ಸ್ನೇಹಿತರೆ ನಮಸ್ಕಾರ..
ಏಳಿಗೆ ಶಾಲೆ ಮತ್ತು ಊರು ಕಳೆದ ಒಂದು ವಾರದಿಂದ ಶೌಚಾಲಯ ನೀರು ಮತ್ತು ರಸ್ತೆ ಮೂಲಸೌಲಭ್ಯಗಳ ಕುರಿತಾಗಿ ಪತ್ರಿಕೆ ಮತ್ತು ಮಾಧ್ಯಮ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿಯಲ್ಲಿದೆ. ಸಂತಸದ ವಿಷಯ ಏನೆಂದರೆ ಅಭಿವೃದ್ಧಿ ವಿಚಾರದ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು, ಶಾಸಕರು ದ್ವೀಪದೊಳಗಿನ ದ್ವೀಪ ತಾಲೂಕಿನ ಕಟ್ಟ ಕಡೆಯ ಹಳ್ಳಿಯತ್ತ ಕತ್ತು ತಿರುಗಿಸಿ ಕಾಲು ಹಾಕಿದ್ದಾರೆ ಅಂದರೆ ಪತ್ರಿಕಾ ಮತ್ತು ಮಾಧ್ಯಮ ಪ್ರತಿನಿದಿಗಳಿಗೆ ದ್ವೀಪದ ದನಿಯಾಗಿದ್ದಕ್ಕೆ ಧನ್ಯವಾದಗಳನ್ನು ಹೇಳುತ್ತಾ...
ಈ ಹೊತ್ತಿನಲ್ಲಿ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಬಂದಂತಹ ಕೆಲವು ವಿಷಯಗಳು ಎಷ್ಟು ನೈಜ ಮತ್ತು ಎಷ್ಟು ಸುಳ್ಳು ಎಂಬುದನ್ನು ಅವಲೋಕನ ಮಾಡುವ ಪ್ರಯತ್ನ ಮಾಡಿದ್ದೇನೆ. ಸುದ್ದಿ ಮಾಡುವವರ ಪ್ರಹಸನವೆಲ್ಲ ಮುಗಿದ ಮೇಲೆ ಇದೆ ಊರಿನ ಮಾಜಿ ಮತ್ತು ಹಾಲಿ ಗ್ರಾಮ ಪಂಚಾಯತ್ ಸದಸ್ಯರ ಮಗನಾಗಿ ಈ ಕುರಿತು ಬರೆಯಲೇ ಬೇಡವೇ ಎಂಬ ದಂದ್ವದಲಿದ್ದಾಗ ಅರ್ಧ ಸತ್ಯ ಹಾಗೂ ವಿಷಯ ಪೂರ್ವ ರಾಜಕೀಯ ಕುರಿ ಮತ್ತು ನರಿಗಳ ಮಸಲತ್ತು ಮೋಸದ ಮಾತುಗಳಿಗೆ ಅವರದೇ ದಾರಿಯಲ್ಲಿ ಉತ್ತರ ನೀಡುವ ಸಲುವಾಗಿ ಹಾಗೂ ಯಾವುದು ಸರಿ ಮತ್ತು ತಪ್ಪು ಎನ್ನುವುದ ಕಂಡು ಕೊಳ್ಳುವ ಪ್ರಯತ್ನದಲ್ಲಿ ನಿಮ್ಮ ಮುಂದೆ ಈ ಬರಹ ಇಡುತ್ತಿದ್ದೇನೆ.
ನಿಮಗೆಲ್ಲ ತಿಳಿದಂತೆ ವಿಜಯ ಕರ್ನಾಟ, ಪ್ರಜಾವಾಣಿ TV5 ಮತ್ತು ಇತರೆ ಮಾಧ್ಯಮಗಳು ಸೀರೆ ಮರೆಯಲ್ಲಿ ಶೌಚಾಲಯ ಎಂಬ ವರದಿ ನೀಡಿದ್ದವು.
ಈ ವರದಿಗಳನ್ನು ನಾವು 2 ಬಗೆಯಾಗಿ ವಿಂಗಡಿ ಸಬಹುದು ಮೊದಲನೆಯದು ಅಭಿವೃದ್ಧಿ ವಿಚಾರವಾಗಿ ಎರಡನೆಯದು ರಾಜಕೀಯ ವಿಚಾರವಾಗಿ, ನಾನು ಈ ಲೇಖನದಲ್ಲಿ 2 ವಿಷಯಗಳ ಬಗ್ಗೆಯೂ ಕೂಲಂಕುಶವಾಗಿ ಹೇಳಲಿದ್ದೇನೆ.
ಈಗ
ವಿಷಯಕ್ಕೆ ಬರುವ ಮೊದಲು ತುಮರಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಜನಪರ ಹೋರಾಟಗಾರರಾದ ಜಿ ಟಿ ಸತ್ಯನಾರಾಯಣರವರು ಈ ಬಗ್ಗೆ FACT CHECK ಅಂದರೆ ಪತ್ರಿಕಾ ಮಾಧ್ಯಮಗಳ ವರದಿಯ ಸತ್ಯಾಸತ್ಯತೆಯ ಬಗ್ಗೆ Ground report ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿದ್ದಾರೆ ಮೊದಲಿಗೆ ಆ ವಿಡಿಯೋ ಒಮ್ಮೆ ನೋಡಿಕೊಂಡು ಬರೋಣ..
ವಿಡಿಯೋದ ಕೊನೆಯಲ್ಲಿ ಜಿ ಟಿ ಸರ್ ಹೇಳುವಂತೆ ನಾನು ಪಾಪ ಪ್ರಜ್ಞೆ ಇಂದ ವಿಮುಕ್ತನಾಗಿದ್ದೇನೆ, ಅಂತೆಯೇ ನಮ್ಮ ತಾಯಿ ಸವಿತಾ ಕೂಡ ಜಿ ಟಿ ಸರ್ ಅಧ್ಯಕ್ಷರಾಗಿದ್ದಾಗ ಅವರದೇ ಅವಧಿಯಲ್ಲಿ ಈ ಭಾಗದ ಸದಸ್ಯರಾಗಿದ್ದರು ಹಾಗಾದರೆ ನಮಗೆ ಆ ಪಾಪ ಪ್ರಜ್ಞೆ ಕಾಡುವುದಿಲ್ಲವೇ? ಪ್ರಶ್ನೆ ಹುಟ್ಟುತ್ತದೆ...
ಊರಿನ ಮಗಳಾಗಿ, ಶಾಲೆಯ ವಿದ್ಯಾರ್ಥಿಯಾಗಿ , ಈ ಹಿಂದಿನ ಸದಸ್ಯರಗಿದ್ದಾಗ ನರೇಗಾ ಯೋಜನೆಯಡಿಯಲ್ಲಿ ಸುಸಜ್ಜಿತ ಅಂಗನವಾಡಿ, ವಿಶಾಲ ಆಟದ ಮೈದಾನ ಮತ್ತು ಕುಡಿಯುವ ನೀರಿಗಾಗಿ 2 ಸಿಂಟೆಕ್ಸ್ ಟ್ಯಾಂಕ್ ಮತ್ತು pipeline ವ್ಯವಸ್ಥೆ ಮಾಡಿದ್ದರು. ಅದಕ್ಕಿಂತ ಮೊದಲು ಇದ್ಯಾವುದು ಅಲ್ಲಿಗೆ ಇರಲಿಲ್ಲ ಎಂಬುದು ಕಣ್ಣಿಗೆ ಕಾಣುವಂತ ವಿಚಾರ.
ಹಾಗಾದರೆ ಶೌಚಾಲಯ ಇರಲಿಲ್ಲವಾ ಮಕ್ಕಳು ಸೀರೆ ಮರೆಯಲ್ಲಿ ಶೌಚಾಲಯ ಬಳಸುತ್ತಿದರಾ? ಅಥವಾ ಮಾಧ್ಯಮಗಳು ತಪ್ಪು ವರದಿ ಬಿತ್ತನೆ ಮಾಡಿದವ?
ಹೌದು ಜಿಟಿಯವರು ವಿಡಿಯೋದಲ್ಲಿ ತೋರಿಸಿರುವಂತೆ ಅಲ್ಲಿ ಗಟ್ಟಿ ಮುಟ್ಟಾದ ಶೌಚಾಲಯ ಇತ್ತು ಮತ್ತು ಇದೆ ಆದರೆ ಬಳಸಲು ಯೋಗ್ಯವಾಗಿಲ್ಲ ಏಕೆಂದರೆ ಅದನ್ನು ಶಾಲಾಭಿವೃದ್ಧಿ ಸಮಿತಿ ಸರಿಯಾಗಿ ನಿರ್ವಹಣೆ ಮಾಡಲಿಲ್ಲ ಈಗ ಅಧಿಕಾರಿಗಳು ಭೇಟಿ ನೀಡಿದ ಮೇಲೆ ಪೋಷಕರೇ ತಾತ್ಕಾಲಿಕ ಉಪಯೋಗಕ್ಕೆ ಬರುವಂತೆ ಮಾಡಿದ್ದಾರೆ ಅದು ಸಂತೋಷದ ವಿಚಾರ. ಹಾಗಾದರೆ ಸೀರೆ ಕಟ್ಟಿದ್ದು ಯಾಕೆ? ಸೀರೆ ಕಟ್ಟಿದ್ದು ಯಾಕೆ ಎಂದು ತಿಳಿದು ಬಂದಿಲ್ಲ ಬಹುಷಃ ಇದು ಸಮಸ್ಯೆಯನ್ನು ಗಮನ ಸೆಳೆಯುವ ಪ್ರಯತ್ನ ಎನ್ನೋಣ, ಸೀರೆ ಕಟ್ಟುವ ಕಾಳಜಿ ಇದ್ದವರು ಶೌಚಾಲಯ ರಿಪೇರಿಗೆ ತೋರಿದ್ದರೆ ಸಮಸ್ಯೆ ಎಂದೋ ಬಗೆಹರಿಯುತ್ತಿತ್ತೇನೋ ತಿಳಿದವರೇ ಹೇಳಬೇಕು.
ಅಲ್ಲಿಗೆ ಸೀರೆ ಕಟ್ಟಿದ್ದು ಬರಿ ತೋರಿಕೆಗೆ ಮಾತ್ರ ಎಂದು ತಿಳಿಯುತ್ತದೆ ಹಾಗೂ ಇದರ ಬಗ್ಗೆ EO MEDAM ಸಮಿತಿಯವರಿಗೆ ಕ್ಲಾಸ್ ತೆಗೆದುಕೊಂಡು ಅರ್ಥ ಮಾಡಿಸಿದ್ದಾರೆ. ಈ ವಿಚಾರದಲ್ಲಿ ಮಾಧ್ಯಮಗಳು ಅವಸರದಲ್ಲಿ ಅರ್ಧ ಸತ್ಯ ವರದಿ ಮಾಡಿದವು ಎನ್ನೋಣ, ಆದರೆ ಇದರಿಂದ ಶಾಲೆ ಕಟ್ಟಡ ಮತ್ತು ರಸ್ತೆ ವಿಚಾರಗಳಿಗೆ ಜೀವ ಬಂದಂತಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಇನ್ನೂ ಹೊಸ ಶೌಚಾಲಯದ ವಿಷಯಕ್ಕೆ ಬರೋದಾದರೆ ಹೊಸ ಶೌಚಾಲಯ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಬರುವ ಮುನ್ನವೇ ಮಂಜೂರಾಗಿತ್ತು ಮತ್ತು ಕಾಮಗಾರಿ ಸಹ ಶುರು ಮಾಡಲಾಗಿದೆ ಇದಕ್ಕೆ ಪೂರಕವಾಗಿ ನೀರಿನ ಟ್ಯಾಂಕ್ ನಿರ್ಮಿಸಲು ಪೈಪ್ ಹಾಗೂ ಕಲ್ಲು ಗಳನ್ನು ಈ ಮೊದಲೇ ಇಳಿಸಲಾಗಿತ್ತು ಇದನ್ನು ಈಗಿನ ಅವಧಿಯಲ್ಲಿ ಸದಸ್ಯರಾದ ನಮ್ಮ ತಂದೆ ಶೇಖರಪ್ಪನವರು ಅಧಿಕಾರಿಗಳಿಗೆ ತೋರಿಸುತ್ತಿರುವುದನ್ನು ಈ ಕೆಳಗಿನ ಚಿತ್ರದಲ್ಲಿ ನೀಡಲಾಗಿದೆ.
ಪೈಪ್ ಲೈನ್ ಹಾಗೂ ಸಿಂಟೆಕ್ಸ್ ವ್ಯವಸ್ಥೆ ಯನ್ನು ಈ ಮೊದಲೇ ಮಾಡಲಾಗಿದೆ ಇದನ್ನು ನೀವು ಅಂಗನವಾಡಿ ಮೇಲ್ಚಾವಣಿ ಮೇಲೆ ನೋಡಬಹುದು. ಸದ್ಯ ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿದ್ದು ನೀರಿನ ಸಮಸ್ಯೆ ಸರಿಯಾಗಲಿದೆ.
ಇನ್ನೂ ಶಾಲೆ ಕಟ್ಟಡಕ್ಕೆ ಸಂಬಂಧಿಸಿದಂತೆ BO & EO ಹೊಸ ಕಟ್ಟಡ ಹಾಗೂ ಇತರೆ ಸೌಲಭ್ಯಗಳನ್ನು ಭರವಸೆ ನೀಡಿದ್ದಾರೆ. ಅದರಂತೆ ಹೊಸ ಕಟ್ಟಡ ನಿರ್ಮಾಣವಾದಗ ಶಾಲೆಯ ಮುಂದಿನ ಜಾಗ ತುಂಬಿ ಅಲ್ಲಿಗೆ ಈ ಹಿಂದೆಯೇ ಮಂಜೂರಾದ ಕಂಪೌಂಡ್ ನಿರ್ಮಾಣವಾಗಲಿದೆ.
ಈ ಬರಹದಲ್ಲಿ ತಿಳಿಸಿರುವಂತೆ ಇವಿಷ್ಟು ವರದಿ ಇಂದ ಜನರಿಗೆ ತಿಳಿದ ಮತ್ತು ತಿಳಿಸಲೇಬೇಕಾದ ವಿಚಾರಗಳು. ಇದರಿಂದ ತಿಳಿದ ವಿಚಾರವೇನೆಂದರೆ ಪತ್ರಿಕೆ ಹಾಗೂ ಮಾಧ್ಯಮಗಳು ಕೆಲವೊಂದು ವಿಚಾರದಲ್ಲಿ ತಪ್ಪು ವರದಿ ಪ್ರಕಟಿಸಿದ್ದರು ಅದರಿಂದ ಅನುಕೂಲ ಸಹ ಆಗಿದೆ ಮತ್ತು ಈ ಮೊದಲೇ ಶಾಲೆಯಲ್ಲಿ ಶೌಚಾಲಯ ಇತ್ತು ಹಾಗೂ ಹೊಸ ಶೌಚಾಲಯ ಮತ್ತು ನೀರಿನ ಟ್ಯಾಂಕ್ ಮಂಜೂರಾಗಿ ನಿರ್ಮಾಣ ಹಂತದಲಿದ್ದವು. ಹಾಗೂ ಇತರ ಸಮಸ್ಯೆಗಳು ಅಧಿಕಾರಿಗಳನ್ನ ಜನ ಪ್ರತಿನಿಧಿಗಳನ್ನ ಮುಟ್ಟಿದವು ಎಂಬುದು ನಿಜ.
ಇದಿಷ್ಟು ನಾನು ಭಾಗ 1 ಅಭಿವೃದ್ಧಿ ವಿಚಾರಗಳಿಗೆ ಹೇಳಬೆಕಾಗಿದ್ದ ಮಾತುಗಳು.
-SHASHIKANTH M S (ನಕ್ಷತ್ರಾಕ್ಷ )
Software Engineer @ HCL
ಇನ್ನೂ ಭಾಗ 2 ರಾಜಕೀಯ ಕಾರಣಗಳಿಗೆ ಬರುವಂತವಾದರೆ....



Comments
Post a Comment