"ಬೋರ್ಡ್ ಕಳ್ಳನ" ಕಾಂಕ್ರೀಟ್ ರೋಡ್ ಪಿತೂರಿ ಇಲ್ಲಿದೆ ಈ ಹೊತ್ತಿನ ಕಂಪ್ಲೀಟ್ ಅಪ್ಡೇಟ್ಸ್. ನಮಸ್ತೆ ಸ್ನೇಹಿತರೆ... ನಮ್ಮ ಈ ಹಿಂದಿನ ಪೋಸ್ಟ್ ನಲ್ಲಿ ಊರಿನ ಎಲ್ಲ ಜನರಿಗೆ ಉಪಯೋಗ ಆಗಬೇಕಾಗಿದ್ದ ಕಿರತೋಡಿ ಸೇತುವೆಯಿಂದ ಶುರುವಾಗ ಬೇಕಾಗಿದ್ದ ಕಾಂಕ್ರೀಟ್ ರೋಡನ್ನು ಇಂಜಿನಿಯರ್ ಜೊತೆ ಸೇರಿ ತನ್ನ ಮನೆಯ ಹತ್ತಿರ ಮೋಸದಿಂದ ಜಿಪಿಎಸ್ ಮಾಡಿಸಿದ್ದು ಹೇಗೆಂದು ತಿಳಿಸಲಾಗಿದೆ. ಈ ದಿನ ಅದರ ಹಿಂದಿನ ಕತೆ ಮತ್ತು ಪ್ರಸ್ತುತ ಮಾಹಿತಿ ಬಗ್ಗೆ ಬೆಳಕು ಚೆಲ್ಲಿದ್ದೇವೆ. ದುಡ್ಡು ಹೊಡೆಯಲು ನಡೆದಿತ್ತು ಪ್ಲಾನ್ ಈ ಕಾಂಕ್ರೀಟ್ ರೋಡನ್ನು ಮೊದಲು ಬರಿ "ಬಂಗಾರಪ್ಪನವರ ಮನೆಗೆ ಹೋಗುವ ರಸ್ತೆ" ಎಂದು ಕ್ರಿಯಾ ಯೋಜನೆ ಹೆಸರು ಸೇರಿಸಿ ಬರಿ ಚಿರಂಡಿ ಮಣ್ಣು ಎತ್ತಾಕಿ ಮಣ್ಣು ರಸ್ತೆಗೆ ಗ್ರಾವೆಲ್ ಹಾಕಿಸಿ ದುಡ್ಡು ಹೊಡೆಯುವ ಪ್ಲಾನ್ ಆಗಿತ್ತು (ಸೇಮ್ ಟು ಸೇಮ್ ಏಳಿಗೆ ರಸ್ತೆಗೆ ಮಾಡಿದ ಹಾಗೆ - ನಿಮ್ಮ ನೆನಪಿಗೆ ತರುತ್ತೇನೆ ಸರಿಯಾಗಿ ಐವತ್ತು ಸಾವಿರಗಳ ರುಪಾಯಿ ಕೆಲಸ ಏನಾದರು ನಡೆದಿತ್ತಾ ಅಲ್ಲಿ?) ಏಳಿಗೆ ರಸ್ತೆಗೆ ಮಾಡಿದ ಗತಿ ಇಲ್ಲೂ ಆಗುತಿತ್ತು, ಐದು ಲಕ್ಷಕ್ಕೆ ಎಷ್ಟು ಲಕ್ಷ ಕಂಟ್ರಾಕ್ಟರ್ ಮತ್ತು ಇಂಜಿನಿಯರ್ ಪಾಲಾಗುತಿತ್ತೊ ದೇವರಿಗೆ ಗೊತ್ತು. ಆದರೆ.. ಆದರೆ.. ನಾವು ಅದಕ್ಕೆ ಅವಕಾಶ ನೀಡಲಿಲ್ಲ ೫ ಲಕ್ಷದ ಮಣ್ಣು ರಸ್ತೆಯನ್ನು ಕಾಂಕ್ರಿಟ್ ಎಂದು ಬದಲಾಯಿಸಲಾಯಿತು ಇದರ ಹಿಂದಿನ ಉದ್ದೇಶ ಮಣ್ಣು ರಸ್ತೆ ಮಾಡಿಸಿ ದುಡ್ಡು ಹೊಡೆಯುವದ ತಪ್ಪ...