Skip to main content

Posts

Showing posts from September, 2020

ಭಗತ್ ಸಿಂಗ್ ಜನ್ಮದಿನ ಹಾಗು ಅವರ ವಿಚಾರಧಾರೆಗಳು

 "ನಾವು ಪ್ರಭುತ್ವದ ವಿರುದ್ಧ ಸಮರ ಸಾರಿದ್ದೇವೆ. ಹಾಗಾಗಿ ಯುದ್ಧ ಖೈದಿಗಳಾಗಿದ್ದೇವೆ ಎಂದು ಹೇಳಲಿಚ್ಚಿಸುತ್ತೇನೆ. ನಮ್ಮನ್ನು ಯುದ್ಧ ಖೈದಿಗಳಂತೆಯೇ ಪರಿಗಣಿಸಲು ಆಗ್ರಹಿಸುತ್ತೇವೆ. ಅರ್ಥಾತ್ ನಮ್ಮನ್ನು ಗಲ್ಲಿಗೇರಿಸುವ ಬದಲು ನೇರವಾಗಿ ಗುಂಡಿಟ್ಟು ಕೊಲ್ಲುವಂತೆ ಕೋರುತ್ತೇವೆ.” ಇಂತಹ ಕೋರಿಕೆಯ ಮಾತುಗಳು ಬ್ರಿಟೀಷ್ ಸರ್ಕಾರಕ್ಕೆ ಮನವಿ ಪತ್ರದ ಮೂಲಕ ಹೇಳಿರುವ ಕ್ರಾಂತಿಕಾರಿ ವೀರ ಯಾರು ಗೊತ್ತಾ? ಭಗತ್ ಸಿಂಗ್…!! ಭಾರತದ ಇತಿಹಾಸದಲ್ಲಿ ಎಂದಿಗೂ ಚಿರಸ್ಥಾಯಿಯಾಗಿ ಉಳಿಯುವ ಅದಮ್ಯ ಚೇತನವೇ ಭಗತ್ ಸಿಂಗ್. ಕೇವಲ 23 ವಯಸ್ಸಿನಲ್ಲಿ ದೇಶಕ್ಕಾಗಿ ನೇಣುಗಂಬ ಏರಿದ ಏಕೈಕ ಸ್ವಾತಂತ್ರ್ಯ ಸಂಗ್ರಾಮದ ವೀರ ಭಗತ್ ಸಿಂಗ್ ಯುವ ಸಮುದಾಯಕ್ಕೆ ಪ್ರೇರಕ ಶಕ್ತಿಯಾಗಿದ್ದಾನೆ. ಭಗತ ‌ಸಿಂಗ್ ನ ಆದರ್ಶಗಳನ್ನು ಕೇವಲ ಹುತಾತ್ಮ ‌ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೀಮಿತಗೊಳಿಸುವ ಬದಲು ಆತನು ಪ್ರತಿಪಾದಿಸಿದ ಸಿದ್ಧಾಂತವನ್ನು ಇಂದಿನ ಸಮಾಜ ಅರ್ಥೈಸಿಕೊಳ್ಳಬೇಕಿದೆ. “ವ್ಯಕ್ತಿಗಳನ್ನು ಕೊಲ್ಲಬಹುದು, ಆದರೆ ಅವರ ವಿಚಾರಗಳನ್ನಲ್ಲ” ಎಂದು ನುಡಿದ ಭಗತ್‍ಸಿಂಗ್‍ ಮಾತಿನಂತೆ  ಭಗತ್ ಸಿಂಗ್ ಇಂದು ನಮ್ಮೊಂದಿಗೆ ಇಲ್ಲ. ಆದರೆ ಆತನ ವಿಚಾರ, ಆದರ್ಶ ಸಿದ್ಧಾಂತ, ಕ್ರಾಂತಿಯ ಕಿಡಿಗಳು ಇಂದಿಗೂ ಜೀವಂತವಾಗಿವೆ. ಭಗತ್ ಸಿಂಗ್ ನನ್ನು ನಾವು ಕೇವಲ ‘ದೇಶಪ್ರೇಮಿ’ ‘ಹುತಾತ್ಮ’ ಎಂದು ಬಿಂಬಿಸುವ ಮೂಲಕ ಆರಾಧನೆವಷ್ಟೇ ಮಾಡುವುದಲ್ಲ. ಭಗತ್ ಸಿಂಗ್ ಎಂದರೆ ಅದೊಂದು ಕ್ರಾಂತಿಯ ಚಿಲುಮೆ, ಅಮ...