ಯುವಕರ ಐಕಾನ್ - ಭಾರತೀಯತೆಯ ವಿಶ್ವದ ರಾಯಭಾರಿ - ಸಾಂಸ್ಕೃತಿಕ ಚಿಂತನೆಯಲ್ಲಿ ವೈಚಾರಿಕತೆ ಅಳವಡಿಸಿದ - ಆರೋಗ್ಯವಂತ ಬಲಿಷ್ಠ ಭಾರತದ ಕನಸು ಕಂಡ -
ಸ್ವಾಮಿ ವಿವೇಕಾನಂದರನ್ನು
( ಜನವರಿ ೧೨ )
ಜನುಮದಿನದ ಸಂಧರ್ಭದಲ್ಲಿ ನೆನೆಯುತ್ತಾ..............
ಇಂದಿನ ಆಧುನಿಕ ಯುವ ಸಮೂಹ ಅವರಿಂದ ಪ್ರೇರಣೆ ಹೊಂದಿ ಪ್ರಗತಿಯ ಕಡೆಗೆ ಮುನ್ನಡೆಯುವ ಬದಲು ಅದರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದು ದುರಂತವಾಗಿದೆ.
ವಾಸ್ತವದಲ್ಲಿ ಒಂದಷ್ಟು ಭಾರತೀಯ ಯುವ ಶಕ್ತಿ ಇಂದಿನ ದಿನಗಳಲ್ಲಿ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿರುವುದು ನನಗೆ ಹೀಗೆ ಕಾಣುತ್ತಿದೆ .............
ಯುವಕನೊಬ್ಬ ತನ್ನ ಕ್ರಿಯಾಶೀಲತೆಯಿಂದ ಸಮಾಜಕ್ಕೆ ಕೊಡುಗೆ ನೀಡುವುದನ್ನು ಮರೆತು, ಮಧ್ಯರಾತ್ರಿ ಬೈಕನ್ನು Wheeling ಮಾಡುತ್ತಾ, ತಾನು ಮೋಜು ಅನುಭವಿಸಿ ಇತರರಿಗೆ ತೊಂದರೆ ಕೊಡುತ್ತಾನೋ, ಸಮಾಜಕ್ಕೆ ಕಂಟಕ ಪ್ರಾಯವಾಗುತ್ತಾನೋ, ಅವನನ್ನೇ ಬದುಕನ್ನು ಸಂಪೂರ್ಣ Enjoy ಮಾಡುವ ನಿಜವಾದ ಆಧುನಿಕ ಭಾರತೀಯ ಯುವಕ ಎಂಬ ಅಭಿಪ್ರಾಯ ಮೂಡಿಸಲಾಗಿದೆ .
ಯುವತಿಯೊಬ್ಬಳು ತನ್ನ ಧೈರ್ಯ ಸಾಮರ್ಥ್ಯ ಶ್ರಮ ಸಹನೆಯಿಂದ ಪುರುಷರೊಂದಿಗೆ ಸಮಾನತೆ ಸಾಧಿಸದೆ, ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇದಿ, ಎಣ್ಣೆ ಹೊಡೆದು, ಕುಣಿದು ಕುಪ್ಪಳಿಸಿ ಸ್ವೇಚ್ಚೆ ಮೆರೆಯುತ್ತಾಳೋ, ಆಕೆಯೇ ನಿಜವಾದ ಆಧುನಿಕ ಭಾರತೀಯ ಯುವತಿಯರ ಪ್ರತಿನಿಧಿ ಎಂದು ಭ್ರಮಿಸುವಂತಾಗಿದೆ.
ಯಾವ ವಿದ್ಯಾರ್ಥಿ ಕಾಲೇಜಿನಲ್ಲಿ ಕ್ರೀಡೆ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸದೆ, ಸ್ವತಂತ್ರ ಚಿಂತನೆ ಬೆಳೆಸಿಕೊಳ್ಳದೆ, ಯಾವುದೋ ರಾಜಕೀಯ ಪಕ್ಷಕ್ಕೋ ಅಥವಾ ಸಿದ್ಧಾಂತಕ್ಕೋ ತನ್ನನ್ನು ಶರಣಾಗಿಸಿ ಬಸ್ಸಿಗೆ ಕಲ್ಲು ಹೊಡೆದು ಮುಷ್ಕರ ಮಾಡಿ ಭ್ರಷ್ಟ ನಾಯಕನಿಗೆ ಬಕೆಟ್ ಹಿಡಿದು ಜೈಕಾರ ಕೂಗುತ್ತಾನೋ,
ಅವನೇ ಭವಿಷ್ಯದ ನಾಯಕನಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಮೂಡತೊಡಗಿದೆ.
ಯಾವ ಯುವಕ ಯುವತಿಯರು ಪಾಶ್ಚಾತ್ಯ ಸಂಸ್ಕೃತಿಯ ಮುಖ್ಯ ಅಂಶಗಳಾದ ಉತ್ತಮ ನಾಗರಿಕತೆ, ವಿಶಾಲ ಮನೋಭಾವ, ನಿಜ ದೇಶಪ್ರೇಮವನ್ನು ತಿರಸ್ಕರಿಸಿ, ಅದಕ್ಕೆ ವಿರುದ್ಧವಾಗಿ,
ಪಾಶ್ಚಾತ್ಯರ ಊಟ ಬಟ್ಟೆ ಡ್ರಿಂಕ್ಸ್ ಫ್ಯಾಷನ್ ಅನುಕರಿಸಿ ನಕಲಿ ದೇಶಭಕ್ತಿ ಪ್ರದರ್ಶಿಸುತ್ತಾರೋ ಅವರೇ ಭವಿಷ್ಯ ಭಾರತದ ಯುವಶಕ್ತಿ ಎಂದೇ ಭಾವಿಸಲಾಗುತ್ತಿದೆ.
ಯಾವ ಯುವಕರು ಎಷ್ಟು ಬೇಗ ಎಂತಹ
ಕೆಟ್ಟ ಮಾರ್ಗವನ್ನಾದರೂ ಅನುಸರಿಸಿ ದಿಢೀರ್ ಶ್ರೀಮಂತರಾಗುತ್ತಾರೋ ಅವರೇ ಭಾರತದ ಯುವಶಕ್ತಿಯ ವಕ್ತಾರರಾಗುತ್ತಿದ್ದಾರೆ.
ಯಾವ ಯುವಕನನ್ನು ನೋಡಿ ಬೀದಿಯಲ್ಲಿ ಹೋಗುವ ಹೆಣ್ಣು ಮಕ್ಕಳು ಅವನಿಗೆ ಹೆದರಿ ಬೇರೆ ದಾರಿಯಲ್ಲಿ ಹೋಗುವಂತೆ ಮಾಡುವನೋ ಅವನನ್ನೇ ಮಹಾನ್ ಮೀಟರ್ ಇರುವ ಧೈರ್ಯವಂತ ಯುವಕ ಎಂದು ಪರಿಗಣಿಸಲಾಗುತ್ತದೆ.
ನಿಜವಾದ ಜಾಗೃತ ಮನಸ್ಥಿತಿಯ ಯುವತಿಯರೆಂದರೆ,
ಕೆಲವು ಸಂದರ್ಭಗಳಲ್ಲಿ,
ಯಾರ ಸಂಸಾರ ಹಾಳಾದರು, ಮಕ್ಕಳು ಹಾಳಾದರು, ಸಮಾಜ ಹಾಳಾದರು ತನ್ನ ಸ್ವೇಚ್ಛೆಗೆ ಅಡ್ಡಬಂದ ಗಂಡನನ್ನು ಸುಳ್ಳುಕೇಸು ಹಾಕಿ ಜೈಲಿಗೆ ಕಳಿಸುತ್ತಾಳೋ ಅವಳನ್ನೇ ಮಹಾನ್ ಆದರ್ಶ ಧೈರ್ಯಶಾಲಿ ಯುವತಿ ಎಂದು ಕರೆಯಲಾಗುತ್ತದೆ. ( ದುರುಪಯೋಗ ಪಡಿಸಿಕೊಂಡವರಿಗೆ ಮಾತ್ರ )
ಯುವ ಶಕ್ತಿ ಎಂಬುದು,
ಯಾರು ಸಾವಿರಾರು ವರ್ಷಗಳ ಅನುಭವದ ಆಧಾರದಲ್ಲಿ ರೂಪಿತವಾದ ಅತ್ಯುತ್ಕೃಷ್ಟ ಮೌಲ್ಯಗಳನ್ನು ತಿರಸ್ಕರಿಸಿ ಉಢಾಪೆ ಮಾಡುತ್ತಾ, ನಕಲಿ ದೇಶಭಕ್ತಿ ಪ್ರದರ್ಶಿಸುತ್ತಾ,
ಸ್ವಂತ ಯೋಚಿಸುವ ಶಕ್ರಿ ಇಲ್ಲದ, ದೇಶವನ್ನು ಜಾತಿ ಧರ್ಮದ ಆಧಾರದಲ್ಲಿ ಒಡೆಯುವ ಸಾಮರ್ಥ್ಯವಿರುವರೋ ಅವರೇ ನಿಜವಾದ ಮುಂದಿನ ನಾಯಕರು ಎಂದು ಕರೆಯಲಾಗುತ್ತದೆ.
ಯುವ ಶಕ್ತಿ ಎಂದರೆ,
ಸಮಸ್ಯೆಗಳು ಬಂದಾಗ - ಪ್ರೇಮ ವೈಫಲ್ಯಗಳಾದಾಗ - ಸಂಕಷ್ಟ ಎದುರಾದಾಗ, ಅರಿವಿನಿಂದ - ಧ್ಯಾನದಿಂದ ಅದನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸದೆ ,
" ಸಕಲ ಸಮಸ್ಯೆಗಳಿಗೂ ಸಾರಾಯಿಯೇ ಮದ್ದು " ಎಂದು ಭಾವಿಸಿ ಅದಕ್ಕೇ ಶರಣಾಗುವ ಅಥವಾ ಆತ್ಮಹತ್ಯೆ ದಾರಿ ಹಿಡಿಯುವ ಸಮೂಹ ಎಂದೇ ಹೇಳಬಹುದಾಗಿದೆ.
ಯುವ ಶಕ್ತಿ ಎಂದರೆ ,
ಜ್ಞಾನಕ್ಕೆ ಬದಲು ದುಡ್ಡು ,
ಧ್ಯಾನಕ್ಕೆ ಬದಲು ಗಾಂಜಾ ,
ತಾಳ್ಮೆಗೆ ಬದಲು ಮಚ್ಚು ,
ಕ್ಷಮೆಗೆ ಬದಲು ಕೊಲೆ,
ಎಂಬ ಪರ್ಯಾಯಗಳನ್ನು ತಿಳಿದಿರುವವರು ಎಂದೇ ಭಾವಿಸಲಾಗುತ್ತಿದೆ.
ಇದೇ ಏನು
ಆ ವಿವೇಕಾನಂದರು ಸಾರಿದ ಸಂದೇಶದ ಸಾರಾಂಶ,
ಇದೇ ಏನು
ಆ ಯೋಗಿ ವಿಶ್ವಕ್ಕೆ ಕರೆಕೊಟ್ಟ ಭಾರತೀಯ ಸಂಸ್ಕೃತಿ.
ಕ್ಷಮಿಸಿ.
ಸಭ್ಯತೆಯ ಸೋಗಿನಲ್ಲಿ ಆತ್ಮವಂಚನೆ ಮಾಡಿಕೊಳ್ಳುವ Pseudo ಸಮಾಜದೆಡೆಗೆ ನಮ್ಮ ಯುವಶಕ್ತಿ ಸಾಗುತ್ತಿದೆಯೇ ಎಂದು ಆತಂಕವಾಗುತ್ತಿದೆ.
ಆದರೂ ಈ ಮಾತೃಭೂಮಿ ಹಾಗಾಗಲಿಕ್ಕೆ ಬಿಡದೆ ಮುಂದಿನ ದಿನಗಳು ಯುವಕರ ಪಾಲಿಗ ಆಶಾದಾಯಕವಾಗಲಿ - ಆದರ್ಶವಾಗಲಿ - ಸ್ಪೂರ್ತಿದಾಯಕವಾಗಲಿ ಎಂದು ಆಶಿಸುತ್ತಾ .............
ಇದು ಭಾರತೀಯ ಸಮಾಜದ ಒಂದು ನೆಗೆಟಿವ್ ಮುಖ ಮಾತ್ರ. ಯುವ ಶಕ್ತಿಯಲ್ಲಿ ಅನೇಕ ಒಳ್ಳೆಯ ಅಂಶಗಳು ಸಹ ಇದೆ ಮತ್ತು ಇರಲಿ. ಆದರೆ ಆತಂಕವಾಗಿರುವ ಋಣಾತ್ಮಕ ಅಂಶಗಳನ್ನು ಮಾತ್ರ ಇಲ್ಲಿ ಹೇಳಲಾಗಿದೆ.
ಮತ್ತೊಮ್ಮೆ
ಸ್ವಾಮಿ ವಿವೇಕಾನಂದರ ಜನುಮದಿನದ ಶುಭಕೋರುತ್ತಾ ......
ಪ್ರಬುಧ್ಧ ಮನಸ್ಸು ಪ್ರಬುಧ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.
Jobs 2021 – Highlights SSC( Staff Selection Commission) invited applications for PUC Diploma Degree ITI Candidates to fill up the 3200+ Posts through online. Job seekers who are looking to join central government jobs can make use this opportunity. there is no Application fee for women, SC/ST, PWD Candidates. Read the full post comple tely to get Full Job details according to your education qualification. Name of the Board : Staff Selection Commission Name of the Post : SSC Phase 9 Advertisement Number : No of Vacancies : 3000+ Job Category ...
Comments
Post a Comment