ಬಹುಶಃ ಈ ದೇಶವೇನಾದರು ತೀರಾ ಅಧೋಗತಿಗೆ ಇಳಿದು ಇಂದು ಬಹಳಷ್ಟು ಜನ ಅಸಹನೆ ಅತೃಪ್ತಿಯಿಂದ ಕುದಿಯುತ್ತಿದ್ದರೆ ಅದಕ್ಕೆ ಬಹುಮಖ್ಯ ಕಾರಣ ಎಂದು ನನಗನಿಸುವುದು,....
ಸರ್ಕಾರಿ ಅಧಿಕಾರಿಗಳು,
ರಾಜಕಾರಣಿಗಳು,
ಧಾರ್ಮಿಕ ನಾಯಕರು,
ಇತ್ತೀಚಿನ ಸೇರ್ಪಡೆ ಎಂದರೆ
ಟಿವಿ ಮಾಧ್ಯಮಗಳು,
ಮೇಲ್ಮಧ್ಯಮ ವರ್ಗದ ಮಹಿಳೆಯರು.
ಈ ದೇಶದಲ್ಲಿ ಇನ್ನೂ ಸ್ವಲ್ಪಮಟ್ಟಿಗೆ ಒಂದಷ್ಟು ಒಳ್ಳೆಯ ಮೌಲ್ಯಗಳು ಉಸಿರಾಡುತ್ತಾ, ಹೇಗೋ ತಕ್ಕಮಟ್ಟಿಗೆ ನೆಮ್ಮದಿಯ ಜೀವನ ಸಾಗುತ್ತಾ ಇದ್ದರೆ ಅದಕ್ಕೆ ಬಹುಮಖ್ಯ ಕಾರಣ......
ಕಷ್ಟ ಪಟ್ಟು ಹೊಲ ಗದ್ದೆ ತೋಟಗಳಲ್ಲಿ ದುಡಿಯುತ್ತಿರುವ ರೈತರು,
ಶ್ರಮ ಪಟ್ಟು ಹೊಟ್ಟೆ ಪಾಡಿಗಾಗಿಯಾದರೂ ಬೆವರು ಸುರಿಸುತ್ತಿರುವ ಕಾರ್ಮಿಕರು,.
ಎಲ್ಲಾ ಹಿಂಸೆ ಕುಂದು ಕೊರತೆಗಳ ನಡುವೆಯೂ ಸಂಸಾರವೆಂಬ ಸಾಗರವನ್ನು ತೂಗಿಸಿಕೊಂಡು ಹೋಗುತ್ತಿರುವ ಕೆಳ ಮಧ್ಯಮ ವರ್ಗದ ಹೆಣ್ಣುಮಕ್ಕಳು,
ನಿಸ್ವಾರ್ಥದಿಂದ ಸಮಾಜಮುಖಿ ಕೆಲಸ ಮಾಡುತ್ತಿರುವ ಕೆಲವು ಹೋರಾಟಗಾರರು ಮತ್ತು ಸ್ವಯಂ ಸೇವಾ ಸಂಸ್ಥೆಗಳು.
ಈ ಮೇಲಿನ ಅಭಿಪ್ರಾಯದಲ್ಲಿ ಒಂದಷ್ಟು ಸತ್ಯಾಂಶ ನಿಮಗೆ ಗೋಚರಿಸಿದ್ದೇ ಆದಲ್ಲಿ ಮುಂದಿನ ಸಮಾಜದ ಬದಲಾವಣೆಯ ಪರ್ವದಲ್ಲಿ ನಾವು Target ಮಾಡಬುಹುದಾದ ವರ್ಗಗಳನ್ನು ಹೆಚ್ಚು ಖಚಿತವಾಗಿ ಗುರುತಿಸಬಹುದಾಗಿದೆ ಮತ್ತು ಆ ನಿಟ್ಟಿನಲ್ಲಿ ಭವಿಷ್ಯದ ಯೋಜನೆಗಳನ್ನು ರೂಪಿಸಲು ಸಹಾಯವಾಗುತ್ತದೆ.
ಅಸಹನೆಗೆ ಕಾರಣವಾದ ವರ್ಗಗಳನ್ನು ತಿರಸ್ಕರಿಸುತ್ತಾ, ಅಭಿವೃದ್ಧಿಗೆ ಪೂರಕವಾದ ವರ್ಗಗಳನ್ನು ಪ್ರೋತ್ಸಾಹಿಸುತ್ತಾ ಮುನ್ನಡೆದರೆ ಬಹುಶಃ ಬದಲಾವಣೆಯ ಹೊಸ ಇತಿಹಾಸ ನಿರ್ಮಿಸುವ ಕನಸು ಕಾಣಲು ಸಾಧ್ಯವಾಗಬಹುದು.
ಆ ದಿನಗಳ ನಿರೀಕ್ಷೆಯಲ್ಲಿ ನಿಮ್ಮೊಂದಿಗೆ,
ಧನ್ಯವಾದಗಳು.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಹೆಚ್.ಕೆ.

Comments
Post a Comment