ನೆನಪಿನ ಹಾದಿಯಲ್ಲಿ
ಗೀತಾ... ಸಂಗೀತಾ...
ನಿನ್ನೊಡನೆ ಈ ಇಪ್ಪತ್ತು ವರ್ಷ ಕಳೆದು ಹೋದದ್ದು ಗೊತ್ತಾಗಲೆ ಇಲ್ಲ, ನಿನ್ನೆ ಮೊನ್ನೆ ನಡೆದಂತಿದೆ ಈ ಪಯಣ.
ಇಷ್ಟು ವರ್ಷಗಳಲ್ಲಿ ಒಮ್ಮೆಯು ತಂಗಿ ಎಂಬ ಮಮತೆಯಲ್ಲಿ ಬರೆಯಲಾಗಲಿಲ್ಲ, ನಿನ್ನನ್ನು ಒಂದು ಬಾರಿಯೂ ತಂಗಿ ಎಂದು ಕರೆಯಲಿಲ್ಲ, "ಹುಡುಗಿ ಸಂಗು ಸಂಗೀತಾ" ಎಂದಲ್ಲವೆ ನಾ ನಿನ್ನ ಕರೆಯೋದು. "ನೋಡ ಅಪ ಹುಡುಗಿ ಅಂತನೆ ನಂಗೆ" ಎಂದು ನೀನು ಕಂಪ್ಲೆಂಟ್ ಮಾಡಿದಾಗೆಲ್ಲ ನನ್ನ ಮನಸಲ್ಲಿ ಹೇಳುತ್ತಿತ್ತು "ತಂಗೀ" ಎಂದು ಬಾಯಿತುಂಬಾ ಕರೆಯುವ ಸಮಯವಿನ್ನು ಬಂದಿಲ್ಲವೆಂದು.
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆಯುತ್ತಿದ್ದೆಯಲ್ಲವೇ ಆ ಹೆಜ್ಜೆ ಸಪ್ಪಳ ನನಗೀಗಲು ಅಸ್ಪಷ್ಟವಾಗಿ ಕೇಳುತ್ತದೆ.
ಅಮ್ಮ ಹೇಳುತ್ತಿದ್ದಳು
ಶಾಲೆ ಮೆಟ್ಟಿಲು ಹತ್ತುವ ಮುಂಚೆ ನಾ ಎಲ್ಲೆ ಹೋದರು ಒಡೋಡಿ ಬಂದು ಹಿಂಬಾಲಿಸಿ ಬೆನ್ನು ಹಿಡಿದ ಬೇತಾಳದಂತೆ ಹೋದಲೆಲ್ಲಾ ಬರುತ್ತಿದೆಯಂತೆ,
ನೆನಪಿದೆ ನಾ ಕುಶಾಲಿಗೆ ಸತ್ತಂತೆ ಅಂಗಳದಲ್ಲಿ ಮಲಗಿದರೆ ಕರೆದು ಅಳುತ್ತಿದ್ದೆಯಲ್ಲವೆ. ಯಾವಾಗಲೂ
ಅಪ್ಪನ ಹೆಗಲಿನ ಸವಾರಿ ನಿಂದೆ ಆಗಿರುತ್ತಿತ್ತು.
ಅಂಗಡಿಯಿಂದ ಏನೆ ತಿಂಡಿ ತಂದರು ಈಗಲು ಮುಕ್ಕಾಲು ಪಾಲು ನಿನ್ನದು ಕಾಲು ಭಾಗ ನನ್ನದು.
ನನ್ನ ಪಾಲು ತಿಂದಾದ ಮೇಲೆ ಚೂರು ಚೂರು ಕೊಟ್ಟು ಜಾಸ್ತಿ ಪಾಲು ನಂದಾಗಿರುತ್ತಿತ್ತು.
ಆ ಗೇರು ಮರ ನನ್ನದು, ಈ ಮರ ನಿನ್ನದು.
ಇ ಕುರ್ಚಿ ನಂದು ಅದು ನಿಂದು
ಇ ಹಣ್ಣಿನ ಮರ ನಂದು ನಾನು ನೆಟ್ಟಿದ್ದು ನನಗೆ ಹಮಾ ಪಾಲು, ಇ ಹೂವಿನ ಗಿಡ ನಾನು ನೆಟ್ಟಿದ್ದು ನನಗೆ ಜಾಸ್ತಿ ಹೂ ಬೇಕು.
ಆ ಎಮ್ಮೆಕರ ಕೋಣ ನನ್ನದು ಉಳಿದವು ನಿನ್ನವು.
ಹುಟ್ಟಿದ ಕರುವಿಗೆ ಮೊದಲು ಯಾರ್ ಹೆಸರಿಡ್ತರೊ ಅದೆ ಇರಬೇಕು, ಯಾವುದಕ್ಕು ನಿನ್ನದಲ್ಲವೆಂದರೆ ಅತ್ತು ಕರೆದು ನಿನ್ನದಾಗಿಸಿಕೊಳ್ಲುತ್ತಿದ್ದೆ.
ಕಬ್ಳಿ, ಬುಕ್ಕಿ, ಮುಳ್ಳಣ್ಣು, ನೇರಲೆ ಹಣ್ಣು, ಬೆಲ್ಲದಣ್ಣು, ನೆಲ್ಲಿಕಾಯಿ, ಸೀಜನ್ನಿನ ಎಲ್ಲಾ ಹಣ್ಣುಗಳು ನನ್ನದು ಗಿಡ ಮರದ ಬುಡದಲ್ಲೆ ಹೊಟ್ಟೆ ಸೇರಿದ್ದರೆ, ನೀನು ಎಲ್ಲಾ ಕೂಡಿಟ್ಟು ಬರುವಾಗ ತಿನ್ನೋಕೆ ನಂಗೊಂದು ನಿಂಗೊಂದು ಅದರೆ ಉಳಿದ ಕೆಲವು ಮನೆಯಲ್ಲಿ ಅಮ್ಮನಿಗೆ ಅರ್ಪಿತ, ಈಗಲು ಅದೆ ನಿಯಮ ಪಾಲನೆಯಾಗುತ್ತದೆಯಲ್ಲವೆ....
ನಂದು ಐದು ನಿಂದು ಮೂರು ತರಗತಿ ಮುಗಿಯುತ್ತಿದ್ದಂತೆ ಹತ್ತು ವರ್ಷ ದೂರಾಗಿಯೆ ಬದುಕಿದ್ದೇವೆ.
ಹಾಸ್ಟೆಲ್ ನ ವಾರ್ಡನ್ ಗಳ ಮೊಬೈಲೆ ನಮ್ಮ ಸಂಪರ್ಕ ಸೇತುವೆ ಕರೆ ಕಟ್ ಆದರು ಅಣ್ಣತಂಗಿಯ ಪ್ರೀತಿಯಾಧರದ ಬೇಲಿ ಗಟ್ಟಿ ಆಗಿತ್ತು.
ಇಂದಿಗು ನಾವಿಬ್ಬರು ನನಗೆ ನೀನಂದರೆ ಇಷ್ಟಪ್ರಾಣವೆಂದು ಬಾಯಿ ಬಿಟ್ಟು ಹೇಳಲಾರೆವು.
ಯಾರಿಗೆ ನೋವಾದರು ಮರಗುವುದು ಮನದಲ್ಲಿ, ಮಾತು ಬರಲಾರದು ಬಾಯಲ್ಲಿ.
ನಾವಿಬ್ಬರು ಬೆಳೆದು ಬಂದ ದಾರಿಯ ಬಗ್ಗೆ ಇಂದಿಗೂ ಎಂದೆಂದಿಗೂ ಹೆಮ್ಮೆ ಇದೆ, ಸುಸಂಕೃತರಾಗಿ ವಿಧ್ಯಾವಂತರಾಗಿ ಬೆಳೆದವಲ್ಲವೆ ನಾವು.
ಮೋಸ ಕಲಿಯಲಿಲ್ಲ ಸುಳ್ಳು ಕಲಿಯಲಿಲ್ಲ,
ನಮ್ಮದೆಂಬ ಅಹಂಕಾರ ಯಾವತ್ತು ಬರಲಿಲ್ಲ
ಇದ್ದು ಕೇಳಿದ್ದನ್ನು ಕೊಟ್ಟು ಬಿಡುವರಾಗಿ,
ದುರ್ಬಲರ ಪರವಾಗೆ ಯಾವಗಲೂ ಮನ ಇರುವಂತೆ
ನಮ್ಮನ್ನ ಬೆಳೆಸಿದರು ಇದಕ್ಕೆಲ್ಲ ಕಾರಣ ಯಾವಾಗಲು ಬಂದಾಗ ಒಳ್ಳೆಯ ವಿಚಾರ ಮಾತಾಡುತ್ತಿದ್ದ ಮನೆಗೆ ಬಂದ ಹಿರಿಯರು ಅವರ ಕತೆಗಳು, ವಿಚಾರಗಳು ಒಟ್ಟಿನಲ್ಲಿ ದೊಡ್ಡವರ ದಾರಿ, ಇದನೆಲ್ಲ ಪಡೆದು ಕಲಿತು ಬಂದ ನನ್ನ ಜೊತೆಗಾರ್ತಿ ನೀನು, ಇದೆಲ್ಲದರ ಬಗ್ಗೆ ಯಾವತ್ತಿಗು ಹೆಮ್ಮೆ ಇದೆ ನನ್ನಲ್ಲಿ.
" ನಿನ್ನ ಅಪ್ಪ ಮನೆ ಕೊಟ್ಟ", "ದೂರದ ಸಾಗರದೂರಿಗೆ ಕರೆದು ಕೊಂಡು ಹೋಗಿ ಕಾರ್ಡ್ ಮಾಡಿಸಿಕೊಟ್ಟ" "ಸಂದ್ಯಾಸರಕ್ಷ ಮಾಡಿಸಿದ" ಎಂದೆಲ್ಲ ಹೇಳಿ ಮುಖ ಕೈ ತಲೆ ಸವರಿ ಮನಸಾರೆ ಹಾರೈಸುವ ನೂರಾರು ಹಿರಿತಲೆಗಳ ಅಶಿರ್ವಾದ ನಿನಗೆ ಎಂದಿಗೂ ಇರುತ್ತದೆ. ನನ್ನ ಹಾರೈಕೆ ನಿನಗೆ ಯಾವಗಲು ನನ್ನ ಮನದಲ್ಲೆ ಇರುತ್ತದೆ ಅದನೆಂದು ಬಾಯಿಂದ ಹೇಳಲಾರೆ.
ನಮ್ಮಿಬ್ಬರ ಜೀವನ ಪಯಣ ಇ ಕೆಲವು ಪದಗಳಲ್ಲಿ ಬರೆದು ಎಂದಿಗು ಮುಗಿಸಲಾರೆ.
ಈ ನನ್ನ ಸಣ್ಣ ಪತ್ರ ನಿನಗೆ ನಿನ್ನ ಜನುಮದಿನದಂದು ತಲುಪಿಸುತ್ತಿದ್ದೇನೆ.
ಹುಟ್ಟು ಹಬ್ಬದ ನಲುಮೆ ಒಲುಮೆಯ ಶುಭಾಷಯ ನಿನಗೆ
ಸಂಗೀತಾ......
💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖
ReplyDeleteDanyavadagaluuuu💞🤩🤩
ReplyDelete😍😍No words..
ReplyDeleteBrother and sister bonding ❤❤