Skip to main content

ಕಿವಿ ಮಾತ್ರ ನಂಬದೆ ಕಣ್ಣು ತೆರೆದು ನೋಡಿದರೆ...... ಪರಮೇಶ್ವರ್ ಕರೂರು ಅವರ ಈ ಬರಹ ನಿಮಗಾಗಿ


ಕಿವಿ ಮಾತ್ರ ನಂಬದೆ ಕಣ್ಣು ತೆರೆದು ನೋಡಿದರೆ......

*ನಾನು ಶುಂಠಿ ಪರಮೇಶ್ ಕರೂರು*. ನನ್ನ ಊರಿನ ತುಮರಿ ಗ್ರಾಮ ಪಂಚಾಯಿತಿ ಮೇಲೆ ನಕಲಿ ರಸೀದಿ ಪುಸ್ತಕ ಆರೋಪ ಬಂದಿದೆ. ಮಾಧ್ಯಮದಲ್ಲಿ ದೊಡ್ಡ ಸುದ್ದಿ ಆಗಿದೆ. ಈ ಹೊತ್ತಿನಲ್ಲಿ ನಾನು ಮೌನ ಮುರಿಯದೇ ಇದ್ದರೆ ಅಪರಾಧ ಆಗುತ್ತದೆ ಎಂಬ ಕಾರಣಕ್ಕೆ ಯೋಚಿಸಿ ಈ ಬರಹ ಬರೆಯಲು ಕುಳಿತಿರುವೆ.

ಮೊನ್ನೆ ಪ್ರಕರಣದಲ್ಲಿ ಎರಡೇ ಪ್ರಶ್ನೆ ಇರುವುದು, ಇದು ಪಂಚಾಯ್ತಿ ಆಡಳಿತ ವೈಪಲ್ಯವೋ ಅಥವಾ ಪಾಲುದಾರಿಕೆಯ ಹಗರಣವೋ...?

ಎರಡನೇ ನಿರ್ಧಾರ ಬರಲು ನನಗೆ ಸುಲಭ ಸಾಧ್ಯ ಆಗಲಿಲ್ಲ. ಹೊಳೆಬಾಗಿಲು ತುಮರಿಯಿಂದ 7 ಕೀ ಮೀ ದೂರ ಇದೆ. ನಕಲಿ ಟಿಕೆಟ್ ನೀಡಿದ್ದಾರೆ ಎನ್ನುವ ಜಾಗ ಪಂಚಾಯತ್ ಕಾರ್ಯ ವ್ಯಾಪ್ತಿಯ ನೌಕರರ ಒಳಗೊಂಡ ಜಾಗ, ಇಲ್ಲಿ ನಕಲಿ ಟಿಕೆಟ್ ನಡೆಯುತ್ತಾ ಇದ್ದರೂ ಪತ್ತೆ ಹಚ್ಚುವುದು ಸುಲಭ ಅಲ್ಲ, ವಾರಕ್ಕೆ 3 ದಿನ ಇಲ್ಲಿ ಸಂಚರಿಸುವ ನನಗಾಗಲಿ ಅಥವಾ ಅಲ್ಲೇ ನಿತ್ಯ ಇರುವ ಜೀಪ್ ಚಾಲಕರು, ಅಂಗಡಿ ಮುಗ್ಗಟ್ಟು ಇತ್ಯಾದಿ ಬಹುತೇಕ ಜನರಿಗೆ ಈ ಬಗ್ಗೆ ಗೊತ್ತಾಗಿದ್ದು ಮೊನ್ನೆ ಪ್ರಕರಣ ಸುದ್ದಿ ಬಂದಾಗಲೇ. ಇದರ ಅರ್ಥ ಅಲ್ಲೇನು ನಡೆದಿಲ್ಲ ಎಂದು ಅಲ್ಲ. ಅಲ್ಲಿ ಯಾರಿಗೂ ಗೊತ್ತಿಲ್ಲದೆ ಘಟನೆ ವರ್ಷಾನುಗಟ್ಟಲೆ ನಡೆಯಲು ಸಾಧ್ಯವಿಲ್ಲ. ಅಲ್ಲಿರುವ ಜನರಿಗೆ ಮಾಹಿತಿ ಇಲ್ಲ ಎನ್ನುವುದಾದರೆ 7 ಕಿ ಮೀ ದೂರದ ಪಂಚಾಯತ್ ಗಮನಕ್ಕೆ ಬರುವುದು ಯಕ್ಷ ಪ್ರಶ್ನೆ ಆಗುತ್ತದೆ. ಇವೆಲ್ಲ ನಡುವೆ ಇದು ಆಡಳಿತ ವೈಫಲ್ಯ ಎಂದೇ ಕರೆಯಲಾಗುತ್ತೆ.

ಪಂಚಾಯತ್ ಪಾಲುದಾರ ಎಂಬ ವಿಚಾರದಲ್ಲಿ ಏಕಾಏಕಿ ನಿರ್ಧಾರ ಬರಲು ನನ್ನ ಮನಸ್ಸು ಒಪ್ಪುತ್ತಾ ಇಲ್ಲ. ನಾನು ಈ ಮೊದಲು ತುಮರಿಯಲ್ಲಿ ಕೆಲವು ವರ್ಷ ಅಂಗಡಿ ಹಾಕಿಕೊಂಡು ಇದ್ದೆ. ಆಗ ತುಮರಿ ಪಂಚಾಯ್ತಿ ಅತಿ ಹತ್ತಿರದಿಂದ ನೋಡಿರುವೆ. ಆಶ್ರಯ ಯೋಜನೆ ಮನೆಗೆ ಆಗಲೇ 10 ರಿಂದ 15 ಸಾವಿರ ನಡೆಯುತ್ತಾ ಇತ್ತು, ಅಧ್ಯಕ್ಷರು ವಾರಕೆ ಎರಡು ದಿನ ಇದ್ದರೆ ಹೆಚ್ಚು, ಗ್ರಾಮಸಭೆ ಗದ್ದಲ, ಕೆಲ ಅಧ್ಯಕ್ಷರಂತೂ ಕಮಿಷನ್ ಕೊಡದೇ ಮುಂದಕ್ಕೆ ಪೈಲ್ ಹೋಗುತ್ತ ಇರಲಿಲ್ಲ, ಖಾತ್ರಿ ಯೋಜನೆ ಗುತ್ತಿಗೆ ಸದಸ್ಯರೇ ಮಾಡುತ್ತಾ ಇದ್ದರು ಹೀಗೆ ನೂರು ಕಾಯಿಲೆ ಕಾರಣ ಸೂಪರ್ ಸೀಡ್ ಹಂತ ಕೂಡ ತಲುಪಿದ್ದು ಇತಿಹಾಸ.

ನಾಲ್ಕುವರೆ ವರ್ಷದ ಹಿಂದೆ ಈಗಿನ ಆಡಳಿತ ಬಂದಾಗ ಜನರಿಗೆ ಪ್ರಶ್ನೆ ಮತ್ತು ಕುತೂಹಲ ಇತ್ತು. ವಿಧ್ಯವಂತ ಮತ್ತು ಸಮಾಜದ ನಡುವೆ ಸೇವೆ ನೀಡಿದ ಜನರು ಆಯ್ಕೆ ಆಗಿ ಬರುವ ಜತೆ ಜಿ ಟಿ ಅಧ್ಯಕ್ಷ ಆದರು.

ಈ ಘಟನೆ ಹೊರತು ಪಡಿಸಿ ಒಂದು ಮಾತನ್ನ ನನ್ನ ನೆಲದ ಎಲ್ಲಾ ಪಕ್ಷ, ಜಾತಿ ಜನ ಒಪ್ಪಿಕೊಳ್ಳುತ್ತಾರೆ ಅದೇನು ಎಂದರೆ ಈ ಬಾರಿ ತುಮರಿ ಗ್ರಾಮ ಪಂಚಾಯಿತಿ ಆಡಳಿತ ಜನಮುಖಿ ಆಗಿದೆ. ನಾನು ನೋಡಿದಂತೆ ಜಿ. ಟಿ ಅಧ್ಯಕ್ಷ ಸ್ಥಾನಕ್ಕೆ ಘನತೆ ತಂದಿದ್ದಾರೆ. ಪ್ರತಿ ದಿವಸ 9 30 ಕ್ಕೆ ಕಚೇರಿ ಹಾಜಾರು, ಯಾರೇ ಬರಲಿ ಎದುರು ಕುರ್ಚಿ ಕೂರಿಸಿ ಸಮಸ್ಯೆ ಆಲಿಸಿ ಸ್ಪಂದಿಸಿದ್ದಕ್ಕೆ ತುಮರಿ ಜನರೇ ಸಾಕ್ಷಿ. ತಾನು ಮಾಡಿದ ಕೆಲಸದ ಬಗ್ಗೆ ವಿವರಣೆ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ಮಾಹಿತಿ ನೀಡಿದ್ದಾರೆ.

ಉಳಿದ ಸದಸ್ಯರು ಲೋಕಣ್ಣ, ಅನಿಲ್, ಓಂಕಾರ್, ಮಹಿಳಾ ಸದಸ್ಯರು ಬಹಳ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಣೆ ಮಾಡಿ ಜಿ ಟಿ ಗೆ ಬೆನ್ನೆಲುಬು ಆಗಿ ನಿಂತ ಕಾರಣ ಪಂಚಾಯತ್ ಚಟುವಟಿಕೆ ಕೇಂದ್ರ ಆಗಿತ್ತು. ಸಾಮೂಹಿಕ ಸ್ವಾತಂತ್ರ್ಯ ದಿನ ಆಚರಣೆ, ಸಾಹಿತ್ಯ ಸಮ್ಮೇಳನ, ಮನೆ ಹಂಚಿಕೆ ಗೊಂದಲ ತಪ್ಪಿಸಲು ಅಧ್ಯಾತಾ ಪಟ್ಟಿ, ಸಂದ್ಯಾಸುರಕ್ಷ ವಿಧವಾ ವೇತನ ಜನರಿಗೆ ತಲುಪಿಸುವ "ಆಸರೆ" ಎಂಬ ಯೋಜನೆ ರೂಪಿಸಲು ಸಾಧ್ಯ ಆಗಿದ್ದು ಆಡಳಿತ ಮಂಡಳಿ ಸಾಮಾಜಿಕ ಬದ್ದತೆ ಗೆ ಸಾಕ್ಷಿ. ಗ್ರಾಮ ಪಂಚಾಯಿತಿ ಸ್ವರೂಪ ಬದಲಾಗಿದೆ ಎಂಬುದು ನೂರಕ್ಕೆ ನೂರು ಸತ್ಯ.

ಇನ್ನು ಭ್ರಷ್ಟಾಚಾರ ವಿಚಾರ. ಹೊಳೆಬಾಗಿಲು 30 ರೂಪಾಯಿ ರಸೀದಿ ನಕಲಿ ಮಾಡಿದ ಆರೋಪ ಎದುರಿಸುತ್ತಿರುವ ತುಮರಿ ಪಂಚಾಯತ್ ಆಡಳಿತ ತನ್ನ ಕೇಂದ್ರ ಕಚೇರಿ ಹೇಗೆ ಇಟ್ಟುಕೊಂಡಿದೆ ಎಂಬ ಪ್ರಶ್ನೆ ಬರುತ್ತದೆ. ಯಾಕೆಂದರೆ ಕಳೆದ 5 ವರ್ಷದಲ್ಲಿ ಕೋಟಿಗೂ ಹೆಚ್ಚು ಅನುದಾನ ಬಂದಿರುತ್ತೆ, ನೂರಾರು ಮನೆ, ಖಾತ್ರಿ ಯೋಜನೆ ಹೀಗೆ ದುಡ್ಡು ಮಾಡಲು ಹತ್ತಾರು ಅವಕಾಶ ಇದೆ.

ನಾನು ರಸೀದಿ ಘಟನೆ ನಡೆದ ನಂತರ ಪಂಚಾಯತ್ ಬಗ್ಗೆ ನನ್ನ ತಿಳುವಳಿಕೆ ಮರು ಪರಿಶೀಲಿಸಿದಾಗ ಬಂದ ಉತ್ತರ ಅಚ್ಚರಿ ತಂದಿದೆ. ಯಾವುದೇ ಸದಸ್ಯರ ಬಗ್ಗೆ ಲಂಚ ಆರೋಪ ಇಲ್ಲ, ದುಡ್ಡು ಕೊಟ್ಟು ಮನೆ ಆಯ್ಕೆ ಆಗುವ ದಿನಗಳು ಮುಗಿದಿದೆ, ಅಧ್ಯಾತಾ ಪಟ್ಟಿ ಮೇಲೆ ಮನೆ ನಿರ್ಧಾರ ಆಗುತ್ತಾ ಇದೆ, ನೂರಾರು ಜನರಿಗೆ ಸಂಧ್ಯಾ ಸುರಕ್ಷ ಪಂಚಾಯತ್ ಮಾಡಿಸಿದೆ ಆದರೆ ದುಡ್ಡು ಕೊಟ್ಟು ಕೆಲಸ ಆಯಿತು ಎನ್ನುವ ಆರೋಪ ಇಲ್ಲ. ಇನ್ನು ಸ್ವತಃ ಜಿಟಿ ಅಧ್ಯಕ್ಷ ಆಗಿ ಕಾಮಗಾರಿ ಆಯ್ಕೆ ಗುತ್ತಿಗೆ ನಿರ್ವಹಣೆ ವಿಚಾರದಲ್ಲಿ ಸದಸ್ಯರಿಗೆ ಪಕ್ಷ ಭೇದ ಇಲ್ಲದೆ ಸ್ವಾತಂತ್ರ್ಯ ನೀಡಿದ್ದಾನೆ, ಅಧ್ಯಕ್ಷ ಆಗಿ ಜಿ ಟಿ ಕಮೀಷನ್ ಚೆಕ್ ವ್ಯವಹಾರ ಮಾಡಲಿಲ್ಲ ಎಂದು ಎಲ್ಲಾ ಸದಸ್ಯರು ಮತ್ತು ಪಂಚಾಯತ್ ಜತೆ ವ್ಯವಹಾರ ಮಾಡಿದವರು ಅನುಭವ.

ವಿಷಯ ಹೀಗಿರುವಾಗ ರಸೀದಿ ಪುಸ್ತಕ ಹಗರಣದಲ್ಲಿ ಪಂಚಾಯತ್ ಆಡಳಿತ ಪಾಲ್ಗೊಂಡಿತು ಎಂದು ತನಿಖೆ ನಡೆದು ತೀರ್ಪು ಬರುವ ಮುನ್ನ ವ್ಯಕ್ತಿಗತ ಆಗಿ ನಿರ್ಧಾರ ಬಂದು ನಂಬುವ ಮುನ್ನ ನೂರಾರು ಬಾರಿ ಯೋಚನೆ ಮಾಡಲೇ ಬೇಕು.

ಈ ಮಾತು ಬರೆಯಲು ಕಾರಣ. ಪಂಚಾಯತ್ ಆಡಳಿತದಲ್ಲಿ ಒಳ್ಳೆಯ ಹೆಸರು ಪಡೆಯುವುದು ಸುಲಭ ಮಾತಲ್ಲ, ಈ ಘಟನೆ ಅವಕಾಶ ಇಲ್ಲದೆ ಇದ್ದಿದ್ದರೆ ಈ ಬಾರಿಯ ಗಾಂಧಿ ಗ್ರಾಮ ಪುರಸ್ಕಾರ ಕ್ಕೆ ತುಮರಿ ಪಂಚಾಯತ್ ತನ್ನ ಹಕ್ಕು ಮಂಡಿಸಿ ನಿರೀಕ್ಷೆ ಇತ್ತು. ಈ ಘಟನೆ ನಡೆಯದೇ ಇದ್ದಿದ್ದರೆ ನಾಲ್ಕು ತಿಂಗಳ ನಂತರ ನಡೆಯುವ ಚುನಾವಣೆಯಲ್ಲಿ ಈ ತಂಡ ಪುನ್ಹ ಆಯ್ಕೆ ಬಯಸಿದ್ದರೆ ಜನ ಆಶೀರ್ವಾದ ಮಾಡುವ ಅವಕಾಶ ಇತ್ತು. ಜನರ ಮುಂದೆ ಕಣ್ಣು ಮತ್ತು ಕಿವಿ ಎರಡು ಆಯ್ಕೆ ಇದೆ. ತಾವು ಕಂಡ ನಾಲ್ಕೂವರೆ ವರ್ಷಗಳ ತುಮರಿ ಪಂಚಾಯತ್ ಆಡಳಿತ ಅನುಭವವನ್ನ ಕಣ್ಣಲಿ ನೋಡಿದ್ದಾರೆ...ಈಗ ಕಿವಿಯ ಮೇಲೇ ರಸೀದಿ ಪುಸ್ತಕ ಹಗರಣ ಬಗ್ಗೆ ಬೇರೆ ಬೇರೆ ಮಾತು ಬೀಳುತ್ತಾ ಇವೆ. ಅದರಲ್ಲಿ ಮುಖ್ಯವಾಗಿ ಆಡಳಿತ ಮಂಡಳಿ ಬಾಗಿ ಎಂಬ ವಿಚಾರಕ್ಕೆ ಕುರಿತಾಗಿ. ಕಣ್ಣಿನ ಸ್ವಾ ಅನುಭವ ಇರುವಾಗ ಕಿವಿಯ ಮೇಲೆ ನಂಬಿಕೆ ಇಟ್ಟು ನಾವೇ ನ್ಯಾಯಧೀಶರಾಗಿ ತೀರ್ಪು ಕೊಡುವ ಮುನ್ನ ಕೊಂಚ ಸಮಯ ತೆಗೆದುಕೊಳ್ಳುವ ಸಹನೆ ಕೂಡ ಬೇಕು ಅನ್ನಿಸುತ್ತದೆ.

ಆಡಳಿತ ಮಂಡಳಿ ಈ ಘಟನೆ ಹೊರತಾಗಿ ಮಾದರಿ ಪಂಚಾಯತ್ ಕಟ್ಟಿದೆ. ಅದರಲ್ಲಿ ಎರಡು ಮಾತಿಲ್ಲ. ಈ ಘಟನೆಯಲ್ಲಿ ಅವರ ಆಡಳಿತ ವೈಫಲ್ಯ ಇದೆ ಎಂಬುದು ಸರಿ. ಪಾಲುದಾರಿಕೆ ಇಲ್ಲದೆ ಇದೆ ಎಂಬ ನಿರ್ಧಾರಕ್ಕೆ ನಾವು ಅವಸರ ನಿರ್ಧಾರ ಬಂದರೆ ಅದರಲ್ಲೂ ಜನ ಸಾಮಾನ್ಯರು ತಮ್ಮ ಪರ ದ್ವನಿ ಎತ್ತಿ ದುಡಿದ ಸೇವೆಗೆ ಮಾಡಿದ ಅವಮಾನ ಆಗುತ್ತದೆ. ಜನಮುಖಿ ರಾಜಕೀಯ ಎನ್ನುವುದು ಮರೆ ಆಗುತ್ತಾ ಇರುವ ಹೊತ್ತಿನಲ್ಲಿ ನಮ್ಮ ಕೈಲಿ ಇರುವ ಕೆಲವೇ ಸಾಧ್ಯತೆಗಳ ಬಗ್ಗೆ, ಸ್ಥಳೀಯ ನಾಯಕತ್ವ ಬೆಳೆಯುವ ಬಗ್ಗೆ ಸಮಚಿತ್ತ ಮತ್ತು ಸಮಪ್ರಜ್ಞೆಯ ಮನಸ್ಸು ನ್ಯಾಯ ಹುಡುಕುವ ಬರದಲ್ಲಿ ಅನ್ಯಾಯ ಆಗದಂತೆ, ಅನ್ಯಾಯ ಅದರೆ ಅದನ್ನು ಖಂಡಿಸುವ ಶಕ್ತಿ ಇಟ್ಟುಕೊಳ್ಳಬೇಕು ಎಂಬುದೇ ನನ್ನ ಆಶಯ.

ಜಿಟಿ ಸಿಕ್ಕಿದ್ದ..."ತಾನು ನಾಲ್ಕೂವರೆ ವರ್ಷ ಕಾಲದಿಂದ ಚಿತ್ರಿಸಿದ ಪಂಚಾಯ್ತಿ ವರ್ಣ ಚಿತ್ರಕ್ಕೆ ಮಸಿ ಬಿದ್ದಿದೆ" ಎಂದು ಮಾರ್ಮಿಕ ಆಗಿ ನುಡಿದ. ಆತನ ಮಾತು ಕಾಡಿತು. ಪಂಚಾಯತ್ ಸದಸ್ಯರ ಎಲ್ಲರ ಮಾತು ಇದೇ ಆಗಿದೆ ಅನ್ನಿಸಿತು. ಅವರ ಪಾಲುದಾರಿಕೆ ಇಲ್ಲದೆ ಈ ಪ್ರಕರಣ ನಡೆದಿದ್ದರೆ ಆಡಳಿತ ಮಂಡಳಿಗೆ ಬಹಳ ನೋವು ಆಗಲೇಬೇಕು.

ರಾಜಕಾರಣ ಬಗ್ಗೆ ನಾನು ಬರೆಯಲಾರೆ. ಆದರೆ ಅಪರಾಧ ಮಾಡದೇ ಅಪರಾಧಿ ಆಗಿಸುವ ವಿಷ ರಾಜಕಾರಣದಲ್ಲಿ ಸಮಾಜಮುಖಿ ಮನಸುಗಳು ಸೊರಗದೇ ಇರಲಿ ಎಂಬುದೇ ಆಶಯ. ತನಿಖೆ ನಡೆಯಲಿ. ಸತ್ಯ ಹೊರ ಬರಲಿ, ತನಿಖೆ ಮುಕ್ತ ಆಗಿದ್ದರೆ ಮಾತ್ರ ನ್ಯಾಯ ದರ್ಶನ ಆಗಲು ಸಾಧ್ಯ.

- ಶುಂಠಿ ಪರಮೇಶ್ವರ್ ಕರೂರು.

Comments

ಪಾಪುಲರ್ ಪೋಸ್ಟ್‌

SSC Jobs 2021 Staff Selection Commission 3260 central government Jobs Apply now

  Jobs 2021 – Highlights SSC( Staff Selection Commission) invited applications for PUC Diploma Degree ITI Candidates to fill up the 3200+ Posts through online.  Job seekers who are looking to join central government jobs can make use this opportunity. there is no Application fee for women, SC/ST, PWD Candidates. Read the full post comple tely to get Full Job details according to your education qualification. Name of the Board         :     Staff Selection Commission Name of the Post                           :    SSC Phase 9 Advertisement Number              : No of Vacancies                               :   3000+ Job Category                     ...

CECRI Recruitment 2021 || 54 Vacancies || Apply online

                                            Jobs 2021 – Highlights Name of the Board Central Electrochemical Research Institute  Name of the Post Technical Assistants / Technicians Advertisement Number Advt_02_2021_Technical.pdf No of Vacancies 54  Job Category Central Govt Jobs  Starting Date to Apply September 2021 Last Date of Registration 27th September 2021  Application Mode  Apply Online  Job Location Karaikudi - 630003, Tamil Nadu  Official Website https://cecri.res.in/jobs/Advt_02_2021_Technical.pdf Eligibility Criteria    Educational Qualification   Technical Assistant:   1st Class B.Sc. degree / Diploma in Chemistry / Physics /                                    ...

IB Recruitment 2021 || 500+ vacancy || Within 60 days

                                            Jobs 2021 – Highlights Name of the Board Intelligence Bureau  Name of the Post Junior Intelligence Officer, MTS, Accountant & Other Advertisement Number No of Vacancies 500+  Job Category Central Govt Jobs  Starting Date to Apply 27th August 2021 Last Date of Registration Within 2 months  Application Mode  Apply Offline  Job Location All over India  Official Website mha.gov.in Vacancy details Name of the Post Name of the Post Multi Tasking Staff -24 Junior Intelligence Officer-II/Tech -168 Halwei cum Cook -11 Assistant Central Intelligence Officer-I / Executive -56 Security Assistant (Motor Transport) --20 Assistant Central Intelligence Officer-II / Executive -98 Junior Intelligence Officer – II (Motor Transport) -...

Best Work from Home jobs earn money online

Earn Money using Social Platforms :  Make Money through online Activities You can earn money through your online social activities like: Answer Quiz's, Post videos on Youtube,  Play Games, Install Mobile   Applications, Take Online Surveys, Complete offers,  Do Online Job Task, Watch Videos, Post On Instragram, Facebook etc.  But its not a Job, Its just create extra money for your online activities.  Best Free Make Money Online websites like Ysense, neobucks, Timebucks, FushionCash etc. timebucks.com Earn money through take Micro tasks, create tik tok videos, watch videos, Complete Offers etc. The site owned by Australian Clearing Pty Ltd. Minimum payout: $10 Payment methods: Paypal, Payeer etc. www.swagbucks.com: Earn money / rewards through take online surveys, Daily Poll, Tasks and complete online offers. The site owned by Prodege LLC, the company is one of leading online marketing company based in California, USA Minimum payout: $25...