ಗ್ರಾಮ ಪಂಚಾಯತಿ ಚುನಾವಣೆ ಮತ್ತು ಚುನಾವಣಾ ಅಯೋಗದ ಮುಂದಿರುವ ಸವಾಲುಗಳು. ಗ್ರಾಮ ಪಂಚಾಯತಿಗಳನ್ನು ದೇಶದ ಕೊನೆಯ ಮತ್ತು ಅಭಿವೃದ್ಧಿಯ ಬುನಾದಿಯ ಕೇಂದ್ರ ಎಂದು ಕರೆಯಲಾಗುತ್ತದೆ. ಕಳೆದ ೨೦೧೫ ರ ಜೂನ್ ೧೨ ರಂದು ನಡೆದ ಸುಮಾರು ೫೮೦೦ ಗ್ರಾಮ ಪಂಚಾಯಿತಿಗಳ ಅಧಿಕಾರವದಿ ಇದೆ ಬರುವ ಅಗಷ್ಟ್ ತಿಂಗಳಲ್ಲಿ ಕೊನೆಗೊಳ್ಳಲಿದೆ. ಈ ಹೊತ್ತಿನಲ್ಲಿ ಕರ್ನಾಟಕ ಚುನಾವಣಾ ಆಯೋಗವು ಅಧಿಕಾರವದಿ ಮುಗಿದ ಪಂಚಾಯತ್ ಗಳಿಗೆ ಹೊಸದಾಗಿ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಿ ಆದೇಶ ಹೊರಡಿಸಿದೆ. ಕೊರೋನ ರೋಗ ವ್ಯಾಪಕವಾಗಿ ವೇಗವಾಗಿ ಹೆಚ್ಚುತ್ತಿರುವುದರಿಂದ ಅಯಾ ಜಿಲ್ಲೆಯ ಸಿಯಿಓ ಹಾಗು ಜಿಲ್ಲಾಧಿಕಾರಿಗಳ ಅಭಿಪ್ರಾಯವನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆಂದು ಚುನಾವಣಾ ಅಯೋಗ ಸ್ಪಷ್ಟನೆ ನೀಡಿದೆ, ಇದರ ಹೊರತಾಗಿಯು ಅನೇಕ ಪ್ರಶ್ನೆ ಅನುಮಾನಗಳು ಏಳುತ್ತವೆ ಮತ್ತು ನಾವು ಅವುಗಳನ್ನು ಒಂದೊಂದು ಹಂತವಾಗಿ ಹೇಳುತ್ತಾ ಹೋಗೋಣ. ಇಲ್ಲಿ ಪ್ರಮುಖವಾಗಿ ಬರುವ ಪ್ರಶ್ನೆ ೧. ಅಧಿಕಾರಾವದಿ ಮುಗಿದ ಸದಸ್ಯರನ್ನು ಚುನಾವಣಾ ಆಯೋಗ ಮುಂದಿನ ಚುನಾವಣಾ ನಡೆಯುವ ತನಕ ಮುಂದುವರೆಸುತ್ತದೆಯೆ? ೨. ಚುನಾವಣಾ ಆಯೋಗ ಸರ್ಕಾರದ ಒತ್ತಡಕ್ಕೆ ಮಣಿಯಿತೆ? ೩. ನಾಮ ನಿರ್ದೇಶನ ಮಾಡುವುದಾದರೆ ಯಾವ ಆಧಾರದ ಮೇಲೆ ಮಾಡುತ್ತಾರೆ? ೪. ಕಾಂಗ್ರೆಸ್ ಆಯೋಗಕ್ಕೆ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ಉದ್ದೇಶ ಏನಿರಬಹುದು? ೫.ಚುನಾವಣಾ ಅಯೋಗದ ಈ ನಿರ್ಧಾರವನ್ನು ನ್ಯಾಯಾಲಯದಲ್ಲಿ ಏನಾಗಬಹುದು? ಇನ...