Q1:
ಮೂರು ಜನ ಹುಡುಗರು ಒಂದು ಮಠದಲ್ಲಿ ಓದುತ್ತಿದ್ದಾರೆ (ಮಕರಧ್ವಜ, ದಯಾನಂದ, ನಚಿಕೇತ). ಒಬ್ಬ ಆಗಮಶಾಸ್ತ್ರ ಕಲಿಯುತ್ತಿದ್ದಾನೆ, ಇನ್ನೊಬ್ಬ ಫಲಜ್ಯೋತಿಷ ಕಲಿಯುತ್ತಿದ್ದಾನೆ, ಮತ್ತೊಬ್ಬ ಪೌರೋಹಿತ್ಯ ಕಲಿಯುತ್ತಿದ್ದಾನೆ.
ಆಗಮಿಕ ಯಾವಾಗಲೂ ಸತ್ಯವನ್ನೇ ಹೇಳುತ್ತಾನೆ. ಜ್ಯೋತಿಷಿ ಯಾವಾಗಲೂ ಸುಳ್ಳನ್ನೇ ಹೇಳುತ್ತಾನೆ. ಪುರೋಹಿತ ಒಮ್ಮೆ ಸತ್ಯ ಒಮ್ಮೆ ಸುಳ್ಳು ಹೇಳುತ್ತಾನೆ.
ಮಕರಧ್ವಜ ಹೇಳ್ತಾನೆ, *ನಚಿಕೇತ ಜ್ಯೋತಿಷಿ* ಅಂತ. ದಯಾನಂದ ಹೇಳ್ತಾನೆ, *ಮಕರಧ್ವಜ ಆಗಮಿಕ* ಅಂತ. ನಚಿಕೇತ ಹೇಳ್ತಾನೆ, *ನಾನು ಪುರೋಹಿತ* ಅಂತ. ಇವರ statements ಗಮನಿಸಿ, ಯಾರು ಯವುದನ್ನು ಕಲಿಯುತ್ತಿದ್ದಾರೆ ಅಂತ ಗುರುತಿಸಿ.
Q2:
ಒಬ್ಬ ರೈತನ ಹತ್ರ 7 ಹಸು ಇದ್ದವು. ಅವನು ಸಾಯೋ ಟೈಮಲ್ಲಿ ಆ ಹಸುಗಳನ್ನ ತನ್ನ ಮೂರು ಮಕ್ಕಳಿಗೆ ಹಂಚಲು ಒಂದು ವಿಲ್ ಬರೆದಿಟ್ಟ ಮೊದಲ ಮಗನಿಗೆ ಇರುವ ಹಸುಗಳಲ್ಲಿ ಅರ್ಧದಷ್ಟು ಹಸುಗಳು, ಎರಡನೇ ಮಗನಿಗೆ ಮೊದಲನೆಯವನ ಅರ್ಧದಷ್ಟು ಹಸುಗಳು, ಮೂರನೆಯವನಿಗೆ ಎರಡನೆಯವನ ಅರ್ಧದಷ್ಟು ಹಸುಗಳು ಸಿಗಬೇಕು ಅಂತ ಬರೆದಿದ್ದ.
ಆ ಲೆಕ್ಕದಲ್ಲಿ ಮೊದಲನೆಯವನಿಗೆ 3½ ಹಸು, ಎರಡನೆಯವನಿಗೆ 1¾ ಹಸು, ಮೂರನೆಯವನಿಗೆ ⅞ ಹಸು ಸಿಗ್ಬೇಕು.
ಈ ಮೂರು ಮಕ್ಕಳೂ ಕೇಸರಿ ಪಡೆಯವರು. ಹಸುಗಳನ್ನು ಕಡಿಯುವಂತಿಲ್ಲ. ಹಸುಗಳನ್ನು ಮಾರಿ ದುಡ್ಡು ಹಂಚೋಣ ಅಂದ್ರೆ ಮಕ್ಕಳು ಒಪ್ಪುತ್ತಿಲ್ಲ. ನಮಗೆ ಹಸುಗಳೇ ಬೇಕು ಅಂತಾರೆ.
ನಿಮ್ಮ ಮುಂದೆ ಈ ವ್ಯಾಜ್ಯ ಬಂದಿದೆ. ಎಲ್ಲರಿಗೂ ಸಮಾಧಾನ ಆಗೋತರ ಹೇಗೆ ಬಗೆಹರಿಸ್ತೀರಿ?
Q3*ಜಾಣರಿಗೆ ಪ್ರಶ್ನೆ*
💐💐💐💐💐💐
ಕೆಳಗಿನ ೧ ರಿಂದ ೨೦ರ ವರೆಗಿನ ಪ್ರಶ್ನೆಗಳಿಗೆ ೩ ಅಕ್ಷರದ ಹಾಗೂ 'ಲು' ಇಂದ ಕೊನೆಗೊಳ್ಳುವ ಪದಗಳನ್ನು ಹುಡುಕಿ.
👇
೧. ಕಷ್ಟ ಹೇಳಿಕೊಳ್ಳುವುದು
೨. ಇದಿಲ್ಲದೆ ಶ್ರೀಕೃಷ್ಣನಿಲ್ಲ
೩. ಇದಿಲ್ಲದ ಮನೆಯಿಲ್ಲ
೪. ಶ್ರೀರಾಮನಿಗೆ ಕಿಂಚಿತ್ ಸೇವೆಮಾಡಿದ ಪ್ರಾಣಿ
೫. ವಿಮಾನ ನಿಲ್ದಾಣದ ರಸ್ತೆಯಲ್ಲಿರುವ ತಿರುವು
೬. ಇದರ ಪುಕ್ಕ ಬಲು ಅಂದ
೭. ಪ್ರಶ್ನೆ
೮. ಹಿಂದೆ ಇದೇ ಸಂದೇಶದ ಮಾಧ್ಯಮ
೯. ತಲೆ ಎತ್ತಿ ನೋಡಿದರೆ ಕಾಣುವುದು
೧೦. ಸೊಗಡಿಗೆ ಪರ್ಯಾಯ ಪದ
೧೧. ದಾರಿ ಎರಡಾಗಿದೆ
೧೨. ಚಟಕ್ಕೆ ಪರ್ಯಾಯ ಪದ
೧೩. ದೀಪದ ಕೆಳಗೆ
೧೪. ಪರ್ಯಾಯ
೧೫. ಕಮಲಮ್ಮನನ್ನು ಅವರ ಗಂಡ ಪ್ರೀತಿಯಿಂದ ಕರೆಯುವುದು
೧೬. ತಲೆಗೆ ಧರಿಸುವ ಪೋಷಾಕು
೧೭. ಕಳ್ಳರು ಬರದಂತೆ ತಡೆಯಲು ಇದು ಬೇಕು
೧೮. ಇದು ಇಲ್ಲದೆ ಸರ್ಕಾರಿ ಕೆಲಸ ಯಾವುದೂ ನಡೆಯಲ್ಲ
೧೯. ......ಬೆಳಿಗ್ಗೆ, ರಾತ್ರಿ ಹಲ್ಲುಜ್ಜಬೇಕು
೨೦. ಆಸ್ತಿ ವಿಷಯದಲ್ಲಿ ವ್ಯಕ್ತಿ ಸತ್ತ ಮೇಲೆ ಇದಕ್ಕೆ ಪ್ರಾಮುಖ್ಯತೆ.
Q4:
ಓಮೊನ್ನೆ ತಿಮ್ಮರಾಯಪುರದಿಂದ 15 ಕಿಲೋಮೀಟರ್ ದೂರದಲ್ಲಿರುವ ಬಯಲಲ್ಲಿ ಒಂದು ಫಂಕ್ಷನ್ ಆಯ್ತು. ಅಲ್ಲಿ chief guest ಆಗಿ ಸೂಪರ್ ಸ್ಟಾರೊಬ್ಬರು ಬಂದಿದ್ರು. ಅವರನ್ನು ನೋಡಲು ತಿಮ್ಮರಾಯಪುರದ ಜನರಲ್ಲಿ ಸಿಕ್ಕಾಪಟ್ಟೆ ಉತ್ಸಾಹ ಇತ್ತು. ಅವರನ್ನು ನೋಡಲು ಹೊರಟವರೆಲ್ಲ ಊರಿನ ಆಚೆಗಿರುವ ಹನುಮಪ್ಪನ ಗುಡಿ ಮುಂದೆ ಸೇರಬೇಕಿತ್ತು. ಅಲ್ಲಿ ಬಂದವರನ್ನೆಲ್ಲ ಕಾರ್ಯಕ್ರಮಕ್ಕೆ ತಲುಪಿಸಲು ಒಂದಷ್ಟು ಎತ್ತಿನಗಾಡಿಗಳು ತಯಾರಾಗಿದ್ದವು. ಪ್ರತಿ ಗಾಡಿಯಲ್ಲೂ ಒಂದೇ ಸಂಖ್ಯೆಯ ಜನ ಕುಳಿತಿದ್ದರು. ದಾರಿಯಲ್ಲಿ ಹತ್ತು ಬಂಡಿಗಳು ಹಾಳಾದವು. ಈಗ ಉಳಿದ ಪ್ರತಿ ಗಾಡಿಯಲ್ಲೂ ಒಬ್ಬೊಬ್ಬ ವ್ಯಕ್ತಿ ಹೆಚ್ಚು ಕುಳಿತು ಕಾರ್ಯಕ್ರಮಕ್ಕೆ ತಲುಪಿದರು.
ಕಾರ್ಯಕ್ರಮ ತುಂಬಾ ಚೆನ್ನಾಗಿ ನಡೀತು. ಎಲ್ಲರೂ ಸ್ಟಾರ್ ಜೊತೆ ಸೆಲ್ಫಿ ತಗೊಂಡರು, ಆಟೋಗ್ರಾಫ್ ಹಾಕಿಸ್ಕೊಳ್ಳೋರು ಹಾಕಿಸ್ಕೊಂಡ್ರು. ವಾಪಸ್ ಊರಿನ ಕಡೆ ಹೋಗುವಾಗ ಮತ್ತೆ ಹದಿನೈದು ಗಾಡಿಗಳು ಹಾಳಾದವು. ವಾಪಸ್ ಊರಿಗೆ ಬಂದಾಗ, ಪ್ರತಿ ಗಾಡಿಯಲ್ಲೂ ಬೆಳಿಗ್ಗೆ ಹೊರಟಿದ್ದಕ್ಕಿಂತ ಮೂವರು ಜಾಸ್ತಿಯಿದ್ದರು. ಕಾರ್ಯಕ್ರಮಕ್ಕೆ ತಿಮ್ಮರಾಯಪುರದಿಂದ ಒಟ್ಟು ಎಷ್ಟು ಜನ ಹೊರಟಿದ್ದರು?
Q5:
ಒಂದು ಬಸ್ಸಲ್ಲಿ ಒಬ್ಬ ಡ್ರೈವರ್, ಒಬ್ಬ ಕಂಡಕ್ಟರ್, ಒಬ್ಬ ಕ್ಲೀನರ್ ಇರ್ತಾರೆ. ಇವರ ಹೆಸರು ವೆಂಕಟೇಶ್ ನಾರಾಯಣ್ ಮತ್ತು ಶ್ರೀನಿವಾಸ್ (ಹೆಸರು ಮತ್ತು ಹುದ್ದೆಗಳು ಕ್ರಮವಾಗಿಲ್ಲದಿರಬಹುದು). ಅದೇ ಬಸ್ಸಲ್ಲಿ ಇದೇ ಮೂರು ಹೆಸರಿನ ಪ್ರಯಾಣಿಕರು ಇರ್ತಾರೆ. (ಮಿ. ವೆಂಕಟೇಶ್, ಮಿ. ನಾರಾಯಣ್, ಮಿ. ಶ್ರೀನಿವಾಸ್). ಕೆಳಗಿನ ಸುಳಿವುಗಳನ್ನು ಆಧರಿಸಿ ಡ್ರೈವರ್ ಹೆಸರೇನು ಎಂದು ಕಂಡುಹಿಡಿಯಿರಿ.
1. ಮಿ. ನಾರಾಯಣ್ ಮೈಸೂರಿನಲ್ಲಿ ವಾಸಿಸುತ್ತಾರೆ.
2. ಕಂಡಕ್ಟರ್ ಮನೆ ಮೈಸೂರಿಗೂ ಬೆಂಗಳೂರಿಗೂ ಕರೆಕ್ಟಾಗಿ ಮಧ್ಯದಲ್ಲಿದೆ.
3. ಮಿ. ಶ್ರೀನಿವಾಸ್ ಅವರ ಸಂಬಳ ವರ್ಷಕ್ಕೆ ₹ 4,00,000/-
4. ಕಂಡಕ್ಟರನ ಅತಿ ಹತ್ತಿರದ ನೆರೆಹೊರೆಯಲ್ಲಿರುವ ಪ್ರಯಾಣಿಕನೊಬ್ಬ ಕಂಡಕ್ಟರನ ಮೂರು ಪಟ್ಟು ಹೆಚ್ಚು ಸಂಬಳ ಪಡೆಯುತ್ತಾನೆ.
5. ವೆಂಕಟೇಶ್ ಕ್ಲೀನರನ್ನು ಷಟಲ್ ಕಾಕ್ ಆಡುವಾಗ ಸೋಲಿಸುತ್ತಾನೆ.
6. ಕಂಡಕ್ಟರನ ಹೆಸರಿನವನೇ ಆದ ಪ್ರಯಾಣಿಕ ಬೆಂಗಳೂರಲ್ಲಿ ವಾಸಿಸುತ್ತಾನೆ.
ಈಗ ಹೇಳಿ, *ಡ್ರೈವರ್ ಹೆಸರೇನು?*
ಕೃಪೆ: ಅರಳಿಕಟ್ಟೆ ಪಂಚಾಯ್ತಿ
Devruuu
ReplyDelete