ಒಂದು ಕಾಡಿನಲ್ಲಿ ಪ್ರತಿ ಬಾರಿಯಂತೆ ಐದು ವರ್ಷಕ್ಕೊಮ್ಮೆ ಚುನಾವಣೆ ಬಂದಿತು.
ಚುನಾವಣೆಗೆ ಹುಲಿ, ಎತ್ತು, ಕುರಿ ಮತ್ತು ಆನೆ ಸ್ಪರ್ಧಿಸಿದ್ದವು.
ಹುಲಿ ಮತ್ತು ಆನೆ ಪರಸ್ಪರ ಸ್ನೇಹಿತರಾಗಿದ್ದವು.
ಕುರಿಗೆ ಇವರ ಒಗ್ಗಟ್ಟನ್ನು ಮುರಿದು ತಾನೆ ಗೆಲ್ಲಬೇಕೆಂಬ ದುಷ್ಟ ಬುದ್ಧಿ ಬಂದಿತು.
ಅದಲ್ಲದೆ ಈ ಕುರಿ ಬೇರೆ ಕಾಡಿನಿಂದ ವಲಸೆ ಬಂದಿದ್ದಾಗಿತ್ತು.
ಇದಕ್ಕಾಗಿ ಕುರಿ ತನ್ನ ಬುದ್ದಿಮಾಂದ ಮಿತ್ರನಾದ ಮುಳ್ಳಕ್ಕಿಯ ಸಹಾಯ ಪಡೆದು ಕೊಂಡಿತು. ಹಾಗು ತನ್ನ ಜೊತೆಗೆ ಇತರ ಕೆಲವು ಕುರಿಗಳನ್ನು ಸೇರಿಸಿಕೊಂಡಿತು.
ಆದರೆ ಕಾಡಿನ ಪ್ರಾಣಿಗಳು ಉತ್ತಮವಾಗಿ ಕೆಲಸ ಮಾಡುವ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಿರ್ಧರಿಸಿದವು.
ಇದನ್ನು ಕಂಡು ಕುರಿಗೆ ಸೋಲುವ ಭೀತಿಯಿಂದ ಹುಲಿಯ ಕಡೆಯವರೆ ಎತ್ತಿನ ಪರವಾಗಿ ಪ್ರಚಾರ ಮಾಡುತ್ತಿದೆ ಎಂದು ಹೋದಲೆಲ್ಲಾ ಕೂಗಿತು.
ಜನ ಕುರಿಯ ಮಾತನ್ನು ಕೇಳಿ ನಕ್ಕರು.
ಇದರಿಂದ ಕುರಿಗೆ ಅವಮಾನವೆನಿಸಿತು.
ಹೇಗಾದರೂ ಮಾಡಿ ಹುಲಿ ಮತ್ತು ಆನೆಯ ಮಧ್ಯೆ ಜಗಳ ಹಚ್ಚಿಸಲು
ಆನೆಗೆ ಕುರಿ 10000₹ ಆಮಿಷ ಒಡ್ಡಿ ಆನೆಯವರ ಗುಂಪಿನ ಮತಗಳೆಲ್ಲಾ ತನ್ನ ಕಡೆಗೆ ಬರುವಂತೆ ಕೇಳಿಕೊಂಡಿತು.
ಆನೆ ಇವಾಗ ಇಕ್ಕಟ್ಟಿನ ಸ್ಥಿತಿಗೆ ಸಿಲುಕಿತು.
ಆನೆ ಹೋಗಿ ತನ್ನ ಮಿತ್ರನಾದ ಹುಲಿಯ ಬಳಿ ಗುಟ್ಟಾಗಿ ಕುರಿಯ ವಿಚಾರದ ಕುರಿತು ಹೇಳಿತು.
ಹುಲಿ ಹಾಗು ಆನೆ ಎರಡು ಉಪಾಯ ಮಾಡಿದವು
ಅದರ ಪ್ರಕಾರ ಆನೆ ಕುರಿಯ ಮಾತಿಗೆ ಒಪ್ಪಿ 10000₹ ರೂ ಪಡೆದು ತನ್ನೆಲ್ಲಾ ಓಟು ನಿನಗೆ ಎಂದು ಕುರಿಯನ್ನು ಅಟ್ಟಕೇರಿಸಿತು.
ಇನ್ನು ಕುರಿ ಮತ್ತು ಮುಳ್ಳಕ್ಕಿ ತಾವೆ ಗೆಲ್ಲುವುದೆಂದು ಮನಸಿನಲ್ಲೆ ಮಂಡಿಗೆ ತಿಂದರು.
ಕುರಿ ಮತ್ತು ಅದರ ಬಳಗದ ಬುದ್ದಿ ಗೊತ್ತಿದ್ದ ಆನೆ ಹಾಗು ಇತರೆ ಪ್ರಾಣಿಗಳು ಕುರಿಗೆ ಚುನಾವಣೆಯಲ್ಲಿ ಉಂಡೆನಾಮ ಹಾಕಿದರು.
ಒಟ್ಟಿನ್ನಲ್ಲಿ ಕುರಿ ಹರಕೆಯ ಕುರಿಯಾಗಿತ್ತು.
ಅದರ ಜೊತೆಗೆ ಸೇರಿದ್ದ ಇತರ ಕುರಿ ಮತ್ತು ಮುಳ್ಳಕ್ಕಿ ಇರೋದನ್ನು ಕಳಕೊಂಡೆವಲ್ಲಪಾ ಅಂತ ಕೈ ಕೈ ಹಿಸುಕಿಕೊಂಡವು.
ಕತೆಯ ನೀತಿ: ಕೆಟ್ಟದನ್ನು ಬಯಸಿದರೆ ಕೆಟ್ಟದ್ದೇ ಆಗುತ್ತದೆ.
ಒಂದು ಕುರಿ ರಾಜನಾದರೆ ಅದರ ಪ್ರಜೆಗಳೆಲ್ಲಾ ಕುರಿಯೇ ಆಗುತ್ತವೆ.
ವಿ.ಸೂ: ಈ ಕತೆಗೂ ಇತರ ಯಾವುದೇ ಸನ್ನೀವೇಶಕ್ಕು ಹೋಲಿಕೆ ಕಂಡು ಬಂದಲ್ಲಿ ಕೇವಲ ಕಾಕತಾಳಿಯವಷ್ಟೇ.
ಕುರಿ ಸೋಲಲು ಕಾರಣಗಳು
ವಲಸೆ ಬಂದಿರುವ ಪ್ರಾಣಿಗಳಿಗೆ ಇರುವ ಕಾಡಿನ ಬಗ್ಗೆ ಮಮಕಾರ ಇರುವುದಿಲ್ಲ.
ವಲಸೆ ಬಂದ ಕುರಿ ರಾತ್ರಿ ಹೊತ್ತು ಬೇರೆಕಡೆ ಬೇಲಿ ಹಾರಿ ಮೇಯುವುದನ್ನು ಬಿಡಬೇಕಿತ್ತು.
ಕುರಿ ಬೇರೆ ಪ್ರಾಣಿಗಳ ಮನೆ ಮುರಿಯುವ ಕೆಲಸ ಬಿಡಲಿಲ್ಲ.
ಕುರಿಯ ಬಾಯಿ ನಾಲಿಗೆ ಹಾಗು ಕೆಲಸ ಶುಧ್ಧವಿರಲಿಲ್ಲ.
ನಿಮ್ಮ ಮತ ಕೆಲಸ ಮಾಡುವರಿಗೆ ಇರಲಿ, ಕುರಿಗಳಿಗಲ್ಲ.