Skip to main content

Posts

Showing posts from November, 2018

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

" ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ " ಪ್ರತಿಮೆಗಳ ಎತ್ತರದ ಮುಖಾಂತರವೇ ಆ ವ್ಯಕ್ತಿಗಳ ವ್ಯಕ್ತಿತ್ವವನ್ನು ಅಳೆಯುವ ಹೊಸ ಟ್ರೆಂಡ್ ನ ಕಾಲಘಟ್ಟದತ್ತ ನಾವು ಸಾಗುತ್ತಿದ್ದೇವೆಯೇ ಎಂಬ ಅನುಮಾನ ಕಾಡಲು ಶುರುವಾಗಿದೆ............ ಸಿನಿಮಾಗಳಿಗೆ ಖರ್ಚು ಮಾಡುವ ಬಜೆಟ್ ನಿಂದ ಅದರ ಗುಣಮಟ್ಟವನ್ನು, ಕಟೌಟ್ ಎತ್ತರದ ಆಧಾರದಲ್ಲಿ ನಾಯಕ ನಟನ ಅಭಿನಯ ಮತ್ತು ಜನಪ್ರಿಯತೆಯನ್ನು, ಅಳೆಯುವಂತೆ ಇದು ಕೂಡ ಆಗುತ್ತಿದೆಯೇ ............ ಈ ಪ್ರತಿಮಾ ಸಂಸ್ಕೃತಿ ಬಹಳ ಹಿಂದಿನಿಂದಲೂ ಇದೆ. ಅಭಿಮಾನಿಗಳ ಆರಾಧಕರ ಭಕ್ತರ ಅನುಯಾಯಿಗಳ ಒಗ್ಗೂಡುವಿಕೆಯ ನೆಪದಲ್ಲಿ ಅವರ ಪ್ರೀತಿ ಪಾತ್ರರ ಪ್ರತಿಮೆಗಳನ್ನು ಎಲ್ಲೆಂದರಲ್ಲಿ ಸ್ಥಾಪಿಸಲಾಗಿದೆ. ಎಲ್ಲಾ ಕ್ಷೇತ್ರಗಳ ಸಾಧಕರು ಮತ್ತು ಜನಪ್ರಿಯರು ಇದರಲ್ಲಿ ಸೇರಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ವಿಶ್ವದ ಅತಿ ಎತ್ತರದ ಮೂರ್ತಿ ಸ್ಥಾಪನೆಯ ನಂತರ ಅದಕ್ಕಿಂತ ಎತ್ತರಕ್ಕೆ ಮತ್ತೊಬ್ಬರ ಪ್ರತಿಮೆ ಸ್ಥಾಪಿಸುವ ಪ್ರಯತ್ನಗಳು ಹೆಚ್ಚಾಗುತ್ತಿದೆ. ಮಹಾರಾಷ್ಟ್ರದಲ್ಲಿ ಶಿವಾಜಿ ಪ್ರತಿಮೆ, ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಮೆ, ಕರ್ನಾಟಕದಲ್ಲಿ ಕಾವೇರಿ ಪ್ರತಿಮೆ, ಇನ್ನೆಲ್ಲೋ ಶಿವನ ಪ್ರತಿಮೆ ಹೀಗೆ ಸಾಗುತ್ತಿರುವ ಈ ಟ್ರೆಂಡ್ ಮುಂದೆ ಪ್ರತಿ ರಾಜ್ಯ ಜಿಲ್ಲೆಗಳಲ್ಲೂ ಎತ್ತರದ ನಿರ್ಜೀವ ಪ್ರತಿಮೆಗಳ ನಿರ್ಮಾಣದ ಕಾರ್ಯದತ್ತ ಸಾಗಬಹುದೆ. ಮಸೀದಿ ಚರ್ಚು ಮಂದಿರಗಳ ಸಂಖ್ಯೆ ಹೆಚ್ಚಾದಷ್ಟು ಅದರ ಶ್ರೇಷ್ಠತೆಯ ...

ಸೆಂಟಿನಲ್ ದ್ವೀಪದ ಬಗ್ಗೆ ನಿಮಗೆಷ್ಟು ಗೊತ್ತು

source: Kannadaprabha ಅಮೆರಿಕ ಪ್ರವಾಸಿಗ ಜಾನ್ ಅಲೆನ್ ಚೌ ಸಾವಿನೊಂದಿಗೆ ಇಷ್ಟು ದಿನ ನಿಗೂಢವಾಗಿದ್ದ ಅಂಡಮಾನ್ ಮತ್ತು ನಿಕೋಬಾರ್ ನ ಸೆಂಟಿನೆಲ್ ದ್ವೀಪ ಇದೀಗ ಸುದ್ದಿಯ ಕೇಂದ್ರ ಬಿಂದುವಾಗಿದೆ. ಯಾವುದೇ ಪತ್ರಿಕೆ, ವಾಹಿನಿಗಳ ನೋಡಿದರೂ ಈ ದ್ವೀಪದ್ದೇ ಸುದ್ದಿ. ಭಾರತ ಸ್ವತಂತ್ರವಾಗಿ 7 ದಶಕಗಳೇ ಕಳೆದರೂ ಇಂದಿಗೂ ಭಾರತ ಸರ್ಕಾರಕ್ಕೆ ತನ್ನ ಕೂಗಳತೆ ದೂರದಲ್ಲಿರುವ ಈ ದ್ವೀಪವನ್ನು ತಲುಪಲು ಸಾಧ್ಯವಾಗಿಯೇ ಇಲ್ಲ? ಇಷ್ಟಕ್ಕೂ ಈ ದ್ವಿಪ ನಿವಾಸಿಗಳೇಕೆ ಹೊರ ಜಗತ್ತಿನ ಸಂಪರ್ಕಕ್ಕೆ ಸಿಗುತ್ತಿಲ್ಲ? ಯಾರಾದರೂ ಈ ದ್ವೀಪಕ್ಕೆ ತೆರಳಿ ಮರಳಿ ಬಂದಿದ್ದಾರೆಯೇ? .. ಭಾರತ ಸರ್ಕಾರವೇಕೆ ಈ ದ್ವೀಪವನ್ನು ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿದೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಅಂಡಮಾನ್ ಮತ್ತು ನಿಕೋಬಾರ್ ನ ರಾಜಧಾನಿ ಪೋರ್ಟ್ ಬ್ಲೇರ್ ನಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿರುವ ಸೆಂಟಿನೆಲ್ ದ್ವೀಪ ಇಂದಿಗೂ ಹೊರಜಗತ್ತಿನ ಸಂಪರ್ಕವನ್ನೇ ಕಂಡಿಲ್ಲ. ತಂತ್ರಜ್ಞಾನ ಹಾಗಿರಲಿ ಆಧುನಿಕ ಪದ್ಧತಿ ಜೀವನ ಶೈಲಿಯೂ ಇವರಿಗೆ ತಿಳಿದಿಲ್ಲ. ಶಿಲಾಯುಗದ ಮಾನವರಂತೆ ಇಂದಿಗೂ ಇಲ್ಲಿನ ಬುಡಕಟ್ಟು ನಿವಾಸಿಗಳು ಬದುಕುತ್ತಿದ್ದಾರೆ. ಅಷ್ಟೇ ಏಕೆ 2004ರಲ್ಲಿ ಭೀಕರ ಸುನಾಮಿಗೆ ತುತ್ತಾದಾಗ ಅಂದು ಭಾರತ ಸರ್ಕಾರ ಈ ದ್ವೀಪಕ್ಕೆ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿತ್ತು. ಆದರೆ ಪರಿಹಾರ ಸಾಮಗ್ರಿ ತಂದಿದ್ದ ಸೇನಾ ಹೆಲಿಕಾಪ್ಟರ್ ಅನ್ನು ತಮ್ಮ ಶೃತ್ರುಗಳೆಂದು ತಿಳಿದು ಅ...

ನಾನೊಬ್ಬ ಹುಚ್ಚ

ನೀನೊಬ್ಬ ಹುಚ್ಚ ಎಂದು ಯಾರೋ ಹೇಳಿದರು..... ಅದಕ್ಕೆ ನನ್ನ ಉತ್ತರ, " ಹೌದು, ಆ ಬಗ್ಗೆ ನನಗೆ ಅನುಮಾನವಿತ್ತು. ಅದನ್ನು ದೃಡಪಡಿಸಿದ್ದಕ್ಕೆ ನಿಮಗೆ ಧನ್ಯವಾದಗಳು. ಹೊಸ ದಾರಿಯ ಹುಡುಕಾಟವೇ ಒಂದು ಹುಚ್ಚುತನ. ಈ ಹದಗೆಟ್ಟ ವ್ಯವಸ್ಥೆಯ ಬದಲಾವಣೆಗೆ ಮನಸ್ಸುಗಳ ಅಂತರಂಗದ ಚಳವಳಿ ರೂಪಿಸಲು ಹುಚ್ಚನ ಪಾತ್ರದ  ಅವಶ್ಯಕತೆ ಇದೆ." ನೀನೊಬ್ಬ ಸೂಳೆ ಮಗ ಎಂದು ಇನ್ನೊಬ್ಬರು ಹೇಳಿದರು.. " ಹೌದು, ನನ್ನ ತಾಯಿಯ ಸ್ವಾತಂತ್ರ್ಯವನ್ನು, ಅನಿವಾರ್ಯತೆಯನ್ನು, ಅಸಹಾಯಕತೆಯನ್ನು, ಶೋಷಣೆಯನ್ನು ಅರ್ಥಮಾಡಿಕೊಂಡು ಆ ಮಾತನ್ನು ಅಭಿಮಾನದಿಂದ ಒಪ್ಪಿಕೊಳ್ಳುತ್ತೇನೆ " ಎಂದೆ. ಮತ್ತೊಬ್ಬರು ಹೇಳಿದರು, ನೀನೊಬ್ಬ ದ್ವಂದ್ವ ನಿಲುವಿನ ಎಡಬಿಡಂಗಿ. " ಹೌದು, ಅದೇ ನನ್ನ ಸಾಮರ್ಥ್ಯ. ಏಕೆಂದರೆ ಒಮ್ಮೆ ಅಂಕಿ ಸಂಖ್ಯೆಗಳ ಗಣಿತ ಹೊರತುಪಡಿಸಿ ಇತರ ವಿಷಯಗಳಲ್ಲಿ ಸ್ಪಷ್ಟತೆ ಮೂಡಿದರೆ ಅಲ್ಲಿಗೆ ನಿಮ್ಮ ಜ್ಞಾನದ ಬೆಳವಣಿಗೆ ನಿಲ್ಲುತ್ತದೆ. ನನ್ನಲ್ಲಿ ಅದು ನಿಲ್ಲಬಾರದು. ಬದುಕಿನ ಕೊನೆಯವರೆಗೂ ಜ್ಞಾನದ ಹಸಿವು ನಿರಂತರವಾಗಿ ಮತ್ತು ಅದರ ಎಲ್ಲಾ ಮಗ್ಗುಲುಗಳನ್ನು ನೋಡಲು ಪ್ರಯತ್ನಿಸುತ್ತಿರಬೇಕು. ಅದಕ್ಕಾಗಿ ನಾನು ಎಡಬಿಡಂಗಿಯಾಗಿರಲು ಇಷ್ಟಪಡುತ್ತೇನೆ." ಯಾರೋ ಹೇಳಿದರು, " ನೀವು ಅಧ್ಯಯನ ಮಾಡಿ ಚಿಂತಿಸಿ ಓದಿ ದಾಖಲೆ ಸಾಕ್ಷಿಗಳ ಸಮೇತ ಬರೆಯಿರಿ ಎಂದು. " ಅದಕ್ಕೆ ನಾನು ಹೇಳಿದೆ, " ನಾನು ವಾಸಿಸುತ್ತಿರುವುದು ...
ಬಹುಶಃ ಈ ದೇಶವೇನಾದರು ತೀರಾ ಅಧೋಗತಿಗೆ ಇಳಿದು ಇಂದು ಬಹಳಷ್ಟು ಜನ ಅಸಹನೆ ಅತೃಪ್ತಿಯಿಂದ ಕುದಿಯುತ್ತಿದ್ದರೆ ಅದಕ್ಕೆ ಬಹುಮಖ್ಯ ಕಾರಣ ಎಂದು ನನಗನಿಸುವುದು,.... ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು, ಧಾರ್ಮಿಕ ನಾಯಕರು, ಇತ್ತೀಚಿನ ಸೇರ್ಪಡೆ ಎಂದರೆ ಟಿವಿ  ಮಾಧ್ಯಮಗಳು, ಮೇಲ್ಮಧ್ಯಮ ವರ್ಗದ ಮಹಿಳೆಯರು. ಈ ದೇಶದಲ್ಲಿ ಇನ್ನೂ ಸ್ವಲ್ಪಮಟ್ಟಿಗೆ ಒಂದಷ್ಟು ಒಳ್ಳೆಯ ಮೌಲ್ಯಗಳು ಉಸಿರಾಡುತ್ತಾ, ಹೇಗೋ ತಕ್ಕಮಟ್ಟಿಗೆ ನೆಮ್ಮದಿಯ ಜೀವನ ಸಾಗುತ್ತಾ ಇದ್ದರೆ ಅದಕ್ಕೆ ಬಹುಮಖ್ಯ ಕಾರಣ...... ಕಷ್ಟ ಪಟ್ಟು ಹೊಲ ಗದ್ದೆ ತೋಟಗಳಲ್ಲಿ ದುಡಿಯುತ್ತಿರುವ ರೈತರು, ಶ್ರಮ ಪಟ್ಟು ಹೊಟ್ಟೆ ಪಾಡಿಗಾಗಿಯಾದರೂ ಬೆವರು ಸುರಿಸುತ್ತಿರುವ ಕಾರ್ಮಿಕರು,. ಎಲ್ಲಾ ಹಿಂಸೆ ಕುಂದು ಕೊರತೆಗಳ ನಡುವೆಯೂ ಸಂಸಾರವೆಂಬ ಸಾಗರವನ್ನು ತೂಗಿಸಿಕೊಂಡು ಹೋಗುತ್ತಿರುವ ಕೆಳ ಮಧ್ಯಮ ವರ್ಗದ ಹೆಣ್ಣುಮಕ್ಕಳು, ನಿಸ್ವಾರ್ಥದಿಂದ ಸಮಾಜಮುಖಿ ಕೆಲಸ ಮಾಡುತ್ತಿರುವ ಕೆಲವು ಹೋರಾಟಗಾರರು ಮತ್ತು ಸ್ವಯಂ ಸೇವಾ ಸಂಸ್ಥೆಗಳು. ಈ ಮೇಲಿನ ಅಭಿಪ್ರಾಯದಲ್ಲಿ ಒಂದಷ್ಟು ಸತ್ಯಾಂಶ ನಿಮಗೆ ಗೋಚರಿಸಿದ್ದೇ ಆದಲ್ಲಿ ಮುಂದಿನ ಸಮಾಜದ ಬದಲಾವಣೆಯ ಪರ್ವದಲ್ಲಿ ನಾವು Target ಮಾಡಬುಹುದಾದ ವರ್ಗಗಳನ್ನು ಹೆಚ್ಚು ಖಚಿತವಾಗಿ ಗುರುತಿಸಬಹುದಾಗಿದೆ ಮತ್ತು ಆ ನಿಟ್ಟಿನಲ್ಲಿ ಭವಿಷ್ಯದ ಯೋಜನೆಗಳನ್ನು ರೂಪಿಸಲು ಸಹಾಯವಾಗುತ್ತದೆ. ಅಸಹನೆಗೆ ಕಾರಣವಾದ ವರ್ಗಗಳನ್ನು ತಿರಸ್ಕರಿಸುತ್ತಾ, ಅಭಿವೃದ್ಧಿಗೆ ಪ...

ಡಿ.ಎಸ್ ಕರ್ಕಿ ಜನ್ಮದಿನ ಹಚ್ಚೇವು ಕನ್ನಡದ ದೀಪ, ವಿಕಿಪೀಡಿಯ

" ಹಚ್ಚೇವು ಕನ್ನಡದ ದೀಪ " ಎಂಬ ಪ್ರಸಿದ್ಧ ಗೀತೆಯನ್ನು ರಚಿಸಿದ  ದುಂಡಪ್ಪ ಸಿದ್ದಪ್ಪ ಕರ್ಕಿ ಯವರು ( ನವೆಂಬರ್ ೧೫ ,  ೧೯೦೭  -  ಜನವರಿ ೧೬ ,  ೧೯೮೪ ) ಕನ್ನಡದ ನವೋದಯ ಕಾಲದ ಪ್ರಮುಖ ಕವಿಗಳಲ್ಲೊಬ್ಬರೆನಿಸಿದ್ದಾರೆ. ಡಿ. ಎಸ್. ಕರ್ಕಿ ಜನನ ನವೆಂಬರ್ ೧೫, ೧೯೦೭ ಬೆಳಗಾವಿ ಜಿಲ್ಲೆಯ ಹಿರೆಕೊಪ್ಪ ಮರಣ ಜನವರಿ ೧೬, ೧೯೮೪ ವೃತ್ತಿ ಪ್ರಾಧ್ಯಾಪಕರು, ಸಾಹಿತಿ ಜೀವನ ಸಂಪಾದಿಸಿ ಡಿ. ಎಸ್. ಕರ್ಕಿಯವರು  ಬೆಳಗಾವಿ  ಜಿಲ್ಲೆಯ  ಹಿರೆಕೊಪ್ಪ ಗ್ರಾಮದಲ್ಲಿ  ೧೯೦೭   ನವೆಂಬರ್  ೧೫ರಂದು ಜನಿಸಿದರು. ಇವರ ತಾಯಿ ದುಂಡವ್ವ ; ತಂದೆ ಸಿದ್ದಪ್ಪ.ದುಂಡಪ್ಪ ಸಿದ್ದಪ್ಪ ಕರ್ಕಿ ಎಂಬುದು ಇವರ ಪೂರ್ಣ ನಾಮ.ಚಿಕ್ಕಂದಿನಲ್ಲಿಯೆ ತಾಯಿಯನ್ನು ಕಳೆದುಕೊಂಡ ಇವರ ಪ್ರಾಥಮಿಕ ಶಿಕ್ಷಣ ತಾಯಿಯ ತವರೂರಾದ  ಬೆಲ್ಲದ ಬಾಗೇವಾಡಿ ಯಲ್ಲಿ ಆಯಿತು.  ಬೆಳಗಾವಿ ಯ ಗಿಲಗಂಜಿ ಅರಟಾಳ ಹಾಯಸ್ಕೂಲಿನಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿದ ಕರ್ಕಿಯವರು  ಧಾರವಾಡ ದ ಕರ್ನಾಟಕ ಕಾಲೇಜಿನಲ್ಲಿ ಪದವಿ ಅಭ್ಯಾಸದ ನಂತರ  ೧೯೩೫ ರಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.ಬೆಲ್ಲದ ಬಾಗೇವಾಡಿಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಳಗಾಂವಿಯ ಜಿ.ಎ.ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪಡೆದರು. ಕೊಲ್ಲಾಪುರದ ರಾಜಾರಾಮ ಕಾಲೇಜು, ಪುಣೆಯ ಫಗುರ್ಯ್‌ಸನ್ ಕಾಲೇಜು, ಧಾರವಾಡದ ಕರ್ನಾಟಕ ಕಾಲೇಜುಗಳಲ್ಲಿ ಓದ...

ವಿಶ್ವಪ್ರಜ್ಞೆ ಕುವೆಂಪು ನುಡಿ ನಮನ

#ಸ್ಮರಣೆ #ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ -(ಡಿಸೆಂಬರ್ ೨೯, ೧೯೦೪ - ನವೆಂಬರ್ ೧೧, ೧೯೯೪), ಸಮಾಜವಾದಿ ಚಿಂತಕ:- ಜಿ.ಟಿ.ನರೇಂದ್ರಕುಮಾರ್ ಅವರ FB ಯಿಂದ... ಕುವೆಂಪುರವರು ಕನ್ನಡದ ಅಗ್ರಮಾನ್ಯ ಕವಿ. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ 'ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು. ಮೈಸೂರಿನ 'ಮಹಾರಾಜಾ' ಕಾಲೇಜಿನಲ್ಲಿ ಓದಿದ ಇವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಉಪ ಕುಲಪತಿಯಾಗಿ ನಿವೃತ್ತರಾದರು. ಇವರು ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ "ಉದಯರವಿ"ಯಲ್ಲಿ ವಾಸಿಸುತ್ತಿದ್ದರು. #ಬಾಲ್ಯ ಕುವೆಂಪು ಅವರು ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಎಂಬಲ್ಲಿ ಡಿಸೆಂಬರ್ 29, 1904ರಲ್ಲಿ ಜನಿಸಿದರು. ತಂದೆ ವೆಂಕಟಪ್ಪಗೌಡ; ತಾಯಿ ಸೀತಮ್ಮ. ಅವರ ಬಾಲ್ಯ ತಮ್ಮ ತಂದೆಯ ಊರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಕಳೆಯಿತು. #ಶಿಕ್ಷಣ ಕುವೆಂಪು ಅವರ ಆರಂಭಿಕ ವಿದ್ಯಾಭ್ಯಾಸ ಕೂಲಿಮಠದ...
ಅತಿ ಹೆಚ್ಚು ಇತಿಹಾಸಕಾರರಿರುವ ದೇಶವಾಗುವತ್ತ ಸಾಗಿರುವ ಭಾರತ................... ಟಿವಿಯೂ ಸೇರಿದಂತೆ Social Media ಗಳ ಪ್ರಭಾವದಿಂದ ಪ್ರತಿಯೊಬ್ಬರೂ ಇತಿಹಾಸದ ಅಧೀಕೃತ ವಕ್ತಾರರಂತೆ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಪಡೆದ ಭಾರತ. ಬೇಕಿದ್ದರೆ ಸೂಕ್ಷ್ಮವಾಗಿ ಗಮನಿಸಿ. ಕೆಲವರು ಟಿಪ್ಪು ಸುಲ್ತಾನ್ ದೇಶಪ್ರೇಮಿ ಎಂಬುದಕ್ಕೆ ಹತ್ತಾರು ಅಂಶಗಳನ್ನೂ , ಅದೇ ರೀತಿ ಇನ್ನೂ ಕೆಲವರು ಟಿಪ್ಪು ಸುಲ್ತಾನ್ ದೇಶದ್ರೋಹಿ ಮತಾಂಧ ಎಂಬುದಕ್ಕೆ ಇನ್ನೊಂದಿಷ್ಟು ವಿಷಯಗಳನ್ನು ಹೇಳುತ್ತಾರೆ. ಭಾರತ ದುರ್ಭಲಗೊಳ್ಳಲು ಸಾಮ್ರಾಟ ಅಶೋಕ ಅಳವಡಿಸಿಕೊಂಡ ಬೌದ್ಧಧರ್ಮ ಆಧಾರಿತ ಆಡಳಿತ ನೀತಿಯೇ ಕಾರಣ ಎಂದು ಕೆಲವರೆಂದರೆ, ಇಲ್ಲ ಮನುವಾದ ಆಧಾರಿತ ಅಸಮಾನತೆಯ ಮತ್ತು ಅಮಾನವೀಯ ಸಾಮಾಜಿಕ ವ್ಯವಸ್ಥೆಯೇ ಕಾರಣ ಎಂದು ಮತ್ತೆ ಹಲವರು ಹೇಳುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಹಿಂಸೆ ಮತ್ತು ಅನೇಕ ದೇಶಭಕ್ತರ ಪ್ರಾಣತ್ಯಾಗದಿಂದ ಎಂದು ಕೆಲವರು, ಇಲ್ಲ ಮಹಾತ್ಮ ಗಾಂಧಿಯವರ ಅಹಿಂಸೆ ಮತ್ತು ಸಂಘಟನಾತ್ಮಕ ಹೋರಾಟ ಹಾಗು ನಾಯಕತ್ವದಿಂದ ಎಂದು ಹಲವರ ಅಭಿಪ್ರಾಯ. ಅಂಬೇಡ್ಜರ್ ಸಮಾನತೆ ಸೋದರತೆಯ ಅತ್ಯದ್ಭುತ ಪ್ರಗತಿಪರ ಸಂವಿಧಾನ ರಚಿಸಿದ್ದಾರೆ ಎಂದು ಕೆಲವರ ವಾದವಾದರೆ, ಇಲ್ಲ ನಮ್ಮ ಸಂವಿಧಾನ ಪ್ರಗತಿಯ ವಿರೋಧಿ ಅದು ಮೀಸಲಾತಿಯ ಮುಖಾಂತರ ಅಸಮಾನತೆಯನ್ನು ಹುಟ್ಟುಹಾಕಿದೆ ಎಂದು ಹಲವರ ವಾದ. ಒಂದು ವೇಳೆ ಈ ರೀತಿಯ ವಿಚಾರಗಳನ್ನು ನಮ್ಮ ಯುವ ಪೀಳಿಗೆ ಓದುತ್ತಾ ಬೆಳೆದರ...

ಕನ್ನಡ ರಾಜ್ಯೋತ್ಸವ

ಎಲ್ಲ ನನ್ನ ಪ್ರೀತಿಯ ಕನ್ನಡದ ಮುದ್ದು ಮನಸುಗಳಿಗು ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು