ಸ್ನೇಹಿತರೆ ನಮಸ್ಕಾರ.. ಏಳಿಗೆ ಶಾಲೆ ಮತ್ತು ಊರು ಕಳೆದ ಒಂದು ವಾರದಿಂದ ಶೌಚಾಲಯ ನೀರು ಮತ್ತು ರಸ್ತೆ ಮೂಲಸೌಲಭ್ಯಗಳ ಕುರಿತಾಗಿ ಪತ್ರಿಕೆ ಮತ್ತು ಮಾಧ್ಯಮ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿಯಲ್ಲಿದೆ. ಸಂತಸದ ವಿಷಯ ಏನೆಂದರೆ ಅಭಿವೃದ್ಧಿ ವಿಚಾರದ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು, ಶಾಸಕರು ದ್ವೀಪದೊಳಗಿನ ದ್ವೀಪ ತಾಲೂಕಿನ ಕಟ್ಟ ಕಡೆಯ ಹಳ್ಳಿಯತ್ತ ಕತ್ತು ತಿರುಗಿಸಿ ಕಾಲು ಹಾಕಿದ್ದಾರೆ ಅಂದರೆ ಪತ್ರಿಕಾ ಮತ್ತು ಮಾಧ್ಯಮ ಪ್ರತಿನಿದಿಗಳಿಗೆ ದ್ವೀಪದ ದನಿಯಾಗಿದ್ದಕ್ಕೆ ಧನ್ಯವಾದಗಳನ್ನು ಹೇಳುತ್ತಾ... ಈ ಹೊತ್ತಿನಲ್ಲಿ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಬಂದಂತಹ ಕೆಲವು ವಿಷಯಗಳು ಎಷ್ಟು ನೈಜ ಮತ್ತು ಎಷ್ಟು ಸುಳ್ಳು ಎಂಬುದನ್ನು ಅವಲೋಕನ ಮಾಡುವ ಪ್ರಯತ್ನ ಮಾಡಿದ್ದೇನೆ. ಸುದ್ದಿ ಮಾಡುವವರ ಪ್ರಹಸನವೆಲ್ಲ ಮುಗಿದ ಮೇಲೆ ಇದೆ ಊರಿನ ಮಾಜಿ ಮತ್ತು ಹಾಲಿ ಗ್ರಾಮ ಪಂಚಾಯತ್ ಸದಸ್ಯರ ಮಗನಾಗಿ ಈ ಕುರಿತು ಬರೆಯಲೇ ಬೇಡವೇ ಎಂಬ ದಂದ್ವದಲಿದ್ದಾಗ ಅರ್ಧ ಸತ್ಯ ಹಾಗೂ ವಿಷಯ ಪೂರ್ವ ರಾಜಕೀಯ ಕುರಿ ಮತ್ತು ನರಿಗಳ ಮಸಲತ್ತು ಮೋಸದ ಮಾತುಗಳಿಗೆ ಅವರದೇ ದಾರಿಯಲ್ಲಿ ಉತ್ತರ ನೀಡುವ ಸಲುವಾಗಿ ಹಾಗೂ ಯಾವುದು ಸರಿ ಮತ್ತು ತಪ್ಪು ಎನ್ನುವುದ ಕಂಡು ಕೊಳ್ಳುವ ಪ್ರಯತ್ನದಲ್ಲಿ ನಿಮ್ಮ ಮುಂದೆ ಈ ಬರಹ ಇಡುತ್ತಿದ್ದೇನೆ. ನಿಮಗೆಲ್ಲ ತಿಳಿದಂತೆ ವಿಜಯ ಕರ್ನಾಟ, ಪ್ರಜಾವಾಣಿ TV5 ಮತ್ತು ಇತರೆ ಮಾಧ್ಯಮಗಳು ಸೀರೆ ಮರೆಯಲ್ಲಿ ಶೌಚಾಲಯ ಎಂಬ ...