನ್ನ ಈ ಸೇತುವಿನ ಕುರಿತು ಹೇಳಿದ್ದೇನೋ ಅನ್ನಿಸಿಬಿಡುತ್ತದೆ. *ಎಲ್ಲಿದೆ ಸೇತು?* ಸೇತು ರಾಜ್ಯ ಭೌಗೋಳಿಕವಾಗಿ ಇಂದಿನ ತುಮರಿ ಗ್ರಾಮ ಪಂಚಾಯತ್ ಚಿಮಲೆ ಗ್ರಾಮದ ಏಳಿಗೆ ಮತ್ತು ಕಿರತೋಡಿ ಊರಿನ ಸಮೀಪ ಇದೆ. ಶಾಸನ ಶಾಸ್ತ್ರಗಳ ಪಿತಾಮಹ ಎಂದು ಕರೆಯಲ್ಪಡುವ ಬಿ.ಎಲ್ ರೈಸ್ ಸೇತು ರಾಜ್ಯವನ್ನು ಸಾಗರದ ನೈರುತ್ಯ ದಿಕ್ಕಿನಲ್ಲಿದೆ ಎಂದು ಎಪಿಗ್ರಾಫಿಯಾ ಕರ್ನಾಟಿಕಾ ವಾಲ್ಯೂಮ್ ೮ ರಲ್ಲಿ ದಾಖಲಿಸಿದ್ದಾರೆ. ಇಂದು ಜುಲೈ ೧೦ ಬಿ.ಎಲ್ ರೈಸ್ ಗತಿಸಿದ ದಿನ , 1875 ರಿಂದ 1900 ನಡುವೆ ಅವರು ಸೇತುವಿನತ್ತಿರ ಬಾರದೆ ಇದ್ದಿದ್ದರೆ ಸೇತುವನ್ನು ದಾಖಲಿಸದೆ ಇದ್ದಿದ್ದರೆ ಇತಿಹಾಸದ ಪುಟಗಳಲ್ಲಿ ಸೇತು ನೀರಿನಡಿಯಲ್ಲಿ ಕಲ್ಲಾಗಿ ಮಣ್ಣಾಗಿ ನಾಶಾವಾಗುವದ ನೆನೆಸಲು ಯಾವುದು ಉಳಿದಿರುತ್ತಿರಲಿಲ್ಲ ರೈಸ್‌ರವರು ಅಗಲಿ ಇಂದಿಗೆ 99 ವರ್ಷಗಳ ನಂತರ ಸೇತುವಿನ ನೆಲದಿಂದ ಗೌರವಾರ್ಥವಾಗಿ ಈ ಲೇಖನವನ್ನು ದಾಖಲಿಸಿದ್ದೇನೆ ( ಇಲ್ಲಿರುವ ಯಾವ ಸಾಲುಗಳು ಕಟ್ಟುಕತೆಗಳಲ್ಲ ಇತಿಹಾಸದಲ್ಲಿ ಘಟಿಸಿದ ಕಲ್ಲುಗಳಲ್ಲಿ ಕೆತ್ತಿದ ಜೀವಂತ ಕತೆ...