Skip to main content

Posts

Showing posts from February, 2019

ಚಾತುರ್ವರ್ಣ'ವೆಂಬ ಮೋಸದ ಬಲೆ : ಡಾ.ಬಿ.ಆರ್. ಅಂಬೇಡ್ಕರ್

'ಚಾತುರ್ವರ್ಣ'ವೆಂಬ ಮೋಸದ ಬಲೆ : ಡಾ.ಬಿ.ಆರ್. ಅಂಬೇಡ್ಕರ್ ಇನ್ನೊಂದು ಸುಧಾರಕರ ಗುಂಪಿದೆ, ಅವರ ಆದರ್ಶವೇ ಬೇರೆ. ತಾವು ಆರ್ಯ ಸಮಾಜದವರೆಂದು ಹೇಳಿಕೊಳ್ಳುವ ಅವರ ಆದರ್ಶವೆಂದರೆ ಸಮಾಜಕ್ಕೆ ಚಾತುರ್ವರ್ಣ ‌ವೇ ಚೌಕಟ್ಟು; ಅಂದರೆ ಈಗ ಭಾರತದಲ್ಲಿರುವ ನಾಲ್ಕು ಸಾವಿರ ಜಾತಿಗಳಿಗೆ ಬದಲಾಗಿ ನಾಲ್ವೇ ವರ್ಗಗಳಲ್ಲಿ ಸಮಾಜವನ್ನು ವಿಭಾಗಿಸುವುದು ಅವರ ಯೋಜನೆ. ತಮ್ಮ ಈ ಯೋಜನೆ ಹೆಚ್ಚು ಆಕರ್ಷಕವಾಗಿ ತೋರಲೆಂದು ಹಾಗೂ ಆಕ್ಷೇಪಣೆಗಳಿಗೆ ಅವಕಾಶವಿರಬಾರದೆಂದು ಅವರೇನು ಹೇಳುತ್ತಾರೆಂದರೆ ಈ ಚಾತುರ್ವರ್ಣದ ಆಧಾರ ಜನ್ಮವಲ್ಲ, ಗುಣ ( ಯೋಗ್ಯತೆ ). ಮೊದಲೇ ಹೇಳಿಬಿಡುತ್ತೇನೆ ಈ ಆದರ್ಶವನ್ನು ನಾನು ಒಪ್ಪಲಾರೆನೆಂದು. ಮೊದಲನೆಯದಾಗಿ ಆರ್ಯ ಸಮಾಜದವರ ಈ ಚಾತುರ್ವರ್ಣ ದ ಮೇರೆಗೆ ಹಿಂದೂ ಸಮಾಜದಲ್ಲಿ ಯೋಗ್ಯತೆಗೆ ಅನುಗುಣವಾಗಿಯೇ ವ್ಯಕ್ತಿಯ ಸ್ಥಾನ ನಿಗದಿಯಾವುದಿದ್ದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ಹಣೆಪಟ್ಟಿಗಳಿಂದ ಮನುಷ್ಯರನ್ನು ಗುರುತಿಸುವುದೇಕೆಂದು ನನಗೆ ತಿಳಿಯದು. ( ವಿದ್ವಾಂಸನನ್ನು ಬ್ರಾಹ್ಮಣನೆಂದು ಕರೆಯದೆ ಗುರುತಿಸಬಹುದು . ಯೋಧನನ್ನು ಕ್ಷತ್ರಿಯನೆಂದು ನಿರ್ದೇಶಿಸದೆ ಕೂಡ ಗೌರವಿಸಬಹುದು.) ಯೂರೋಪಿಯನ್ ಸಮಾಜದಲ್ಲಿ ಇಂತಹ ಖಾಯಂ ವರ್ಗನಾಮವಿಲ್ಲದೆ ವಿದ್ವಾಂಸರೂ , ಯೋಧರೂ ಗೌರವಿಸಲ್ಪಡುತ್ತಿರುವಾಗ ಹಿಂದೂ ಸಮಾಜದಲ್ಲಿ ಈ ಹಣೆ ಪಟ್ಟಿಯೇಕೆ ಬಂತು ? ಆರ್ಯ ಸಮಾಜದವರು ಈ ಪ್ರಶ್ನೆಯನ್ನು ವಿಚಾರಿಸಲು ಹೋಗಿಲ್ಲ. ಬ್ರಾಹ್ಮಣ ...

ತಾಯ್ನುಡಿ ದಿನ ವಿಶೇಷ ನಮ್ಮ ಭಾಷೆ ಮತ್ತು ತಂತ್ರಜ್ಞಾನ

ತಂತ್ರಜ್ಞಾನ, ಅದರಲ್ಲೂ ಮಾಹಿತಿ ತಂತ್ರಜ್ಞಾನ ಎಂದಕೂಡಲೇ ಕೇಳಸಿಗುವ ಆರೋಪ: ಅದರಿಂದ ನಮ್ಮ ಭಾಷೆಗೆ ತೊಂದರೆಯಾಗಿದೆ ಅಥವಾ ಆಗುತ್ತಿದೆ ಎನ್ನುವುದು. ಇದು ಕೊಂಚಮಟ್ಟಿಗೆ ನಿಜವೂ ಹೌದು. ಪ್ರಪಂಚದಲ್ಲಿರುವ ಸಾವಿರಾರು ಭಾಷೆಗಳ ಪೈಕಿ ಶೇ. ೯೬ರಷ್ಟನ್ನು ಬಳಸುವವರು ನಮ್ಮ ಜನಸಂಖ್ಯೆಯ ಶೇ. ೪ರಷ್ಟು ಮಂದಿ ಮಾತ್ರ ಎಂದು ವಿಶ್ವಸಂಸ್ಥೆಯ ಜಾಲತಾಣವೇ ಹೇಳುತ್ತದೆ. ಇಂತಹ ಭಾಷೆಗಳಿಗೆ ಶಿಕ್ಷಣ ವ್ಯವಸ್ಥೆಯಲ್ಲೂ ಮಾಹಿತಿ ತಂತ್ರಜ್ಞಾನದ ಜಗತ್ತಿನಲ್ಲೂ ಪ್ರಾಮುಖ್ಯ ದೊರಕದಿದ್ದರೆ ಅವುಗಳ ಬಳಕೆ ಇನ್ನಷ್ಟು ಕಡಿಮೆಯಾಗುವುದು, ಬೆಳವಣಿಗೆ ಕುಂಠಿತವಾಗುವುದು ಸಹಜವೇ. ಹೌದು, ಇಂದಿನ ಬದುಕಿನಲ್ಲಿ ಮಾಹಿತಿ ತಂತ್ರಜ್ಞಾನದ ಪಾತ್ರ ಮಹತ್ವದ್ದು. ಬೆಳಗಿನಿಂದ ರಾತ್ರಿಯವರೆಗೆ ಒಂದಲ್ಲ ಒಂದು ರೂಪದಲ್ಲಿ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ನಾವೆಲ್ಲ ಬಳಸುತ್ತಲೇ ಇರುತ್ತೇವೆ. ಈ ವ್ಯವಹಾರವನ್ನೆಲ್ಲ ನಮ್ಮ ಭಾಷೆಯಲ್ಲೇ ನಡೆಸುವಂತಾದರೆ ಭಾಷೆ-ತಂತ್ರಜ್ಞಾನಗಳೆರಡರ ವ್ಯಾಪ್ತಿಯೂ ಹೆಚ್ಚುತ್ತದೆ, ಎರಡೂ ಪರಸ್ಪರ ಪೂರಕವಾಗಿ ಬೆಳೆಯುತ್ತವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಾರಂಭಿಕ ವರ್ಷಗಳಲ್ಲಿ ಅಲ್ಲಿನ ಬಹುಪಾಲು ವ್ಯವಹಾರ ಇಂಗ್ಲಿಷಿನಲ್ಲೇ ನಡೆಯುತ್ತಿತ್ತು. ಆನಂತರ ಈ ಕ್ಷೇತ್ರದ ಪ್ರಯೋಜನ ಇನ್ನಷ್ಟು ಜನರಿಗೆ ತಲುಪಿತಾದರೂ ಅವರು ಈ ಪ್ರಯೋಜನವನ್ನು ಇಂಗ್ಲಿಷ್ ಭಾಷೆಯ ಮೂಲಕ ಪಡೆದುಕೊಳ್ಳಬೇಕಾದ ಪರಿಸ್ಥಿತಿಯೂ ಇತ್ತು. ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ. ೨೦೨೦ರ ...

ದೇವರ ಮೇಲೆ ವಿಶ್ವಾಸವಿತ್ತು. ಆದರೆ ಆತ ಏನೂ ಮಾಡಲಿಲ್ಲ..

ದೇವರ ಮೇಲೆ ವಿಶ್ವಾಸವಿತ್ತು. ಆದರೆ ಆತ ಏನೂ ಮಾಡಲಿಲ್ಲ. ಪಕ್ಷಪಾತ ಮಾಡಿದ, ದುಷ್ಟರ ಪರವಾಗಿ ಮುಖವಾಡದವರ ಸಲುವಾಗಿ ನಿಂತ, ಮುಗ್ದರನ್ನು ಬಹಳ ಗೋಳಾಡಿಸಿದ.......... ಕಾನೂನಿನ ಮೇಲೆ ಭರವಸೆ ಇತ್ತು.ಕ್ರಿಮಿನಲ್ ಗಳಿಗೆ ಶಿಕ್ಷೆಯಾಗುತ್ತದೆ. ಅಮಾಯಕರಿಗೆ ರಕ್ಷಣೆ ದೊರೆಯುತ್ತದೆ. ಹೇಗೋ ನೆಮ್ಮದಿಯಿಂದ ಬದುಕಬಹುದು ಎಂದು. ಅದೂ ಕೈಗೂಡಲಿಲ್ಲ. ಕಾನೂನು ಬಲಿಷ್ಠರ ಪಾಲಾಯಿತು. ಅಲ್ಲೂ ನಿರಾಸೆಯಾಯಿತು......... ದೇವರು ಕಾನೂನು ವಿಫಲರಾದರೂ, ಮನುಷ್ಯನ ನೈತಿಕತೆ - ನಾಗರಿಕ ಪ್ರಜ್ಞೆಯಾದರೂ ಒಳ್ಳೆಯದು ಕೆಟ್ಟದ್ದನ್ನು ಗುರುತಿಸಿ ನಮಗೆ ನ್ಯಾಯ ನೀಡುತ್ತದೆ. ನಮ್ಮ ನಡುವೆ ಶಿಕ್ಷಕರು ವೈದ್ಯರು ನ್ಯಾಯಾಧೀಶರು ವಿಜ್ಞಾನಿಗಳು ತಂತ್ರಜ್ಞರು ಸ್ವಾಮಿಗಳು ಸಮಾಜ ಸೇವಕರು ಪೋಲೀಸರು ರಾಜಕಾರಣಿಗಳು ಇದ್ದಾರೆ. ಅವರಾದರೂ ಸಮಾಜದಲ್ಲಿ ನಮ್ಮ ನಡುವಿನ ಕ್ರೂರಿಗಳು - ಕರುಣಾಮಯಿಗಳ ವ್ಯತ್ಯಾಸ ಗುರುತಿಸಿ ಅದಕ್ಕೆ ತಕ್ಕಂತೆ ವರ್ತಿಸುತ್ತಾರೆ ಎಂಬ ನಂಬಿಕೆ ಇತ್ತು. ಕೊನೆಗೆ ಅವರೂ ಕೈಬಿಟ್ಟರು.......... ನನ್ನ ಬಂಧು, ನನ್ನ ಜಾತಿಯವ, ನನ್ನ ಸ್ನೇಹಿತ, ನನ್ನ ಭಾಷೆಯವ, ನನ್ನ ಶಿಷ್ಯ, ನನ್ನ ಗುರು, ನನ್ನ ಸಂಘದವ, ನನ್ನ ಊರಿನವ, ನನ್ನ ಗ್ರಾಹಕ ಇವರೆಲ್ಲರ ಪರವಾಗಿ ನ್ಯಾಯದ ತಕ್ಕಡಿಯನ್ನು ತಮ್ಮ ಸ್ವಾರ್ಥಕ್ಕೆ ಬಗ್ಗಿಸಿಕೊಂಡ ಸಮಾಜ ನಮ್ಮದು... ಮನಸ್ಸುಗಳೇ ಭ್ರಷ್ಟಗೊಂಡಿರುವಾಗ ನಾವು ನಂಬುವುದಾದರೂ ಯಾರನ್ನು. ಒಳ್ಳೆಯವರನ್ನು ಕೆಟ್ಟವರನ್ನು ಒಂದೇ ತಕ್ಕಡಿಯಲ್ಲಿ ...

ವ್ಯಾಲೆಂಟೈನ್..............

Valentine, ವ್ಯಾಲೆಂಟೈನ್............ ಧರ್ಮಗಳ ಹೊಡೆತಕ್ಕೆ ನಲುಗಿದ ಹೂವುಗಳು, ನಾಗರಿಕತೆಯ ಭ್ರಮೆಗೆ ಕನಲಿದ ಚಿಗುರುಗಳು, ಮನುಷ್ಯನ ಕ್ರೌರ್ಯಕ್ಕೆ ಬಲಿಯಾದ ಭಾವನೆಗಳು, ಮುಖವಾಡಗಳಿಗೆ ಆಹುತಿಯಾದ ಪ್ರೇಮ ಕುಸುಮಗಳು, ಸಮಾಜದ ತಿಕ್ಕಲುತನಕ್ಕೆ ಬಸವಳಿದ ನನ್ನ ಕಂದಮ್ಮಗಳು.......... ಅಯ್ಯೋ ಪಾಪಿಗಳ ಯಾವುದರಲ್ಲೂ ಶುಧ್ಧತೆಯೇ ಉಳಿಸಿಲ್ಲವಲ್ಲ ನಾವು, ಪ್ರೀತಿ ಎಂದರೆ ನಾಟಕವೆನ್ನುವಿರಿ, ಪ್ರೇಮವೆಂದರೆ ಕಾಮವೆನ್ನುವಿರಿ, ಯಶಸ್ಸೆಂದರೆ ದುಡ್ಡೆನ್ನುವಿರಿ, ಸಾಧನೆಯೆಂದರೆ ಅಧಿಕಾರವೆನ್ನುವಿರಿ.... ಆ ಪದಗಳ ಅರ್ಥಗಳನ್ನೇ ಕೆಡಿಸಿರುವಿರಿ...... ಪ್ರೀತಿ ನಮ್ಮ ಸಂಸ್ಕತಿ, ಪ್ರೇಮ ನಮ್ಮ ಸಂಪ್ರದಾಯ, ಕಾಮ ನಮ್ಮ ಧರ್ಮ, ಸಂತೋಷ ನಮ್ಮ ಸ್ವಾತಂತ್ರ್ಯ, ನೆನಪಿರಲಿ..... ಹೌದು, ಪ್ರೀತಿಗೂ - ಪ್ರೇಮಕ್ಕೂ, ಪ್ರಣಯಕ್ಕೂ ಒಂದು ಚೌಕಟ್ಟು ಇದೆ. ಅದು ನಮ್ಮ ಅಕ್ಕ ತಂಗಿ ಅಣ್ಣ ತಮ್ಮ ಮಗ ಮಗಳು ಕುಟುಂಬ ಸಮಾಜ ಎಲ್ಲಕ್ಕೂ ಅನ್ವಯ....... ಆದರೆ, ಕೆಲವೊಮ್ಮೆ ಯೌವ್ವನದಲ್ಲಿ ಆಗುವ ಮಾನಸಿಕ - ದೈಹಿಕ ಬೆಳವಣಿಗೆಗಳು ಒಂದಷ್ಟು ಚೌಕಟ್ಟು ಮೀರುವ ಪ್ರಯತ್ನ ಮಾಡುತ್ತವೆ. ಅದಕ್ಕೆ ಅಸಹ್ಯ ಅನೈತಿಕ ಎಂದು ಬರ್ಭರ ಕೊಲೆಯಂತ ಶಿಕ್ಷೆ ನೀಡುವಿರಿ. ನೀವು ನಿಜಕ್ಕೂ ಮನುಷ್ಯರೇ ????? ಕಣ್ಣ ಮುಂದೆಯೇ ಲಂಚಕ್ಕೆ ಕೈ ಹಾಕುವಿರಿ, ಬೆನ್ನ ಹಿಂದೆಯೇ ಕಳ್ಳತನ ಮಾಡುವಿರಿ, ಬಾಯಿ ಬಿಟ್ಟರೆ ಹೊಲಸು ಮಾತನಾಡುವಿರಿ, ಅಧಿಕಾರಕ್ಕಾಗಿ ಬೂಟು ನೆಕ್ಕು...

ಭೌತಿಕ ಭ್ರಷ್ಟತೆ ಮತ್ತು ಭಾವನಾತ್ಮಕ ಭ್ರಷ್ಟತೆ

ದೈಹಿಕ ಅಥವಾ ಭೌತಿಕ ಭ್ರಷ್ಟತೆ ಮತ್ತು ಮಾನಸಿಕ ಅಥವಾ ಭಾವನಾತ್ಮಕ ಭ್ರಷ್ಟತೆ............... ಈ ಎರಡೂ ವಿಧಾನಗಳನ್ನು ಭಾರತದ ರಾಜಕೀಯ ವ್ಯವಸ್ಥೆಯನ್ನು ಅಳೆಯುವ ಮಾನದಂಡಗಳಾಗಿ ಬಳಸಬಹುದು. UPA ಎಂಬ ಕಾಂಗ್ರೆಸ್ ನೇತೃತ್ವದ ಒಕ್ಕೂಟ ದೈಹಿಕ ಭ್ರಷ್ಟತೆಗೆ ಉದಾಹರಣೆಯಾದರೆ, NDA ಎಂಬ ಬಿಜೆಪಿ ನೇತೃತ್ವದ ಒಕ್ಕೂಟ ಮಾನಸಿಕ ಭ್ರಷ್ಟತೆಗೆ ಉದಾಹರಣೆಯಾಗಿದೆ. ಯು ಪಿ ಎ , ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ವಂಶಾಡಳಿತ, ದೌರ್ಜನ್ಯ, ಅಶಿಸ್ತು, ಹಣ, ಜಾತಿ ಮುಂತಾದ ಅಂಶಗಳನ್ನು ತಮ್ಮ ಮೂಲಭೂತ ಗುಣಗಳಾಗಿ ಹೊಂದಿ ಆ ಮುಖಾಂತರವೇ ಚುನಾವಣೆಯಲ್ಲಿ ಮತಗಳಿಸಿ ಅಧಿಕಾರಕ್ಕೇರುತ್ತದೆ. ಬಹಳ ವರ್ಷಗಳ ಕಾಲ ಅವರಿಗೆ ಪ್ರಬಲ ಪೈಪೋಟಿ ಇಲ್ಲದ ಕಾರಣ ಈ ಗುಣಗಳು ಅವರ ರಕ್ತದಲ್ಲಿ ಸೇರಿ ಅದೇ ಅವರ ಸಹಜ ಸ್ವಭಾವ ಎಂಬಂತಾಗಿದೆ. ಎನ್ ಡಿ ಎ , ಇದಕ್ಕೆ ಪರ್ಯಾಯವಾಗಿ ಧರ್ಮ, ದೇವರು, ದೇಶಭಕ್ತಿ, ಮೂಢನಂಬಿಕೆ, ಅಜ್ಞಾನ ಮುಂತಾದ ಭಾವನಾತ್ಮಕ ಅಂಶಗಳನ್ನು ಕೆರಳಿಸಿ ಜನರಲ್ಲಿ, ಅವರನ್ನು ವಿಭಜಿಸಿ, ಆಕ್ರಮಣಕಾರಿ ಮನೋಭಾವ ಉತ್ತೇಜಿಸಿ ಅದರಿಂದಲೇ ಚುನಾವಣೆಯಲ್ಲಿ ಮತಗಳಿಸಿ ಅಧಿಕಾರಕ್ಕೇರುವ ತಂತ್ರಗಳನ್ನು ಮಾಡುತ್ತದೆ. ಕಾಂಗ್ರೆಸ್ ನವರು ಭ್ರಷ್ಟ ಮಾರ್ಗದಲ್ಲಿ ಹಣಗಳಿಸಿ ಚುನಾವಣಾ ಸಮಯದಲ್ಲಿ ಅದರ ಸ್ವಲ್ಪ ಭಾಗವನ್ನು ಬಹಿರಂಗವಾಗಿ ಜನರಿಗೆ ಚೆಲ್ಲುತ್ತಾರೆ. ಬಿಜೆಪಿಯವರು ನಾವು ಪ್ರಾಮಾಣಿಕರು ಎಂದು ಹೇಳಿ ಗಳಿಸುವ ಭ್ರಷ್ಟ ಹಣವನ್ನು ಜನರಿಗೆ ಕೊಡುವಂತೆ ನಾಟಕ ಮಾಡಿ ತಾವೇ ನುಂಗುತ...

ಉತ್ತರಿಸಿ ಬಹುಮಾನ ಗೆಲ್ಲಿರಿ!

ರಸ ಪ್ರಶ್ನೆ.............‌... ಅತ್ಯಂತ ಕುತೂಹಲಕಾರಿ ಕಥೆ ಮತ್ತು ನಿಮ್ಮ ಆತ್ಮಸಾಕ್ಷಿ ಬಡಿದೆಬ್ಬಿಸುವ ಪ್ರಶ್ನೆ......... ದಯವಿಟ್ಟು ತಪ್ಪದೆ ತಾಳ್ಮೆಯಿಂದ ಓದಿ..... ಉತ್ತರಿಸಿ - ಬಹುಮಾನ ಗೆಲ್ಲಿರಿ....... ನಿಮ್ಮ ಉತ್ತರ ಸರಿ ಇದ್ದರೆ ಭಾರತ ದೇಶ ಗೆಲ್ಲುತ್ತದೆ‌. ನಿಮ್ಮ ಉತ್ತರ ತಪ್ಪಾದರೆ ಭಾರತ ಸೋಲುತ್ತದೆ. ಆಳವಾಗಿ ಯೋಚಿಸಿ ಉತ್ತರಿಸಬೇಕೆಂದು ಕಳಕಳಿಯ ಮನವಿ...... ಈ ಕೆಳಗಿನ ಸಣ್ಣ ಕಥೆ ಓದಿ ಅದರಲ್ಲಿ ಅಡಗಿರುವ ಮತ್ತು ಕೆಳಗೆ ಕೇಳಿರುವ ಪ್ರಶ್ನೆಗೆ ಉತ್ತರಿಸಿ..... ಕಥೆ........ *********** ವಿಶ್ವದಲ್ಲಿ ನಡೆದ ಪ್ರಕೃತಿ ವಿಕೋಪ ಮತ್ತು ಯುದ್ದದ ಪರಿಣಾಮವಾಗಿ ಇಡೀ ವಿಶ್ವ " ವಿಶ್ವಸಂಸ್ಥೆಯ " ನಿಯಂತ್ರಣಕ್ಕೆ ಒಳಪಡುತ್ತದೆ. ವಿಶ್ವಸಂಸ್ಥೆ ಎಲ್ಲಾ ದೇಶಗಳಲ್ಲೂ ಅಧ್ಯಕ್ಷೀಯ ಮಾದರಿಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಒಬ್ಬೊಬ್ಬ ನಾಯಕರನ್ನು ಆರಿಸಿ ಚುನಾವಣೆ ನಡೆಸಿ ಅವರಲ್ಲಿ ಶೇಕಡಾ ೯೦% ಮತ ಪಡೆದ ವ್ಯಕ್ತಿಯನ್ನು ಆ ದೇಶದ ಮುಖ್ಯಸ್ಥನಾಗಿ ಆಯ್ಕೆ ಮಾಡಲಾಗುತ್ತದೆ. ಶೇಕಡಾ ೯೦% ರಷ್ಟು ಬಹುಮತ ಬರದಿದ್ದರೆ ಪಕ್ಕದ ದೇಶದ ಅಧ್ಯಕ್ಷರನ್ನು ನೇಮಿಸಲಾಗುತ್ತದೆ. ಅಂದರೆ ಭಾರತಕ್ಕೆ ಪಾಕಿಸ್ತಾನ ಅಥವಾ ಚೀನಾದ ಮುಖ್ಯಸ್ಥರೇ ಪ್ರಧಾನಿಗಳಾಗುವರು. ಭಾರತದಲ್ಲಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯ ನಡುವೆ ಸ್ಪರ್ಧೆ ಏರ್ಪಡುತ್ತದೆ. ಇಬ್ಬರ ಮಧ್ಯೆ ಜಿದ್ದಾ ಜಿದ್ದಿ ಪೈಪೋಟಿ ಇರುತ್ತದೆ. ಎಂದಿನಂತೆ ಸಂಘ...

ತನ್ನದಲ್ಲದ ಮುಖವಾಡ ತೊಟ್ಟ ಮಾನವ....

ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ತಿಂದು ಬದುಕುತ್ತವಂತೆ, ಏಡಿಗಳು ಮೇಲಕ್ಕೇರಲು ಪ್ರಯತ್ನಿಸುವ ಮತ್ತೊಂದು ಏಡಿಯ ಕಾಲು ಹಿಡಿದು ಕೆಳಕ್ಕೆ ಎಳೆಯುತ್ತವಂತೆ, ತಲೆತಗ್ಗಿಸಿ ನಡೆಯುವ ಕುರಿಗಳು ಮುಂದೆ ಸಾಗುತ್ತಿದ್ದ ಕುರಿಯೊಂದು ಹಳ್ಳಕ್ಕೆ ಬಿದ್ದರೆ ಹಿಂಬಾಲಿಸುತ್ತಿದ್ದ ಎಲ್ಲಾ ಕುರಿಗಳು ಹಳ್ಳಕ್ಕೆ ಬೀಳುತ್ತವಂತೆ, ಕೆರೆ ತಟದ ಕಪ್ಪೆಯೊಂದು ಒಮ್ಮೆ ವಟವಟ ಶುರು ಮಾಡಿದರೆ ಇಡೀ ಕಪ್ಪೆಗಳ ಸಮೂಹವೇ ವಟವಟ ಎನ್ನಲು ಪ್ರಾರಂಭಿಸುತ್ತವಂತೆ, ಕೋಗಿಲೆಗಳು ಮರಿ ಮಾಡಿಸಲು ತಮ್ಮ ಮೊಟ್ಟೆಗಳನ್ನು ಕಾಗೆಗಳ ಗೂಡಿನಲ್ಲಿ ಇಟ್ಟು ಹೋಗುತ್ತದಂತೆ. ಇನ್ನೊಂದು ಪ್ರಾಣಿಯ ಆಹಾರವನ್ನು ವಂಚಿಸಿ ತಿನ್ನುವುದೇ ನರಿ ಬುದ್ದಿಯಂತೆ, ಇನ್ನೊಬ್ಬರ ರಕ್ತಹೀರಿ ಬದುಕುವುದೇ ಸೊಳ್ಳೆಗಳ ಕೆಲಸವಂತೆ, ಮೋರಿಗಳಲ್ಲಿ ಹೊರಳಾಡಿ ತನ್ನ ದೇಹವನ್ನು ಗಲೀಜು ಮಾಡಿಕೊಳ್ಳುವುದೇ ಹಂದಿಗಳಿಗೆ ಸಂಭ್ರಮವಂತೆ, ಊಸರವಳ್ಳಿ ತನ್ನ ಬಣ್ಣ ಆಗಾಗ ಬದಲಾಯಿಸುತ್ತಾ ಇತರ ಪ್ರಾಣಿಗಳನ್ನು ವಂಚಿಸುತ್ತದಂತೆ. ಇನ್ನೊಂದೆಡೆ,.......‌. ನಾಯಿಯು ಅನ್ನ ಹಾಕಿದ ಒಡೆಯನಿಗೆ ತುಂಬಾ ನಿಯತ್ತಾಗಿರುತ್ತದಂತೆ, ಹೊಟ್ಟೆ ಹಸಿವಾದಾಗ ಮಾತ್ರ ಹುಲಿಯು ಬೇಟೆಯಾಡುತ್ತದಂತೆ, ಗೀಜಗ ಮಳೆ ಗಾಳಿ ಚಳಿಗೂ ನಾಶವಾಗದ ಗೂಡನ್ನು ನಿರ್ಮಿಸುತ್ತದಂತೆ, ವಿಷದ ಹಾವುಗಳು ಕೂಡ ತಮ್ಮ ಜೀವಕ್ಕೆ ಅಪಾಯವಾದಾಗ ಮಾತ್ರ ಇತರರನ್ನು ಕಚ್ಚುತದಂತೆ, ಅನೇಕ ಚಿಟ್ಟೆಗಳು - ಕೀಟಗಳು ಸಸ್ಯಗಳಿಗೆ ಪರಾಗಸ್ಪರ್ಶ ಮಾಡಿಸಿ ರೈತರ ಫಸಲು ಉತ್ತಮ...

ರಾಹುಲ್ , ಮೋದಿ ಪಕ್ಷಗಳ ನಿಜಬಣ್ಣ

ಸಾಕ್ಷಿ ಮತ್ತು ಉದಾಹರಣೆ ಸಮೇತ ಮುಖವಾಡ ಬಯಲು ಮಾಡಿದ ಇಬ್ಬರು ಮಹಾನ್ ನಾಯಕರು............. ಸನ್ಮಾನ್ಯ ನರೇಂದ್ರ ಮೋದಿ ಸನ್ಮಾನ್ಯ ರಾಹುಲ್ ಗಾಂಧಿ ರಾಹುಲ್ ಗಾಂಧಿ....... ಕಾಂಗ್ರೆಸ್ ಮೂಲಭೂತವಾಗಿ ಜಾತ್ಯಾತೀತ ಸಿದ್ದಾಂತದ ಪಕ್ಷ. ಎಲ್ಲಾ ಜಾತಿ ಧರ್ಮ ಭಾಷೆ ಒಟ್ಟಾರೆ ಎಲ್ಲರೂ ಸಮಾನರು ಎಂದು ಹೇಳುತ್ತದೆ. ಧರ್ಮದ ಬಹಿರಂಗ ಬೆಂಬಲ ಮಾಡುವುದಿಲ್ಲ. ಆಂತರಿಕವಾಗಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮದವರನ್ನು ಅತಿಯಾಗಿ ಓಲೈಸುತ್ತದೆ ಎಂದು ಹೇಳಲಾಗುತ್ತದೆ. ಯಾವಾಗ ಬಿಜೆಪಿ ಹಿಂದೂ ಮತ್ತು ಶ್ರೀರಾಮರ ಭಜನೆಯಲ್ಲಿ ತೊಡಗಿ ಮತದಾರರನ್ನು ಆಕರ್ಷಿಸಿತೋ ರಾಹುಲ್ ಗಾಂಧಿ ನಿಜ ರೂಪ ಮರೆತು ಟೆಂಪಲ್ ರನ್ ಶುರು ಮಾಡಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈಗ ಕುಂಭ ಮೇಳದಲ್ಲಿ ಮುಳುಗೇಳುತ್ತಿದ್ದಾರೆ. ಇದು ಖಚಿತವಾಗಿ ಮುಖವಾಡ ಮತ್ತು ಓಟಿನ ರಾಜಕೀಯ.ಆತ್ಮಸಾಕ್ಷಿಯ ಕೊಲೆ. ನರೇಂದ್ರ ಮೋದಿ........ ಸಂಪೂರ್ಣ ಬಲಪಂಥೀಯ ಚಿಂತನೆಯ ಪಕ್ಷದ ನಿಷ್ಠಾವಂತ ವ್ಯಕ್ತಿ. ಧರ್ಮ ದೇವರು ಸನಾತನ ಸಂಸ್ಕೃತಿಯ ‌ಶ್ರೇಷ್ಠತೆಯನ್ನು ನಂಬಿರುವವರು. ವ್ಯಾಪಾರಿ ಮನೋಭಾವದ ಮೋದಿಯವರು, ಬಡವರಿಗೆ ಉಚಿತವಾಗಿ ಏನನ್ನೂ ಕೊಡಲು ಇಷ್ಟಪಡದ ಆಂತರ್ಯದಲ್ಲಿ ಮೀಸಲಾತಿಯನ್ನು ವಿರೋಧಿಸುವ ಮನಸ್ಥಿತಿಯವರು. ಯಾವಾಗ ರಾಹುಲ್ ಗಾಂಧಿ ಮೀಸಲಾತಿ ರೈತರ ಸಾಲಾ ಮನ್ನಾ ಬಡವರಿಗೆ ಉಚಿತ ಸೌಕರ್ಯಗಳನ್ನು ನೀಡುವುದಾಗಿ ಭರವಸೆ ನೀಡಿ ಉತ್ತರ ಭಾರತದ ಪ್ರಮುಖ ಮೂರು ರಾಜ್ಯಗಳ ಚುನಾವಣೆಯಲ್ಲಿ ಜಯ...

ಜಾತಿ ವ್ಯವಸ್ಥೆ ಎಂಬ ಶನಿ ಭಾರತದಲ್ಲಿ ಇಲ್ಲದಿದ್ದರೆ...

ಒಂದು ವೇಳೆ ಭಾರತದಲ್ಲಿ ಜಾತಿ ವ್ಯವಸ್ಥೆ ಇಲ್ಲದಿದ್ದರೆ ಹೇಗಿರುತ್ತಿತ್ತು ಊಹಿಸಿಕೊಳ್ಳೋಣ............. ಮೊದಲಿಗೆ , ಅತಿಹೆಚ್ಚು ಲಾಭವಾಗುತ್ತಿದ್ದುದು ಪ್ರೀತಿಸುವ - ಮದುವೆಯಾಗುವ ಪ್ರೇಮಿಗಳಿಗೆ ಅಂದರೆ ಅವರಿಗೆ ಅಪರಿಮಿತ ಆಯ್ಕೆಗಳಿರುತ್ತಿದ್ದವು. ಸುಮಾರು 100 ಕೋಟಿ ಜನರಲ್ಲಿ ಮದುವೆಯ ಆಸಕ್ತಿ ಇರುವ ಯುವಕ ಯುವತಿಯರು ಮತ್ತು ಪೋಷಕರಿಗೂ ಸಹ ಜಾತಿಯ ಗೊಂದಲವಿಲ್ಲದೆ ತಮಗೆ ಒಪ್ಪಿತವಾದವರನ್ನು ಆರಿಸಿಕೊಳ್ಳಲು ಬಹಳಷ್ಟು ಆವಕಾಶಗಳಿರುತ್ತಿದ್ದವು. ಈಗ ಜಾತಿ ಉಪಜಾತಿ ಕುಲಗೋತ್ರಗಳಿಂದ ಕೆಲವು ಜಾತಿಗಳಲ್ಲಿ ಇರುವವನೇ ಮನ್ಮಥ ಅಥವಾ ಇರುವವಳೇ ಅಪ್ಸರೆ. ಎರಡನೆಯದಾಗಿ, ದಲಿತರು ಬ್ರಾಹ್ಮಣರು ಗೌಡರು ಲಿಂಗಾಯತರು ಕುರುಬರು ಹೀಗೆ ಯಾವ ಬೇದವೂ ಇಲ್ಲದೆ ಸಾಮಾಜಿಕ ವರ್ಗ ಸಂಘರ್ಷಗಳಿಲ್ಲದೆ ಬೌದ್ಧ ಧರ್ಮ - ಜೈನ ಧರ್ಮ - ಸಿಖ್ ಧರ್ಮ ಈಗ ಕೇಳಿಬರುತ್ತಿರುವ ಬಸವ ಧರ್ಮಗಳ ವಿಭಜನೆಯೇ ಇಲ್ಲದೆ ಇಡೀ ಭರತ ಖಂಡವೇ ಒಂದು ಐಕ್ಯತೆಯ ಗೂಡಾಗಿರುತ್ತಿತ್ತು. ಮೂರನೆಯದಾಗಿ, ಮೇಲು ಕೀಳು ಇರುತ್ತಲೇ ಇರಲಿಲ್ಲವಾದ್ದರಿಂದ ಜಾತಿ ಆಧಾರಿತ ಮೀಸಲಾತಿ ಪ್ರಶ್ನೆಯೇ ಬರುತ್ತಿರಲಿಲ್ಲ. ಕೇವಲ ಪ್ರತಿಭೆ ಒಂದೇ ಮಾನದಂಡವಾಗಿ ಪಾಶ್ಚಾತ್ಯ ದೇಶಗಳಂತೆ ನಾವೂ ಅಭಿವೃದ್ಧಿ ಸಾಧಿಸುತ್ತಿದ್ದೆವು. ಹಾಳಾದ ಜಾತಿ ವ್ಯವಸ್ಥೆಯಿಂದ ಮೀಸಲಾತಿ ಅನಿವಾರ್ಯವಾಗಿದೆ ಮತ್ತು ಅದು ಶೋಷಿತರ ಮೂಲಭೂತ ಹಕ್ಕು ಮತ್ತು ಅದನ್ನು ನೀಡುವುದು ಶೋಷಕರ ಕರ್ತವ್ಯ ಕೂಡ. ನಾಲ್ಕನೆಯದಾಗಿ, ಜಾತಿಯ ಕಾರಣಕ್...