ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೊದಲ ಲೋಕಸಭಾ ಸದಸ್ಯ ನಮ್ಮ ಸಾಗರದ ಶ್ರೀಯುತ ಕೆ ಜಿ ಒಡೆಯರ್
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾಗೋಡಿನ ಕೆ.ಜಿ.ಒಡೆಯರ್ ಶಿವಮೊಗ್ಗದ ಮೊದಲ ಸಂಸತ್ ಸದಸ್ಯರಾಗಿದ್ದರು. ಅವರು ಒಮ್ಮೆ ಗಾಂಧೀಜಿಯವರನ್ನು ಭೇಟಯಾದ ಮೇಲೆ ತಮ್ಮ ಸೂಟ್ ಬೂಟ್ ಬಿಟ್ಟು ಖಾದಿಧಾರಿಯಅಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಐದು ಬಾರಿ ಸೆರೆವಾಸ ಅನುಭವಿಸಿದ್ದರು. ಒಟ್ಟು ೫ ವರ್ಷ ಸೆರೆವಾಸ ಅನುಭವಿಸಿದ್ದರರು; ೫ ತಿಂಗಳ ಕಠಿಣ ಶಿಕ್ಷೆಯನ್ನೂ ಅನುಭವಿಸಿದ್ದರು. ಸಾಗರದಲ್ಲಿ ಮುಖ್ಯ ಬಸ್ ನಿಲ್ದಾಣದ ಹತ್ತಿರ ಅವರ ಮನೆ ಇತ್ತು/ಇದೆ . ಅವರು ನೆಹರೂ ಅವರ ನಿಕಟವರ್ತಿಗಳಾಗಿದ್ದು , ನೆಹರೂ ಅವರನ್ನು ಜೋಗಕ್ಕೂ ಕರೆತಂದಿದ್ದರು.ಕಾಗೋಡು ಸತ್ಯಾಗ್ರಹದ ನಂತರ 'ಗೇಣೀದಾರರಿಗೇ ಜಮೀನು' ಕಾನೂನು ಬರುವುದಕ್ಕೆ ಮೊದಲೇ,ರೈತರ ಸತ್ಯಾಗ್ರಹಕ್ಕೆ ಓಗೊಟ್ಟು. ತಮ್ಮ ೮೦೦ ಎಕರೆ ಜಮೀನನ್ನು ರೈತರ ಹೆಸರಿಗೆ ಮಾಡಿಕೊಟ್ಟರು.
ಶಿವಮೊಗ್ಗದ ಮೊದಲ ಲೋಕಸಭಾ ಸದಸ್ಯರು, ಸಾಗರದ ಎಲ್ ಬಿ ಕಾಲೇಜು ಮತ್ತು ರಾಷ್ಟ್ರೀಯ ವಿದ್ಯಾವರ್ಧಕ ಪ್ರೌಢಶಾಲೆಯ (ಈಗಿನ ಎಚ್. ಶಿವಲಿಂಗಪ್ಪ ಪ್ರೌಢಶಾಲೆ) ಸಂಸ್ಥಾಪಕ ಅಧ್ಯಕ್ಷರಾಗಿದ್ದ ಶ್ರೀ ಕಾಗೋಡು ಗುರುಬಸಪ್ಪ ಒಡೆಯರ್ ಅವರ ಬಗ್ಗೆ ಸಾಗರೀಕರು ತಿಳಿದುಕೊಳ್ಳಲೇ ಬೇಕಾದ ಕೆಲವು ಸಂಗತಿಗಳು ಇವು.
ಸಾಗರದ ಕಾಗೋಡಿನಲ್ಲಿ 1901ರಲ್ಲಿ ಶ್ರೀಯುತರ ಜನನವಾಯಿತು. ತಂದೆ ಗುರುವಯ್ಯ ಗೌಡರು ತಾಯಿ ಅಕ್ಕನಾಗಮ್ಮ. ಇವರದ್ದು ಜಮೀನ್ದಾರಿ ಮನೆತನ, ಸುಮಾರು 40 ಒಕ್ಕಲು ಮನೆಗಳು ಇವರ ಮನೆಯ ಆಸುಪಾಸಿನಲ್ಲೇ ಇದ್ದವು. ಕಾಗೋಡು ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಇವರಿಗೆ ಬಹಳಷ್ಟು ಎಕರೆ ಭೂಮಿ ಇತ್ತು. ಆದುದರಿಂದಲೇ ಇವರ ಹೆಸರಿನ ಮುಂದೆ ಒಡೆಯರ್ ಎಂಬ ಅಂಕಿತ ನಾಮ ಸೇರಿಕೊಂಡಿದ್ದು.
ಒಡೆಯರ್ ಅವರು ಸಾಗರ, ಶಿವಮೊಗ್ಗ, ಬೆಂಗಳೂರು, ಮದ್ರಾಸ್ ಮತ್ತು ಕೋಲ್ಕತ್ತಾದಲ್ಲಿ ವ್ಯಾಸಂಗವನ್ನು ಪಡೆದರು. ಆಗೆಲ್ಲ ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಬಿಸಿ, ಗಾಂಧೀಜಿಯವರ ಹೋರಾಟಗಳಿಂದ ಪ್ರೇರಣೆ ಪಡೆದು ಚಳುವಳಿಗೆ ಧುಮುಕಿದರು. ಮಲೆನಾಡಿನ ಜನರಿಗೆ ಹೋರಾಟದ ಅರಿವು ಮೂಡಿಸಲು ಕೊಲ್ಕತ್ತಾದಿಂದ ಸಾಗರಕ್ಕೆ ಮರಳಿದರು. 1937ರ ಧ್ವಜ ಸತ್ಯಾಗ್ರಹದಿಂದ ಹಿಡಿದು ಸ್ವಾತಂತ್ರ್ಯ ಸಂಗ್ರಾಮ, ಕ್ವಿಟ್ ಇಂಡಿಯಾ ಚಳುವಳಿ, 1947ರ ಮೈಸೂರು ಅರಮನೆ ಸತ್ಯಾಗ್ರಹ ಮುಂತಾದ ಚಳುವಳಿಗಳಲ್ಲಿ ತೊಡಗಿಸಿಕೊಂಡರು. ಇವರನ್ನು ಬಂಧಿಸಲು ಪೊಲೀಸರು 14 ಬಾರಿ ಹುಡುಕಾಟ ನಡೆಸಿದ್ದು ಇವರ ಚಾಣಕ್ಯ ಬುದ್ಧಿಗೆ ಒಂದು ಉದಾಹರಣೆ. ಬಂಧನದ ನಂತರ ಜೈಲಿನಲ್ಲಿ ಇವರನ್ನು ಹೋರಾಟದ ಒಡೆಯರ್, ಚಳುವಳಿ ಒಡೆಯರ್ ಎಂದೇ ಸಂಬೋದಿಸಲಾಗುತ್ತಿತ್ತು.
1941 ರಿಂದ 1951ರವರೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಇವರು 1952ರ ಸ್ವತಂತ್ರ ಭಾರತದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಮೈಸೂರು ರಾಜ್ಯದ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ವಿಜಯರಾದರು. ಅಂದಿಗೆ ಮೈಸೂರು ರಾಜ್ಯಕ್ಕೆ 12 ಲೋಕಸಭಾ ಕ್ಷೇತ್ರಗಳಿದ್ದವು. 1957ರ ಚುನಾವಣೆಯಲ್ಲೂ ಇವರೇ ಜಯಗಳಿಸಿದ್ದು ಇವರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು.
ಸಾಗರಕ್ಕೆ ಮಹಾತ್ಮಾ ಗಾಂಧೀ, ನೆಹರು, ಲಾಲ್ ಬಹದೂರ್ ಶಾಸ್ತ್ರೀ ಮತ್ತು ಇಂದಿರಾ ಗಾಂಧಿ ಯಂತಹ ಗಣ್ಯ ವ್ಯಕ್ತಿಗಳನ್ನು ಬರುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಮಲೆನಾಡಿನ ಪ್ರಸಿದ್ಧ ಸ್ಥಳಗಳ ಪರಿಚಯ ಮತ್ತು ಜೋಗವನ್ನು ಗಣ್ಯರಿಗೆ ಪರಿಚಯಿಸಿದ್ದಲ್ಲದೆ, ಮಲೆನಾಡಿನ ಪ್ರವಾಸೋದ್ಯಮಕ್ಕೆ ರೂಪುರೇಷೆ ಹಾಕಿದ ಕೀರ್ತಿ ಇವರಿಗೆ ಸಲ್ಲುತ್ತದೆ. ನೆಹರು ಜೊತೆಗೆ ಸುಮಾರು 6000ಕಿಲೋಮೀಟರ್ ಚೀನಾ, ಸಿಲೋನ್ ಪ್ರವಾಸ ಕೈಗೊಂಡ ಇವರು ಅವನೆಲ್ಲ ತಮ್ಮ ಡೈರಿಯಲ್ಲಿ ದಾಖಲಿಸಿದ್ದಾರೆ.
ಕೆ ಜಿ ಒಡೆಯರ್ ಅವರು ಸರಳಜೀವಿ. ಎತ್ತರದ ವ್ಯಕ್ತಿ, ಜುಬ್ಬಾ ಮತ್ತು ಪಂಚೆ, ಹೊಳೆಯುವ ಬೂಟು, ತಲೆಗೊಂದು ಗಾಂಧಿ ಟೊಪ್ಪಿ ಮತ್ತು ಸದಾ ಮುಗುಳುನಗೆ. ಸಜ್ಜನ ಮತ್ತು ಸಭ್ಯ ರಾಜಕಾರಣಿಯಾಗಿದ್ದ ಇವರು ಸಾಗರದಲ್ಲಿ 1962 ರಲ್ಲಿ ರಾಷ್ಟ್ರೀಯ ವಿದ್ಯಾವರ್ಧಕ ಪ್ರೌಢಶಾಲೆ (ಈಗಿನ ಎಚ್. ಶಿವಲಿಂಗಪ್ಪ ಪ್ರೌಢಶಾಲೆ) ಮತ್ತು 1964 ರಲ್ಲಿ ಎಲ್ ಬಿ ಕಾಲೇಜನ್ನು ಪ್ರತಿಷ್ಠಾಪಿಸಿ ಮಲೆನಾಡಿನಲ್ಲಿ ಶಿಕ್ಷಣಕ್ಕೆ ಒತ್ತು ನೀಡಿ ವಿದ್ಯಾರ್ಥಿಗಳಿಗೆ ಅಕ್ಷರ ದಾಹ ತೀರಿಸುವಲ್ಲಿ ಯಶಸ್ವಿಯಾಗಿದ್ದು ಇತಿಹಾಸ.
1948 ರಲ್ಲಿ ಪ್ರಾರಂಭವಾದ ಕಾಗೋಡು ಚಳುವಳಿಯನ್ನು ತಮ್ಮ ವ್ಯಕ್ತಿತ್ವಕ್ಕೆ ಕುತ್ತುಬಾರದಂತೆ ಯಶಸ್ವಿಯಾಗಿ ನಿಭಾಯಿಸಿ ಗೇಣಿದಾರರ ಅಭಿವೃದ್ಧಿಗೆ ಶ್ರಮಿಸಿದ್ದರು. ನಿಷ್ಠಾವಂತ ರಾಜಕಾರಣಿಯಾಗಿದ್ದ ಇವರು ಉತ್ತಮ ಬರಹಗಾರರೂ ಹೌದು. ಅವರು ಭಾಷಣ ಓದಿದ ಮೇಲೆ ಬರೆದು ಕೊಟ್ಟವರ ಹೆಸರು ಹೇಳುವಷ್ಟು ಹೃದಯವಂತಿಕೆ ಹೊಂದಿದವರಾಗಿದ್ದರು. ಅವರ ಪ್ರಾಮಾಣಿಕತೆಗೆ ಇನ್ನೊಂದು ಉದಾಹರಣೆ ಎಂದರೆ ಅವರ ಮನೆ ಕಟ್ಟಲು ಸಾಲ ಮಾಡಿದ್ದು.
ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮೊದಲ ಸಂಸದರಾಗಿ ಸಾಗರದ ಹಿರಿಮೆ ಹೆಚ್ಚಿಸಿದ ಒಡೆಯರ್ 8ನೇ ಡಿಸೆಂಬರ್ 1965ರಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಇಹಲೋಕ ತ್ಯಜಿಸಿದರು. ಸಾಗರೀಕರು ಮತ್ತು ಇಂದಿನ ರಾಜಕಾರಣಿಗಳು ಇಂತಹ ವ್ಯಕ್ತಿಯ ವ್ಯಕ್ತಿತ್ವವನ್ನು ಮರೆಯದೆ ಮಾದರಿಯಾಗಿಟ್ಟುಕೊಳ್ಳುವುದು ಅವಶ್ಯಕವಾಗಿದೆ.

Comments
Post a Comment