Skip to main content

Posts

Showing posts from 2019

ಕಿವಿ ಮಾತ್ರ ನಂಬದೆ ಕಣ್ಣು ತೆರೆದು ನೋಡಿದರೆ...... ಪರಮೇಶ್ವರ್ ಕರೂರು ಅವರ ಈ ಬರಹ ನಿಮಗಾಗಿ

ಕಿವಿ ಮಾತ್ರ ನಂಬದೆ ಕಣ್ಣು ತೆರೆದು ನೋಡಿದರೆ...... *ನಾನು ಶುಂಠಿ ಪರಮೇಶ್ ಕರೂರು*. ನನ್ನ ಊರಿನ ತುಮರಿ ಗ್ರಾಮ ಪಂಚಾಯಿತಿ ಮೇಲೆ ನಕಲಿ ರಸೀದಿ ಪುಸ್ತಕ ಆರೋಪ ಬಂದಿದೆ. ಮಾಧ್ಯಮದಲ್ಲಿ ದೊಡ್ಡ ಸುದ್ದಿ ಆಗಿದೆ. ಈ ಹೊತ್ತಿನಲ್ಲಿ ನಾನು ಮೌನ ಮುರಿಯದೇ ಇದ್ದರೆ ಅಪರಾಧ ಆಗುತ್ತದೆ ಎಂಬ ಕಾರಣಕ್ಕೆ ಯೋಚಿಸಿ ಈ ಬರಹ ಬರೆಯಲು ಕುಳಿತಿರುವೆ. ಮೊನ್ನೆ ಪ್ರಕರಣದಲ್ಲಿ ಎರಡೇ ಪ್ರಶ್ನೆ ಇರುವುದು, ಇದು ಪಂಚಾಯ್ತಿ ಆಡಳಿತ ವೈಪಲ್ಯವೋ ಅಥವಾ ಪಾಲುದಾರಿಕೆಯ ಹಗರಣವೋ...? ಎರಡನೇ ನಿರ್ಧಾರ ಬರಲು ನನಗೆ ಸುಲಭ ಸಾಧ್ಯ ಆಗಲಿಲ್ಲ. ಹೊಳೆಬಾಗಿಲು ತುಮರಿಯಿಂದ 7 ಕೀ ಮೀ ದೂರ ಇದೆ. ನಕಲಿ ಟಿಕೆಟ್ ನೀಡಿದ್ದಾರೆ ಎನ್ನುವ ಜಾಗ ಪಂಚಾಯತ್ ಕಾರ್ಯ ವ್ಯಾಪ್ತಿಯ ನೌಕರರ ಒಳಗೊಂಡ ಜಾಗ, ಇಲ್ಲಿ ನಕಲಿ ಟಿಕೆಟ್ ನಡೆಯುತ್ತಾ ಇದ್ದರೂ ಪತ್ತೆ ಹಚ್ಚುವುದು ಸುಲಭ ಅಲ್ಲ, ವಾರಕ್ಕೆ 3 ದಿನ ಇಲ್ಲಿ ಸಂಚರಿಸುವ ನನಗಾಗಲಿ ಅಥವಾ ಅಲ್ಲೇ ನಿತ್ಯ ಇರುವ ಜೀಪ್ ಚಾಲಕರು, ಅಂಗಡಿ ಮುಗ್ಗಟ್ಟು ಇತ್ಯಾದಿ ಬಹುತೇಕ ಜನರಿಗೆ ಈ ಬಗ್ಗೆ ಗೊತ್ತಾಗಿದ್ದು ಮೊನ್ನೆ ಪ್ರಕರಣ ಸುದ್ದಿ ಬಂದಾಗಲೇ. ಇದರ ಅರ್ಥ ಅಲ್ಲೇನು ನಡೆದಿಲ್ಲ ಎಂದು ಅಲ್ಲ. ಅಲ್ಲಿ ಯಾರಿಗೂ ಗೊತ್ತಿಲ್ಲದೆ ಘಟನೆ ವರ್ಷಾನುಗಟ್ಟಲೆ ನಡೆಯಲು ಸಾಧ್ಯವಿಲ್ಲ. ಅಲ್ಲಿರುವ ಜನರಿಗೆ ಮಾಹಿತಿ ಇಲ್ಲ ಎನ್ನುವುದಾದರೆ 7 ಕಿ ಮೀ ದೂರದ ಪಂಚಾಯತ್ ಗಮನಕ್ಕೆ ಬರುವುದು ಯಕ್ಷ ಪ್ರಶ್ನೆ ಆಗುತ್ತದೆ. ಇವೆಲ್ಲ ನಡುವೆ ಇದು ಆಡಳಿತ ವೈಫಲ್ಯ ಎಂದೇ ಕರೆಯಲಾಗುತ್ತ...

ಲಕ್ಷ ಕೋಟಿ ದಶಕೋಟಿ ಆದ ನಂತರಮುಂದೆ ಗೊತ್ತಾ..? ಇಲ್ಲಿದೆ ನೋಡಿ

ಬಿಡಿ (1) ಹತ್ತು ನೂರು ಸಾವಿರ ದಶಸಾವಿರ ಲಕ್ಷ ದಶಲಕ್ಷ ಕೋಟಿ ದಶಕೋಟಿ ಅಬ್ಜ ದಶ ಅಬ್ಜ ಖರ್ವ ದಶಖರ್ವ ಪದ್ಮ ದಶಪದ್ಮ ನೀಲ ದಶನೀಲ ಶಂಖ ದಶಶಂಖ ಕ್ಷಿತಿ ದಶಕ್ಷಿತಿ ಕ್ಷೋಭ ದಶಕ್ಷೋಭ ಋದ್ಧಿ ದಶಋದ್ಧಿ ಸಿದ್ಧಿ ದಶಸಿದ್ಧಿ ನಿಧಿ ದಶನಿಧಿ ಕ್ಷೋಣಿ ದಶಕ್ಷೋಣಿ ಕಲ್ಪ ದಶಕಲ್ಪ ತ್ರಾಹಿ ದಶತ್ರಾಹಿ ಬ್ರಹ್ಮಾಂಡ ದಶಬ್ರಹ್ಮಾಂಡ ರುದ್ರ ದಶರುದ್ರ ತಾಲ ದಶತಾಲ ಭಾರ ದಶಭಾರ ಬುರುಜ ದಶಬುರುಜ ಘಂಟಾ ದಶಘಂಟಾ ಮೀಲ ದಶಮೀಲ ಪಚೂರ ದಶಪಚೂರ ಲಯ ದಶಲಯ ಫಾರ ದಶಫಾರ ಅಷಾರ ದಶಅಷಾರ ವಟ ದಶವಟ ಗಿರಿ ದಶಗಿರಿ ಮನ ದಶಮನ ವವ ದಶವವ ಶಂಕು ದಶಶಂಕು ಬಾಪ ದಶಬಾಪ ಬಲ ದಶಬಲ ಝಾರ ದಶಝಾರ ಭೀರ ದಶಭೀರ ವಜ್ರ ದಶವಜ್ರ ಲೋಟ ದಶಲೋಟ ನಜೆ ದಶನಜೆ ಪಟ ದಶಪಟ ತಮೆ ದಶತಮೆ ಡಂಭ ದಶಡಂಭ ಕೈಕ ದಶಕೈಕ ಅಮಿತ ದಶಅಮಿತ ಗೋಲ ದಶಗೋಲ ಪರಿಮಿತ ದಶಪರಿಮಿತ ಅನಂತ ದಶ‌ಅನಂತ ಪ್ರತಿ ಸಾಲಿಗೂ ಒಂದೊಂದು ಸೊನ್ನೆ ಸೇರಿಸ್ಕೊಂಡು ಹೋಗಿ..... - ದರ್ಶನ್ ಕನ್ನಡಿಗ

ತೇಜಸ್ವಿ ಜನ್ಮದಿನದ #೨೦೧೯ ಸವಿನೆನಪಿನಲ್ಲಿ ಅವರ ನುಡಿಗಳು

ಬದುಕಿನ ಪ್ರಜ್ಞೆ ವಿಸ್ತರಿಸಿದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಜೀವನದ ನುಡಿಗಳು. “ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಿಲ್ಲ.” (The freedom to live as we wish is always a terrible fight since we will not get it easily) – ಕೆ.ಪಿ.ಪೂರ್ಣಚಂದ್ರ ತೇಜಸ್ವಿ “ನಾವು ಯಾವ ರೀತಿ ಬದುಕುವುದಿಲ್ಲವೋ ಆ ರೀತಿ ಬೇರೆಯವರು ಬದುಕಲಿ ಎಂದು ಹೇಳುವ ಅಧಿಕಾರ ನಮಗ್ಯಾರಿಗೂ ಇಲ್ಲ” – ಕೆ.ಪಿ.ಪೂರ್ಣಚಂದ್ರ ತೇಜಸ್ವಿ “ನಮ್ಮ ಮಾತಿಗೆ ಅರ್ಥ ಬರಬೇಕಾದರೆ ಮಾತನಾಡುವಷ್ಟೇ ಮಾತನಾಡದೆ ಇರುವುದೂ ಅಗತ್ಯ.” – ಕೆ.ಪಿ.ಪೂರ್ಣಚಂದ್ರ ತೇಜಸ್ವ”ನಮ್ಮ ಮಾತಿಗೆ ಅರ್ಥ ಬರುವುದು ನಮ್ಮ ನಡವಳಿಕೆಯಿಂದ” (Our behavior would make our words meaningful) – ಕೆ.ಪಿ.ಪೂರ್ಣಚಂದ್ರ ತೇಜಸ್ವಿ “ನನಗೆ ಕಾಲ ಕಳೆಯುವುದು ಹೇಗೆಂಬ ಚಿಂತೆಗಿಂತ ಕಾಲ ಕಳೆದು ಹೋಗುತ್ತದಲ್ಲಾ ಎನ್ನುವುದೇ ಚಿಂತೆ” – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪರಿಸರದ ಕತೆ “ನನ್ನ ಹಾಗೆ ನೀನೂ ಬದುಕು ಎಂದು ಸಲಹೆ ನೀಡಬಹುದೇ ಹೊರತು, ನಾನು ಹೇಗಾದರೂ ಬದುಕುತ್ತೇನೆ, ನೀನು ಹೀಗೆ ಬದುಕು ಎಂದು ಹೇಳುವುದು ಸರಿಯಲ್ಲ.” – ಕೆ.ಪಿ.ಪೂರ್ಣಚಂದ್ರ ತೇಜಸ್ವಿ “ಬೇರೆಯವರನ್ನ ಕೊಂದು ಉಳಿಸಿಕೊಳ್ಳಬೇಕಾದ ಧರ್ಮವೇನಾದರು ಇದೆಯಾ?” – ಕೆ.ಪಿ.ಪೂರ್ಣಚಂದ್ರ ತೇಜಸ್ವಿ “ತಲೆ ತಪ್...

ತ್ರಿವೇಣಿ ಮಹಾತಾಯಿಯ ಬೆಳ್ಳಿಬದುಕು..

ತ್ರಿವೇಣಿ ತ್ರಿವೇಣಿಯವರು ಕನ್ನಡದ ನವೋದಯದ ಮಾರ್ಗದಲ್ಲಿ ಬರೆಯಲು ಪ್ರಾರಂಭಿಸಿದ ಪ್ರಮುಖ ಕಾದಂಬರಿಕಾರರು. ಅವರು ತಮ್ಮ ಕಥೆ ಕಾದಂಬರಿಗಳ ಮೂಲಕ ಪ್ರಗತಿಪರ ಧೋರಣೆಯನ್ನು ಪ್ರತಿಪಾದಿಸಿದ ಬರಹಗಾರ್ತಿಯರಲ್ಲಿ ಪ್ರಮುಖರು. ಸುಮಾರು ಒಂದು ದಶಕದ ಅವಧಿಯಲ್ಲಿ ರಚಿತವಾದ ಅವರ ಕಥೆ-ಕಾದಂಬರಿಗಳು ಕನ್ನಡದಲ್ಲಿ ಓದುಗರ ಒಂದು ವರ್ಗವನ್ನೇ ಸೃಷ್ಟಿಸಿತು. ಬಿ. ಎಂ. ಶ್ರೀ ಅವರ ತಮ್ಮ ಬಿ. ಎಂ. ಕೃಷ್ಣಸ್ವಾಮಿಯವರ ಎರಡನೆಯ ಮಗಳಾದ ತ್ರಿವೇಣಿ ಅವರು ಜನಿಸಿದ್ದು ಸೆಪ್ಟೆಂಬರ್ 1, 1928ರಲ್ಲಿ. ಅವರ ಹುಟ್ಟು ಹೆಸರು ಭಾಗೀರಥಿ. ಅವರು ಶಾಲೆಗೆ ಸೇರಿದಾಗ ಅವರ ಹೆಸರು ‘ಅನಸೂಯ’ ಎಂದಾಯಿತು. ಕಾಲೇಜು ಶಿಕ್ಷಣ ಮೈಸೂರಿನಲ್ಲಿ ಆಯಿತು. 1947ರಲ್ಲಿ ಮಹಾರಾಜಾ ಕಾಲೇಜಿನಿಂದ ಮನ:ಶಾಸ್ತ್ರದಲ್ಲಿ ಚಿನ್ನದ ಪದಕದೊಂದಿಗೆ ಬಿ.ಎ.ಪದವಿ ಪಡೆದರು. ಅಂದಿನ ದಿನಗಳಲ್ಲಿ ನಮಗೆ ಶಾರದಾ ವಿಲಾಸ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಶ್ರೀ ಶಂಕರ್ ಅವರ ಪತಿ. ಮದುವೆಯ ನಂತರ ‘ಅನಸೂಯ ಶಂಕರ್’ ಆದರು. ಮನೆಯೊಳಗಿನ ಅನಸೂಯ ಶಂಕರ್ ಸಣ್ಣಕಥೆಗಳ ಮೂಲಕ ಕನ್ನಡ ಸಾಹಿತ್ಯ ರಂಗವನ್ನು ಪ್ರವೇಶಿಸಿ ಕಾದಂಬರಗಾರ್ತಿಯಾಗಿ ‘ತ್ರಿವೇಣಿ’ ಎಂಬ ಕಾವ್ಯನಾಮದಿಂದ ಪ್ರಖ್ಯಾತರಾದರು. ‘ಶರಪಂಜರ, ‘ಬೆಳ್ಳಿಮೋಡ’, ‘ಕೀಲುಗೊಂಬೆ, ‘ಹೃದಯ ಗೀತೆ, ‘ಬೆಕ್ಕಿನಕಣ್ಣು’, ‘ಬಾನುಬೆಳಗಿತು, ‘ಅವಳ ಮನೆ’, ‘ಕಾಶೀಯಾತ್ರೆ, ‘ಹಣ್ಣೆಲೆ ಚಿಗುರಿದಾಗ’, ‘ಹೂವು ಹಣ್ಣು’, ‘ಮುಕ್ತಿ’, ‘ದೂರದ ಬೆಟ್ಟ’,...

ದಲೀಪ್ ಸಿಂಗ್‌ಗೆ ಹೇಗೆ The Great Khali ಎಂಬ ಹೆಸರು ಬಂತು ಗೊತ್ತಾ ನಿಮಗೆ???

ಕರ್ನಾಟಕದ ಸಿಎಂ, ಶಾಸಕರಿಗೆ ತಿಂಗಳ ಸಂಬಳವೆಷ್ಟು ಗೊತ್ತಾ! ನಿಮಗೆ??

ಕರ್ನಾಟಕದ ಹೊಸ ಮುಖ್ಯಮಂತ್ರಿಯಾಗಿ ನಾಲ್ಕನೆ ಬಾರಿಗೆ ಬಿ.ಎಸ್. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ್ದಾರೆ. ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ ಯಡಿಯೂರಪ್ಪ ಪೂರಕ ಬಜೆಟ್ ಗೂ ಅಂಗೀಕಾರ ಸಿಕ್ಕಿದೆ. ಕರ್ನಾಟಕ ಹೊಸ ಮುಖ್ಯಮಂತ್ರಿ ಹಾಗೂ ಶಾಸಕರಿಗೆ ಸಿಗುವ ಸಂಬಳವೆಷ್ಟು ಎಂಬುದರ ವಿವರ ಇಲ್ಲಿದೆ. ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳ ಹಾಗೂ ಶಾಸಕರ ಸಂಬಳ ಬೇರೆ ಬೇರೆಯಾಗಿರುತ್ತದೆ. ಆರ್ಟಿಕಲ್ 164 ರ ಪ್ರಕಾರ ವೇತನವನ್ನು ಆಯಾ ರಾಜ್ಯ ವಿಧಾನಸಭೆಗಳು ನಿರ್ಧರಿಸುತ್ತವೆ. ತೆಲಂಗಾಣದ ಶಾಸಕರಿಗೆ ಹೆಚ್ಚಿನ ಸಂಬಳ ಸಿಗುತ್ತದೆ. ತ್ರಿಪುರಾ ಹಾಗೂ ಮೇಘಾಲಯದ ಶಾಸಕರಿಗೆ ಕಡಿಮೆ ಸಂಬಳ ಸಿಗುತ್ತದೆ. ತೆಲಂಗಾಣ ಶಾಸಕರು ಪ್ರತಿ ತಿಂಗಳು 2.50 ಲಕ್ಷ ಸಂಬಳ ಪಡೆಯುತ್ತಾರೆ. ತ್ರಿಪುರಾ ಶಾಸಕರಿಗೆ ಪ್ರತಿ ತಿಂಗಳು 34 ಸಾವಿರ ರೂಪಾಯಿ ಸಂಬಳ ಸಿಗುತ್ತದೆ. ಕರ್ನಾಟಕದ ಹೊಸ ಮುಖ್ಯ ಮಂತ್ರಿ ಯಡಿಯೂರಪ್ಪನವರಿಗೆ ಪ್ರತಿ ತಿಂಗಳು 4 ಲಕ್ಷ 697 ರೂಪಾಯಿ ಸಿಗಲಿದೆ. ಇತರೆ ಭತ್ಯೆ ರೂಪದಲ್ಲಿ 18 ಲಕ್ಷ 14 ಸಾವಿರದ 709 ರೂಪಾಯಿ ಪ್ರತ್ಯೇಕವಾಗಿ ಸಿಗಲಿದೆ. ಕರ್ನಾಟಕದ ಪ್ರತಿಯೊಬ್ಬ ಶಾಸಕರಿಗೆ ಪ್ರತಿ ತಿಂಗಳು 25 ಸಾವಿರ ರೂಪಾಯಿ ಸಂಬಳ ಸಿಗುತ್ತದೆ. ದೂರವಾಣಿ ಬಿಲ್ ಗೆಂದು 20 ಸಾವಿರ ಪ್ರತ್ಯೇಕವಾಗಿ ಸಿಗುತ್ತದೆ. ಕ್ಷೇತ್ರದ ಭತ್ಯೆ ಹೆಸರಿನಲ್ಲಿ 40 ಸಾವಿರ ರೂಪಾಯಿ ಸಿಗುತ್ತದೆ. ಪೋಸ್ಟ್ ಖರ್ಚಿಗಾಗಿ 5 ಸಾವಿರ ರೂಪಾಯಿ ಸಿಗುತ್ತದೆ. ಪಿಎ ಹಾಗೂ ರೂಮ್ ಬಾಯ್ ಗೆ ನೀ...

ಭಾರತದ ಪ್ರಥಮ ರಾಕೆಟ್ ಉಡಾವಣೆಯ ರೋಚಕ ಕ್ಷಣ..

ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತಮ್ಮ ಇಗ್ನಿಟೆಡ್ ಮೈಂಡ್ಸ್ ಪುಸ್ತಕದಲ್ಲಿ ಒಂದು ಅದ್ಭುತ ವೈಜ್ಞಾನಿಕ ಯೋಜನೆಯ ಘಟನೆಯನ್ನು ಸುಂದರವಾಗಿ ಹೀಗೆ ವಿವರಿಸಿದ್ದಾರೆ. 'ತಿರುವನಂತಪುರದ ಚರ್ಚ್ ಬಿಷಪ್ ಅವರ ಪ್ರಯತ್ನದ ಫಲವಾಗಿ THUMBA ಹಳ್ಳಿಯ ದನದ ಕೊಟ್ಟಿಗೆಗಳಲ್ಲಿ ಪ್ರಯೋಗಾಲಯ ಮತ್ತು ರಾಕೆಟ್ ತಯಾರಿಕೆಯ ಘಟಕಗಳನ್ನು ಸಂಗ್ರಹಿಸಿಸಲು ಒಪ್ಪಿಗೆ ಸಿಕ್ಕಿತು. ಉತ್ಸಾಹಿ ಯುವ ವಿಜ್ಞಾನಿಗಳ ಪಡೆಗೆ ಯಾವುದೇ ರೀತಿಯ ಗೊಂದಲ ಉಂಟಾಗಲಿಲ್ಲ. ಎಲ್ಲರೂ ಸೇರಿ ಪ್ರಥಮ ರಾಕೆಟ್ ಅನ್ನು ಜೋಡಿಸುವ ಕೆಲಸ ಪ್ರಾರಂಭವಾಯಿತು" ಈ ಯುವ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ತಂಡವನ್ನು ಡಾ. ಸಾರಾಭಾಯ್ ಅವರೇ ತುಂಬಾ ಜಾಗರೂಕತೆಯಿಂದ ಆಯ್ಕೆ ಮಾಡಿದ್ದರು. ರಾಕೆಟ್ ಜೋಡಣೆ ಮತ್ತು ಉಡಾವಣೆಯ ತರಬೇತಿ ಜೋರಾಗಿ ನಡೆದಿತ್ತು. ಹಿಂದೆ ರಾಕೆಟ್ ನ ಬಿಡಿಭಾಗಗಳು ಮತ್ತು ಪೆಲೋಡ್ ಗಳನ್ನು ಎತ್ತಿನಗಾಡಿ ಅಥವಾ ಸೈಕಲ್ ಮೇಲೆಯೇ ಉಡಾವಣಾ ಜಾಗದವರೆಗೆ ಕೊಂಡೊಯ್ಯಲಾಗುತ್ತಿತ್ತು. ಇಂಥಸಮಯದಲ್ಲಿ ಭಾರತ ತನ್ನ ಪ್ರಥಮ ರಾಕೆಟ್ ಉಡಾವಣೆಗೆ ವೇದಿಕೆ ಸಿದ್ಧಪಡಿಸಿತು. ಅಮೆರಿಕಾದ ನಾಸಾ ಸಂಸ್ಥೆಯು ಅಪಾಚೆ ರಾಕೆಟ್ ನೀಡಿತ್ತು. 6 ತಿಂಗಳ ನಿರಂತರ ಪರಿಶ್ರಮದ ನಂತರ, ಕೊನೆಗೆ 1963 ರ ನವೆಂಬರ್ 21 ರಂದು ಭಾರತ ಪ್ರಥಮ ರಾಕೆಟ್ ನ ಉಡಾವಣೆಗೆ ಸಜ್ಜಾಯಿತು. ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರಸಿದ್ಧ ವ್ಯಕ್ತಿಗಳೆಲ್ಲ ಅಂದು ಹಾಜರಿದ್ದರು. ದೇಶದ ಪರಮಾಣು ಕಾರ್ಯಕ್ರ...

ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಡಲು ಯಾವ ನೈತಿಕತೆಯು ರಾಜ್ಯ ಸರ್ಕಾರಕ್ಕಿಲ್ಲ

ನಾಚಿಕೆ ಆಗಬೇಕು ರಾಜ್ಯ ಸರ್ಕಾರಕ್ಕೆ..... ತೀರ ನಾಗರಿಕ ಸರ್ಕಾರಗಳು ಈ ಮಟ್ಟಿಗೆ ಲಜ್ಜೆಗೇಡಿತನಕ್ಕೆ ಇಳಿಯಬಾರದು. ಬೆಂಗಳೂರಿನ ದಾಹ ತಣಿಸಲು 300 ಕಿಮೀ ದೂರದ ಲಿಂಗನಮಕ್ಕಿ ಜಲಾಶಯದಿಂದ ನೀರು ಕೊಂಡೊಯ್ಯುವ ಬಗ್ಗೆ ಗಂಭೀರವಾಗಿ ಯೋಚನೆ ಯೋಜನೆ ಮಾಡಲು ಹಪ ಹಪಿತನ ತೋರುವ ರಾಜ್ಯದ ಸರ್ಕಾರ ಈ ನೆಲದಲ್ಲಿ ನಮ್ಮನ್ನ ಮುಳುಗಿಸಿ 60 ವರ್ಷ ಕಳೆದರೂ ನಾಗರಿಕ ಸಮಾಜದ ಅತಿಮುಖ್ಯ ಬೇಡಿಕೆಯಾದ ಸೇತುವೆ ಕೊಡದೇ, ಸಂತ್ರಸ್ತರು ಎಂಬ ಕಾರಣಕ್ಕೆ ವಿಶೇಷ ಅನುದಾನವನ್ನು ನೀಡದೆ, ಸಾಲದು ಎಂಬಂತೆ ನಾವು ನಿಂತಿರುವ ಜಾಗವನ್ನು ವನ್ಯಜೀವಿ, ಅಭಯಾರಣ್ಯ, ಇಂಡೀಕರಣ ಎಂದು ಒಕ್ಕಲೆಬ್ಬಿಸಲು ಯೋಜನೆ ರೂಪಿಸಿದ ಸರ್ಕಾರ ನಮ್ಮನ್ನು ಜೀವಂತ ಕೊಂದು ಆ ಸೂತಕದ ಮೇಲೆ ಬೆಂಗಳೂರಿಗೆ ನೀರು ಕೊಟ್ಟು ದೀಪಾವಳಿ ಆಚರಿಸಲು ಹೊರಟಿದೆ. ನಾಡಿನ ಬೆಳಕಿಗೆ ಬದುಕು ಮತ್ತು ಬೇರು ಕಳೆದುಕೊಂಡ ಜನರನ್ನು ಕಳೆದ 6 ದಶಕದಲ್ಲಿ ನಿರಂತರ ನರ ಮುರಿದ ರಾಜ್ಯ ಸರ್ಕಾರ ಈಗ ಹೊಸ ಅಂಗಿ ಹಾಕಿ ನೀರಿನ ಧಾಹ ತೀರಲು ನೀವು ತ್ಯಾಗಿ ಆಗಿ ಎಂದು ಹೇಳಲು ಹೊರಟಿದೆ. ಅದಕ್ಕೂ ಮೊದಲು ಈ ಹಿಂದೆ ಮಾಡಿದ ನಮ್ಮವರ ತ್ಯಾಗಕ್ಕೆ ರಾಜ್ಯದ ನಾಗರಿಕ ಸರ್ಕಾರವೊಂದು ಏನು ಋಣ ಸಂದಾಯ ಮಾಡಿದೆ ಎಂದು ಹೇಳಲಿ...? ತುಮರಿ ಸೇತುವೆಗೆ ಹಣ ಕೊಡಿ ಎಂದು ಕೇಳಿದರೆ ವಿಧಾನಸೌಧದ 3 ನೆ ಮಹಡಿಯಲ್ಲಿ ಏನು ಲಾಭ ಅಷ್ಟು ಹಣ ನೀಡಲು ಎಂಬುವ ಚರ್ಚೆಯೇ ದ್ವನಿಸುತ್ತದೆ.. ಬ್ರಿಟಿಷ್ ಅವಧಿಯಲ್ಲಿ ಹಿರೇಭಾಸ್ಕರ್ ಮಡೆನೂರು ಅಣೆಕಟ್ಟು ಕಟ್ಟಿದರೂ ನಮ...

ಧನ್ಯವಾದ ಯುವಿ..!

ಕೆಲವು ವ್ಯಕ್ತಿಗಳಿರುತ್ತಾರೆ. ಅವರು ದಂತಕಥೆಗಳ ಸಾಲಿನಲ್ಲಿ ನಿಲ್ಲಬಲ್ಲ ಎಲ್ಲ ಅರ್ಹತೆಗಳನ್ನು ಹೊಂದಿರುತ್ತಾರೆ. ಆದರೆ ಬದುಕಿನ ಏರಿಳಿತಗಳಿಗೆ ಸಿಲುಕಿ ಅಂತಹ ಅವಕಾಶವನ್ನು ಸಮೀಪದಲ್ಲಿ ಕಳೆದುಕೊಳ್ಳುತ್ತಾರೆ. ಅಂತಹ ಒಬ್ಬ ವ್ಯಕ್ತಿ ಯುವರಾಜ್‌ ಸಿಂಗ್‌. ಒಬ್ಬ ಕ್ರಿಕೆಟಿಗನಾಗಿ ಅವರು ಭಾರತೀಯ ಕ್ರಿಕೆಟ್‌ಗೆ ನೀಡಿದ ಕಾಣಿಕೆ ಯಾವುದೇ ದಂತಕಥೆಗಳಿಗೂ ಕಡಿಮೆಯಿಲ್ಲ. 2007ರ ಟಿ20 ವಿಶ್ವಕಪ್‌, 2011ರ ಏಕದಿನ ವಿಶ್ವಕಪ್‌ನಲ್ಲಿ ಅವರ ಪಾತ್ರ ಅತಿಮುಖ್ಯ. ಬಹುಶಃ ಅವರಿಲ್ಲದೇ ಹೋಗಿದ್ದರೆ ಈ ವಿಶ್ವಕಪ್‌ಗ್ಳನ್ನು ಅದರಲ್ಲೂ 2007ರ ಟಿ20 ವಿಶ್ವಕಪ್‌ ಅನ್ನು ಭಾರತ ಗೆಲ್ಲುವುದು ಸಾಧ್ಯವೇ ಇರಲಿಲ್ಲ. ಧೋನಿ ಭಾರತ ಕ್ರಿಕೆಟ್ ಕಂಡ ಅತಿಶ್ರೇಷ್ಠ ನಾಯಕ ಎಂದು ಕರೆಸಿಕೊಳ್ಳುವುದರಲ್ಲಿ ಯುವಿಯ ಪಾತ್ರ ಬಹುದೊಡ್ಡದು! 2007ರ ಟಿ20 ವಿಶ್ವಕಪ್‌ನಲ್ಲಿ ಅವರು ಇಂಗ್ಲೆಂಡ್‌ ವಿರುದ್ಧ 6 ಎಸೆತಗಳಿಗೆ 6 ಸಿಕ್ಸರ್‌ ಬಾರಿಸಿದ್ದರು. ಅದು ಟಿ20 ವಿಶ್ವದಾಖಲೆಯೆನಿಸಿದೆ. ಮುಂದೆ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ ಗೆಲ್ಲಲೂ ಅವರ ಸ್ಫೋಟಕ ಬ್ಯಾಟಿಂಗ್‌ ಕಾರಣ. ಅಂತಹ ಯುವರಾಜ್‌ ಸಿಂಗ್‌ಗೆ ಯೋಗ್ಯ ವಿದಾಯ ಸಿಗಲಿಲ್ಲ ಎನ್ನುವುದು ಬಹಳ ನೋವಿನ ಸಂಗತಿ. ಗಮನಿಸಬೇಕಾದ ಸಂಗತಿಯೆಂದರೆ ಇದರಲ್ಲಿ ಯುವರಾಜ್‌ ಸಿಂಗ್‌ ದುರದೃಷ್ಟದ ಪಾತ್ರವೂ ಅಷ್ಟೇ ಇದೆ. ಅವರಿಗೆ ಮತ್ತೆ ಮತ್ತೆ ಅವಕಾಶಗಳನ್ನು ನೀಡಿದರೂ, ದೀರ್ಘ‌ಕಾಲೀನವಾಗಿ ತಮ್ಮ ಆಟದ ಲಯವನ್ನು ಕಾಪಾಡಿಕೊಳ್ಳಲು ಸಾ...

ಶಿವಮೊಗ್ಗದಲ್ಲಿರುವ ಭಾರತದ ಅತಿ ಎತ್ತರದ ಜಲಪಾತ ಜೋಗ ಅಲ್ಲ..! ಮತ್ಯಾವುದು ಗೊತ್ತಾ?

99% ಜನರಿಗೆ ಭಾರತದ ಅತಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತ ಯಾವುದು ಕೇಳಿದ್ರೆ, ” ಮತ್ಯಾವ್ದು ಜೋಗ ಅಲ್ವಾ..!” ಅಂತಾ ಉತ್ತರ ನೀಡೋರೆ ಜಾಸ್ತಿ. ಆದರೆ ಎಷ್ಯಾದ ಎರಡನೇ ಹಾಗೂ ಭಾರತದ ಅತಿ ಎತ್ತರದಿಂದ ಧುಮುಕುವ ಜಲಪಾತ “ಕುಂಚಿಕಲ್ ಫಾಲ್ಸ್” ಅನ್ನೋ‌ ‌ವಿಷ್ಯ ಬಹಳಷ್ಟು ಜನರಿಗೆ ಗೊತ್ತೇ ಇಲ್ಲ. ಇದ್ಯಾವ್ದು ಕುಂಚಿಕಲ್ ಫಾಲ್ಸ್ , ಯಾವ ರಾಜ್ಯದಲ್ಲಿದೆ ಅಂತ ಕೇಳೋರೂ ಸುಮಾರ್ ಜನ. ಭಾರತದ ಅತೀ ಎತ್ತರದ ಹಾಗೂ ಎರಡನೇ ಅತೀ ಎತ್ತರದ ಜಲಪಾತ ಇರುವುದು ನಮ್ ಶಿವಮೊಗ್ಗ ಜಿಲ್ಲೆಯಲ್ಲಿ. ಮೊದಲನೆಯದು ಕುಂಚಿಕಲ್ ಫಾಲ್ಸ್, ಎರಡನೆಯದು ಜೋಗ್ ಫಾಲ್ಸ್. 

ಶಿವಮೊಗ್ಗದ ಮೊದಲ ಲೋಕಸಭಾ ಸದಸ್ಯರ ಬಗ್ಗೆ ನಿಮಗೆಷ್ಟು ಗೊತ್ತು....?

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೊದಲ ಲೋಕಸಭಾ ಸದಸ್ಯ ನಮ್ಮ ಸಾಗರದ ಶ್ರೀಯುತ ಕೆ ಜಿ ಒಡೆಯರ್ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾಗೋಡಿನ ಕೆ.ಜಿ.ಒಡೆಯರ್ ಶಿವಮೊಗ್ಗದ ಮೊದಲ ಸಂಸತ್ ಸದಸ್ಯರಾಗಿದ್ದರು. ಅವರು ಒಮ್ಮೆ ಗಾಂಧೀಜಿಯವರನ್ನು ಭೇಟಯಾದ ಮೇಲೆ ತಮ್ಮ ಸೂಟ್ ಬೂಟ್ ಬಿಟ್ಟು ಖಾದಿಧಾರಿಯಅಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಐದು ಬಾರಿ ಸೆರೆವಾಸ ಅನುಭವಿಸಿದ್ದರು. ಒಟ್ಟು ೫ ವರ್ಷ ಸೆರೆವಾಸ ಅನುಭವಿಸಿದ್ದರರು; ೫ ತಿಂಗಳ ಕಠಿಣ ಶಿಕ್ಷೆಯನ್ನೂ ಅನುಭವಿಸಿದ್ದರು. ಸಾಗರದಲ್ಲಿ ಮುಖ್ಯ ಬಸ್ ನಿಲ್ದಾಣದ ಹತ್ತಿರ ಅವರ ಮನೆ ಇತ್ತು/ಇದೆ . ಅವರು ನೆಹರೂ ಅವರ ನಿಕಟವರ್ತಿಗಳಾಗಿದ್ದು , ನೆಹರೂ ಅವರನ್ನು ಜೋಗಕ್ಕೂ ಕರೆತಂದಿದ್ದರು.ಕಾಗೋಡು ಸತ್ಯಾಗ್ರಹದ ನಂತರ 'ಗೇಣೀದಾರರಿಗೇ ಜಮೀನು' ಕಾನೂನು ಬರುವುದಕ್ಕೆ ಮೊದಲೇ,ರೈತರ ಸತ್ಯಾಗ್ರಹಕ್ಕೆ ಓಗೊಟ್ಟು. ತಮ್ಮ ೮೦೦ ಎಕರೆ ಜಮೀನನ್ನು ರೈತರ ಹೆಸರಿಗೆ ಮಾಡಿಕೊಟ್ಟರು. ಶಿವಮೊಗ್ಗದ ಮೊದಲ ಲೋಕಸಭಾ ಸದಸ್ಯರು, ಸಾಗರದ ಎಲ್ ಬಿ ಕಾಲೇಜು ಮತ್ತು ರಾಷ್ಟ್ರೀಯ ವಿದ್ಯಾವರ್ಧಕ ಪ್ರೌಢಶಾಲೆಯ (ಈಗಿನ ಎಚ್. ಶಿವಲಿಂಗಪ್ಪ ಪ್ರೌಢಶಾಲೆ) ಸಂಸ್ಥಾಪಕ ಅಧ್ಯಕ್ಷರಾಗಿದ್ದ ಶ್ರೀ ಕಾಗೋಡು ಗುರುಬಸಪ್ಪ ಒಡೆಯರ್ ಅವರ ಬಗ್ಗೆ ಸಾಗರೀಕರು ತಿಳಿದುಕೊಳ್ಳಲೇ ಬೇಕಾದ ಕೆಲವು ಸಂಗತಿಗಳು ಇವು. ಸಾಗರದ ಕಾಗೋಡಿನಲ್ಲಿ 1901ರಲ್ಲಿ ಶ್ರೀಯುತರ ಜನನವಾಯಿತು. ತಂದೆ ಗುರುವಯ...

ದೇವರಿಗೇ ಲಂಚ!!

ದೇವರಿಗೇ ಲಂಚ...... 80 ಕೋಟಿ ಸರ್ಕಾರದ ಹಣ ಸುಬ್ರಹ್ಮಣ್ಯ ದೇವರ ಚಿನ್ನದ ರಥಯಾತ್ರೆಗೆ..... Yes, ಇದನ್ನು ನೀವು ಓದುತ್ತಿದ್ದಂತೆ ನನಗೆ ಕೇಳಿಸುತ್ತಿದೆ ನಿಮ್ಮ ಕೆಲವರ ಮನಸ್ಸಿನ ತಳಮಳ..... ಹಜ್ ಯಾತ್ರೆಗೆ ಸರ್ಕಾರ ಕೋಟಿ ಕೋಟಿ ಹಣ ಸಬ್ಸಿಡಿ ರೂಪದಲ್ಲಿ ಕೊಡುವಾಗ 80 ಕೋಟಿ ಮಾತ್ರ ನಿಮ್ಮ ಕಣ್ಣಿಗೆ ದೊಡ್ಡದಾಗಿ ಕಾಣುತ್ತದೆ. ಹೌದು, ನಿಮ್ಮ ಪ್ರಶ್ನೆಯೂ ಸರಿ ಇದೆ. ಉತ್ತರ ಮಾತ್ರ ಒಂದೇ...... ಯಾವುದೇ ಧಾರ್ಮಿಕ ಚಟುವಟಿಕೆಗಳಿಗೆ ರಕ್ಷಣೆ, ಮೂಲಸೌಕರ್ಯ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಹೊರತುಪಡಿಸಿ ಬೇರೆ ರೀತಿಯ ಆರ್ಥಿಕ ಸಹಾಯ ಸರ್ಕಾರದಿಂದ ಮಾಡಬಾರದು.  ನಂಬಿಕೆಯ ದೇವರು ಮತ್ತು  ಜನರ ಮಧ್ಯೆ ಸರ್ಕಾರದ ಮಧ್ಯಸ್ಥಿಕೆಯ ಅವಶ್ಯಕತೆಯಿಲ್ಲ. ಅದು ತುಂಬಾ ಖಾಸಗಿ ಮತ್ತು ಅಂತರ್ ಮುಖಿಯಾದುದು. ನಿಮ್ಮ ಬಳಿ ಅನುಕೂಲ ಇದ್ದರೆ ಮೆಕ್ಕಾ, ಕಾಶಿ, ವ್ಯಾಟಿಕನ್, ತಿರುಪತಿ, ಜರುಸಲೇಂ ಎಲ್ಲಿ ಬೇಕಾದರೂ ಹೋಗಿ ಅಥವಾ ನಿಮಗೆ ಆರ್ಥಿಕ ತೊಂದರೆ ಇದ್ದರೆ ನೀವು ನಂಬುವ ದೇವರನ್ನು ಕೇಳಿಕೊಳ್ಳಿ, ಅವನೇ ದಯಪಾಲಿಸುತ್ತಾನೆ ಅಥವಾ ದೇವರು ಸರ್ವವ್ಯಾಪಿ ಎಂದು ಎಲ್ಲರೂ ಹೇಳುವುದರಿಂದ ನೀವು ಇರುವ ಜಾಗದಿಂದಲೇ ಭಕ್ತಿ ತೋರಿಸಿ. ಅದು ನಿಮ್ಮ ಖಾಸಗಿ ವಿಷಯ. ಎಲ್ಲವನ್ನೂ ದೇವರೇ ಕೊಟ್ಟಿರುವುದು, ಇಡೀ ಸೃಷ್ಟಿಯೇ ದೇವರು ಎನ್ನುವವರೇ ದೇವರಿಗೆ ಹಣ ಚಿನ್ನ ವಜ್ರ ವೈಡೂರ್ಯಗಳನ್ನು ಕೊಡುವುದು ಸಣ್ಣತನವಲ್ಲವೇ. ನಿಜಕ್ಕೂ ದೇವರು ನಮಗೆ ಕೊಡಬೇಕೆ ಹೊ...

ಸಾಧನೆಯ ಹಾದಿಗೆ ನೂಕಿದ್ದಕ್ಕೆ ಧನ್ಯವಾದ!

ಸಾಧನೆಯ ಹಾದಿಗೆ ನೂಕಿದ್ದಕ್ಕೆ ಧನ್ಯವಾದ! ಹರ ಸಾಹಸ ಪಟ್ಟ ಮೇಲೆ ನಿನ್ನ ನಂಬರ್‌ ಸಿಕ್ಕಿತ್ತು. ಮೆಸೇಜ್‌ ಮಾಡಲಿಕ್ಕೇ ಹೆದರಿಕೆ. ಇನ್ನು ಕಾಲ್‌ ಮಾಡೋದು ದೂರದ ಮಾತು. ಕಾಲೇಜನಲ್ಲಿದ್ದಾಗ ದೂರದಿಂದ ನೋಡೋದನ್ನು ಬಿಟ್ಟರೆ, ನಿನ್ನ ಎದುರಿಗೆ ಓಡಾಡುವುದೂ ನನ್ನಿಂದ ಸಾಧ್ಯವಾಗಿರಲಿಲ್ಲ. ಅದು ಡಿಗ್ರಿಯ ಕೊನೆಯ ದಿನ. ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕನಿಷ್ಠಪಕ್ಷ ಇವತ್ತಾದರೂ ನಿನ್ನನ್ನು ಮಾತಾಡಿಸಬೇಕು ಅಂತ ನಿರ್ಧರಿಸಿದೆ. ಪಿಯುಸಿಯಲ್ಲಿ ಎರಡು ವರ್ಷ, ಆಮೇಲೆ ಡಿಗ್ರಿಯಲ್ಲಿ ಮೂರು ವರ್ಷ; ಒಟ್ಟು ಐದು ವರ್ಷ ಮೌನವಾಗಿಯೇ ನಿನ್ನನ್ನು ಪ್ರೀತಿಸುತ್ತಿದ್ದೆ. ನನ್ನ ಈ ಒನ್‌ ಸೈಡೆಡ್‌ ಲವ್‌ ವಿಷಯವನ್ನು ನಿನಗೆ ಹೇಳಬೇಕೆಂದುಕೊಂಡೆ. ಮೊದಲೇ ನೋಡೋಕೆ ಸುಂದರಿ. ಆ ದಿನ ಸೀರೆಯುಟ್ಟು, ಮಲ್ಲಿಗೆ ಬೇರೆ ಮುಡಿದಿದ್ದೆ. ಆ ಮುಂಗುರುಳು, ಮುಡಿದ ಮಲ್ಲಿಗೆಯ ಪರಿಮಳ, ಕೆನ್ನೆ ಮೇಲಿನ ಕೆಂಪು, ಮುಗುಳ್ನಗು ನನ್ನನ್ನು ಮತ್ತೆ ಮೂಕವಿಸ್ಮಿತನನ್ನಾಗಿಸಿತು. “ಏನೋ ಮಾತಾಡಬೇಕು ಬಾ ಅಂದು ಸುಮ್ಮನೇ ಯಾಕೆ ನಿಂತೆ? ಮಾತಾಡು’ ಅಂತ ನೀನು ಕೇಳಿದಾಗ ಕೈ-ಕಾಲಲ್ಲಿ ಸಣ್ಣ ನಡುಕ. ನನ್ನ ಪ್ರೀತಿಯನ್ನು ನೀನು ತಿರಸ್ಕರಿಸಿಬಿಟ್ಟರೆ ಎಂಬ ಆತಂಕ. ಆದರೂ, ಧೈರ್ಯ ಮಾಡಿ ಹೇಳೇಬಿಟ್ಟೆ- “ಭೂಮಿ, ನೀನೆಂದರೆ ನಂಗೆ ತುಂಬಾ ಇಷ್ಟ. ನಾನು ನಿನ್ನನ್ನು ಪಿಯುಸಿಯಿಂದಲೂ ಪ್ರೀತಿಸುತ್ತಿದ್ದೇನೆ. ಆದರೆ, ಹೇಳ್ಳೋಕೆ ಧೈರ್ಯ ಇರಲಿಲ್ಲ’. ಇಷ್ಟು ಮಾತು ಕೇಳಿದ್ದೇ ತಡ, ನಿನ್ನ ...

ಬಿಳಿ ಕೂದಲು ಸಮಸ್ಯೆಗೆ ಇಲ್ಲಿದೆ 'ಮನೆ ಮದ್ದು'

ಬಿಳಿ ಕೂದಲು ಸಮಸ್ಯೆಗೆ ಇಲ್ಲಿದೆ 'ಮನೆ ಮದ್ದು' ಬಿಳಿ ಕೂದಲಿನ ಸಮಸ್ಯೆ ಈಗ ಹೊಸತಲ್ಲ. ವಯಸ್ಸಾದ ಮೇಲೆ ಕಾಡುತ್ತಿದ್ದ ಬಿಳಿ ಕೂದಲಿನ ಸಮಸ್ಯೆ ಈಗ ಸಣ್ಣ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುತ್ತಿದೆ. ಕೂದಲಿಗೆ ಬಣ್ಣ ಬಳಿದು ಕೂದಲನ್ನು ಕಪ್ಪಾಗಿಸುವುದು ಕ್ಷಣಿಕ. ಆದ್ರೆ ಮನೆ ಮದ್ದಿನಿಂದ ಸುಲಭವಾಗಿ ಕೂದಲನ್ನು ಕಪ್ಪಗೆ ಮಾಡಬಹುದು. ಕಪ್ಪು ಕೂದಲಿಗೆ ನೆಲ್ಲಿಕಾಯಿ ಬಹಳ ಒಳ್ಳೆಯದು. ನೆಲ್ಲಿಕಾಯಿ ರಸಕ್ಕೆ ಬಾದಾಮಿ ಎಣ್ಣೆಯನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿಕೊಂಡ್ರೆ ಕೂದಲು ಕಪ್ಪಾಗುತ್ತದೆ. ಶುಂಠಿ ರಸಕ್ಕೆ ಜೇನು ತುಪ್ಪವನ್ನು ಬೆರೆಸಿ. ಈ ಮಿಶ್ರಣವನ್ನು ವಾರದಲ್ಲಿ ಎರಡು ಬಾರಿ ಕೂದಲಿಗೆ ಹಚ್ಚಿ. ಇದು ಕೂದಲು ಬೆಳ್ಳಗಾಗುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಈರುಳ್ಳಿ ರಸವನ್ನು ಕೂದಲಿಗೆ ಹಚ್ಚುವುದ್ರಿಂದ ಕೂದಲು ಕಪ್ಪಗಾಗಿ ಹೊಳೆಯುತ್ತದೆ. ಕೂದಲಿಗೆ ಪ್ರತಿದಿನ ಸಾಸಿವೆ ಎಣ್ಣೆ ಹಚ್ಚುವುದ್ರಿಂದ ಕೂದಲು ಕಪ್ಪಗಾಗುತ್ತದೆ. ಮೆಹಂದಿ ಜೊತೆ ಮೊಸರು ಬೆರೆಸಿ ಪೇಸ್ಟ್ ಮಾಡಿ. ವಾರದಲ್ಲಿ ಎರಡು ಬಾರಿ ಈ ಪೇಸ್ಟನ್ನು ಕೂದಲಿಗೆ ಹಚ್ಚುತ್ತ ಬಂದ್ರೆ ಬಿಳಿ ಕೂದಲಿನ ಸಮಸ್ಯೆ ಕಡಿಮೆಯಾಗುತ್ತದೆ. ಬಿಳಿ ಕೂದಲಿಗೆ ಅಲೋವೇರಾ ಹಚ್ಚುವುದ್ರಿಂದಲೂ ಸಾಕಷ್ಟು ಲಾಭವಿದೆ.

ಹುಡುಗ ನಿಮ್ಮ ಜೊತೆ ಲವ್ವಲ್ಲಿ ಬಿದ್ದಿದ್ದಾನೆಂದು ತಿಳಿಯುವುದು ಹೇಗೆ?

ಹುಡುಗ ನಿಮ್ಮ ಜೊತೆ ಲವ್ವಲ್ಲಿ ಬಿದ್ದಿದ್ದಾನೆಂದು ತಿಳಿಯುವುದು ಹೇಗೆ? ಪ್ರೀತಿ ಕೆಲವೊಮ್ಮೆ ವ್ಯಾಖ್ಯಾನಕ್ಕೇ ನಿಲುಕುವುದಿಲ್ಲ. ಈ ಮಾನಸಿಕ ಬಾಂಧವ್ಯ ಅದು ಹೇಗೆ ಬೆಳೆಯುತ್ತದೋ ಗೊತ್ತಾಗೋದೂ ಇಲ್ಲ. ಇಂಥ ಪ್ರೀತಿಯಲ್ಲಿ ಬಿದ್ದಾಗ ಕೆಲವು ವಿಷಯಗಳನ್ನು ಇಗ್ನೋರ್ ಮಾಡುವುದನ್ನು ಕಲಿಯಿರಿ. ಹರೆಯದಲ್ಲಿ ಪ್ರೀತಿಯಲ್ಲಿ ಬಿದ್ದ ಪ್ರೇಮಿಗಳಿಗೆ ತಮ್ಮ ಪ್ರೀತಿಯ ಬಗ್ಗೆ ಕೆಲವೊಮ್ಮೆ ಅನುಮಾನಗಳು ಕಾಡುವುದಿದೆ. ಅದರಲ್ಲಿಯೂ ಹರೆಯದ ಪ್ರೇಮ ಇಲ್ಲ ಸಲ್ಲದ ಅನುಮಾನಗಳೂ ಕೊರಳಿಗೆ ಸುತ್ತಿಕೊಂಡು ಹುತ್ತವನ್ನೇ ಬೆಳೆಯಿಸಿಕೊಳ್ಳುತ್ತದೆ. ಅಷ್ಟಕ್ಕೂ ನೈಜ ಪ್ರೀತಿಯನ್ನು ಪತ್ತೆ ಹಚ್ಚುವುದು ಹೇಗೆ? ನೀವು ಪ್ರೀತಿ ಮಾಡುತ್ತಿರುವ ಹುಡುಗ ನಿಜವಾಗಿಯೂ ನಿಮ್ಮನ್ನು ಪ್ರೀತಿಸುತ್ತಾರೋ? ಇಲ್ಲವೋ? ಎಂಬುದನ್ನು ತಿಳಿಯುವುದು ಸುಲಭವಲ್ಲ. ಅದು ಪ್ರೀತಿ ಆಗಷ್ಟೇ ಆರಂಭವಾಗಿದೆ ಎಂದರೆ ಅವರ ನೈಜ ಗುಣ ಏನೆಂದು ತಿಳಿಯೋದೇ ಕಷ್ಟ. ಆ ಸಂದರ್ಭದಲ್ಲಿ ನೀವಿದ್ದರೆ ಅವರಲ್ಲಿ ಈ ಗುಣಗಳು ಇವೆಯೇ ಎಂದು ಒಮ್ಮೆ ಪರೀಕ್ಷಿಸಿ ನೋಡಿ. ಈ ಎಲ್ಲಾ ಗುಣಗಳಿದ್ದರೆ ಅವರು ನಿಜವಾಗಿಯೂ ಲವ್ ಮಾಡ್ತಾ ಇದ್ದಾರೆ ಎಂದರ್ಥ. - ಆತ ನಿಜವಾಗಿ ಪ್ರೀತಿಸುತ್ತಿದ್ದರೆ ಹುಡುಗಿ ಬಗ್ಗೆ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಲು ಇಷ್ಟ ಪಡುತ್ತಾನೆ. ಆಕೆಯ ಕನಸು, ಬಯಕೆ ಏನೆಂದು ಕೇಳಿಕೊಳ್ಳುತ್ತಾನೆ. - ನಿಮ್ಮಿಂದ ಹೊಸದನ್ನು ಕಲಿಯಲು ಅವರು ಇಚ್ಛಿಸುತ್ತಾರೆ. ನಿಮ್ಮ ಮಾತುಗಳನ್ನು ಗಮನವಿಟ್ಟು ಕೇಳಿ...

ಕಡೆವರೆಗೂ ಪ್ರೀತಿಯನ್ನು ಉಳಿಸಿಕೊಳ್ಳುವುದು ಹೇಗೆ?

ಕಡೆವರೆಗೂ ಪ್ರೀತಿಯನ್ನು ಉಳಿಸಿಕೊಳ್ಳುವುದು ಹೇಗೆ? ನಲುವತ್ತೈದು ವರ್ಷದ ಆಯನಿವರ್ಸರಿ ದಿನ ನನ್ನ ಹರೆಯದ ಮೊಮ್ಮಗಳು ಬಂದು ಈ ಪ್ರಶ್ನೆ ಕೇಳಿದಳು. ಅವಳಿಗೀಗ ಹದಿನೆಂಟರ ಹರೆಯ. ನಿನ್ನೆ ಮೊನ್ನೆ ಹೂವಿನ ಪಕಳೆಯ ಹಾಗಿದ್ದಳು. ಈಗ ಹೂವೇ ಆಗಿದ್ದಾಳೆ. ಅವಳ ಕಾಲ, ದೇಶ ಬದಲಾಗಿದೆ. ನನ್ನವರ ಸ್ಪರ್ಶವನ್ನು ಅನುಭವಿಸಿದಂಥ ಆಯ್ಕೆಗಳು ಅವಳಿಗಿಲ್ಲ. ಹುಡುಗರ ಹೆಗಲಿಗೆ ಕೈ ಹಾಕಿ ನಡೆಯುವ ಈ ಕಾಲದ ಹುಡುಗಿ ಅವಳು. ಆದರೆ ಸಂವೇದನೆ ಹೆಚ್ಚು ಕಮ್ಮಿ ಅದೇ ಅಲ್ವಾ. ಆ ಹಿನ್ನೆಲೆಯಲ್ಲಿ ಅವಳಿಗಾಗಿ ನನ್ನ ಅನುಭವದ ಮಾತು ಹೇಳಿದೆ. ನಮ್ಮತನ ಉಳಿಸಿಕೊಳ್ಳುವುದು ಬಹಳ ಮುಖ್ಯ ನಿಮಗೆ ಆಶ್ಚರ್ಯ ಅನಿಸಬಹುದು. ಗಂಡನನ್ನು ಅನುಸರಿಸಿಕೊಂಡು ಹೋಗಬೇಕು ಎನ್ನುವ ಕಿವಿಮಾತನ್ನೇ ಚಿಕ್ಕಂದಿನಿಂದ ಕೇಳಿಕೊಂಡು ಬೆಳೆದ ನಾನು ಈ ಮಾತು ಹೇಗೆ ಆಡಿದೆ ಅಂತ. ಯಾರೇನೇ ಅಂದರೂ ಅನುಭವ ಕಲಿಸುವ ಪಾಠ ದೊಡ್ಡದು. ಸಮರ್ಪಣೆಯ ಭಾವದಲ್ಲೇ ನಾವು ಸಂಗಾತಿಯ ಜೊತೆಯಾಗಬೇಕು. ಆದರೆ ಅತಿಯಾದ ಅವಲಂಬನೆ, ಅವರಿಂದಲೇ ಖುಷಿ ಕಂಡುಕೊಳ್ಳುವುದು ಎಂಬ ಭಾವ ಸುದೀರ್ಘ ದಾಂಪತ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಅದು ಅವರಿಗೂ ನಮಗೂ ಹೊರೆ. ನಮ್ಮತನ ಉಳಿಸಿಕೊಳ್ಳುವುದು, ನಮ್ಮ ಸ್ವಾತಂತ್ರ್ಯ, ಸ್ವಾಭಿಮಾನ, ಗೌರವಕ್ಕೆ ಧಕ್ಕೆಯಾಗದ ಹಾಗಿರುವುದು ಮುಖ್ಯ. ನಮ್ಮತನವೇ ಇಲ್ಲದ ಮೇಲೆ ನಮ್ಮೊಳಗೇ ಕೀಳರಿಮೆ ಆವರಿಸುತ್ತದೆ. ಅದರಿಂದ ನಾವು ಸಂಗಾತಿಯ ದೃಷ್ಟಿಯಲ್ಲೂ, ಮಕ್ಕಳ ದೃಷ್ಟಿಯಲ್ಲೂ ಕೀಳಾಗುತ್ತೇವೆ. ಇದರಿಂದ ...

ತರತರಹ

ಕೂಡಿ ಕಳೆದು ಕಟ್ಟುವ ತರ ತರಹ ಕತೆಗಳು. ದೇವತೆಗಳ ಗುರು ಬೃಹಸ್ಪತಿ ಮತ್ತು ಆತನ ಪತ್ನಿ ತಾರೆಯ ಬಗೆಗಿನ ಕಲ್ಪನೆಯ ಕತೆಯನ್ನು ಪ್ರಕಾಶ್‌ರವರು ಚಂದವಾಗಿ ಕಟ್ಟಿ ಕೊಟ್ಟಿದ್ದಾರೆ. ಈ ಕತೆಯನ್ನು ಓದುವವನು ಭಾವಜೀವಿಯಾಗಿರಬೇಕು. Click here to Read the Story

ಹಳೇ ಜಾಗದಲ್ಲೇ ಮತ್ತೆ ಭೇಟಿಯಾಗೋಣ, ಸಿಕ್ತೀಯಾ?

ಹಳೇ ಜಾಗದಲ್ಲೇ ಮತ್ತೆ ಭೇಟಿಯಾಗೋಣ, ಸಿಕ್ತೀಯಾ? ಉಭಯಕುಶಲೋಪರಿಯ ನಂತರ ಓದಿನತ್ತ ನಮ್ಮ ಮಾತು ಹೊರಳಿತು. ಇನ್ನೇನು ನಿನ್ನ ಮುಂದೆ ಪ್ರೇಮದ ಮೂಟೆ ಬಿಚ್ಚಬೇಕು ಅನ್ನುವಷ್ಟರಲ್ಲಿ, ನೀನು ಗೆಳೆತನದ ಬಗ್ಗೆ, ಬದುಕಿನ ಕನಸುಗಳ ಬಗ್ಗೆ ಆಡಿದ ಮಾತುಗಳು ನನ್ನ ಬಾಯಿ ಕಟ್ಟಿದವು. ನಿನ್ನ ಮಾತಲ್ಲಿ ಸತ್ಯ ಇತ್ತು, ಬದುಕಿನ ವಾಸ್ತವ ಇತ್ತು. ಅಂದು ನೀನು, ತಂಗಾಳಿ ಬೀಸುವಾಗ ಹೂವಿನ ಹಾಸಿಗೆ ಮೇಲೆ ನಾಜೂಕಾಗಿ ಹೆಜ್ಜೆಯಿಟ್ಟು ನಡೆಯುತ್ತಿದ್ದೆ. ನಾನು ದೂರದಿಂದ ಕಳ್ಳ ಬೆಕ್ಕಿನ ಹಾಗೆ ನಿನ್ನನ್ನು ನೋಡುತ್ತಿದ್ದೆ. ಆ ನಿನ್ನ ಮುಗ್ಧ ನಗು, ಹಾವಭಾವ, ಆಧುನಿಕತೆಯ ಸ್ಪರ್ಶವಿಲ್ಲದ ಉಡುಗೆ ತೊಡುಗೆ, ಕಣ್ಣೋಟ ಎಲ್ಲವೂ ಇಷ್ಟವಾದವು. ಅದು ಆಕರ್ಷಣೆಯೋ, ಪ್ರೀತಿಯೋ, ಸೆಳೆತವೋ ಏನೊಂದೂ ಅರಿಯದ ಹದಿಹರೆಯ ನನ್ನದು. ಆಗ ನಾನೇ ಮುಂದಾಗಿ ನಿನ್ನ ಪರಿಚಯ ಮಾಡಿಕೊಂಡೆ. ಅಷ್ಟೇ ಮುದ್ದಾಗಿ ಮಾತಾಡಿದೆ. ನನ್ನ ಗೆಳತಿಯಾದೆ. ಭಾವನೆಗಳು ಉಕ್ಕಿ ಹರಿಯುವ ಮುನ್ನವೇ ಅವುಗಳಿಗೆ ಸರಿಯಾದ ದಿಕ್ಕು ತೋರಿಸಬೇಕು ಎಂದು ಹೇಳುತ್ತಾರೆ. ನಾವಿಬ್ಬರೂ ಓದಿನಲ್ಲಷ್ಟೇ ಅಲ್ಲ, ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದೆವು. ಸಮಾನ ಮನಸ್ಕರು ಬೇಗ ಹತ್ತಿರಾಗುತ್ತಾರೆ ಎನ್ನುವಂತೆ ನಾವಿಬ್ಬರೂ ಹತ್ತಿರಾದೆವು. ಆ ಸ್ನೇಹ, ಆದಷ್ಟು ಬೇಗ ಪ್ರೀತಿಯ ರೂಪ ಪಡೆಯಲಿ ಅಂತ ಆರಂಭದಲ್ಲಿ ನನಗನಿಸಿದ್ದು ನಿಜ. ಆದರೆ, ನಿನ್ನ ಕಣ್ಣೋಟದಲ್ಲಿ ಪ್ರೀತಿಯ ಬದಲು ವಿಶ್ವಾಸ ಇತ್ತು, ಭರವಸೆ ಇತ್ತು. ನಿನ್ನ ಮಾತುಗಳಲ್...

ಶತಶತಮಾನಗಳಿಂದ ಬರುವೆಯೆಂದು ನಂಬಿಸಿ ಎಂದಿಗೂ ಬಾರದ ಮೋಸಗಾರ ನೀನೋ.. ಶಿವ

ಶಿವ, ನೆನಪಾಗುವೆ ನೀನು ಪ್ರತಿಕ್ಷಣವೂ...‌‌‌‌..... ಶಿವ ಮುಂಜಾನೆ - ಶಿವ ಮಧ್ಯಾಹ್ನ - ಶಿವ ಸಂಜೆ - ಶಿವರಾತ್ರಿ.......‌‌ ರೈತನೊಬ್ಬ ಉರುಳಿಗೆ ತಲೆಕೊಟ್ಟಾಗ.......‌, ಗೃಹಿಣಿಯೊಬ್ಬಳು ಬೆಂಕಿಗೆ ಆಹುತಿಯಾದಾಗ........., ಹಸುಳೆಯೊಂದು ಅತ್ಯಾಚಾರಕ್ಕೆ ಒಳಗಾದಾಗ........., ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಾಗ.........., ಶಾಲಾ ಮಕ್ಕಳು ಅಪಘಾತಕ್ಕೆ ಒಳಗಾದಾಗ............‌‌, ವೃದ್ಧರನ್ನು ಅನಾಥಾಶ್ರಮದಲ್ಲಿ ಕಂಡಾಗ.................., ವಂಚಕರು ವಿಧಾನಸೌಧ - ಪಾರ್ಲಿಮೆಂಟಿನಲ್ಲಿ ಕುಳಿತಿರುವಾಗ............, ಸುಳ್ಳುಗಾರರು ಟಿವಿಯಲ್ಲಿ ಮಾತನಾಡುವಾಗ......‌.., ಭ್ರಷ್ಟ ರು ಅಧಿಕಾರ ನಡೆಸುವಾಗ.........., ಕಾಮಿಗಳು ಕಾವಿ ತೊಟ್ಟಿರುವಾಗ.........., ಅನ್ನ ತಿನ್ನುವವರು ದೇಶದ್ರೋಹಿಗಳಾದಾಗ.......‌...‌, ಮನುಷ್ಯನನ್ನು ಮುಟ್ಟಿಸಿಕೊಳ್ಳಲೇ ಅಸಹ್ಯ ಪಡುವವರಿರುವಾಗ........., ಕುಡಿಯುವ ನೀರಿಗೆ ಹೊಡೆದಾಡುತ್ತಿರುವಾಗ............, ತಿನ್ನುವ ಆಹಾರಕ್ಕೆ ಕಲಬೆರಕೆ ಮಾಡುತ್ತಿರುವಾಗ........, ಸೈನಿಕರ ಪತ್ನಿಯರು ವಿಧವೆಯರಾಗುತ್ತಿರುವಾಗ............, ಮೋಸಗಾರರು ಜ್ಯೋತಿರ್ಲಿಂಗಗಳನ್ನು ಸುತ್ತುತ್ತಿರುವಾಗ........, ಕಪಟಿಗಳು ನಿನ್ನ ಹೆಸರಲ್ಲಿ ಉಪವಾಸ - ಜಾಗರಣೆ ಮಾಡುತ್ತಿರುವಾಗ.....‌, ನೆನಪಾಗುವೆ ನೀನು ಶಿವ....... ಆದರೆ,............. ಶತಶತಮಾನಗಳಿಂದ ಬರುವೆಯೆಂದು ನಂಬಿಸಿ ಎಂ...

ಯಾಕೆ ಯಾವ ಹುಡುಗನೂ ಇಷ್ಟವಾಗುವುದಿಲ್ಲ !

ಯಾಕೆ ಯಾವ ಹುಡುಗನೂ ಇಷ್ಟವಾಗುವುದಿಲ್ಲ ! ಓದು ಮುಗಿಯಿತು. ಕೆಲಸವೂ ಸಿಕ್ಕಿತು. ಬದುಕಿನ ಮುಂದಿನ ಘಟ್ಟ ಮದುವೆಯೇ ತಾನೆ? "ಯಾರನ್ನಾದ್ರೂ ಇಷ್ಟಪಟ್ಟಿದ್ದೀಯ?' ಅಂತ ಅಪ್ಪ ಕೇಳಿದಾಗ, ನಿಂಗಾಗಿ ಕಾಯ್ತಿನಿ ಅಂತ ಹೇಳಿ ಯಾವ ಹುಡುಗ ಹೆಸರನ್ನೂ ಹೇಳಲಿಲ್ಲ. ಹೇಳಬೇಕು ಅಂತ ಅನ್ನಿಸಲೂ ಇಲ್ಲ. ಸರಿ, ಮನೆಯವರೇ ನನಗಾಗಿ ಗಂಡು ಹುಡುಕೋಕೆ ಶುರು ಮಾಡಿದರು. ಇಷ್ಟು ದಿನ, ನಂಗಿಷ್ಟ ಆಗ್ತಿಲ್ಲ ಅನ್ನೋ ಕಾರಣಕ್ಕೆ ಹುಡುಗರನ್ನು ರಿಜೆಕ್ಟ್ ಮಾಡ್ತಿದ್ದೆ. ಆದರೆ, ಈಗ "ಯಾಕೆ ಇಷ್ಟ ಆಗ್ತಿಲ್ಲ?' ಅನ್ನೋ ಪ್ರಶ್ನೆಗೆ ಕಾರಣ ಸಮೇತ ಉತ್ತರಿಸಬೇಕು. ಈ ಹುಡುಗನನ್ನಾದ್ರೂ ಒಪ್ಕೊಳ್ಳೇ ಮಾರಾಯ್ತಿ. ಒಳ್ಳೆ ಕೆಲಸ, ಬೆಂಗ್ಳೂರಲ್ಲಿ ಸ್ವಂತ ಮನೆ ಇದೆ ಅಂತೆ. ಇನ್ನೇನ್‌ ಬೇಕು ನಿಂಗೆ...'' ಅಮ್ಮ ಹೇಳುತ್ತಲೇ ಇದ್ದಳು. ಅವನ ಎಫ್ಬಿ ಪ್ರೊಫೈಲ್‌ ಜಾಲಾಡಿ, ಈಗಾಗಲ್ಲೇ ಅವನನ್ನು ರಿಜೆಕ್ಟ್ ಮಾಡಿರೋ ವಿಷ್ಯ ಅಮ್ಮನಿಗೆ ಗೊತ್ತಿಲ್ಲ. ಯಾವುದೋ ಹುಡುಗನ ಜಾತಕ ಬಂದರೂ, ನಾನು ಮೊದಲು ಮಾಡೋ ಕೆಲಸ ಅವನ ಫೇಸ್‌ಬುಕ್‌ ಪ್ರೊಫೈಲ್‌ ಚೆಕ್‌ ಮಾಡೋದು. ಹುಡುಗ ಎಂಥವನೆಂದು ಹೇಳಲು ಜಾತಕ ಯಾಕೆ, ಎಫ್ಬಿ ಗೋಡೆಯೇ ಸಾಕಲ್ಲ? ಈ ಹುಡುಗ ಹಾಕೋ ಸ್ಟೇಟಸ್‌, ಶೇರ್‌ ಮಾಡೋ ಪೋಸ್ಟ್‌ಗಳನ್ನು ನೋಡಿದರೇ ಗೊತ್ತಾಗುತ್ತೆ ಹುಡುಗ ತುಂಬಾ ಬೋರಿಂಗ್‌ ಅಂತ. ಬೇರೆಯವರ ಪೋಸ್ಟ್‌ಗಳಿಗೆ ಅವನು ಕಮೆಂಟ್‌ ಮಾಡಿರೋ ರೀತಿಯೂ ಹಿಡಿಸಲಿಲ್ಲ. ಬೇಡ ಅನ್ನೋಕೆ ಇದಕ್ಕಿಂತ ಕಾರಣ ಬೇಕೇ? ...

ಚಾತುರ್ವರ್ಣ'ವೆಂಬ ಮೋಸದ ಬಲೆ : ಡಾ.ಬಿ.ಆರ್. ಅಂಬೇಡ್ಕರ್

'ಚಾತುರ್ವರ್ಣ'ವೆಂಬ ಮೋಸದ ಬಲೆ : ಡಾ.ಬಿ.ಆರ್. ಅಂಬೇಡ್ಕರ್ ಇನ್ನೊಂದು ಸುಧಾರಕರ ಗುಂಪಿದೆ, ಅವರ ಆದರ್ಶವೇ ಬೇರೆ. ತಾವು ಆರ್ಯ ಸಮಾಜದವರೆಂದು ಹೇಳಿಕೊಳ್ಳುವ ಅವರ ಆದರ್ಶವೆಂದರೆ ಸಮಾಜಕ್ಕೆ ಚಾತುರ್ವರ್ಣ ‌ವೇ ಚೌಕಟ್ಟು; ಅಂದರೆ ಈಗ ಭಾರತದಲ್ಲಿರುವ ನಾಲ್ಕು ಸಾವಿರ ಜಾತಿಗಳಿಗೆ ಬದಲಾಗಿ ನಾಲ್ವೇ ವರ್ಗಗಳಲ್ಲಿ ಸಮಾಜವನ್ನು ವಿಭಾಗಿಸುವುದು ಅವರ ಯೋಜನೆ. ತಮ್ಮ ಈ ಯೋಜನೆ ಹೆಚ್ಚು ಆಕರ್ಷಕವಾಗಿ ತೋರಲೆಂದು ಹಾಗೂ ಆಕ್ಷೇಪಣೆಗಳಿಗೆ ಅವಕಾಶವಿರಬಾರದೆಂದು ಅವರೇನು ಹೇಳುತ್ತಾರೆಂದರೆ ಈ ಚಾತುರ್ವರ್ಣದ ಆಧಾರ ಜನ್ಮವಲ್ಲ, ಗುಣ ( ಯೋಗ್ಯತೆ ). ಮೊದಲೇ ಹೇಳಿಬಿಡುತ್ತೇನೆ ಈ ಆದರ್ಶವನ್ನು ನಾನು ಒಪ್ಪಲಾರೆನೆಂದು. ಮೊದಲನೆಯದಾಗಿ ಆರ್ಯ ಸಮಾಜದವರ ಈ ಚಾತುರ್ವರ್ಣ ದ ಮೇರೆಗೆ ಹಿಂದೂ ಸಮಾಜದಲ್ಲಿ ಯೋಗ್ಯತೆಗೆ ಅನುಗುಣವಾಗಿಯೇ ವ್ಯಕ್ತಿಯ ಸ್ಥಾನ ನಿಗದಿಯಾವುದಿದ್ದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ಹಣೆಪಟ್ಟಿಗಳಿಂದ ಮನುಷ್ಯರನ್ನು ಗುರುತಿಸುವುದೇಕೆಂದು ನನಗೆ ತಿಳಿಯದು. ( ವಿದ್ವಾಂಸನನ್ನು ಬ್ರಾಹ್ಮಣನೆಂದು ಕರೆಯದೆ ಗುರುತಿಸಬಹುದು . ಯೋಧನನ್ನು ಕ್ಷತ್ರಿಯನೆಂದು ನಿರ್ದೇಶಿಸದೆ ಕೂಡ ಗೌರವಿಸಬಹುದು.) ಯೂರೋಪಿಯನ್ ಸಮಾಜದಲ್ಲಿ ಇಂತಹ ಖಾಯಂ ವರ್ಗನಾಮವಿಲ್ಲದೆ ವಿದ್ವಾಂಸರೂ , ಯೋಧರೂ ಗೌರವಿಸಲ್ಪಡುತ್ತಿರುವಾಗ ಹಿಂದೂ ಸಮಾಜದಲ್ಲಿ ಈ ಹಣೆ ಪಟ್ಟಿಯೇಕೆ ಬಂತು ? ಆರ್ಯ ಸಮಾಜದವರು ಈ ಪ್ರಶ್ನೆಯನ್ನು ವಿಚಾರಿಸಲು ಹೋಗಿಲ್ಲ. ಬ್ರಾಹ್ಮಣ ...

ತಾಯ್ನುಡಿ ದಿನ ವಿಶೇಷ ನಮ್ಮ ಭಾಷೆ ಮತ್ತು ತಂತ್ರಜ್ಞಾನ

ತಂತ್ರಜ್ಞಾನ, ಅದರಲ್ಲೂ ಮಾಹಿತಿ ತಂತ್ರಜ್ಞಾನ ಎಂದಕೂಡಲೇ ಕೇಳಸಿಗುವ ಆರೋಪ: ಅದರಿಂದ ನಮ್ಮ ಭಾಷೆಗೆ ತೊಂದರೆಯಾಗಿದೆ ಅಥವಾ ಆಗುತ್ತಿದೆ ಎನ್ನುವುದು. ಇದು ಕೊಂಚಮಟ್ಟಿಗೆ ನಿಜವೂ ಹೌದು. ಪ್ರಪಂಚದಲ್ಲಿರುವ ಸಾವಿರಾರು ಭಾಷೆಗಳ ಪೈಕಿ ಶೇ. ೯೬ರಷ್ಟನ್ನು ಬಳಸುವವರು ನಮ್ಮ ಜನಸಂಖ್ಯೆಯ ಶೇ. ೪ರಷ್ಟು ಮಂದಿ ಮಾತ್ರ ಎಂದು ವಿಶ್ವಸಂಸ್ಥೆಯ ಜಾಲತಾಣವೇ ಹೇಳುತ್ತದೆ. ಇಂತಹ ಭಾಷೆಗಳಿಗೆ ಶಿಕ್ಷಣ ವ್ಯವಸ್ಥೆಯಲ್ಲೂ ಮಾಹಿತಿ ತಂತ್ರಜ್ಞಾನದ ಜಗತ್ತಿನಲ್ಲೂ ಪ್ರಾಮುಖ್ಯ ದೊರಕದಿದ್ದರೆ ಅವುಗಳ ಬಳಕೆ ಇನ್ನಷ್ಟು ಕಡಿಮೆಯಾಗುವುದು, ಬೆಳವಣಿಗೆ ಕುಂಠಿತವಾಗುವುದು ಸಹಜವೇ. ಹೌದು, ಇಂದಿನ ಬದುಕಿನಲ್ಲಿ ಮಾಹಿತಿ ತಂತ್ರಜ್ಞಾನದ ಪಾತ್ರ ಮಹತ್ವದ್ದು. ಬೆಳಗಿನಿಂದ ರಾತ್ರಿಯವರೆಗೆ ಒಂದಲ್ಲ ಒಂದು ರೂಪದಲ್ಲಿ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ನಾವೆಲ್ಲ ಬಳಸುತ್ತಲೇ ಇರುತ್ತೇವೆ. ಈ ವ್ಯವಹಾರವನ್ನೆಲ್ಲ ನಮ್ಮ ಭಾಷೆಯಲ್ಲೇ ನಡೆಸುವಂತಾದರೆ ಭಾಷೆ-ತಂತ್ರಜ್ಞಾನಗಳೆರಡರ ವ್ಯಾಪ್ತಿಯೂ ಹೆಚ್ಚುತ್ತದೆ, ಎರಡೂ ಪರಸ್ಪರ ಪೂರಕವಾಗಿ ಬೆಳೆಯುತ್ತವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಾರಂಭಿಕ ವರ್ಷಗಳಲ್ಲಿ ಅಲ್ಲಿನ ಬಹುಪಾಲು ವ್ಯವಹಾರ ಇಂಗ್ಲಿಷಿನಲ್ಲೇ ನಡೆಯುತ್ತಿತ್ತು. ಆನಂತರ ಈ ಕ್ಷೇತ್ರದ ಪ್ರಯೋಜನ ಇನ್ನಷ್ಟು ಜನರಿಗೆ ತಲುಪಿತಾದರೂ ಅವರು ಈ ಪ್ರಯೋಜನವನ್ನು ಇಂಗ್ಲಿಷ್ ಭಾಷೆಯ ಮೂಲಕ ಪಡೆದುಕೊಳ್ಳಬೇಕಾದ ಪರಿಸ್ಥಿತಿಯೂ ಇತ್ತು. ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ. ೨೦೨೦ರ ...

ದೇವರ ಮೇಲೆ ವಿಶ್ವಾಸವಿತ್ತು. ಆದರೆ ಆತ ಏನೂ ಮಾಡಲಿಲ್ಲ..

ದೇವರ ಮೇಲೆ ವಿಶ್ವಾಸವಿತ್ತು. ಆದರೆ ಆತ ಏನೂ ಮಾಡಲಿಲ್ಲ. ಪಕ್ಷಪಾತ ಮಾಡಿದ, ದುಷ್ಟರ ಪರವಾಗಿ ಮುಖವಾಡದವರ ಸಲುವಾಗಿ ನಿಂತ, ಮುಗ್ದರನ್ನು ಬಹಳ ಗೋಳಾಡಿಸಿದ.......... ಕಾನೂನಿನ ಮೇಲೆ ಭರವಸೆ ಇತ್ತು.ಕ್ರಿಮಿನಲ್ ಗಳಿಗೆ ಶಿಕ್ಷೆಯಾಗುತ್ತದೆ. ಅಮಾಯಕರಿಗೆ ರಕ್ಷಣೆ ದೊರೆಯುತ್ತದೆ. ಹೇಗೋ ನೆಮ್ಮದಿಯಿಂದ ಬದುಕಬಹುದು ಎಂದು. ಅದೂ ಕೈಗೂಡಲಿಲ್ಲ. ಕಾನೂನು ಬಲಿಷ್ಠರ ಪಾಲಾಯಿತು. ಅಲ್ಲೂ ನಿರಾಸೆಯಾಯಿತು......... ದೇವರು ಕಾನೂನು ವಿಫಲರಾದರೂ, ಮನುಷ್ಯನ ನೈತಿಕತೆ - ನಾಗರಿಕ ಪ್ರಜ್ಞೆಯಾದರೂ ಒಳ್ಳೆಯದು ಕೆಟ್ಟದ್ದನ್ನು ಗುರುತಿಸಿ ನಮಗೆ ನ್ಯಾಯ ನೀಡುತ್ತದೆ. ನಮ್ಮ ನಡುವೆ ಶಿಕ್ಷಕರು ವೈದ್ಯರು ನ್ಯಾಯಾಧೀಶರು ವಿಜ್ಞಾನಿಗಳು ತಂತ್ರಜ್ಞರು ಸ್ವಾಮಿಗಳು ಸಮಾಜ ಸೇವಕರು ಪೋಲೀಸರು ರಾಜಕಾರಣಿಗಳು ಇದ್ದಾರೆ. ಅವರಾದರೂ ಸಮಾಜದಲ್ಲಿ ನಮ್ಮ ನಡುವಿನ ಕ್ರೂರಿಗಳು - ಕರುಣಾಮಯಿಗಳ ವ್ಯತ್ಯಾಸ ಗುರುತಿಸಿ ಅದಕ್ಕೆ ತಕ್ಕಂತೆ ವರ್ತಿಸುತ್ತಾರೆ ಎಂಬ ನಂಬಿಕೆ ಇತ್ತು. ಕೊನೆಗೆ ಅವರೂ ಕೈಬಿಟ್ಟರು.......... ನನ್ನ ಬಂಧು, ನನ್ನ ಜಾತಿಯವ, ನನ್ನ ಸ್ನೇಹಿತ, ನನ್ನ ಭಾಷೆಯವ, ನನ್ನ ಶಿಷ್ಯ, ನನ್ನ ಗುರು, ನನ್ನ ಸಂಘದವ, ನನ್ನ ಊರಿನವ, ನನ್ನ ಗ್ರಾಹಕ ಇವರೆಲ್ಲರ ಪರವಾಗಿ ನ್ಯಾಯದ ತಕ್ಕಡಿಯನ್ನು ತಮ್ಮ ಸ್ವಾರ್ಥಕ್ಕೆ ಬಗ್ಗಿಸಿಕೊಂಡ ಸಮಾಜ ನಮ್ಮದು... ಮನಸ್ಸುಗಳೇ ಭ್ರಷ್ಟಗೊಂಡಿರುವಾಗ ನಾವು ನಂಬುವುದಾದರೂ ಯಾರನ್ನು. ಒಳ್ಳೆಯವರನ್ನು ಕೆಟ್ಟವರನ್ನು ಒಂದೇ ತಕ್ಕಡಿಯಲ್ಲಿ ...

ವ್ಯಾಲೆಂಟೈನ್..............

Valentine, ವ್ಯಾಲೆಂಟೈನ್............ ಧರ್ಮಗಳ ಹೊಡೆತಕ್ಕೆ ನಲುಗಿದ ಹೂವುಗಳು, ನಾಗರಿಕತೆಯ ಭ್ರಮೆಗೆ ಕನಲಿದ ಚಿಗುರುಗಳು, ಮನುಷ್ಯನ ಕ್ರೌರ್ಯಕ್ಕೆ ಬಲಿಯಾದ ಭಾವನೆಗಳು, ಮುಖವಾಡಗಳಿಗೆ ಆಹುತಿಯಾದ ಪ್ರೇಮ ಕುಸುಮಗಳು, ಸಮಾಜದ ತಿಕ್ಕಲುತನಕ್ಕೆ ಬಸವಳಿದ ನನ್ನ ಕಂದಮ್ಮಗಳು.......... ಅಯ್ಯೋ ಪಾಪಿಗಳ ಯಾವುದರಲ್ಲೂ ಶುಧ್ಧತೆಯೇ ಉಳಿಸಿಲ್ಲವಲ್ಲ ನಾವು, ಪ್ರೀತಿ ಎಂದರೆ ನಾಟಕವೆನ್ನುವಿರಿ, ಪ್ರೇಮವೆಂದರೆ ಕಾಮವೆನ್ನುವಿರಿ, ಯಶಸ್ಸೆಂದರೆ ದುಡ್ಡೆನ್ನುವಿರಿ, ಸಾಧನೆಯೆಂದರೆ ಅಧಿಕಾರವೆನ್ನುವಿರಿ.... ಆ ಪದಗಳ ಅರ್ಥಗಳನ್ನೇ ಕೆಡಿಸಿರುವಿರಿ...... ಪ್ರೀತಿ ನಮ್ಮ ಸಂಸ್ಕತಿ, ಪ್ರೇಮ ನಮ್ಮ ಸಂಪ್ರದಾಯ, ಕಾಮ ನಮ್ಮ ಧರ್ಮ, ಸಂತೋಷ ನಮ್ಮ ಸ್ವಾತಂತ್ರ್ಯ, ನೆನಪಿರಲಿ..... ಹೌದು, ಪ್ರೀತಿಗೂ - ಪ್ರೇಮಕ್ಕೂ, ಪ್ರಣಯಕ್ಕೂ ಒಂದು ಚೌಕಟ್ಟು ಇದೆ. ಅದು ನಮ್ಮ ಅಕ್ಕ ತಂಗಿ ಅಣ್ಣ ತಮ್ಮ ಮಗ ಮಗಳು ಕುಟುಂಬ ಸಮಾಜ ಎಲ್ಲಕ್ಕೂ ಅನ್ವಯ....... ಆದರೆ, ಕೆಲವೊಮ್ಮೆ ಯೌವ್ವನದಲ್ಲಿ ಆಗುವ ಮಾನಸಿಕ - ದೈಹಿಕ ಬೆಳವಣಿಗೆಗಳು ಒಂದಷ್ಟು ಚೌಕಟ್ಟು ಮೀರುವ ಪ್ರಯತ್ನ ಮಾಡುತ್ತವೆ. ಅದಕ್ಕೆ ಅಸಹ್ಯ ಅನೈತಿಕ ಎಂದು ಬರ್ಭರ ಕೊಲೆಯಂತ ಶಿಕ್ಷೆ ನೀಡುವಿರಿ. ನೀವು ನಿಜಕ್ಕೂ ಮನುಷ್ಯರೇ ????? ಕಣ್ಣ ಮುಂದೆಯೇ ಲಂಚಕ್ಕೆ ಕೈ ಹಾಕುವಿರಿ, ಬೆನ್ನ ಹಿಂದೆಯೇ ಕಳ್ಳತನ ಮಾಡುವಿರಿ, ಬಾಯಿ ಬಿಟ್ಟರೆ ಹೊಲಸು ಮಾತನಾಡುವಿರಿ, ಅಧಿಕಾರಕ್ಕಾಗಿ ಬೂಟು ನೆಕ್ಕು...

ಭೌತಿಕ ಭ್ರಷ್ಟತೆ ಮತ್ತು ಭಾವನಾತ್ಮಕ ಭ್ರಷ್ಟತೆ

ದೈಹಿಕ ಅಥವಾ ಭೌತಿಕ ಭ್ರಷ್ಟತೆ ಮತ್ತು ಮಾನಸಿಕ ಅಥವಾ ಭಾವನಾತ್ಮಕ ಭ್ರಷ್ಟತೆ............... ಈ ಎರಡೂ ವಿಧಾನಗಳನ್ನು ಭಾರತದ ರಾಜಕೀಯ ವ್ಯವಸ್ಥೆಯನ್ನು ಅಳೆಯುವ ಮಾನದಂಡಗಳಾಗಿ ಬಳಸಬಹುದು. UPA ಎಂಬ ಕಾಂಗ್ರೆಸ್ ನೇತೃತ್ವದ ಒಕ್ಕೂಟ ದೈಹಿಕ ಭ್ರಷ್ಟತೆಗೆ ಉದಾಹರಣೆಯಾದರೆ, NDA ಎಂಬ ಬಿಜೆಪಿ ನೇತೃತ್ವದ ಒಕ್ಕೂಟ ಮಾನಸಿಕ ಭ್ರಷ್ಟತೆಗೆ ಉದಾಹರಣೆಯಾಗಿದೆ. ಯು ಪಿ ಎ , ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ವಂಶಾಡಳಿತ, ದೌರ್ಜನ್ಯ, ಅಶಿಸ್ತು, ಹಣ, ಜಾತಿ ಮುಂತಾದ ಅಂಶಗಳನ್ನು ತಮ್ಮ ಮೂಲಭೂತ ಗುಣಗಳಾಗಿ ಹೊಂದಿ ಆ ಮುಖಾಂತರವೇ ಚುನಾವಣೆಯಲ್ಲಿ ಮತಗಳಿಸಿ ಅಧಿಕಾರಕ್ಕೇರುತ್ತದೆ. ಬಹಳ ವರ್ಷಗಳ ಕಾಲ ಅವರಿಗೆ ಪ್ರಬಲ ಪೈಪೋಟಿ ಇಲ್ಲದ ಕಾರಣ ಈ ಗುಣಗಳು ಅವರ ರಕ್ತದಲ್ಲಿ ಸೇರಿ ಅದೇ ಅವರ ಸಹಜ ಸ್ವಭಾವ ಎಂಬಂತಾಗಿದೆ. ಎನ್ ಡಿ ಎ , ಇದಕ್ಕೆ ಪರ್ಯಾಯವಾಗಿ ಧರ್ಮ, ದೇವರು, ದೇಶಭಕ್ತಿ, ಮೂಢನಂಬಿಕೆ, ಅಜ್ಞಾನ ಮುಂತಾದ ಭಾವನಾತ್ಮಕ ಅಂಶಗಳನ್ನು ಕೆರಳಿಸಿ ಜನರಲ್ಲಿ, ಅವರನ್ನು ವಿಭಜಿಸಿ, ಆಕ್ರಮಣಕಾರಿ ಮನೋಭಾವ ಉತ್ತೇಜಿಸಿ ಅದರಿಂದಲೇ ಚುನಾವಣೆಯಲ್ಲಿ ಮತಗಳಿಸಿ ಅಧಿಕಾರಕ್ಕೇರುವ ತಂತ್ರಗಳನ್ನು ಮಾಡುತ್ತದೆ. ಕಾಂಗ್ರೆಸ್ ನವರು ಭ್ರಷ್ಟ ಮಾರ್ಗದಲ್ಲಿ ಹಣಗಳಿಸಿ ಚುನಾವಣಾ ಸಮಯದಲ್ಲಿ ಅದರ ಸ್ವಲ್ಪ ಭಾಗವನ್ನು ಬಹಿರಂಗವಾಗಿ ಜನರಿಗೆ ಚೆಲ್ಲುತ್ತಾರೆ. ಬಿಜೆಪಿಯವರು ನಾವು ಪ್ರಾಮಾಣಿಕರು ಎಂದು ಹೇಳಿ ಗಳಿಸುವ ಭ್ರಷ್ಟ ಹಣವನ್ನು ಜನರಿಗೆ ಕೊಡುವಂತೆ ನಾಟಕ ಮಾಡಿ ತಾವೇ ನುಂಗುತ...

ಉತ್ತರಿಸಿ ಬಹುಮಾನ ಗೆಲ್ಲಿರಿ!

ರಸ ಪ್ರಶ್ನೆ.............‌... ಅತ್ಯಂತ ಕುತೂಹಲಕಾರಿ ಕಥೆ ಮತ್ತು ನಿಮ್ಮ ಆತ್ಮಸಾಕ್ಷಿ ಬಡಿದೆಬ್ಬಿಸುವ ಪ್ರಶ್ನೆ......... ದಯವಿಟ್ಟು ತಪ್ಪದೆ ತಾಳ್ಮೆಯಿಂದ ಓದಿ..... ಉತ್ತರಿಸಿ - ಬಹುಮಾನ ಗೆಲ್ಲಿರಿ....... ನಿಮ್ಮ ಉತ್ತರ ಸರಿ ಇದ್ದರೆ ಭಾರತ ದೇಶ ಗೆಲ್ಲುತ್ತದೆ‌. ನಿಮ್ಮ ಉತ್ತರ ತಪ್ಪಾದರೆ ಭಾರತ ಸೋಲುತ್ತದೆ. ಆಳವಾಗಿ ಯೋಚಿಸಿ ಉತ್ತರಿಸಬೇಕೆಂದು ಕಳಕಳಿಯ ಮನವಿ...... ಈ ಕೆಳಗಿನ ಸಣ್ಣ ಕಥೆ ಓದಿ ಅದರಲ್ಲಿ ಅಡಗಿರುವ ಮತ್ತು ಕೆಳಗೆ ಕೇಳಿರುವ ಪ್ರಶ್ನೆಗೆ ಉತ್ತರಿಸಿ..... ಕಥೆ........ *********** ವಿಶ್ವದಲ್ಲಿ ನಡೆದ ಪ್ರಕೃತಿ ವಿಕೋಪ ಮತ್ತು ಯುದ್ದದ ಪರಿಣಾಮವಾಗಿ ಇಡೀ ವಿಶ್ವ " ವಿಶ್ವಸಂಸ್ಥೆಯ " ನಿಯಂತ್ರಣಕ್ಕೆ ಒಳಪಡುತ್ತದೆ. ವಿಶ್ವಸಂಸ್ಥೆ ಎಲ್ಲಾ ದೇಶಗಳಲ್ಲೂ ಅಧ್ಯಕ್ಷೀಯ ಮಾದರಿಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಒಬ್ಬೊಬ್ಬ ನಾಯಕರನ್ನು ಆರಿಸಿ ಚುನಾವಣೆ ನಡೆಸಿ ಅವರಲ್ಲಿ ಶೇಕಡಾ ೯೦% ಮತ ಪಡೆದ ವ್ಯಕ್ತಿಯನ್ನು ಆ ದೇಶದ ಮುಖ್ಯಸ್ಥನಾಗಿ ಆಯ್ಕೆ ಮಾಡಲಾಗುತ್ತದೆ. ಶೇಕಡಾ ೯೦% ರಷ್ಟು ಬಹುಮತ ಬರದಿದ್ದರೆ ಪಕ್ಕದ ದೇಶದ ಅಧ್ಯಕ್ಷರನ್ನು ನೇಮಿಸಲಾಗುತ್ತದೆ. ಅಂದರೆ ಭಾರತಕ್ಕೆ ಪಾಕಿಸ್ತಾನ ಅಥವಾ ಚೀನಾದ ಮುಖ್ಯಸ್ಥರೇ ಪ್ರಧಾನಿಗಳಾಗುವರು. ಭಾರತದಲ್ಲಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯ ನಡುವೆ ಸ್ಪರ್ಧೆ ಏರ್ಪಡುತ್ತದೆ. ಇಬ್ಬರ ಮಧ್ಯೆ ಜಿದ್ದಾ ಜಿದ್ದಿ ಪೈಪೋಟಿ ಇರುತ್ತದೆ. ಎಂದಿನಂತೆ ಸಂಘ...

ತನ್ನದಲ್ಲದ ಮುಖವಾಡ ತೊಟ್ಟ ಮಾನವ....

ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ತಿಂದು ಬದುಕುತ್ತವಂತೆ, ಏಡಿಗಳು ಮೇಲಕ್ಕೇರಲು ಪ್ರಯತ್ನಿಸುವ ಮತ್ತೊಂದು ಏಡಿಯ ಕಾಲು ಹಿಡಿದು ಕೆಳಕ್ಕೆ ಎಳೆಯುತ್ತವಂತೆ, ತಲೆತಗ್ಗಿಸಿ ನಡೆಯುವ ಕುರಿಗಳು ಮುಂದೆ ಸಾಗುತ್ತಿದ್ದ ಕುರಿಯೊಂದು ಹಳ್ಳಕ್ಕೆ ಬಿದ್ದರೆ ಹಿಂಬಾಲಿಸುತ್ತಿದ್ದ ಎಲ್ಲಾ ಕುರಿಗಳು ಹಳ್ಳಕ್ಕೆ ಬೀಳುತ್ತವಂತೆ, ಕೆರೆ ತಟದ ಕಪ್ಪೆಯೊಂದು ಒಮ್ಮೆ ವಟವಟ ಶುರು ಮಾಡಿದರೆ ಇಡೀ ಕಪ್ಪೆಗಳ ಸಮೂಹವೇ ವಟವಟ ಎನ್ನಲು ಪ್ರಾರಂಭಿಸುತ್ತವಂತೆ, ಕೋಗಿಲೆಗಳು ಮರಿ ಮಾಡಿಸಲು ತಮ್ಮ ಮೊಟ್ಟೆಗಳನ್ನು ಕಾಗೆಗಳ ಗೂಡಿನಲ್ಲಿ ಇಟ್ಟು ಹೋಗುತ್ತದಂತೆ. ಇನ್ನೊಂದು ಪ್ರಾಣಿಯ ಆಹಾರವನ್ನು ವಂಚಿಸಿ ತಿನ್ನುವುದೇ ನರಿ ಬುದ್ದಿಯಂತೆ, ಇನ್ನೊಬ್ಬರ ರಕ್ತಹೀರಿ ಬದುಕುವುದೇ ಸೊಳ್ಳೆಗಳ ಕೆಲಸವಂತೆ, ಮೋರಿಗಳಲ್ಲಿ ಹೊರಳಾಡಿ ತನ್ನ ದೇಹವನ್ನು ಗಲೀಜು ಮಾಡಿಕೊಳ್ಳುವುದೇ ಹಂದಿಗಳಿಗೆ ಸಂಭ್ರಮವಂತೆ, ಊಸರವಳ್ಳಿ ತನ್ನ ಬಣ್ಣ ಆಗಾಗ ಬದಲಾಯಿಸುತ್ತಾ ಇತರ ಪ್ರಾಣಿಗಳನ್ನು ವಂಚಿಸುತ್ತದಂತೆ. ಇನ್ನೊಂದೆಡೆ,.......‌. ನಾಯಿಯು ಅನ್ನ ಹಾಕಿದ ಒಡೆಯನಿಗೆ ತುಂಬಾ ನಿಯತ್ತಾಗಿರುತ್ತದಂತೆ, ಹೊಟ್ಟೆ ಹಸಿವಾದಾಗ ಮಾತ್ರ ಹುಲಿಯು ಬೇಟೆಯಾಡುತ್ತದಂತೆ, ಗೀಜಗ ಮಳೆ ಗಾಳಿ ಚಳಿಗೂ ನಾಶವಾಗದ ಗೂಡನ್ನು ನಿರ್ಮಿಸುತ್ತದಂತೆ, ವಿಷದ ಹಾವುಗಳು ಕೂಡ ತಮ್ಮ ಜೀವಕ್ಕೆ ಅಪಾಯವಾದಾಗ ಮಾತ್ರ ಇತರರನ್ನು ಕಚ್ಚುತದಂತೆ, ಅನೇಕ ಚಿಟ್ಟೆಗಳು - ಕೀಟಗಳು ಸಸ್ಯಗಳಿಗೆ ಪರಾಗಸ್ಪರ್ಶ ಮಾಡಿಸಿ ರೈತರ ಫಸಲು ಉತ್ತಮ...

ರಾಹುಲ್ , ಮೋದಿ ಪಕ್ಷಗಳ ನಿಜಬಣ್ಣ

ಸಾಕ್ಷಿ ಮತ್ತು ಉದಾಹರಣೆ ಸಮೇತ ಮುಖವಾಡ ಬಯಲು ಮಾಡಿದ ಇಬ್ಬರು ಮಹಾನ್ ನಾಯಕರು............. ಸನ್ಮಾನ್ಯ ನರೇಂದ್ರ ಮೋದಿ ಸನ್ಮಾನ್ಯ ರಾಹುಲ್ ಗಾಂಧಿ ರಾಹುಲ್ ಗಾಂಧಿ....... ಕಾಂಗ್ರೆಸ್ ಮೂಲಭೂತವಾಗಿ ಜಾತ್ಯಾತೀತ ಸಿದ್ದಾಂತದ ಪಕ್ಷ. ಎಲ್ಲಾ ಜಾತಿ ಧರ್ಮ ಭಾಷೆ ಒಟ್ಟಾರೆ ಎಲ್ಲರೂ ಸಮಾನರು ಎಂದು ಹೇಳುತ್ತದೆ. ಧರ್ಮದ ಬಹಿರಂಗ ಬೆಂಬಲ ಮಾಡುವುದಿಲ್ಲ. ಆಂತರಿಕವಾಗಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮದವರನ್ನು ಅತಿಯಾಗಿ ಓಲೈಸುತ್ತದೆ ಎಂದು ಹೇಳಲಾಗುತ್ತದೆ. ಯಾವಾಗ ಬಿಜೆಪಿ ಹಿಂದೂ ಮತ್ತು ಶ್ರೀರಾಮರ ಭಜನೆಯಲ್ಲಿ ತೊಡಗಿ ಮತದಾರರನ್ನು ಆಕರ್ಷಿಸಿತೋ ರಾಹುಲ್ ಗಾಂಧಿ ನಿಜ ರೂಪ ಮರೆತು ಟೆಂಪಲ್ ರನ್ ಶುರು ಮಾಡಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈಗ ಕುಂಭ ಮೇಳದಲ್ಲಿ ಮುಳುಗೇಳುತ್ತಿದ್ದಾರೆ. ಇದು ಖಚಿತವಾಗಿ ಮುಖವಾಡ ಮತ್ತು ಓಟಿನ ರಾಜಕೀಯ.ಆತ್ಮಸಾಕ್ಷಿಯ ಕೊಲೆ. ನರೇಂದ್ರ ಮೋದಿ........ ಸಂಪೂರ್ಣ ಬಲಪಂಥೀಯ ಚಿಂತನೆಯ ಪಕ್ಷದ ನಿಷ್ಠಾವಂತ ವ್ಯಕ್ತಿ. ಧರ್ಮ ದೇವರು ಸನಾತನ ಸಂಸ್ಕೃತಿಯ ‌ಶ್ರೇಷ್ಠತೆಯನ್ನು ನಂಬಿರುವವರು. ವ್ಯಾಪಾರಿ ಮನೋಭಾವದ ಮೋದಿಯವರು, ಬಡವರಿಗೆ ಉಚಿತವಾಗಿ ಏನನ್ನೂ ಕೊಡಲು ಇಷ್ಟಪಡದ ಆಂತರ್ಯದಲ್ಲಿ ಮೀಸಲಾತಿಯನ್ನು ವಿರೋಧಿಸುವ ಮನಸ್ಥಿತಿಯವರು. ಯಾವಾಗ ರಾಹುಲ್ ಗಾಂಧಿ ಮೀಸಲಾತಿ ರೈತರ ಸಾಲಾ ಮನ್ನಾ ಬಡವರಿಗೆ ಉಚಿತ ಸೌಕರ್ಯಗಳನ್ನು ನೀಡುವುದಾಗಿ ಭರವಸೆ ನೀಡಿ ಉತ್ತರ ಭಾರತದ ಪ್ರಮುಖ ಮೂರು ರಾಜ್ಯಗಳ ಚುನಾವಣೆಯಲ್ಲಿ ಜಯ...

ಜಾತಿ ವ್ಯವಸ್ಥೆ ಎಂಬ ಶನಿ ಭಾರತದಲ್ಲಿ ಇಲ್ಲದಿದ್ದರೆ...

ಒಂದು ವೇಳೆ ಭಾರತದಲ್ಲಿ ಜಾತಿ ವ್ಯವಸ್ಥೆ ಇಲ್ಲದಿದ್ದರೆ ಹೇಗಿರುತ್ತಿತ್ತು ಊಹಿಸಿಕೊಳ್ಳೋಣ............. ಮೊದಲಿಗೆ , ಅತಿಹೆಚ್ಚು ಲಾಭವಾಗುತ್ತಿದ್ದುದು ಪ್ರೀತಿಸುವ - ಮದುವೆಯಾಗುವ ಪ್ರೇಮಿಗಳಿಗೆ ಅಂದರೆ ಅವರಿಗೆ ಅಪರಿಮಿತ ಆಯ್ಕೆಗಳಿರುತ್ತಿದ್ದವು. ಸುಮಾರು 100 ಕೋಟಿ ಜನರಲ್ಲಿ ಮದುವೆಯ ಆಸಕ್ತಿ ಇರುವ ಯುವಕ ಯುವತಿಯರು ಮತ್ತು ಪೋಷಕರಿಗೂ ಸಹ ಜಾತಿಯ ಗೊಂದಲವಿಲ್ಲದೆ ತಮಗೆ ಒಪ್ಪಿತವಾದವರನ್ನು ಆರಿಸಿಕೊಳ್ಳಲು ಬಹಳಷ್ಟು ಆವಕಾಶಗಳಿರುತ್ತಿದ್ದವು. ಈಗ ಜಾತಿ ಉಪಜಾತಿ ಕುಲಗೋತ್ರಗಳಿಂದ ಕೆಲವು ಜಾತಿಗಳಲ್ಲಿ ಇರುವವನೇ ಮನ್ಮಥ ಅಥವಾ ಇರುವವಳೇ ಅಪ್ಸರೆ. ಎರಡನೆಯದಾಗಿ, ದಲಿತರು ಬ್ರಾಹ್ಮಣರು ಗೌಡರು ಲಿಂಗಾಯತರು ಕುರುಬರು ಹೀಗೆ ಯಾವ ಬೇದವೂ ಇಲ್ಲದೆ ಸಾಮಾಜಿಕ ವರ್ಗ ಸಂಘರ್ಷಗಳಿಲ್ಲದೆ ಬೌದ್ಧ ಧರ್ಮ - ಜೈನ ಧರ್ಮ - ಸಿಖ್ ಧರ್ಮ ಈಗ ಕೇಳಿಬರುತ್ತಿರುವ ಬಸವ ಧರ್ಮಗಳ ವಿಭಜನೆಯೇ ಇಲ್ಲದೆ ಇಡೀ ಭರತ ಖಂಡವೇ ಒಂದು ಐಕ್ಯತೆಯ ಗೂಡಾಗಿರುತ್ತಿತ್ತು. ಮೂರನೆಯದಾಗಿ, ಮೇಲು ಕೀಳು ಇರುತ್ತಲೇ ಇರಲಿಲ್ಲವಾದ್ದರಿಂದ ಜಾತಿ ಆಧಾರಿತ ಮೀಸಲಾತಿ ಪ್ರಶ್ನೆಯೇ ಬರುತ್ತಿರಲಿಲ್ಲ. ಕೇವಲ ಪ್ರತಿಭೆ ಒಂದೇ ಮಾನದಂಡವಾಗಿ ಪಾಶ್ಚಾತ್ಯ ದೇಶಗಳಂತೆ ನಾವೂ ಅಭಿವೃದ್ಧಿ ಸಾಧಿಸುತ್ತಿದ್ದೆವು. ಹಾಳಾದ ಜಾತಿ ವ್ಯವಸ್ಥೆಯಿಂದ ಮೀಸಲಾತಿ ಅನಿವಾರ್ಯವಾಗಿದೆ ಮತ್ತು ಅದು ಶೋಷಿತರ ಮೂಲಭೂತ ಹಕ್ಕು ಮತ್ತು ಅದನ್ನು ನೀಡುವುದು ಶೋಷಕರ ಕರ್ತವ್ಯ ಕೂಡ. ನಾಲ್ಕನೆಯದಾಗಿ, ಜಾತಿಯ ಕಾರಣಕ್...