ಇದು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಅಪ್ಲಿಕೇಶನ್ ಆಗಿರುತ್ತದೆ. ಇದನ್ನ ಒಪನ್ ಮಾಡಿ ನಂತರ ಭಾಷೆಯನ್ನ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಮೊಬೈಲ್ ನಲ್ಲಿ ಲೊಕೇಷನ್/ಜಿಪಿಎಸ್ ಆನ್ ಮಾಡಿಕೊಳ್ಳಿ
.
ನಂತರ ಹೋಮ್ ಪೇಜ್ ನಲ್ಲಿ ನಿಮ್ಮ ಅಥವಾ ನೀವು ಇರುವಂತಹ ಜಾಗವನ್ನು ತೋರಿಸುತ್ತದೆ.
ನಿಮ್ಮ ಹೊಲ ಗದ್ದೆಗಳಿಗೆ ಹೋಗಿ ನಿಂತುಕೊಂಡು ಈ ಅಪ್ಲಿಕೇಶನ್ ಆನ್ ಮಾಡಿದರೆ ನೀವು ಯಾವ ಸರ್ವೇ ನಂಬರ್ ನಲ್ಲಿ ಇದ್ದೀರಾ ಎನ್ನುವುದನ್ನು ತೋರಿಸುತ್ತದೆ. ಆ ಜಾಗದ ಮಾಲೀಕರು ಯಾರು ಎಂಬುದನ್ನು ತೋರಿಸುತ್ತದೆ. ನಿಮ್ಮ ಮೊಬೈಲ್ ನಲ್ಲಿಯೇ ಸಹ ಸರ್ವೇ ನಂಬರ್ ನೋಡಿಕೊಂಡು ಅದು ವಿಸ್ತೀರ್ಣತೆ ಎಷ್ಟು ಇದೆ ಎಂಬುದನ್ನೂ ಸಹ ತೋರಿಸುತ್ತದೆ.
ಸರ್ಕಾರಿ ಅಧಿಕಾರಿಗಳೂ ಸಹ ಇದೆ ಅಪ್ಲಿಕೇಶನ್ ಮೂಲಕ ನಮಗೆ ಸರ್ವೇ ಮಾಡಿಕೊಡುತ್ತಾರೆ. ಇದರಲ್ಲಿ ಬಲಗಡೆ ಭಾಗದಲ್ಲಿ ಬಹಳಷ್ಟು ಆಯ್ಕೆಗಳು ಕಾಣಿಸುತ್ತದೆ. ಇದರಲ್ಲಿ ರಾಜ್ಯದ ಗಡಿ, ಜಿಲ್ಲೆಯ ಗಡಿ, ಹೋಬಳಿ ಇವುಗಳ ಗಡಿ ಯಾವ ರೀತಿ ಇದೆ ಎನ್ನುವುದನ್ನು ತೋರಿಸುತ್ತದೆ ಹಾಗೂ ನಿಮ್ಮ ಅಕ್ಕ ಪಕ್ಕದಲ್ಲಿ ಬೇರೆ ಯಾವುದೇ ಮನೆ ಇದೆಯಾ ಅನ್ನುವುದನ್ನು ಸಹ ಪ್ರತಿಯೊಂದನ್ನು ಡೀಟೈಲ್ ಆಗಿ ತೋರಿಸುತ್ತದೆ.
ಇನ್ನು ಕೆಳಗಡೆ ಮಾಪನ ಸಾಧನಗಳು, ಸರ್ವೇ ನಂಬರ್ ಹುಡುಕಿ, ಸ್ಥಳದ ಮಾಹಿತಿ ಹಾಗೂ ಮ್ಯಾಪ್ ನಲ್ಲಿ ಹುಡುಕಿ ಎಂಬ ನಾಲ್ಕು ಆಯ್ಕೆಗಳು ಕಾಣಿಸುತ್ತವೆ. ಸರ್ವೇ ನಂಬರ್ ಹುಡುಕಿ ಎಂದಿದ್ದಲ್ಲಿ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಎಲ್ಲವನ್ನೂ ಆಯ್ಕೆ ಮಾಡಿ ನಂತರ ನಿಮ್ಮ ಸರ್ವೇ ನಂಬರ್ ಅನ್ನು ಸಹ ನಮೂದಿಸಬೇಕು. ಹೀಗೆ ಮಾಡಿದಾಗ ನಾವು ಇರುವ ಜಾಗದಿಂದ ನಾವು ಕೊಟ್ಟಂತಹ ಸರ್ವೇ ನಂಬರ್ ಎಷ್ಟು ದೂರದಲ್ಲಿ ಇದೆ ಎನ್ನುವುದನ್ನು ಸಹ ತೋರಿಸುತ್ತದೆ.
ನಂತರ ಸ್ಥಳದ ವರದಿ ಎಂಬಲ್ಲಿ ಕ್ಲಿಕ್ ಮಾಡಿದಾಗ ನೀವು ಇರುವ ಸ್ಥಳದ ಬಗ್ಗೆ ಮಾಹಿತಿ ಹಾಗೂ ಅಲ್ಲಿರುವ ಸ್ಥಳದ ಮಾಲೀಕರು ಯಾರು ಎಂಬುದನ್ನು ಸಹ ಇದರ ಮೂಲಕ ತಿಳಿದುಕೊಳ್ಳಬಹುದು. ನಂತರ ಮ್ಯಾಪ್ ನಲ್ಲಿ ಸಹ ನಿಮ್ಮ ಜಾಗವನ್ನು ನೋಡಿಕೊಳ್ಳಬಹುದು. ಈ ಅಪ್ಲಿಕೇಶನ್ ನ ಮೂಲಕ ನಿಮ್ಮ ಜಾಗದ ಬಗ್ಗೆ ನೀವೇ ನಿಮ್ಮ ಮೊಬೈಲ್ ನಲ್ಲಿ ಮಾಹಿತಿ ತಿಳಿದುಕೊಳ್ಳಬಹುದು.
ಕರ್ನಾಟಕ ಸರ್ಕಾರದ ಉಪಯುಕ್ತ ಮಾಹಿತಿಯನ್ನು ಪಡೆಯಲು Karnataka government apps ಎಂದು Playstore app ನಲ್ಲಿ
ಭಾರತ ಸರ್ಕಾರದ ಉಪಯುಕ್ತ ಮಾಹಿತಿಯನ್ನು ಪಡೆಯಲು central government apps ಎಂದು Playstore app ನಲ್ಲಿ ಹುಡುಕಿ
ಈ ಲೇಖನ ಉಪಯುಕ್ತವಾಗಿದ್ದರೆ ನಿಮ್ಮವರೊಂದಿಗೆ ಹಂಚಿಕೊಳ್ಳಿ.
--ಶಶಿಕಾಂತ್ ಎಮ್ ಎಸ್(ನಕ್ಷತ್ರಾಕ್ಷ)



Comments
Post a Comment