ನಮ್ಮ ಮೊಬೈಲ್ ನಲ್ಲಿ ನಮ್ಮ ಜಮೀನಿನ ಜಾಗದ ಸರ್ವೇ ಸ್ಕೆಚ್ ಹೇಗೆ ನೋಡೋದು? ನಾವಿರುವ ಜಾಗ ಯಾರ ಮಾಲೀಕತ್ವದಲ್ಲಿ ಇದೆ? ಮೊಬೈಲ್ ನಲ್ಲಿ ಇದನ್ನ ಹೇಗೆ ನೋಡೋದು? ಇದಕ್ಕೆಲ್ಲ ಉತ್ತರ ಇಲ್ಲಿದೆ ನೊಡಿ ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಗೆ ಅಪ್ಲಿಕೇಶನ್ ಹೋಗಿ ಅಲ್ಲಿ 'ದಿಶಾಂಕ್' ಅಂತ ಟೈಪ್ ಮಾಡಿ ಈ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು. ಇದು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಅಪ್ಲಿಕೇಶನ್ ಆಗಿರುತ್ತದೆ. ಇದನ್ನ ಒಪನ್ ಮಾಡಿ ನಂತರ ಭಾಷೆಯನ್ನ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಮೊಬೈಲ್ ನಲ್ಲಿ ಲೊಕೇಷನ್/ಜಿಪಿಎಸ್ ಆನ್ ಮಾಡಿಕೊಳ್ಳಿ . ನಂತರ ಹೋಮ್ ಪೇಜ್ ನಲ್ಲಿ ನಿಮ್ಮ ಅಥವಾ ನೀವು ಇರುವಂತಹ ಜಾಗವನ್ನು ತೋರಿಸುತ್ತದೆ. ನಿಮ್ಮ ಹೊಲ ಗದ್ದೆಗಳಿಗೆ ಹೋಗಿ ನಿಂತುಕೊಂಡು ಈ ಅಪ್ಲಿಕೇಶನ್ ಆನ್ ಮಾಡಿದರೆ ನೀವು ಯಾವ ಸರ್ವೇ ನಂಬರ್ ನಲ್ಲಿ ಇದ್ದೀರಾ ಎನ್ನುವುದನ್ನು ತೋರಿಸುತ್ತದೆ. ಆ ಜಾಗದ ಮಾಲೀಕರು ಯಾರು ಎಂಬುದನ್ನು ತೋರಿಸುತ್ತದೆ. ನಿಮ್ಮ ಮೊಬೈಲ್ ನಲ್ಲಿಯೇ ಸಹ ಸರ್ವೇ ನಂಬರ್ ನೋಡಿಕೊಂಡು ಅದು ವಿಸ್ತೀರ್ಣತೆ ಎಷ್ಟು ಇದೆ ಎಂಬುದನ್ನೂ ಸಹ ತೋರಿಸುತ್ತದೆ. ಸರ್ಕಾರಿ ಅಧಿಕಾರಿಗಳೂ ಸಹ ಇದೆ ಅಪ್ಲಿಕೇಶನ್ ಮೂಲಕ ನಮಗೆ ಸರ್ವೇ ಮಾಡಿಕೊಡುತ್ತಾರೆ. ಇದರಲ್ಲಿ ಬಲಗಡೆ ಭಾಗದಲ್ಲಿ ಬಹಳಷ್ಟು ಆಯ್ಕೆಗಳು ಕಾಣಿಸುತ್ತದೆ. ಇದರಲ್ಲಿ ರಾಜ್ಯದ ಗಡಿ, ಜಿಲ್ಲೆಯ ಗಡಿ, ಹೋಬಳಿ ಇವುಗಳ ಗಡಿ ಯಾ...