ದೇವರಿಗೇ ಲಂಚ......
80 ಕೋಟಿ ಸರ್ಕಾರದ ಹಣ ಸುಬ್ರಹ್ಮಣ್ಯ ದೇವರ ಚಿನ್ನದ ರಥಯಾತ್ರೆಗೆ.....
Yes, ಇದನ್ನು ನೀವು ಓದುತ್ತಿದ್ದಂತೆ ನನಗೆ ಕೇಳಿಸುತ್ತಿದೆ ನಿಮ್ಮ ಕೆಲವರ ಮನಸ್ಸಿನ ತಳಮಳ.....
ಹಜ್ ಯಾತ್ರೆಗೆ ಸರ್ಕಾರ ಕೋಟಿ ಕೋಟಿ ಹಣ ಸಬ್ಸಿಡಿ ರೂಪದಲ್ಲಿ ಕೊಡುವಾಗ 80 ಕೋಟಿ ಮಾತ್ರ ನಿಮ್ಮ ಕಣ್ಣಿಗೆ ದೊಡ್ಡದಾಗಿ ಕಾಣುತ್ತದೆ.
ಹೌದು, ನಿಮ್ಮ ಪ್ರಶ್ನೆಯೂ ಸರಿ ಇದೆ. ಉತ್ತರ ಮಾತ್ರ ಒಂದೇ......
ಯಾವುದೇ ಧಾರ್ಮಿಕ ಚಟುವಟಿಕೆಗಳಿಗೆ ರಕ್ಷಣೆ, ಮೂಲಸೌಕರ್ಯ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಹೊರತುಪಡಿಸಿ ಬೇರೆ ರೀತಿಯ ಆರ್ಥಿಕ ಸಹಾಯ ಸರ್ಕಾರದಿಂದ ಮಾಡಬಾರದು.
ನಂಬಿಕೆಯ ದೇವರು ಮತ್ತು ಜನರ ಮಧ್ಯೆ ಸರ್ಕಾರದ ಮಧ್ಯಸ್ಥಿಕೆಯ ಅವಶ್ಯಕತೆಯಿಲ್ಲ. ಅದು ತುಂಬಾ ಖಾಸಗಿ ಮತ್ತು ಅಂತರ್ ಮುಖಿಯಾದುದು.
ನಿಮ್ಮ ಬಳಿ ಅನುಕೂಲ ಇದ್ದರೆ ಮೆಕ್ಕಾ, ಕಾಶಿ, ವ್ಯಾಟಿಕನ್, ತಿರುಪತಿ, ಜರುಸಲೇಂ ಎಲ್ಲಿ ಬೇಕಾದರೂ ಹೋಗಿ ಅಥವಾ ನಿಮಗೆ ಆರ್ಥಿಕ ತೊಂದರೆ ಇದ್ದರೆ ನೀವು ನಂಬುವ ದೇವರನ್ನು ಕೇಳಿಕೊಳ್ಳಿ, ಅವನೇ ದಯಪಾಲಿಸುತ್ತಾನೆ ಅಥವಾ ದೇವರು ಸರ್ವವ್ಯಾಪಿ ಎಂದು ಎಲ್ಲರೂ ಹೇಳುವುದರಿಂದ ನೀವು ಇರುವ ಜಾಗದಿಂದಲೇ ಭಕ್ತಿ ತೋರಿಸಿ. ಅದು ನಿಮ್ಮ ಖಾಸಗಿ ವಿಷಯ.
ಎಲ್ಲವನ್ನೂ ದೇವರೇ ಕೊಟ್ಟಿರುವುದು, ಇಡೀ ಸೃಷ್ಟಿಯೇ ದೇವರು ಎನ್ನುವವರೇ ದೇವರಿಗೆ ಹಣ ಚಿನ್ನ ವಜ್ರ ವೈಡೂರ್ಯಗಳನ್ನು ಕೊಡುವುದು ಸಣ್ಣತನವಲ್ಲವೇ. ನಿಜಕ್ಕೂ ದೇವರು ನಮಗೆ ಕೊಡಬೇಕೆ ಹೊರತು ನಾವು ದೇವರಿಗೆ ಕೊಡುವುದು ಆಶ್ಚರ್ಯಕರವಾಗಿದೆ.
ವಾಸ್ತವವಾಗಿ ದೇವರೆಂಬ ಕಾಲ್ಪನಿಕ ಶಕ್ತಿ ಮಾಡಬೇಕಾಗಿದ್ದ ಕೆಲಸದಲ್ಲಿ ವಿಫಲವಾದ ನಂತರವೇ ಸಂವಿಧಾನಾತ್ಮಕವಾಗಿ ರಚಿತವಾದ ಸರ್ಕಾರ ಸಮಾಜವನ್ನು ನಿಯಂತ್ರಿಸುತ್ತಿರುವುದು. ಸರ್ಕಾರದ ಮುಖ್ಯಸ್ಥರ ಜವಾಬ್ದಾರಿ ಸಂವಿಧಾನಕ್ಕೆ ನಿಷ್ಠರಾಗಿರಬೇಕೆ ಹೊರತು ಕಣ್ಣಿಗೆ ಕಾಣದ ದೇವರಿಗಲ್ಲ.
ದೇವರೆಂಬ ನಂಬಿಕೆ ಬಲವಾಗಿದ್ದ ಕಾಲದಲ್ಲಿ ಸಮಾಜ ಅನಾಗರಿಕವಾಗಿದ್ದು ಹಿಂಸೆ ತಾಂಡವವಾಡುತ್ತಿತ್ತು. ಆದರೆ ಈಗ ನಾಗರಿಕ ಸಮಾಜದಲ್ಲಿ ಕನಿಷ್ಠ ರಕ್ಚಣೆಯಾದರೂ ಇದೆ
ದುರಾದೃಷ್ಟವೆಂದರೆ ಈಗಿನ ಭಾರತದ ಪ್ರಧಾನಿ ಮತ್ತು ಕರ್ನಾಟಕದ ಮುಖ್ಯಮಂತ್ರಿ ದೇವರುಗಳಿಗೆ ಹೆಚ್ಚು ನಿಷ್ಠರಾದಂತೆ ಕಾಣುತ್ತಾರೆ. ಅವರು ತಮ್ಮ ಭಕ್ತಿಯನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡುತ್ತಾರೆ.
ಬೇರೆ ದೇಶಗಳಲ್ಲಿ ಹೇಗೇ ಇರಲಿ ಭಾರತದಲ್ಲಿ ಮಾತ್ರ ನಂಬಿಕೆಗಳು ಖಾಸಗಿಯಾದವು ನಡವಳಿಕೆಗಳು ಮಾತ್ರ ಕಾನೂನಾತ್ಮಕ ರೀತಿಯಲ್ಲಿಯೇ ಇರಬೇಕು.
ಮುಖ್ಯಮಂತ್ರಿಯ ಸ್ಥಾನಕ್ಕೆ ಇರುವ ಕಂಟಕ ದೂರ ಮಾಡಲು ದೇವರಿಗೆ ಚಿನ್ನದ ರಥ. ಬರಗಾಲ ಪೀಡಿತ ಪ್ರದೇಶಗಳಲ್ಲಿ ಜನ ಜಾನುವಾರುಗಳ ಆಹಾರಕ್ಕೆ ಹಣದ ಕೊರತೆ. ಇದು ಸರ್ಕಾರದ ಕಾರ್ಯವೈಖರಿ.
ಹಜ್ ಯಾತ್ರೆಗೆ ಅಥವಾ ಇತರ ಧಾರ್ಮಿಕ ಕಾರ್ಯಕ್ರಮಗಳಿಗೆ ಖರ್ಚು ಮಾಡುವ ಹಣವನ್ನು ಶಿಕ್ಷಣಕ್ಕೆ ಉಪಯೋಗಿಸಿದ್ದಿದ್ದರೆ ರಾಜ್ಯ ದೇಶ ಎಷ್ಟೋ ಸುಭಿಕ್ಷವಾಗಿರುತ್ತಿತ್ತು.
ಮುಖ್ಯಮಂತ್ರಿಗಳೇ ಹಣದ ಅವಶ್ಯಕತೆ ಇರುವುದು ದೇವರಿಗಲ್ಲ, ಮನುಷ್ಯರಿಗೆ, ದೇವರು ಲಂಚ ಸ್ವೀಕರಿಸುವುದಿಲ್ಲ.....
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.

Comments
Post a Comment