ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತಾ ...................
ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮತ್ತು ನೇತಾಜಿಯವರನ್ನು ವಿಭಿನ್ನ ನೆಲೆಯಲ್ಲಿ ನೋಡುವ ಪ್ರಯತ್ನ.......
ಭಾವನೆಗಳನ್ನು - ಫಲಿತಾಂಶಗಳನ್ನು ಪಕ್ಕಕ್ಕಿಟ್ಟು ವಾಸ್ತವ ಮತ್ತು ಸತ್ಯದ ಆಧಾರದ ಮೇಲೆ ಒಂದು ಹುಡುಕಾಟ.
ನಮ್ಮ ಸ್ವಾತಂತ್ರ್ಯ ಹೋರಾಟದ ಅತ್ಯಂತ ನತದೃಷ್ಟ ವ್ಯಕ್ತಿ ಬೋಸ್. ಗಾಂಧಿ ನಂತರದ ಮಹತ್ವದ ವ್ಯಕ್ತಿಯೂ ಸಹ.
ನೆಹರು ಮತ್ತು ಬೋಸರ ಆಯ್ಕೆಯಲ್ಲಿ ಗಾಂಧಿ ತಮ್ಮ ಅಜ್ಞಾಪಾಲಕರು - ಸೌಮ್ಯ ಸ್ವಭಾವದವರು - ಸೂಕ್ಷ್ಮ ಮತಿಗಳು ಆದ ನೆಹರು ಅವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಒಂದಷ್ಟು ಆಕ್ರಮಣಕಾರಿಯೂ ದುಡುಕು ಸ್ವಭಾವದವರೂ ಆದ ಸುಭಾಷರು ಸಹಜವಾಗಿ ಗಾಂಧಿಯವರ ಅಸಹನೆ, ಅಸಮಾಧಾನ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. .ಅದು ಆ ಕ್ಷಣದ ಸರಿಯಾದ ಆಯ್ಕೆ ಇರಬಹುದು.
ಗಾಂಧಿಯವರ ಅಹಿಂಸೆಯಷ್ಟೇ ಪ್ರಬಲ ಅಸ್ತ್ರವಾದ ಅಂದರೆ
" ಸ್ವಾಭಿಮಾನದ ರಕ್ಷಣೆಗಾಗಿ, ಈ ನೆಲದ ಉಳಿವಿಗಾಗಿ " ಆಕ್ರಮಣದ - ಕೆಚ್ಚೆದೆಯ ( ಖಂಡಿತ ಅದು ಹಿಂಸೆಯಲ್ಲ - ರಕ್ಷಣಾತ್ಮಕ ವಿಧಾನ ) ಸೈನಿಕ ಹೋರಾಟ ಮಾಡಿದವರು ನೇತಾಜಿ.
ಗಾಂಧಿಯಂತ ಅತ್ಯಂತ ಪ್ರಬಲ ಮತ್ತು ಆಗಿನ ಬಹುತೇಕ ಜನರ ಆರಾಧ್ಯದೈವವಾಗಿದ್ದ, ತಮ್ಮ ಚಿಂತನೆಗಳಿಂದ ಇಡೀ ದೇಶವನ್ನೇ ಆಕ್ರಮಿಸಿದ್ದ ವ್ಯಕ್ತಿಯ ಇಷ್ಟಕ್ಕೆ ವಿರುಧ್ಧವಾಗಿ ಎರಡು ಬಾರಿ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದುದು ಬೋಸರ ಅಪಾರ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿ.
ಗಾಂಧಿಯ ಅಹಿಂಸಾ ಹೋರಾಟವನ್ನು ಜನರೆಲ್ಲಾ ಒಪ್ಪಿದ್ದ ಸಂದರ್ಭದಲ್ಲಿ ಭಾರತ ರಾಷ್ಟ್ರೀಯ ಸೈನ್ಯವನ್ನು ( INA) ಕಟ್ಟಿ ಬ್ರಿಟೀಷರ ವಿರುದ್ಧ ಹೋರಾಡಿ ಆರಂಭದಲ್ಲಿ ಒಂದಷ್ಟು ಯಶಸ್ಸು ಗಳಿಸಿದ್ದು ಅಮೋಘ ಸಾಧನೆ.
ಇಲ್ಲಿ ಒಂದು ವಿಪರ್ಯಾಸವೆಂದರೆ, ಗಾಂಧಿ ತನ್ನ ನಂಬಿಕೆಗೆ ವಿರುದ್ಧವಾಗಿ ಎರಡನೇ ಮಹಾಯುದ್ಧದಲ್ಲಿ ಭಾರತೀಯ ಸೈನ್ಯವನ್ನು ಬ್ರಿಟೀಷರ ಪರವಾಗಿ ಹೋರಾಟಕ್ಕಿಳಿಸಿದ ಸಂದರ್ಭದಲ್ಲಿ ನೇತಾಜಿಯವರು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಮತ್ತು ಜಪಾನಿನ ಸಹಕಾರದೊಂದಿಗೆ ಅದೇ ಬ್ರಿಟೀಷರ ವಿರುದ್ಧ ಹೊಸ ಸೈನ್ಯ ಕಟ್ಟಿ ಹೋರಾಡುತ್ತಿದ್ದರು. ಇದು ಮನುಷ್ಯ ಸಹಜ ಅಹಂನಿಂದಾಗಿ ಗಾಂಧೀಜಿಯವರಿಗೆ ನೇತಾಜಿಯವರ ಬಗ್ಗೆ ಇನ್ನೂ ಹೆಚ್ಚಿನ ಬೇಸರ ಕೋಪ ಉಂಟುಮಾಡಿರಬಹುದು. ಅಲ್ಲದೆ ಇದೇ ಸಮಯದಲ್ಲಿ ಅಂಬೇಡ್ಕರ್ ಮತ್ತು ಜಿನ್ನಾ ಅವರು ತಮ್ಮ ಸಮುದಾಯಗಳ ತುಳಿತಕ್ಕೊಳಗಾದ ಜನರ ಪರವಾಗಿ ದೇಶದ ಸ್ವಾತಂತ್ರ್ಯಕ್ಕಿಂತ ಹೆಚ್ಚಾಗಿ ತೊಡಗಿಸಿಕೊಂಡಿದ್ದರಿಂದ ಈ ಬೃಹತ್ ಹೋರಾಟದ ಒತ್ತಡ ಗಾಂಧಿಯವರಲ್ಲಿ ಸುಭಾಷರ ನಡೆಗಳು ಮತ್ತಷ್ಟು ಅಸಮಾಧಾನ ಸೃಷ್ಟಿಸಿರುವ ಸಾಧ್ಯತೆ ಇದೆ.
ಈ ಅನಿಸಿಕೆ ಬಾಲಿಶ ಎನಿಸಿದರೂ.... ಸಾರ್ವಜನಿಕ ಜೀವನದ ಬೇರೆ ಬೇರೆ ಒತ್ತಡಗಳು ವ್ಯಕ್ತಿಯ ಗೊಂದಲದ ತೀರ್ಮಾನಗಳಿಗೆ ಮತ್ತು ಅಸಹಾಯಕರ ಕಡೆಗೆ ತಿರುಗುತ್ತದೆ ಎಂಬುದು ನನ್ನ ಗ್ರಹಿಕೆ. ಹಾಗೇ ಬೋಸರ ಜನಪ್ರಿಯತೆ ಗಾಂಧಿಯವರಲ್ಲಿ ಅಸೂಯೆ ಮೂಡಿಸಿರಲೂಬಹುದು.
ಗಾಂಧಿ ಮತ್ತು ಭೋಸರ ನಡುವಿನ ಬಹುದೊಡ್ಡ ವ್ಯತ್ಯಾಸ.....
ಗಾಂಧಿ " ಗುರಿ ಮತ್ತು ಮಾರ್ಗ ಎರಡೂ ಮುಖ್ಯ. ಉತ್ತಮ ಗುರಿ ತಲುಪಲು ಉತ್ತಮ ಮಾರ್ಗವೂ ಮುಖ್ಯ "
ಭೋಸ್ " ಉತ್ತಮ ಗುರಿಯ ಸಾಧನೆಗಾಗಿ ಮತ್ತು ನಮ್ಮ ರಕ್ಷಣೆಗಾಗಿ ಯಾವುದೇ ಮಾರ್ಗವಾದರೂ ಸರಿ.ಗುರಿ ತಲುಪುವುದು ಮುಖ್ಯ. "
ಗಾಂಧಿಯ ಯಶಸ್ಸು ಭೋಸರ ವಿಫಲತೆ ಇಲ್ಲಿಯೇ ಅಡಗಿದೆ. ಮಾರ್ಗ ತಪ್ಪಾಗಿದ್ದರೆ ಗುರಿ ತಲುಪುವುದು ಕಷ್ಟ. ತಲುಪಿದರೂ ಅದು ತಾತ್ಕಾಲಿಕ ಮತ್ತು ದೀರ್ಘಕಾಲದಲ್ಲಿ ಅಪಾಯಕಾರಿ.
ಇತಿಹಾಸದ ಸತ್ಯಗಳು ಏನೇ ಇರಲಿ, ನೇತಾಜಿ ನೆಲದ - ಸ್ವಾಭಿಮಾನದ ರಕ್ಷಣೆಗಾಗಿ ಹೋರಾಡುವ ವಿಶ್ವದ ಎಲ್ಲ ಸಮುದಾಯಗಳ ಸ್ಪೂರ್ತಿಯ ಸಂಕೇತ.
ಆದರೆ ಬೋಸರ ದುರಾದೃಷ್ಟ ಕೇವಲ ಇಷ್ಟಕ್ಕೇ ನಿಲ್ಲುವುದಿಲ್ಲ.
ವಿಧಿಯೂ ಕೂಡ ಅವರ ವಿರುಧ್ಧವಾಗಿ ನಡೆದು ವಿಮಾನ ಅಪಫಾತದಲ್ಲಿ ಅಕಾಲಿಕವಾಗಿ ನಿಧನರಾಗುತ್ತಾರೆ. ನಂತರ ಅವರ ಮನಸ್ಥಿತಿಗೆ ಒಂದಷ್ಟು ಭಿನ್ನರಾಗಿದ್ದ ಜವಹರಲಾಲ್ ನೆಹರು ದೇಶದ ಚುಕ್ಕಾಣಿ ಹಿಡಿಯುತ್ತಾರೆ. ಅವರೂ ನೇತಾಜಿಯವರನ್ನು ನಿರ್ಲಕ್ಷಿಸುತ್ತಾರೆ.
ಇತಿಹಾಸ ಈ ರೀತಿಯ ಅನೇಕ ಘಟನೆಗಳನ್ನು ತನ್ನ ಒಡಲಲ್ಲಿ ಅಡಗಿಸಿಕೊಂಡಿದೆ.
ಜನಪ್ರಿಯತೆಯನ್ನು ಪಕ್ಕಕ್ಕಿಟ್ಟು ವಾಸ್ತವವಾಗಿ ಯೋಚಿಸಿದರೆ ಮೃದು ಸ್ವಭಾವದವರಿಗೆ ಗಾಂಧಿಯ ಅಹಿಂಸೆ ಆದರ್ಶವಾದರೆ ,
ಆಕ್ರಮಣಕಾರಿ ಮನಸ್ಥಿತಿಯವರಿಗೆ ನೇತಾಜಿಯವರು ಕೆಚ್ಚದೆಯ ಹೋರಾಟ ಮಾರ್ಗದರ್ಶನವಾಗಿದೆ.ಮಾರ್ಗ ಭಿನ್ನವಾದರೂ ರಾಷ್ಟ್ರಪ್ರೇಮ ಮಾತ್ರ ಇಬ್ಬರಲ್ಲೂ ಅನುಕರಣೀಯ..
ನೇತಾಜಿ ನಿಮಗಿದೋ ನಮನ.................
ಪ್ರಬುಧ್ಧ ಮನಸ್ಸು ಪ್ರಬುಧ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ
ವಿವೇಕಾನಂದ. ಹೆಚ್.ಕೆ.
Jobs 2021 – Highlights SSC( Staff Selection Commission) invited applications for PUC Diploma Degree ITI Candidates to fill up the 3200+ Posts through online. Job seekers who are looking to join central government jobs can make use this opportunity. there is no Application fee for women, SC/ST, PWD Candidates. Read the full post comple tely to get Full Job details according to your education qualification. Name of the Board : Staff Selection Commission Name of the Post : SSC Phase 9 Advertisement Number : No of Vacancies : 3000+ Job Category ...
Comments
Post a Comment