Skip to main content

ಸೇತು: ಮುಳುಗಿ ಹೋದ ಮಹಾ ಸಾಮ್ರಾಜ್ಯ

ಮಲೆಯಾಳಂ ಸಿನಿಮಾದಲ್ಲಿ ಒಂದು ದೃಶ್ಯ ಬರುತ್ತದೆ ಅದರಲ್ಲಿ ಮೊಮ್ಮಗ ಅಜ್ಜೀನಾ ಕೇಳ್ತಾನೆ "ಅಜ್ಜೀ ನೀನ್ಯಾಕೆ ದೇವರನ್ನ‌ ನಂಬಲ್ಲ" ಅಂತಾ ಅಜ್ಜೀ ನಕ್ಕು ಹೇಳ್ತಾಳೆ "ಮಗಾ ದೇವರು ಕಲ್ಲಲ್ಲೂ ಇದಾನೆ ಮಣ್ಣಲ್ಲು ಇದಾನೆ ನೀರಲ್ಲು ಇದಾನೆ" 


ಪ್ರತಿಬಾರಿ ಸೇತುವಿಗೆ ಬಂದಾಗಲೆಲ್ಲ ನಾನು ಆ ಮಾತುಗಳನ್ನ ಈ ಸೇತುವಿನ ಕುರಿತು ಹೇಳಿದ್ದೇನೋ ಅನ್ನಿಸಿಬಿಡುತ್ತದೆ. 


 *ಎಲ್ಲಿದೆ ಸೇತು?* 



ಸೇತು ರಾಜ್ಯ ಭೌಗೋಳಿಕವಾಗಿ ಇಂದಿನ ತುಮರಿ ಗ್ರಾಮ ಪಂಚಾಯತ್ ಚಿಮಲೆ ಗ್ರಾಮದ ಏಳಿಗೆ ಮತ್ತು ಕಿರತೋಡಿ ಊರಿನ ಸಮೀಪ ಇದೆ.


ಶಾಸನ ಶಾಸ್ತ್ರಗಳ ಪಿತಾಮಹ ಎಂದು ಕರೆಯಲ್ಪಡುವ ಬಿ.ಎಲ್ ರೈಸ್ ಸೇತು ರಾಜ್ಯವನ್ನು ಸಾಗರದ ನೈರುತ್ಯ ದಿಕ್ಕಿನಲ್ಲಿದೆ ಎಂದು ಎಪಿಗ್ರಾಫಿಯಾ ಕರ್ನಾಟಿಕಾ ವಾಲ್ಯೂಮ್‌ ೮ ರಲ್ಲಿ‌ ದಾಖಲಿಸಿದ್ದಾರೆ.


ಇಂದು ಜುಲೈ ೧೦ ಬಿ.ಎಲ್ ರೈಸ್ ಗತಿಸಿದ ದಿನ , 1875 ರಿಂದ 1900 ನಡುವೆ ಅವರು ಸೇತುವಿನತ್ತಿರ ಬಾರದೆ ಇದ್ದಿದ್ದರೆ  ಸೇತುವನ್ನು ದಾಖಲಿಸದೆ ಇದ್ದಿದ್ದರೆ   ಇತಿಹಾಸದ ಪುಟಗಳಲ್ಲಿ ಸೇತು ನೀರಿನಡಿಯಲ್ಲಿ ಕಲ್ಲಾಗಿ ಮಣ್ಣಾಗಿ ನಾಶಾವಾಗುವದ ನೆನೆಸಲು ಯಾವುದು ಉಳಿದಿರುತ್ತಿರಲಿಲ್ಲ 

ರೈಸ್‌ರವರು ಅಗಲಿ ಇಂದಿಗೆ 99 ವರ್ಷಗಳ ನಂತರ ಸೇತುವಿನ ನೆಲದಿಂದ ಗೌರವಾರ್ಥವಾಗಿ ಈ ಲೇಖನವನ್ನು ದಾಖಲಿಸಿದ್ದೇನೆ ( ಇಲ್ಲಿರುವ  ಯಾವ ಸಾಲುಗಳು ಕಟ್ಟುಕತೆಗಳಲ್ಲ‌ ಇತಿಹಾಸದಲ್ಲಿ‌ ಘಟಿಸಿದ ಕಲ್ಲುಗಳಲ್ಲಿ ಕೆತ್ತಿದ ಜೀವಂತ ಕತೆಗಳು)


*ಅಪರೂಪಕ್ಕೆ ಮಾತ್ರ ದರ್ಶನ‌ ಕೊಡುವ ಸೇತು* 


ಸೇತುನಾಡು, ಸೇತುಪುರ ಎಂದು ಹೆಸರಿರುವ ಸೇತು ವರುಷದ ೩೩೦ ದಿನವು  ಶರಾವತಿಯ ಹಿನ್ನೀರಿನಲ್ಲಿ ಮುಳುಗಿ ಮಳುಗಡೆಯಾದವರ ಆತ್ಮಗಳೊಡನೆ ತನ್ನ ಭವ್ಯ ಇತಿಹಾಸವನ್ನು ತೋಯಿಸುತ್ತಿರುತ್ತದೆ, ಮೇ ಅಂತ್ಯ ಅಥವಾ ಜೂನ್‌ನ ಆರಂಭದಲ್ಲಿ ಮಾತ್ರ ನೀರು ಬಿಟ್ಟಿದ್ದರೆ ತನ್ನ‌ ಅಸ್ತಿತ್ವವನ್ನು ಜಗತ್ತಿಗೆ ತೋರಿಸಲು ಕಾಣಿಸುತ್ತದೆ.


 *ರಾಜವಂಶಗಳ ರಾಜಧಾನಿಯಾಗಿ ಮೆರೆದ ಸೇತು* 


ಸಾಂತಳಿಗೆ ಸಾವಿರದ ಸಾಂತರರು ಪಟ್ಟಿ ಪೊಂಬುಚ್ಚಪುರವಾದ ಹುಂಚವನ್ನು  ಸುಮಾರು ೫೦೦ ವರ್ಷಗಳ ಕಾಲ‌ ರಾಜಧಾನಿಯಾಗಿ ಆಡಳಿತ ನಡೆಸಿದ್ದರು 


ನಂತರ ಅವರು ತಮ್ಮ ರಾಜಧಾನಿಯನ್ನು ೧೧ನೇ ಶತಮಾನದಲ್ಲಿ‌ ಸೇತುವಿಗೆ ಬದಲಾಯಿಸಿದರು.‌


ಸೇತುವನ್ನು ರಾಜ್ಯವನ್ನಾಗಿಸಿ ಸಾಂತರರಷ್ಟೆ ಅಲ್ಲದೆ ೧೨೭೮ರಲ್ಲಿ ಇಮ್ಮಡಿ ಬಲ್ಲಾಳ ದೇವರಸ, ೧೩೦೪ರಲ್ಲಿ ದೆಕ್ಕರಸ, ೧೩೨೦ರಲ್ಲಿ ಕೋಟಿ ನಾಯಕ ಮುಂತಾದ ರಾಜರುಗಳು ರಾಜಧಾನಿಯಾಗಿಸಿಕೊಂಡಿದ್ದರು.


 *ಎಪಿಗ್ರಾಫಿಯಾ ಕರ್ನಾಟಿಕಾ ದಲ್ಲಿ ಸದಾ ಜೀವಂತ ಸೇತು ನಗರ:* 


ಬಹುಶಃ ಸೇತು ಎಂಬ ಅತಿದೊಡ್ಡ ನಗರ ಹಿಂದೆ ಇತ್ತು ಎನ್ನುವುದಕ್ಕೆ ಈಗ ಸೇತುವಿನ ಸುತ್ತಮುತ್ತ ಕಾಣಿಸುವ ನೆಲೆಗಟ್ಟುಗಳು ಕೋಟೆಯ ಆಕಾರ ಅವಶೇಷಗಳಾದ ಜೈನ ಬಸದಿಗಳು ಮಣ್ಣಿನಲ್ಲಿ ಮುರಿದು ಬಿದ್ದು ತುಂಡು ತುಮಡುಗಳಾದ ಬಸವಣ್ಣ ಮೂರ್ತಿ ಶಿವಲಿಂಗ( ಸೋಮನಾಥೇಶ್ವರ) ದಾನ ಧರ್ಮಗಳ ಕೊಡುಗೆಗಳ ಶಿಲಾ ಶಾಸನಗಳು ಯುದ್ದಗಳಲ್ಲಿ ಅರಿ ಸೈನ್ಯದ ತಲೆ ಕಡಿದು ಮಣ್ಣಲ್ಲಿ ಮಣ್ಣಾದ ಸೂರ್ಯ ಚಂದ್ರರಿರುವವರೆಗು ಶಾಶ್ವತವೆಂಬ ವೀರರ ಸ್ವರ್ಗ ಸೇರಿದ   ವೀರಗಲ್ಲುಗಳು ಮುರಿದು ಬಿದ್ದ ಪ್ರತಿಮೆಗಳು ನೂರಾರು ನಾಗರ ಕಲ್ಲುಗಳು  ನಶಿಸಿ ಹೋದ ಶಿಲಾ ಶಾಸನಗಳು ಮುರಿದು ಬಿದ್ದ ವೀರಗಲ್ಲುಗಳು ತಮ್ಮ ಅಂದಿನ ಭವ್ಯ ದಿನಗಳನ್ನು ಸಾರಿ ಸಾರಿ ಹೇಳುತ್ತವೆ. 


೧೮೦೦- ೧೯೦೦ ರಲ್ಲಿ ಬಿ ಎಲ್ ರೈಸ್ ರವರು ತಮ್ಮ ಪುಸ್ತಕಗಳಲ್ಲಿ ಸೇತುವಿನ ಕುರಿತು  ಶಾಸನಗಳನ್ನು ದಾಕಲಿಸದೆ ಹೋಗಿದ್ದರೆ ಹೀಗೊಂದು ರಾಜಧಾನಿ ಇಲ್ಲಿತ್ತು ಎಂಬುದನ್ನ ಹೇಳದೆ ಹೋಗಿದ್ದರೆ ಇಲ್ಲೊಂದು ನೂರಾರು ವರ್ಷ ಸಾಮ್ರಾಜ್ಯವಾಗಿ ಮೆರೆದ ಸೇತು ಎಂಬುದಿತ್ತು ಎಂದರೆ ಯಾರು  ನಂಬಲೆ ಇರುತ್ತಿರಲಿಲ್ಲವೇನೋ...


 *ಸೇತುವನ್ನು ತಲುಪಲೇ ಇಲ್ಲ ಶಾಸನಶಾಸ್ತ್ರ ಪಿತಾಮಹ* ?


ರೈಸ್ ರವರು ಸೇತುವಿನ ಕುರಿತು ತಮಗೆ ದೊರಕಿದ ಶಾಸನಗಳಲ್ಲಿ ಉಲ್ಲೇಕಿಸಿದರು ಅವರು ಸೇತುವಿನ ನೆಲದಲ್ಲಿ ನಿಂತು ಯಾವೋಂದನ್ನು ದಾಖಲಿಸಿಲ್ಲ ಈ ಸೇತುವಿಗೆ ಅವರು ಬೇಟಿ ನೀಡಿಲ್ಲ( ಬಂದಿದ್ದರು ಶಾಸನಗಳ ದಾಖಲಿಸುವ ಅವರ ಪೇಪರ್‌ನ ಅಚ್ಚು ನಾಶವಯಿತೇನೋ ಅಥವಾ ಬೇರೇನೋ ಆಗಿರಬಹುದು ಯಾಕೆಂದರೆ ಸೇತುರಾಜ್ಯ ಸಾಗರ ನೈರುತ್ಯ ದಿಕ್ಕಿಗಿದೆ ಎಂದು ಅವರೆ ಹೇಳಿದ್ದಾರೆ) ಎಂದು ಕಾಣ ಬರುತ್ತದೆ ಅವರು ಒಮ್ಮೆ ಈ ನಗರಕ್ಕೆ ಬಂದಿದ್ದರೆ ಬಹುಶಃ ಇಂದು ಸೇತುವಿನ ಮಣ್ಣಲ್ಲಿ ಮರೆಯಾದ ಶಾಸನಗಳು ವೀರಗಲ್ಲುಗಳ ಅಳಿದು ಹೋದ ಇತಿಹಾಸ ದಾಖಲಾಗುತಿತ್ತು.

ಅವರು ದಾಖಲಿಸಿದ ಸೇತುವಿನ  ಕುರಿತ ಎಲ್ಲ ಶಾಸನಗಳು ಸೇತುವಿನ ಭೂಮಿಯಿಂದ ದೂರದಲ್ಲಿ ಸೇತುಪುರದ ಕುರಿತು ಸಿಕ್ಕ ಶಾಸನಗಳು!!!

ಅಂದಿನ ನಗರ, ಸಾಗರ ಮತ್ತು ಸೊರಬ ಮತ್ತು ಶಿಕಾರಿಪುರ ತಾಲ್ಲೂಕಿನಲ್ಲಿ ಸಿಕ್ಕ ಸೇತುವಿನ ಕುರಿತಾದ ಶಾಸನಗಳೆ ಇಂದು ನಮಗೆ ಉಳಿದು ಕೊಂಡಿರುವುದು.


*ಸೇತುವಿನಲ್ಲಿವೆ ಇಂದಿಗು ಓದಬಹುದಾದ ದಾನ ಶಾಸನ ಮತ್ತು ವೀರಗಲ್ಲು* 


ರೈಸ್‌ರವರು ಸೇತುನಾಡಿಗೆ ಬಂದಿದ್ದರೆ ಖಂಡಿತವಾಗಿ ಇಲ್ಲಿರುವ ಶಾಸನಗಳು ಅವರ ಪುಸ್ತಕದಲ್ಲಿ ದಾಖಲಾಗಿರುತ್ತಿದ್ದವು. 

ಸೇತುವಿನ ಮುರಿದು ಬಿದ್ದ ಜೈನ ಬಸದಿಯ ನೆಲಗಟ್ಟು ಮತ್ತು ದೇವಸ್ತಾನದ ನೆಲಗಟ್ಟಿನ ಬಳಿ ಇಂದಿಗು ಕೆಲವು ಶಾಸನಗಳು ವೀರಗಲ್ಲುಗಳು ಕಾಣ ಸಿಗುತ್ತವೆ ಅದರಲ್ಲಿ ಒಂದು ಶಾಸನ ಅಲ್ಲಲ್ಲಿ ಮುರಿದು ಹೋದರು ಹೆಚ್ಚು ಭಾಗ ಓದಲು ಆಗುತ್ತದೆ, 


ಇನ್ನುಳಿದ ಶಾಸನಗಳು ಮುರಿದು ಬಿದ್ದಿವೆ ಅವುಗಳ ಮೇಲೆ ಒಂದೆರಡು ಸಾಲು ಅರ್ದ ತುಂಡಾಗಿದ್ದು ಕೆಲವು ಪದ ಓದಬಹುದು 


ಒಂದು ವೀರಗಲ್ಲಿನ ಕೆಲವು ಸಾಲುಗಳನ್ನು ಓದಬಹುದು ಹೆಚ್ಚು ಭಾಗ ಓದಲಾಗದ ರೀತಿ ಇದೆ.


 *ಶಾಸನದ ಸಾರಾಂಶ ಹೀಗಿದೆ.* 


ಇದು ಸಾಂತರರ ರಾಜ ಜಗದೇವರಸ/ಜಗದೇವ ಪಾಂಡ್ಯನ ಕಾಲದ ಶಾಸನವಾಗಿದೆ ಇದು ಆತನ ಆಳ್ವಿಕೆಯಲ್ಲಿ ಜೈನ ಗಣಮಠಕ್ಕೆ ವ್ಯಕ್ತಿಗೆ ದಾನ ಕೊಟ್ಟ ಭೂಮಿಯ ಕುರಿತಾಗಿದೆ

ಶಾಸನದ ಮೊದಲರ್ಧ ಜಗದೇವ ಪಾಂಡ್ಯ‌ರಾಜನ ಸಾಹಸ ಬಿರುದುಗಳನ್ನು  ಬರೆಯಲಾಗಿದೆ

ಶಾಸನದ ಸಂಪೂರ್ಣ ವಿವರ ಹೀಗಿದೆ:


----------

ಶರಾವತಿ ಹಿನ್ನೀರಿನ ಶಾಸನಗಳು-ಕಿರೆತೋಡಿ, ನಾಗರವಳ್ಳಿ, ಸಾಗರ ತಾಲ್ಲೂಕು


ಮಂಡಳೇಶ್ವರ ನುತ್ತರಮಧು(ರಾಧೀಶ್ವರ) -


ವಾನರಧ್ವಜ ಮಿಗದಾ


ಕಾಮತರಾಧಿತ್ಯ ಸಕಳಜನಸ್ತುತ್ಯ ನೀತಿಶಾಸ್ತ್ರ


ನಾರಯಣಂ ಪಾರಯಣ


ಸಾಧಕರುಮಪ್ಪ ಶ್ರೀಮತ್ರಿಭುವನಮಲ್ಲ


ಸಾಂತಳಿಗೆ ಸಾಸರಿಮುರಮಂ

-ಅನಾಕ್ಷತ್ರಿಯೋತ್ತಮ ಕಾಮದೇವ ಬಿಜ್ಜತಿ (ದೇವಿ)


30


.ಯಂದಿರು ಮಂಡಳಿಕ ತಳಪ್ರಹಾರಿ ಬಿಂಣದೇವ ಪ್ರತಾಪ ಸಾನ್ತ


ಕುಮಾರ ಮಂಡಳೀಕ ಜಗದೇವಪಾಂಡ್ಯನ ಸಾಹಸ


.ಗುಗಳ ಕೋನೆರೂಲರಾಕ್ಷ ಸಾಕ್ಷ್ಯಣಕುಕ್ಷಿಸ್ತಾರಾತಾನಿಕಮಾನಾವಳಿಗೆ


೧೩. ಶವಾಂಕರಿ ವರ ವಸುಮತಿಯಂ ಶ್ರೀ ಜಗದೇವಪಾಂಡ್ಯ ಗೋರಂತಾತಿ ತುರಕ್ಷಕೆ ನಶ್ವತಿವೀರ


ವನಪಾಳಕ ಕುಳವನ ದಾವಾನಳಂ ದೈರಿ ಸೈನ್ಯ ಇ ದ್ವಾಂತಾರಳಿವಿಳನತರು


೧೫ - ನತೋಳಳು ದರೆಯಂ ಗೌರವ್ಯದಿಂದಿ ಕಸಿದ ನಮಿತಾಂಣಾದಿಯಂ ..


ಶಿಂಗಾರ ಸಂಹಾರಕನೆನಿಸಿ ಜಗದ್ದೇವಪಾಂಡ್ಯ ಕ್ಷಿತೀಶಂಪಾರಾವಾರ


೧೭ ...ಯನದಟವಂ ತಾಳಜಂ ಮಾಡಿ ವೀರೋತ್ಪರಮಂ ವಿಕ್ರಾಂತದಿಂದೇಳಿಸುವ ವಿನತನು


ರದಿಂ ಕೊಂಡಾಡುತಿಪ್ಪಂ ನಿಪ್ರಕುಳತಿಳಕಂ ಶ್ರಿಜಗದ್ದೇವ ಪಾಂಡ್ಯಂ


OF .ದಿಂ ಹೂಕ್ಕು ಕೊಂಡುದುಂಬತೋರ್ಪರ್ದ್ದದ ತೊದೊಡ್ಡ ಕೊಸ ಪ್ರಬಳ ಸಿಖಿಯಿ


ಗೊಟ್ಟುದದೊಂಡೊಡ್ಡಯ್ಯಬಂದೊಡ್ಡಿದ ೯ಕ್ಕೆಳಿ) ನಿಪರೊಡಾಡುರ್ಗೆದೊಡೆ ಸಂಗ್ರಾ


ಕೊಂದಂ ನಿಪ್ರಜ ರಳನನ್ತಿ ಜಗದ್ದೇವಪಾಂಡ್ಯಂ ಬಿರುದ ಕಸು


ಮಿ ಜಗದೇವಪಾಂಡ್ಯನಂ ಸರಣೇನ ಬದ್ದಡಾನರಿ/ಕೆಯ ನಾಂತರ ಮೂಳೆಯ ಗರುಳ‌ ಮರುಳೆಮಾಂತತಿ ಬಳ್ಗುಳಗ ಸಾಕಿಯ  ಶ್ರೀರ್ಗೆಶೋಣಿತನರಿಗೆ ನರಕಪಾಳ ದುಡಿಕಂ

೨೪ಸೋವತಂದಿದಂ ಮಂದಾಕಿಂನ್ಯ ಮತಿಚಮೋಕ್ತಿಕ ಸಂನಿಹಾರಶುಬ್ರಾ ಬ್ರ ವಾಕುಂದೇಂದು ದಳಮಾಳತಿ.


೨೫ ರವಿರ ಶ್ರೀ ದಿಪ್ತಿ ಮಾಳಾವಳಿ ಸಂದಾಹಾಕ್ಷೋಣಿಯೊಗಿ ವೀರ ಜಗದೇವ ಪಿಡಚಂಚದ್ಯರಂಬೋ...


೨೬ ಶೆಯೊಳು ನೆಲೆಸಿದತ್ತಾತಂಬದಿಂದಿಂಬಿನೊಳ್" ಇದೆ ಕಲ್ಕಕರ್ಪುರ ಕಂಣು ಪ್ರಕರಮಾದ ವಿಕೋ


೨೬ ದಲ್ಲತಿದು ಮೇಣಾಕಾಶಗಂಗಾ ಬಹಳಲಹರಿಕಾಬಳಕಟ್ಟೆ, ರ್ಬೆತ್ತ, ಮುಂತಾನಲ್ಲಿ


೨೮ ಮಳೆದು ಯೆಂಬಂದದಿದಂಪಾದಳಿಂ ಬೆಂಕೊಟ್ಟೆಪೆ ತಂಯಮಳಮಾಯಿಶಂ ಶ್ರೀ ಜಗದೇವನ್ರಿಪಂ।


ಗರುಡಪಾಂಡ್ಯ ಮಹಾಮಂಡಳೇಶ್ವರನ ಪಾದಪದ್ಯೋಪಜೀವಿಯಪ್ಪ

ಸೋವಿಸೆಟ್ಟಿಯಾನ್ವಯವೆಂ

೩೦ 8ನೇ ಸೆಟ್ಟಿಯಸಾಹಣಿ ಗಂಗ ಸಿರಿಯಾದೇವಿಗಮಪಾರವೀರವಿಳಾಸಂ ಸಿರಿ


ವನ್ತೆ ಪುಟ್ಟಿದ


೩೧ ನುರು ಪುಣ್ಯನೆನಿಪ್ಪ ತಲ್ಲುಹರಿರಾಹುತ್ತಂ ಪಳಿತಂತಲ್ಲುಹಾರಾಹುತಗೆ ರಮಣಿ


೩೨. ಸೋವಬ್ಬೆಗಂ ಕೊ ಹಿರಿಯುಂಭಕ್ತಿಯೊಳಶರ್ನೆಂ ಗಣಮಠತಾನೆಂಬಿನಂ ಪುಟ್ಟದಾಬ್ಬರದಿಂ


ದಾವರ ಸಂಗಡ ಕುಳುಕ ನಾಗುತ್ತಿರಲು ಮೆರೆದಂಭಕ್ತ 


೩೪ ಮಮಂ ಸೋಮಣಂ : ಗಣ ಮಠದ ನಯ ಗುಣಮ ಬಣಿ... ನರೆಗುಂ ವೆತ


೩೫ ವಣಿಕ ಕನಳಿಸುವಳಿ ವೆಡೆಗಣಿ ಳೇನೆಂದರೆ ಸ... ನೆರೆ ದಕ್ಷಿಣ ಚಕ್ರ


೩೬ ಭಯಜ್ಞರಂಗೊಳಲ ಪಾ.. ರ ಪ್ರಮುಖ ನಾ


ಸಿವಿ ಯೊಳಗಾ ಕೆಲ ಸಕಳ ಗಣನಾದರಂ ಸದಿಂ


ಮಠಾಗ್ರ ೩೮ ಣಿ ಸೋಮನೊಳಿಗೆ ಸಂತತಂಕ ಮಾದಿರಾಜನ ಬಲ್ಲಾಳ್ತ ಸುವನ


೩೯ ಗಳುತಳ್ಳಲಿ ಸದಿಕ್ಕು .. ಣಿ ವೈಭವಗಳಿವೆಗಳುಳಾವನಿ ಸ್ವಸ್ತಿ ಶ್ರೀ ಮತು ಜಗ


೪೦ ಗದ್ದೇವಪಾಂಡ್ಯಂ ಗಣಮಠದ ಸೋವಿಸೆಟ್ಟಿಗೆ ಕರಉನಾಡ ಮೂಲ ಹಳ್ಳಿಯಲು ಮೂರು ಸಿರು


೪೧ ಹು ಕೆಯ್ಯಂ ಕೊಟ್ಟನವಾಉದೆಂದೊಡೆ ಹಿರಿಯ ಕೆಯಿ ಬಿದಿರ ಕೆಯಿ ಗೆರ ಸಿಂನ್ನೆ ಎಡೆ


೪೨ ಯ ಸಿಂನ್ನೆ ಬಂಮದೇವನ ಮನೆಯ ಮುಂತಣ ಹೊಂನಸಿನ ಮಕ್ಕಿ = ಕಂಡುಗ ವದ


೪೩ ಕೆ ಬಂದ ಬಳಿ ಮಂಣ್ಣು ಸಹಿತವಾಗಿ ಕರಉನಾಡು ಹೊಸನಾಡು ಸೇತುವಿನ ನಖರಮುಂ


೪೪ ಮುರಿದಂಡ ವಿದಳ ಅಂಗಡಿಯ ಮನೆ ಯಿಂತಿ ವೆಲ್ಲಮಂ ಪೂರ್ವ್ವ ಅದರಾಹಿ ಇಲ್ಲದೆ ಸರ್ವ ಬಾ


೪೫ ಧಾ ಪರಿಹಾರವಾಗಿ ಜಗದೇವಮ್ ಕೊಟ್ಟ ನಿನ್ನಿ ಶಾಸನಮುಮಂ ಬಿಟ್ಟ ವಿತ್ತಿಯಂ ನಳಿದ


೪೬ ವಂ ಪ(ಂಚ) ಮಹಾಪಾತಕಂ ನರಕಕ್ಕಿಳಿಗುಮವೇಶಂ ॥ ಶ್ರೀ ಜಗದೇವಪಾಂಡ್ಯ ನರಪಾ


೪೭ ೪ ಶೀಖಾಮಣಿ ಭೂರಿವಿಠಲಕ್ಷ್ಮಿ ಜನತಾತುಳ ಪ್ರಬಳ.. ಳದಿಂ ಸ್ಥಿರರಾಜ್ಯಭೂಮಿ


೪೮ ರಾರಾದಿರ್ಸಿತಿರ್ಪನಂಗಣ ಮಠಾಗ್ರಣಿ ಸೋಮವಣಿಗರಂ ಕೂತ್ತೊಜೆಯೊಳಿತ್ತ


೪೯ ಸುತ್ತಮ ಪ್ರತಿಯನಕ್ಕೆ ಶಶಾಂಕರುಳ್ಳಿನಂ ॥ ಮುಂನಂ ಶ್ರೀ ಸಂಗಮಶಂ ಕೋಟಿಪಡೆದನ


೫೦ ನತಿ ಪ್ರೇಮ ಪ್ರಶಾದೊತ್ಯಂನ ಶ್ರೀಯಂ ಜಗಂ ಬಣ್ಣಿಸೆ ಬಸವಣ ದಂಡಾದಿಪಂ ಭಕ್ತ ಹಿಸಂ


೫೧ ಸಂಪನ್ನರು ಶ್ರೀ ಸೋಮನಾಥಂ ಕೋಟಿಗಣಮಠ ಸವಿತ್ತಿಯಂ ಪತ್ತನಾಸಂನ್ನಂ ಶ್ರೀ ಸೋಮನಾ


ಶರವರಣ ಪಂಕಜ


ಹುಟ್ಟಿದ ಸೋಮೋಜ


೫೪ ನ ಮಗಂ ಮಲ್ಲಿಕಾರ್ಜುದೇವರ ಪದಾರಾಧಕಂ ವೀರ ಮ


೫೫ ಹಕಾಳದೇವನ ಶಿಶ್ಯಂ ಸಕಳಮಾದೇಶ್ವರರ ಡಿಂಗರಿಗಂ ರೂ


೫೬ ವಾರಿ ದುಗ್ಗಾಚಾರಿಯ ಬೆಸ ॥


 _ದಾನ ಶಾಸನ ಮುಗಿಯಿತು_ 



 *ವೀರಗಲ್ಲು ಮೊದಲ ಪಟ್ಟಿಕೆ* 


೧ ಶ್ರೀ ಸ್ವಸ್ತಿ ಸಮಸ್ತಿ ಪ್ರಸಸ್ತಿ ಸಹಿತಂ ಶ್ರೀಮನುಮಹಾಪ್ರದಾನಂ ಅದಿಯ


ರಾದಿತ್ಯನು ಮಾರ್ತಂಡನುಂ ಪರನಾರಿ ಸಹೋದರಂ ಮಾವನ


೩ ಣಂ ಶ್ರೀ ಬಿಲ್ಲೇಶ್ವರ ದೇವರ ದಿವ್ಯ ಶ್ರೀಪಾದಪದ್ಧಾರಾದಕಂ ಪರಬಳಸಾಧಕನು


೪ ಪ್ಪ ಕುಮಾ (ದೇವರು ಸುಖಸಂಕಥಾವಿನೋದದಿಂ ರಾಜ್ಯ


ಎರಡನೆಯ ಪಟ್ಟಿಕೆ


೫ ಗೈಯುತ್ತಮಿರಲು ಸಕವರುಷ (೧ . ೨) ಸಂವತ್ಸರದ


a


ನಾಡಮಂಡಲ ವೆಗ್ಗಡೆ


5


ಮೂರನೆಯ ಪಟ್ಟಿಕೆ


ಇರಿದು ಸುರ ಲೋಕ ಪ್ರಾಪ್ತನಾದ ಮಾಡಿ


ದ ಕಲಿಸಿಯ


ಮಂಗಳ ಮಹಾ ಶ್ರೀ ಶ್ರೀ


------------

*ಶಾಸನ ವಿವರಣೆ* 


ಈ ಶಾಸನ‌ದ ಕಾಲ‌ ಸುಮಾರು 1140 ರಿಂದ 1180 ರ ನಡುವೆ ನಡೆದಿದ್ದಾಗಿದ್ದು ಸಾಂತರರ‌ ಜಗದೇವ ಪಾಂಡ್ಯ ಚಾಲುಕ್ಯ ರಾಜರ ಮಹಾಮಂಡಳೇಶ್ವರನಾಗಿರುತ್ತಾನೆ ಮತ್ತು ಸೇತುವಿನಿಂದ ರಾಜ್ಯಭಾರ ಮಾಡುತ್ತಿರುತ್ತಾನೆ

ಶಾಸನ ಮೊದಲರ್ಧ ಸಾಂತರರ ಬಿರುದು ಬಾವಲಿಗಳು ಸಾಹಸಗಳು ಮತ್ತು ಜಗದೇವ ಪಾಂಡ್ಯನ ತಂದೆ ತಾಯಿಗಳಾದ ಕಾಮದೇವ ಮತ್ತು ಬಿಜ್ಜಳದೇವಿಯನ್ನು ಸ್ಮರಿಸಲಾಗಿದೆ


ನಂತರದ ಸಾಲುಗಳು ಸೇತುವಿನಲಿದ್ದ ಗಣಮಠದ ನಿದರ್ಶನದ ಕುರಿತು ಆಗಿದೆ 

ಕೊನೆಯಲ್ಲಿ‌ ಜಗದೇವನು ಗಣಮಠದ‌ ಸೋವಿಸೆಟ್ಟಿಗೆ ಕರುವುನಾಡ ಅಂದರೆ ಕರೂರಿನ ಮೂಲ ಹಳ್ಳಿಗಳಲ್ಲಿ ಮೂರು ಸಿರುಹು(ಅಂದಿನ ಅಳತೆ ಪದ್ದತಿಯಂತೆ) ಗದ್ದೆ ಜಮೀನನ್ನು ದಾನವಾಗಿ ನೀಡುತ್ತಾನೆ ಅವು ಯಾವುದೆಂದರೆ ಹಿರಿಯಕೆಯ್ಯಿ(ಹಿರಿಗದ್ದೆ), ಬಿದರಿಕೆಯ್ಯಿ(ಬಿದಿರಗದ್ದೆ) ಗೇರು ಸಿನ್ನೆ ಎಡೆಯ ಸಿನ್ನೆ ಮತ್ತು ಬಮ್ಮದೇವನ‌ ಮನೆಯ ಮುಂದಿನ‌ ಹೊನಸಿನಮಕ್ಕಿ ಕಂಡುಗ ಅಲ್ಲಿಯ ವರೆಗೆ ಸೇತುವಿನ ಕರೂರಿನ ಹೊಸನಾಡಿನ ವರ್ತಕರ ಮುಂದೆ ಇವೆಲ್ಲವನ್ನು ದಾನವಾಗಿ ಕೊಟ್ಟನು  ಮತ್ತು ಈ ದಾನದ ಭೂಮಿಗೆ ಯಾವುದೆ ಕರತೆರಿಗೆ ಇಲ್ಲ ಹಾಗು ಈ ದಾನವನ್ನು ಕಿತ್ತು ಕೊಂಡವನು ಪಂಚಮಹಾಪಾತಕನಾಗಿ ನರಕಕ್ಕೆ ಹೋಗುತ್ತಾನೆ ಎಂದು ಶಾಪವಚನವನ್ನು ಬರೆಸಿದ್ದಾನೆ.

ಮತ್ತು ಈ ಶಾಸನವನ್ನು ಕೆತ್ತಿದವನು ಸೊಮಜನ ಮಗ ಮಲ್ಲಿಕಾರ್ಜುನ ದೇವರ ಪಾದಾರಾಧಕ ವೀರ ಮಹಾಕಾಳನ ಶಿಶ್ಯನಾದ ದುಗ್ಗಾಚಾರಿ ಶಾಸವನ್ನು ಬರೆದನು ಎಂಬಲ್ಲಿಗೆ ಮುಗಿಯುತ್ತದೆ


ಈ ಶಾಸನದಲ್ಲಿ ದಂಡನಾಯಕರು ಸೇತುವಿನ ಗಣಮಠದ ಭಕ್ತರು ಎದೆಲ್ಲದರ ವಿವರಣೆ ಕೂಡ ಇದೆ 

ಈ ಶಾಸನದ‌ ಮುಕ್ಯ ಪಾಠವನ್ನು ಮಾತ್ರ ನಿಮ್ಮ ಜೊತೆಗೆ ಹಂಚಿದ್ದೇನೆ.


 *ವೀರಗಲ್ಲು ಶಾಸನ :* 


ಇ ಶಾಸನ‌ 1200-1300 ರ ನಡುವಿನದಾಗಿದ್ದು ದೀವರ ವೀರನೊಬ್ಬನು ಸೇತುವಿನ ರಾಜ್ಯ ರಕ್ಷಣೆಗೆ ಹೋರಾಡಿ ವೀರ ಸ್ವರ್ಗವನ್ನು ಸೇರಿದ ಕುರಿತಾಗಿದೆ.

ವೀರಗಲ್ಲಿನಲ್ಲಿ ವೀರನು ಶತ್ರುಗಳೊಡನೆ ವೀರಾವೇಶದಿಂದ ಹೋರಾಡುವುದು , ಶತೃಗಳಿಂದ ರಾಜ್ಯವನ್ನು ಕಾಪಾಡಿ ವೀರಮರಣವನ್ನು ಹೊಂದುವುದು ಹಾಗು ಆ ನಂತರ ಸ್ವರ್ಗದಿಂದ ದೇವತೆಯರು ಬಂದು ಆತನನ್ನು ಕರೆದೊಯ್ಯುವುದು ಮತ್ತು ವೀರನು ಸ್ವರ್ಗದಲ್ಲಿ‌ ಶಿವನ ಪೂಜೆಯನ್ನ ಮಾಡುವುದನ್ನು ಸುಂದರವಾಗಿ ಕೆತ್ತಲಾಗಿದೆ.


 *ನನಸಾಗಲಿದೆಯ "ಸೇತು"ವೆಯ ಕನಸು:* 


ಅಂದಿನ‌ ಸೇತು ರಾಜ್ಯ ಇಂದು ಶರಾವತಿಯ ಒಡಲಲ್ಲಿ‌ಮುಳುಗಿದೆ

ಬರೀ ಸೇತುವಷ್ಟೇ ಅಲ್ಲ ಸೇತುವಿನ ಸುತ್ತಲಿರುವ ಊರುಗಳು ಸಹ ಜಲಬಂಧನ ಗೊಂಡಿವೆ, ಒಂದು ಕಾಲದಲ್ಲಿ ರಾಜಧಾನಿಯಾಗಿ ಮೆರೆದ ಈ ಊರಿನ‌(ಚಿಮಲೆ ಬರುವೆ ತಲಗೋಡು) ಜನರು  ತಮ್ಮ‌ ಹಕ್ಕುಗಳನ್ನು ಪಡೆಯಲು ದಿನನಿತ್ಯದ ಕಛೇರಿ ಕೆಲಸಗಳಿಗೆ, ಆಸ್ಪತ್ರೆಗೆ , ಪಡಿತರ ದಿನಸಿ ಸಾಮಾನುಗಳ ಅವಶ್ಯಕತೆಗೆ ತಮ್ಮದೇ ಗ್ರಾಮ ಪಂಚಾಯಿತಿ ಆದ ತುಮರಿಯನ್ನು ತಲುಪಲು 35km ಸುತ್ತು ಹಾಕಿ ಹೋಗಬೇಕಾದ ಅನಿವಾರ್ಯತೆ ಇದೆ, ಇನ್ನು ತಾಲ್ಲೂಕು ಕಛೇರಿ ಸುಮಾರು‌ 75km ಗಳನ್ನು ಕ್ರಮಿಸಿ ಹೋಗಬೇಕು ಅವತ್ತಿಗೆ ಕೆಲಸ ಆದರೆ ಆಯಿತು ಇಲ್ಲದಿದ್ದರೆ ಇಲ್ಲ ಇದು ದಿನಂಪ್ರತಿ ಕೂಲಿ ಮಾಡುವ ಕೃಷಿ ಮಾಡುವ ವಿಧ್ಯಾರ್ಥಿಗಳ , ರೋಗಿಗಳ ಗೋಳು ಅಲ್ಲ‌ ಮುಳುಗಿಸಿಕೊಂಡವರಿಗೆ ದಕ್ಕಿದ ಶಾಪ.


ಇತ್ತೀಚಿಗೆ "ಸಂಪರ್ಕ ಸೇತು ಸಮಿತಿ ಈವಳ್ಳಿ ಹೆಬ್ಬಿಗೆ ಮುಪ್ಪಾನೆ" ಹೋರಾಟದ‌ ಸಮಿತಿಯೊಂದು ರಚನೆ ಆಗಿದೆ,

ಇದರಿಂದ ಅತಿ ಹತ್ತಿರದ ಪ್ರೇಕ್ಷಣೀಯ ಸ್ತಳಗಳಾದ ಜೋಗ ಸಿಗಂದೂರು ಕೊಲ್ಲೂರು ಇವುಗಳನ್ನು ಅತಿ ಹತ್ತಿರದಿಂದ ಸಂಪರ್ಕಿಸಲು ಬೇಕಾದ ಸೇತುವೆಗಳ ರಸ್ತೆಗಳ ನಿರ್ಮಾಣದ ಕುರಿತು ರಚನೆ ಆಗಿದೆ. ಇದು ಕಾರ್ಯಗತಕ್ಕೆ ಬಂದರೆ ಮುಳುಗಡೆ ನಾಡಿಗೆ ಆದಷ್ಟು ಅನುಕೂಲ ಆಗುತ್ತದೆ ಈ ಬಗ್ಗೆ ಶಿವಮೊಗ್ಗ ಎಂಪಿಯವರಾದ ರಾಘವೇಂದ್ರ ಅವರಿಗು ಮನವಿ ಸಲ್ಲಿಸಲಾಗಿದೆ( ಬಿವೈ ರಾಘವೇಂದ್ರರವರು ಗಡ್ಕರಿಗೆ ನೀಡಿದ ಮನವಿಯಲ್ಲಿ "ಈವಳ್ಳಿ ಸೇತುವೆ" ಯ ಉಲ್ಲೇಖ ಇಲ್ಲದಿರುವ ಬಗ್ಗೆ ಇನ್ನು ಸ್ಪಷ್ಟತೆ ನಿರೀಕ್ಷಿಸಲಾಗಿದೆ)


 ಕುಶಿಯ ವಿಷಯ ಏನೆಂದರೆ ಅವರು ಅರಿವಿಲ್ಲದೆ/ಇದ್ದೊ ಸಮಿತಿಗೆ ಇಟ್ಟ ಹೆಸರು "ಸಂಪರ್ಕ 'ಸೇತು' ಸಮಿತಿ ಈವಳ್ಳಿ ಹೆಬ್ಬಿಗೆ ಮುಪ್ಪಾನೆ" 


ಒಂದು ಕಾಲದಲ್ಲಿ  ಇವುಗಳೆಲ್ಲ 

ಸೇತು ರಾಜ್ಯದ ನೇರ ಆಳ್ವಕೆಗೆ ಒಳಪಟ್ಟವವು.


ಈವಳ್ಳಿ ಹೊಳೆ ಸೇತುನಾಡಿಗೆ ಹೊಂದಿಕೊಂಡಂತೆ ೨ ಕಿಮಿ ಆಸುಪಾಸಿನಲ್ಲಿದೆ ಇಲ್ಲಿ ಸೇತುವೆಯಾದರೇ ಸೇತುವಿನ ಸುತ್ತಲ ಗ್ರಾಮಗಳಾದ ಬರುವೆ ಏಳಿಗೆ ಕಿರತೋಡಿ ಜನರು ಬರಿ ಹತ್ತು ಕಿಮಿ ಕ್ರಮಿಸಿ ತಮ್ಮ ಗ್ರಾಮ ಪಂಚಾಯಿತಿ ತಲುಪಬಹುದು .

ಸೇತುವೆ ಆಗಲಿ ಎಂಬ ಕನಸು ಇಲ್ಲಿಯ ಜನರದ್ದು ಆಳುವ ಸರ್ಕಾರಗಳಿಗೆ ಜನಪ್ರತಿನಿದಿಗಳಿಗೆ ಅಳಿದು ಹೋಗಿರುವ ಸೇತುವಿನ ಇತಿಹಾಸ ಗೊತ್ತಿಲ್ಲ ಆದರೆ ಸೇತುವೆಯ ಕನಸು ಕಟ್ಟಿಕೊಂಡಿರುವ ಸೇತುನಾಡಿನ ಬಳಿಯ ಈವಳ್ಳಿ‌ಹೊಳೆಗೆ ಒಂದು ಸೇತುವೆಯನ್ನ  ಕೊಟ್ಟು ಇಲ್ಲಿನ ಜನರ ಕಷ್ಟಗಳಿಗೆ ಸ್ಪಂದಿಸಲಿ ವಿಮೋಚನೆ ಗೊಳಿಸಲಿ ಎಂಬುದು ಆಶಯ.



 *ನಿರೀಕ್ಷಿಸಿ ಭಾಗ ಎರಡರಲ್ಲಿ  - ಸೇತು ರಾಜ್ಯದ ಎಲ್ಲಾ ಶಾಸನಗಳು* 


 _ಸೇತುವಿನಲ್ಲಿ ಸಾಂತರ ರಾಣಿ ಬಸದಿ ಕಟ್ಟಿಸಿದ ಬಗೆಗಿನ‌ ಶಾಸನ_ 


 _ಸೇತುವಿನಲ್ಲಿ ಬಸವಣ್ಣ ದೇವಲಾಯ ಸ್ತಾಪಿಸಿದ ಶಾಸನ_ 


 _ಸೇತುವಿನ ರಾಜನ ಬಳ್ಳಿಗಾವೆಯಯಲ್ಲಿನ‌ ದಾನ ಶಾಸನ‌_ 


 _ಸೇತುವಿನ ರಾಜ ವೀರ ಇಮ್ಮಡಿ ಬಲ್ಲಾಹನ ಶಾಸನ_ 


 _ಸೇತುವಿನ ರಾಜ ವೀರಕೋಟಿ ನಾಯಕನ ಶಾಸನ_ 


 _ಸೇತುವಿನ ವೀರಗಲ್ಲುಗಳು (ನಗರ - ಸಾಗರ)_ - 


ಬರವಣಿಗೆ

*Shashikanth M S (ನಕ್ಷತ್ರಾಕ್ಷ)* 

 *ಏಳಿಗೆ - ಚಿಮಲೆ‌ - ತುಮರಿ* 

Software Engineer, ಬೆಂಗಳೂರು.


Reference

- Epigraghia of carnatica Vol 7&8

- Setu inscription read ( Ganapathi Sir Madenooru - Thanks)

- Internet Archives

- Rice Family.

Comments

ಪಾಪುಲರ್ ಪೋಸ್ಟ್‌

SSC Jobs 2021 Staff Selection Commission 3260 central government Jobs Apply now

  Jobs 2021 – Highlights SSC( Staff Selection Commission) invited applications for PUC Diploma Degree ITI Candidates to fill up the 3200+ Posts through online.  Job seekers who are looking to join central government jobs can make use this opportunity. there is no Application fee for women, SC/ST, PWD Candidates. Read the full post comple tely to get Full Job details according to your education qualification. Name of the Board         :     Staff Selection Commission Name of the Post                           :    SSC Phase 9 Advertisement Number              : No of Vacancies                               :   3000+ Job Category                     ...

CECRI Recruitment 2021 || 54 Vacancies || Apply online

                                            Jobs 2021 – Highlights Name of the Board Central Electrochemical Research Institute  Name of the Post Technical Assistants / Technicians Advertisement Number Advt_02_2021_Technical.pdf No of Vacancies 54  Job Category Central Govt Jobs  Starting Date to Apply September 2021 Last Date of Registration 27th September 2021  Application Mode  Apply Online  Job Location Karaikudi - 630003, Tamil Nadu  Official Website https://cecri.res.in/jobs/Advt_02_2021_Technical.pdf Eligibility Criteria    Educational Qualification   Technical Assistant:   1st Class B.Sc. degree / Diploma in Chemistry / Physics /                                    ...

IB Recruitment 2021 || 500+ vacancy || Within 60 days

                                            Jobs 2021 – Highlights Name of the Board Intelligence Bureau  Name of the Post Junior Intelligence Officer, MTS, Accountant & Other Advertisement Number No of Vacancies 500+  Job Category Central Govt Jobs  Starting Date to Apply 27th August 2021 Last Date of Registration Within 2 months  Application Mode  Apply Offline  Job Location All over India  Official Website mha.gov.in Vacancy details Name of the Post Name of the Post Multi Tasking Staff -24 Junior Intelligence Officer-II/Tech -168 Halwei cum Cook -11 Assistant Central Intelligence Officer-I / Executive -56 Security Assistant (Motor Transport) --20 Assistant Central Intelligence Officer-II / Executive -98 Junior Intelligence Officer – II (Motor Transport) -...

Best Work from Home jobs earn money online

Earn Money using Social Platforms :  Make Money through online Activities You can earn money through your online social activities like: Answer Quiz's, Post videos on Youtube,  Play Games, Install Mobile   Applications, Take Online Surveys, Complete offers,  Do Online Job Task, Watch Videos, Post On Instragram, Facebook etc.  But its not a Job, Its just create extra money for your online activities.  Best Free Make Money Online websites like Ysense, neobucks, Timebucks, FushionCash etc. timebucks.com Earn money through take Micro tasks, create tik tok videos, watch videos, Complete Offers etc. The site owned by Australian Clearing Pty Ltd. Minimum payout: $10 Payment methods: Paypal, Payeer etc. www.swagbucks.com: Earn money / rewards through take online surveys, Daily Poll, Tasks and complete online offers. The site owned by Prodege LLC, the company is one of leading online marketing company based in California, USA Minimum payout: $25...