ತುಂಬಾ ಹಿಂದೆ ಒಬ್ಬ ದೊಡ್ಡ ಚಕ್ರವರ್ತಿ ಇದ್ನಂತೆ. ಅವನು ಒಳ್ಳೆಯ ರಾಜ ಅನಿಸಿಕೊಂಡರೂ ಅವನಿಗೆ ವಿಪರೀತ ಹೆಂಡ ಕುಡಿಯುವ ಚಟ ಇತ್ತಂತೆ. ಒಂದ್ಸಲ ಅವನ ಬರ್ತ್ಡೇಯನ್ನು ಫುಲ್ ಗ್ರ್ಯಾಂಡಾಗಿ ಸೆಲೆಬ್ರೇಟ್ ಮಾಡ್ಕೋಬೇಕು ಅಂತ ಯೋಚ್ನೆ ಮಾಡಿ ಅವನ ಸಾಮ್ರಾಜ್ಯದ 1000 ಜನ VIPಗಳನ್ನ ಇನ್ವೈಟ್ ಮಾಡಿ ಒಂದು ಆಫರ್ ಇಡ್ತಾನಂತೆ. ಯಾರು ತುಂಬಾ ಟೇಸ್ಟಾಗಿರೋ ಹೆಂಡ ತರ್ತಾರೋ ಅವರಿಗೆ ಒಂದು ಸ್ಪೆಷಲ್ ಗಿಫ್ಟ್ ಅಂತ ಹೇಳಿರ್ತಾರೆ. VIPಗಳು ವಿಶೇಷವಾದ ಸ್ಕಾಚುಗಳು, ವಿಸ್ಕಿ, ರಮ್, ಜಿನ್, ಬ್ರಾಂಡಿ, ಬಿಯರ್, ಟಕೀಲಾಗಳನ್ನೆಲ್ಲ ತೊಗೊಂಡು ಎರಡು ದಿನ ಮೊದಲೇ ಅರಮನೆ ಸೇರ್ಕೊಂಡಿರ್ತಾರೆ. ಅವರು ತಂದ 1000 ಬಾಟ್ಲಿಗಳನ್ನೆಲ್ಲ ಒಂದ್ಕಡೆ ಇಟ್ಟಿರ್ತಾರೆ. ಅವುಗಳಲ್ಲಿ ಯಾರೋ ಒಬ್ಬ ಪಕ್ಕದ ರಾಜ್ಯದ ಸೈನಿಕ ರಾಜನನ್ನು ಸಾಯ್ಸೋದಕ್ಕೆ ಅಂತ ಒಂದು ಹೆಂಡದ ಬಾಟ್ಲಿಗೆ ವಿಷ ಸೇರಿಸಿಬಿಡ್ತಾನೆ. ಈ ವಿಷ ಎಷ್ಟು ಸ್ಟ್ರಾಂಗ್ ಅಂದ್ರೆ ಒಂದೇಒಂದು ಹನಿ ಕುಡಿದ್ರೂ ಸಾಕು, ಮನುಷ್ಯ 24 ಗಂಟೆಯೊಳಗೆ ಸತ್ತೋಗ್ತಾನೆ. ಈ ವಿಷಯ ಗೂಢಚಾರರ ಕಡೆಯಿಂದ ರಾಜನಿಗೆ ಗೊತ್ತಾಗಿಬಿಡತ್ತೆ. ಆದ್ರೆ ಯಾವುದರಲ್ಲಿ ವಿಷ ಇದೆ ಅಂತ ಗೊತ್ತಿಲ್ಲ!!! ನಾಳೆ ಅಲ್ಲ ನಾಡಿದ್ದು ಪ್ರೋಗ್ರಾಂ ಇದೆ.... ಏನ್ ಮಾಡೋದು? ಬಂದಿರೋ ಗೆಸ್ಟುಗಳಿಗೆ ತೊಂದ್ರೆ ಆಗ್ಬಾರ್ದು, ಪಾರ್ಟಿ ಕ್ಯಾನ್ಸಲ್ ಆಗ್ಬಾರ್ದು.
ರಾಜ ಮಂತ್ರಿಯನ್ನು ಕರೆದು ಥೇಟ್ ಸಿಲ್ಲಿಲಲ್ಲಿ ಸೀರಿಯಲ್ ತರ ಜೇಡ ಬಲೆ ಕಟ್ಟಿರೋ ಮೂಲೆ ತೋರ್ಸಿ ಹಿಂಗಿಂಗೆ ಹಿಂಗಿಂಗೆ ಅಂತ ಹೇಳ್ತಾನೆ. ಮಂತ್ರಿ ಸಕತ್ ಕಿಲಾಡಿ. ಸಿಕ್ಕಾಪಟ್ಟೆ ಬುದ್ಧಿವಂತ. (ಇವನು ರಾಜನ ತರ ಹೆಂಡ ಕುಡಿಯದೆ ಬರೀ ಬಾದಾಮಿ ಹಾಲು ಕುಡೀತಿದ್ದ ಅನ್ಸತ್ತೆ!!!) ಮಂತ್ರಿಗೆ ಒಂದು ಐಡಿಯಾ ಬಂತು. ಹೆಂಗೂ ಜೈಲಲ್ಲಿ 10 ಜನ ಮರಣದಂಡನೆ ಶಿಕ್ಷೆ ಕನ್ಫರ್ಮ್ ಆಗಿದ್ದ ಖೈದಿಗಳಿದ್ದರು. ಮಂತ್ರಿ ಅವರನ್ನೆಲ್ಲ ಸಾಲಾಗಿ ನಿಲ್ಲಿಸಿ ಯಾವುದೋ ಒಂದು ಆರ್ಡರ್ನಲ್ಲಿ ಅವರಿಗೆಲ್ಲ 1000 ಬಾಟಲಿಗಳ ರುಚಿ ತೋರಿಸಿದ. 24 ಗಂಟೆ ಆಗ್ತಿದ್ದಂಗೆ 10ರಲ್ಲಿ ಒಂದಷ್ಟು ಜನ ಸತ್ತುಬಿದ್ದರು. ಆ ಲೆಕ್ಕದ ಮೇಲೆ ಮಂತ್ರಿ ವಿಷ ಬೆರೆಸಿದ ಬಾಟಲಿ ಕಂಡುಹಿಡಿದ. ಸೈಲೆಂಟಾಗಿ ಆ ಬಾಟಲಿಯನ್ನು ಸೈಡಿಗಿಟ್ಟು ಉಳಿದ 999 ಬಾಟ್ಲಿಗಳಲ್ಲಿ ರಾಜ ಪಾರ್ಟಿ ಮುಗಿಸಿದ.
ಪ್ರಶ್ನೆ: ಮಂತ್ರಿ ವಿಷದ ಬಾಟ್ಲಿಯನ್ನು ಹೇಗೆ ಕಂಡುಹಿಡಿದ?

Comments
Post a Comment