"ನಾನು ಕಣಪ್ಪಾ ಹೇಮಿ ಗಂಡ"
ಪದಬಂಧದ ಜೊತೆಗೆ ಅನುಬಂಧ ಹೊಂದಿದವನು ನಾನು, ಇವತ್ತಿನ ದಿನ ಹಾಗೆ ಪದಬಂಧ ಪೂರ್ತಿ ಮಾಡಿ ಪೇಪರ್ನ ಹಿಂದೆ ತಿರುಗಿಸಿದೆ
ಹೆಂಡತಿಯ ಗುಣಗಾನ ಮಾಡೊ "wifeappriationday" ಬಗ್ಗೆ ಲಕ್ಷ್ಮಣರಾವ್ "ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ" ಲೇಖನ ಕಣ್ಣಿಗೆ ಬಿತ್ತು ಹಾಗೆ ಅದರಲ್ಲಿರೊ ಕತೆನ ಇಲ್ಲಿ ಬರೀತಾ ಇದಿನಿ
"ಪತ್ನಿಯನ್ನು ಅರ್ಥ ಮಾಡಿಕೊಳ್ಳೊವ ದಿನ ವರ್ಷದಲ್ಲಿ ಒಂದು ದಿನವಷ್ಟೇ ಅಲ್ಲ ೩೬೫ ದಿನಗಳು ಅದೇ ಆಗಿರಬೇಕು ಇಲ್ಲದಿದ್ದರೆ ಪತಿಗೆ ಉಳಿಗಾಲವೆ ಇಲ್ಲ" "ನಮ್ಮಲ್ಲಿ ಅರ್ಧನಾರೀಶ್ವರನ ಕಲ್ಪನೆಯೆ ಇದೆ, ಗಂಡು ಹೆಣ್ಣಿಲ್ಲದೆ ಅಪೂರ್ಣ ಹೆಣ್ಣು ಗಂಡಿಲ್ಲದೆ ಅಪೂರ್ಣ , ಇದರಲ್ಲಿ ಒಬ್ಬರಿಲ್ಲದೆ ಹೋದರೂ ಜೀವನ ಪ್ರಯಾಣವನ್ನು ಪೂರೈಸುವುದು ಸಾಧ್ಯವಿಲ್ಲ ಎತ್ತಿನ ಬಂಡೆಯ ಎರಡು ಗಾಲಿಗಳ ತರವೆಂಬ ಕಲ್ಪನೆ ನಮ್ಮಲ್ಲಿ ಹಿಂದಿನಿಂದಲೂ ಇದೆ"
ಈ ಪರಿಕಲ್ಪನೆ ಮೆಚ್ಚುಗೆ ನಮ್ಮಲ್ಲಿ ಮುದ್ದಣ ಮನೋರಮೆಯರ ಕಾಲದಿಂದ ನವಕಾವ್ಯದ ತನಕ ಎಲ್ಲರೂ ಬರೆದವರೆ.
ಕುವೆಂಪು ಅವರದಂತು ಬಹಳ ಪ್ರಸಿದ್ಧವಾದ ಕವಿತೆಯೆ ಇದೆ, ಇದರಲ್ಲಿ ಕವಿ ಕನಸಲ್ಲಿ ಸ್ವರ್ಗಕ್ಕೆ ಹೋಗಿದ್ದರಂತೆ, ಅಲ್ಲಿ ಸ್ವರ್ಗದ ಬಾಗಿಲವರೆಗೆ ನೇರ ಪ್ರವೇಶ ಸಿಕ್ಕು ಅದರ ಮುಂದೆ ಹೋಗಿ ನಿಂತಾಗ ಅಲ್ಲಿನ ದ್ವಾರ ಪಾಲಕ ತಡೆಯುತ್ತಾನೆ. ನೀನ್ಯಾರು ಅಂದರೆ ಕವಿ "ಪುಟ್ಟಪ್ಪ" ಅನ್ನುತ್ತಾರೆ, ಒಳಕ್ಕೆ ಪ್ರವೇಶ ನೀಡದಿದ್ದಾಗ 'ರಾಷ್ಟ್ರಕವಿ' 'ಉಪಕುಲಪತಿ' ಇತ್ಯಾದಿ ತಮ್ಮ ಹುದ್ದೆ ಬಿರುದುಗಳ ಹೆಸರೆಲ್ಲವನ್ನೂ ಹೇಳುತ್ತಾರೆ , ಆಗಲೂ ಒಳಬಿಡದಿದ್ದಾಗ "ನಾನು ಕಣಪ್ಪಾ ಹೇಮಿ ಗಂಡ" ಅನ್ನುತ್ತಾರಂತೆ. ಆಗ ಸ್ವರ್ಗದ ಬಾಗಿಲು ತೆರೆಯುತ್ತದಂತೆ..!
--------------------------------------

Comments
Post a Comment