ಶೇಖರಪ್ಪ ಎಂ ಕೆ. ಆದ ನಾನು ಪ್ರಜ್ಞಾವಂತ ಮತದಾರ ಬಾಂಧವರಲ್ಲಿ ನನ್ನ ಈ ಡಿಜಿಟಲ್ ಪ್ರಣಾಳಿಕೆ ಹಾಗು ಕೆಲವು ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ. 2014-15 ರಿಂದ 2019-20 ರ ವರೆಗೂ ನಡೆದ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಾವು ಜನತೆಯ ಮುಂದೆ ಇಡುತ್ತಿದ್ದೇವೆ. ಸಂಧ್ಯಾ ಸುರಕ್ಷಾ ಯೋಜನೆಯಡಿ ತಿಂಗಳಿಗೆ ಒಂದು ಸಾವಿರದಂತೆ ಒಟ್ಟು 25 ಕುಟುಂಬಗಳ 35 ಜನರಿಗೆ (35000×5ವರ್ಷ) 21 ಲಕ್ಷ ಅನುದಾನ ಫಲಾನುಭವಿಗಳ ಕೈ ಸೇರಿದೆ. ಅಂಗವಿಕಲ ಮತ್ತು ವಿಧವಾ ವೇತನದ ಪ್ರತಿ ತಿಂಗಳ 1000/500 ರೂ ಫಲಾನುಭವಿಗಳ ಕೈ ಸೇರುತ್ತಿದೆ. ತುಮರಿ ಪಂಚಾಯತಿಯಲ್ಲೆ ಅತಿ ಹೆಚ್ಚು ಅಂದರೆ ಬರುವೆ,ಚಿಮಲೆ ಮತ್ತು ತಲಗೋಡು ಗ್ರಾಮಕ್ಕೆ ಒಟ್ಟು 37 ಮನೆ[37×1,50,000 = 55 ಲಕ್ಷ 50 ಸಾವಿರ ಅನುದಾನ] ಮಂಜೂರಾಗಿ ನಿರ್ಮಿಸಲಾಗಿದೆ. ಒಟ್ಟು 70 (70×12000 =8ಲಕ್ಷ 40 ಸಾವಿರ) ಶೌಚಾಲಯಗಳನ್ನು ಮನೆ ಮನೆಯಲ್ಲಿ ನಿರ್ಮಿಸಿ ಗಾಂಧಿ ಕನಸಿನ ಸ್ವಚ್ಛ ಗ್ರಾಮ ಮಾಡಲಾಗಿದೆ. ಏಳಿಗೆ ಮತ್ತು ಬರುವೆಯಲ್ಲಿ 16 ಲಕ್ಷಗಳ ಎರಡು ಸುಸಜ್ಜಿತ ಅಂಗನವಾಡಿ ಕಟ್ಟಡಗಳು ತಲೆ ಎತ್ತಿ ನಿಂತಿದ್ದಾವೆ. ಪಡಿತರ ಮತ್ತು ಸೀಮೆ ಎಣ್ಣೆಯನ್ನು ಬರುವೆಯಲ್ಲೆ ಸಿಗುವಂತೆ ಮಾಡಲಾಗಿದೆ 30 ಹಿರಿಯ ನಾಗರಿಕ ಕಾರ್ಡ್ ಹಾಗು 5 ಕಾರ್ಮಿಕ ಕಾರ್ಡ್ ವಿತರಿಸಲಾಗಿದೆ. ಬರುವೆ ಚಿಮಲೆ ಮತ್ತು ತಲಗೋಡು ಗ್ರಾಮಗಳಲ್ಲಿ ಮಣ್ಣಿನ ರಸ್ತೆ ಮತ್ತು ಪೈಪ್ ಅಳವಡಿಸಲಾಗಿದೆ. SC/ST ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣ...