ಅತಿ ಹೆಚ್ಚು ಇತಿಹಾಸಕಾರರಿರುವ ದೇಶವಾಗುವತ್ತ ಸಾಗಿರುವ ಭಾರತ...................
ಟಿವಿಯೂ ಸೇರಿದಂತೆ Social Media ಗಳ ಪ್ರಭಾವದಿಂದ ಪ್ರತಿಯೊಬ್ಬರೂ ಇತಿಹಾಸದ ಅಧೀಕೃತ ವಕ್ತಾರರಂತೆ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಪಡೆದ ಭಾರತ.
ಬೇಕಿದ್ದರೆ ಸೂಕ್ಷ್ಮವಾಗಿ ಗಮನಿಸಿ.
ಕೆಲವರು ಟಿಪ್ಪು ಸುಲ್ತಾನ್ ದೇಶಪ್ರೇಮಿ ಎಂಬುದಕ್ಕೆ ಹತ್ತಾರು ಅಂಶಗಳನ್ನೂ , ಅದೇ ರೀತಿ ಇನ್ನೂ ಕೆಲವರು ಟಿಪ್ಪು ಸುಲ್ತಾನ್ ದೇಶದ್ರೋಹಿ ಮತಾಂಧ ಎಂಬುದಕ್ಕೆ ಇನ್ನೊಂದಿಷ್ಟು ವಿಷಯಗಳನ್ನು ಹೇಳುತ್ತಾರೆ.
ಭಾರತ ದುರ್ಭಲಗೊಳ್ಳಲು ಸಾಮ್ರಾಟ ಅಶೋಕ ಅಳವಡಿಸಿಕೊಂಡ ಬೌದ್ಧಧರ್ಮ ಆಧಾರಿತ ಆಡಳಿತ ನೀತಿಯೇ ಕಾರಣ ಎಂದು ಕೆಲವರೆಂದರೆ, ಇಲ್ಲ ಮನುವಾದ ಆಧಾರಿತ ಅಸಮಾನತೆಯ ಮತ್ತು ಅಮಾನವೀಯ ಸಾಮಾಜಿಕ ವ್ಯವಸ್ಥೆಯೇ ಕಾರಣ ಎಂದು ಮತ್ತೆ ಹಲವರು ಹೇಳುತ್ತಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಹಿಂಸೆ ಮತ್ತು ಅನೇಕ ದೇಶಭಕ್ತರ ಪ್ರಾಣತ್ಯಾಗದಿಂದ ಎಂದು ಕೆಲವರು,
ಇಲ್ಲ ಮಹಾತ್ಮ ಗಾಂಧಿಯವರ ಅಹಿಂಸೆ ಮತ್ತು ಸಂಘಟನಾತ್ಮಕ ಹೋರಾಟ ಹಾಗು ನಾಯಕತ್ವದಿಂದ ಎಂದು ಹಲವರ ಅಭಿಪ್ರಾಯ.
ಅಂಬೇಡ್ಜರ್ ಸಮಾನತೆ ಸೋದರತೆಯ ಅತ್ಯದ್ಭುತ ಪ್ರಗತಿಪರ ಸಂವಿಧಾನ ರಚಿಸಿದ್ದಾರೆ ಎಂದು ಕೆಲವರ ವಾದವಾದರೆ,
ಇಲ್ಲ ನಮ್ಮ ಸಂವಿಧಾನ ಪ್ರಗತಿಯ ವಿರೋಧಿ ಅದು ಮೀಸಲಾತಿಯ ಮುಖಾಂತರ ಅಸಮಾನತೆಯನ್ನು ಹುಟ್ಟುಹಾಕಿದೆ ಎಂದು ಹಲವರ ವಾದ.
ಒಂದು ವೇಳೆ ಈ ರೀತಿಯ ವಿಚಾರಗಳನ್ನು ನಮ್ಮ ಯುವ ಪೀಳಿಗೆ ಓದುತ್ತಾ ಬೆಳೆದರೆ ಅವರು ಏನೆಂದು ಅರ್ಥಮಾಡಿಕೊಳ್ಳಬೇಕು.ಸತ್ಯ ಯಾವುದೆಂದು ಅವರು ಗ್ರಹಿಸುತ್ತಾರೆ. ಬಹುತೇಕರು ಎಡಬಿಡಂಗಿಗಳಾಗಿ ಯಾವುದೋ ಒಂದು ಸಿದ್ಧಾಂತವನ್ನು ಅಪ್ಪಿಕೊಳ್ಳುವುದಿಲ್ಲವೆ.
ನಮ್ಮ ವಾದಕ್ಕೆ ಅನುಕೂಲಕರ ಅಂಶಗಳನ್ನು ತೆಗೆದುಕೊಂಡು ವಿಷಯಗಳನ್ನು ಸಮರ್ಥಿಸಿದರೆ ಅದು ನಿಜ ಇತಿಹಾಸವಾಗುತ್ತದೆಯೆ. ಅದೇ ಸತ್ಯವೆ.
ಸರಳವಾಗಿ ಹೇಳಬೇಕೆಂದರೆ ನಿಜವಾದ ಇತಿಹಾಸ ಪುಸ್ತಕಗಳಲ್ಲಿ, ಗ್ರಂಥಗಳಲ್ಲಿ, ವಿದ್ವಾಂಸರ ಮಾತುಗಾರಿಕೆಯಲ್ಲಿ ಅಡಗಿರುವುದಿಲ್ಲ. ಅದು ನಮ್ಮ ಮನಸ್ಸಿನ ಗ್ರಹಿಕೆಗಳಲ್ಲಿ, ಪ್ರಬುದ್ಧ ಮನಸ್ಸಿನಾಳದಲ್ಲಿ, ಸೃಷ್ಟಿ ಮತ್ತು ಸತ್ಯದ ಅನುಭವದಲ್ಲಿ ಅಡಗಿರುತ್ತದೆ.
ಅಂದರೆ ಟಿಪ್ಪು ಒಬ್ಬ ಆಡಳಿತಗಾರ.
ತನಗೆ ಅನುಕೂಲವಾದ, ಆ ಸಂದರ್ಭದಲ್ಲಿ ತನ್ನ ಬುದ್ದಿಗೆ ತೋಚಿದ ತೀರ್ಮಾನ ಕೈಗೊಂಡಿರುತ್ತಾನೆ. ಅದು ಕೆಲವರಿಗೆ ಅನುಕೂಲಕರವೂ ಮತ್ತೆ ಕೆಲವರಿಗೆ ಘೋರವೂ ಆಗಿರುತ್ತದೆ. ಹಾಗೆಯೇ ಗಾಂಧಿಯವರ ಸ್ವಾತಂತ್ರ್ಯ ಹೋರಾಟ, ಅಂಬೇಡ್ಕರ್ ರವರ ಸಂವಿಧಾನ, ಅಶೋಕನ ಆಡಳಿತ ನೀತಿಗಳೂ ಕೂಡ ತನ್ನದೇ ನೆಲೆಯಲ್ಲಿ ಒಳ್ಳೆಯ ಮತ್ತು ಕೆಟ್ಟ ಪರಿಣಾಮ ಬೀರಿರುತ್ತದೆ. ಇದೇ ನಿಯಮ ಮುಂದೆ ಸಿದ್ದರಾಮಯ್ಯ ಮತ್ತು ಮೋದಿಯ ಆಡಳಿತವನ್ನು ವಿಮರ್ಶೆ ಮಾಡುವಾಗಲೂ ಅನ್ವಯವಾಗುತ್ತದೆ. ಕೆಲವರಿಗೆ ಮೋದಿ ಮಹಾನ್ ವ್ಯಕ್ತಿಯಾಗಿ ಕಂಡರೆ ಕೆಲವರಿಗೆ ಆತ ನರಹಂತಕನಾಗಿಯೂ ಕಾಣಬಹುದು. ಅದೇ ತತ್ವ ಎಲ್ಲಾ ಆಡಳಿತಗಾರರಿಗೂ ಅನ್ವಯಿಸುತ್ತದೆ.
ನಿಜವಾದ, ನಿಸ್ಪಕ್ಷಪಾತ ಅಧ್ಯಯನ ಮಾಡುವ ಇತಿಹಾಸಕಾರರು ದಾಖಲಿಸಿರುವ ಕೆಲವು ಘಟನೆಗಳನ್ನು ಹೊರತುಪಡಿಸಿದರೆ ಅದನ್ನು ಹೇಳುವ ರಚಿಸುವ ವ್ಯಕ್ತಿಯ ವೈಯಕ್ತಿಕ ಅಭಿಪ್ರಾಯ ,ಆತನ ನಿಲುವುಗಳು, ಆತನ ಗ್ರಹಿಕೆಯ ಸಾಮರ್ಥ್ಯದ ಮೇಲೆಯೇ ಬಹುತೇಕ ನಿರ್ಧಾರವಾಗುತ್ತದೆ.
ಅಲ್ಲದೆ ಇತಿಹಾಸದ ಕಾರಣ ಮತ್ತು ಫಲಿತಾಂಶಗಳು ಕಾಲದೊಂದಿಗೆ ಬದಲಾಗುತ್ತಲೇ ಇರುತ್ತದೆ.
ಒಂದು ಸಣ್ಣ ಸಾಂಕೇತಿಕ ಉದಾಹರಣೆ ಗಮನಿಸಿ. ಮೊದಲು ಇದ್ದ ಸ್ವಾಭಾವಿಕ ನೈಸರ್ಗಿಕ ಕೃಷಿಯನ್ನು ಹಸಿರು ಕ್ರಾಂತಿಯ ಹೆಸರಿನಲ್ಲಿ, ಆಹಾರ ಸ್ವಾವಲಂಬನೆ ಸಾಧಿಸಲು ಕೃತಕ ರಾಸಾಯನಿಕ ಬಳಸಿ ಫಸಲನ್ನು ಹೆಚ್ಚಿಸಲಾಯಿತು. ಈಗ ಅದೇ ವಿಷವಾಗಿ ಮತ್ತೆ ಸ್ವಾಭಾವಿಕ ಕೃಷಿಗೆ ಹೆಚ್ಚು ಒತ್ತು ಕೊಡಲಾಗಿದೆ.
ಇಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದನ್ನು ಸುಲಭವಾಗಿ ಒಂದೇ ಮಾತಿನಲ್ಲಿ ತೀರ್ಮಾನ ಮಾಡಲು ಸಾಧ್ಯವಿಲ್ಲ. ಅದು ಆಯಾಕಾಲದ ಅವಶ್ಯಕತೆ ಮತ್ತು ಪರಿಸ್ಥಿತಿಯನ್ನು ನಿರ್ಧಾರ ಮಾಡುವ ವ್ಯಕ್ತಿಗಳ ಮನೋಭಾವ ಅವಲಂಬಿಸಿರುತ್ತದೆ.
ಆದ್ದರಿಂದ ದಯವಿಟ್ಟು ಇತಿಹಾಸವನ್ನು ಮನಬಂದಂತೆ ಅರ್ಥೈಸದೆ, ಅಲ್ಲಿನ ಹುಳುಕುಗಳನ್ನು ಹೆಚ್ಚಾಗಿ ಕೆಣಕದೆ ಅದನ್ನು ಒಂದು ಪಾಠವಾಗಿ ಪರಿಗಣಿಸಿ ಅದರ ಒಳ್ಳೆಯ ಅಂಶಗಳನ್ನು ಇಂದಿನ ದೃಷ್ಟಿಕೋನದಲ್ಲಿ ಗ್ರಹಿಸಿ ಅಳವಡಿಸಿಕೊಳ್ಳಲು ಪ್ರಯತ್ನಿಸೋಣ. ಇಂದಿನ ನಮ್ಮ ಬದುಕು ಸುಖದಾಯಕ ಮಾಡಿಕೊಳ್ಳುವುದು ನಮ್ಮ ಆಧ್ಯತೆಯಾಗಲಿ.
ಅಳಿದು ಹೋದವರ ಗುಣಾವಗುಣಗಳನ್ನು ನಮಗೆ ತೋಚಿದಂತೆ ಕಲ್ಪಿಸಿಕೊಳ್ಳುತ್ತಾ ಅಪ್ರಯೋಜಕ ಅಂಶಗಳನ್ನು ಎತ್ತಿಹಿಡಿಯುತ್ತಾ ನಾವೆಲ್ಲಾ ಇತಿಹಾಸಕಾರರಾಗುವುದು ಬೇಡ.ಅದನ್ನು ಅಧ್ಯಯನ ನಿರತ ಇತಿಹಾಸಕಾರರಿಗೆ ಬಿಟ್ಟುಬಿಡೋಣ.
ಬದಲಾಗಿ ಇಂದಿನ ವಾಸ್ತವ ಸರಿಪಡಿಸುವ ಮತ್ತು ಮುಂದಿನ ಭವಿಷ್ಯ ಕಟ್ಟುವ ನಾಗರೀಕರಾಗೋಣ.
ಎಲ್ಲರ ಜಯಂತಿಗಳು ನಿಜ ಆಚರಣೆಗಳಾಗದೆ ರಾಜಕೀಯ ಚದುರಂಗದಾಟಗಳಾಗಿವೆ. ನಾವು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಗದ ಚಳವಳಿ.
ವಿವೇಕಾನಂದ. ಹೆಚ್.ಕೆ.
Jobs 2021 – Highlights SSC( Staff Selection Commission) invited applications for PUC Diploma Degree ITI Candidates to fill up the 3200+ Posts through online. Job seekers who are looking to join central government jobs can make use this opportunity. there is no Application fee for women, SC/ST, PWD Candidates. Read the full post comple tely to get Full Job details according to your education qualification. Name of the Board : Staff Selection Commission Name of the Post : SSC Phase 9 Advertisement Number : No of Vacancies : 3000+ Job Category ...
Comments
Post a Comment