"ಬೋರ್ಡ್ ಕಳ್ಳನ" ಕಾಂಕ್ರೀಟ್ ರೋಡ್ ಪಿತೂರಿ ಇಲ್ಲಿದೆ ಈ ಹೊತ್ತಿನ ಕಂಪ್ಲೀಟ್ ಅಪ್ಡೇಟ್ಸ್.
ನಮಸ್ತೆ ಸ್ನೇಹಿತರೆ...
ನಮ್ಮ ಈ ಹಿಂದಿನ ಪೋಸ್ಟ್ ನಲ್ಲಿ ಊರಿನ ಎಲ್ಲ ಜನರಿಗೆ ಉಪಯೋಗ ಆಗಬೇಕಾಗಿದ್ದ ಕಿರತೋಡಿ ಸೇತುವೆಯಿಂದ ಶುರುವಾಗ ಬೇಕಾಗಿದ್ದ ಕಾಂಕ್ರೀಟ್ ರೋಡನ್ನು ಇಂಜಿನಿಯರ್ ಜೊತೆ ಸೇರಿ ತನ್ನ ಮನೆಯ ಹತ್ತಿರ ಮೋಸದಿಂದ ಜಿಪಿಎಸ್ ಮಾಡಿಸಿದ್ದು ಹೇಗೆಂದು ತಿಳಿಸಲಾಗಿದೆ.
ಈ ದಿನ ಅದರ ಹಿಂದಿನ ಕತೆ ಮತ್ತು ಪ್ರಸ್ತುತ ಮಾಹಿತಿ ಬಗ್ಗೆ ಬೆಳಕು ಚೆಲ್ಲಿದ್ದೇವೆ.
ದುಡ್ಡು ಹೊಡೆಯಲು ನಡೆದಿತ್ತು ಪ್ಲಾನ್
ಈ ಕಾಂಕ್ರೀಟ್ ರೋಡನ್ನು ಮೊದಲು ಬರಿ "ಬಂಗಾರಪ್ಪನವರ ಮನೆಗೆ ಹೋಗುವ ರಸ್ತೆ" ಎಂದು ಕ್ರಿಯಾ ಯೋಜನೆ ಹೆಸರು ಸೇರಿಸಿ ಬರಿ ಚಿರಂಡಿ ಮಣ್ಣು ಎತ್ತಾಕಿ ಮಣ್ಣು ರಸ್ತೆಗೆ ಗ್ರಾವೆಲ್ ಹಾಕಿಸಿ ದುಡ್ಡು ಹೊಡೆಯುವ ಪ್ಲಾನ್ ಆಗಿತ್ತು (ಸೇಮ್ ಟು ಸೇಮ್ ಏಳಿಗೆ ರಸ್ತೆಗೆ ಮಾಡಿದ ಹಾಗೆ - ನಿಮ್ಮ ನೆನಪಿಗೆ ತರುತ್ತೇನೆ ಸರಿಯಾಗಿ ಐವತ್ತು ಸಾವಿರಗಳ ರುಪಾಯಿ ಕೆಲಸ ಏನಾದರು ನಡೆದಿತ್ತಾ ಅಲ್ಲಿ?) ಏಳಿಗೆ ರಸ್ತೆಗೆ ಮಾಡಿದ ಗತಿ ಇಲ್ಲೂ ಆಗುತಿತ್ತು, ಐದು ಲಕ್ಷಕ್ಕೆ ಎಷ್ಟು ಲಕ್ಷ ಕಂಟ್ರಾಕ್ಟರ್ ಮತ್ತು ಇಂಜಿನಿಯರ್ ಪಾಲಾಗುತಿತ್ತೊ ದೇವರಿಗೆ ಗೊತ್ತು.
ಆದರೆ.. ಆದರೆ.. ನಾವು ಅದಕ್ಕೆ ಅವಕಾಶ ನೀಡಲಿಲ್ಲ
೫ ಲಕ್ಷದ ಮಣ್ಣು ರಸ್ತೆಯನ್ನು ಕಾಂಕ್ರಿಟ್ ಎಂದು ಬದಲಾಯಿಸಲಾಯಿತು ಇದರ ಹಿಂದಿನ ಉದ್ದೇಶ ಮಣ್ಣು ರಸ್ತೆ ಮಾಡಿಸಿ ದುಡ್ಡು ಹೊಡೆಯುವದ ತಪ್ಪಿಸಬೇಕು ಮತ್ತು ಈಗ ಸ್ವಲ್ಪ ಕಾಂಕ್ರೀಟ್ ರಸ್ತೆ ಆದರೆ ಮುಂದಿನ ದಿನಗಳಲ್ಲಿ ಅದನ್ನ ಮುಂದುವರಿಸಿಕೊಂಡು ಹೋಗಬಹುದು.
ಇಂಜಿನಿಯರ್ ಕಳ್ಳಾಟ ಬಯಲು
ಇಂಜಿನಿಯರ್ ಬರುವ ಮೊದಲೆ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಅಡಗಳಲೆ ವಿಜಯರವರು ಸೇರಿ ಕಿರತೋಡಿ ಸೇತುವೆಯಿಂದ ಸರ್ಕಲ್ ವರೆಗೆ ಜಿಪಿಎಸ್ ಮಾಡಿಸಿ ಅಲ್ಲೆ ಆಗಬೇಕು ಎಂದು ಮೊದಲೆ ರಿಪೋರ್ಟ್ ಕಳಿಸಿದ್ದರು.
ಆದರೆ ಇಂಜಿನಿಯರ್ ಬರುವ ದಿನ ಅವರ ಜೊತೆಗೆ ನುಣ್ಣಗೆ ಮಾತನಾಡಿ ಪುಸಲಾಯಿಸಿ ನಿಟ್ಟೂರಿನಿಂದ ಸ್ವಂತ ಕಾರಿನಲ್ಲಿ ಹೈಜಾಕ್ ಮಾಡಿ ತನ್ನ ಮನೆಯ ಹತ್ತಿರ ಜಿಪಿಎಸ್ ಮಾಡಿಸಿದ್ದಾನೆ ಇ ಆಸಾಮಿ.
ನಾವು ಇಂಜಿನಿಯರ್ ಸಂಪರ್ಕ ಮಾಡಿ ಕೇಳಿದಾಗ ಈ ಮೊದಲೆ ಜನವಸತಿ ಇರುವಂತ ಬಂಗಾರಪ್ಪನ ಮನೆಯ ಹತ್ತಿರ ಜಿಪಿಎಸ್ ಮಾಡಿಸಿದ್ದೆ ಎಂದು ಸುಳ್ಳು ಹೇಳಿದ್ದರು ಆದರೆ ಆ ಇಂಜಿನಿಯರ್ ಬಂದಿದ್ದೆ ನಾವು ಅವರಿಗೆ ಕಾಲ್ ಮಾಡಿದ ದಿನ. ಈ ಮೊದಲು ಯಾವ ಇಂಜಿನಿಯರ್ ಕೂಡ ಬಂದಿರಲಿಲ್ಲ. ಜಿಪಿಎಸ್ ಮಾಡಿಸಿ ರಿಪೋರ್ಟ್ ಕಳಿಸಿದ್ದು ಪಂಚಾಯತ್ ಸದಸ್ಯರು ಅದು ಸೇತುವೆ ಬಳಿ.
ಸಾಗರ ಶಾಸಕರಿಗೆ ತಲುಪಿದ ಸುದ್ದಿ, ತಾತ್ಕಾಲಿಕವಾಗಿ ಕೆಲಸಕ್ಕೆ ಬ್ರೇಕ್
ನಿನ್ನೆ ನಾವು ರಿಪೋರ್ಟ್ ಮಾಡಿದ ಈ ವಿಚಾರ ಶಾಸಕರ ಕಛೇರಿ ತಲುಪಿದೆ. ಖುದ್ದಾಗಿ ನಾವೆ ಈ ವಿಚಾರವಾಗಿ ಇಂಜಿನಿಯರ್ ಮತ್ತು ಶಾಸಕರ ಪಿ.ಎ ರವರ ಬಳಿ ಮಾತನಾಡಿ ರಸ್ತೆ ಎಲ್ಲಿ ಆಗಬೇಕಿತ್ತೊ ಅಲ್ಲೆ(ಕಿರತೋಡಿ ಸೇತುವೆಯಿಂದ) ಮಾಡಿಸಬೇಕು ಇದರಿಂದಾಗಿ ಎಲ್ಲರಿಗು ಅನುಕೂಲವಾಗಲಿದೆ ಎಂಬ ಅಂಶವನ್ನು ಅರ್ತೈಸಿದೆವು, ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಕೆಲಸಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
ಈ ಕೆಲಸ ಶುರುವಾದಾರೆ ಜನರಿಗೆ ಉಪಯೋಗ ಆಗುವಂತ ಕಿರತೋಡಿ ಸೇತುವೆಯಿಂದ ಶುರು ಆಗಬೇಕು ಎನ್ನುವುದು ಗ್ರಾಮಸ್ತರ ಆಶಯ, ಈ ಕುರಿತು ಸ್ಪಷ್ಟವಾಗಿ ನಮ್ಮ ಅಬಿಪ್ರಾಯ ವ್ಯಕ್ತ ಪಡಿಸಲಾಗಿದೆ ಮೋಸದಿಂದ ಅದು ಮಧ್ಯ ಮಧ್ಯದಲ್ಲಿ ಕಂಕ್ರೀಟ್ ರಸ್ತೆ ಮಾಡಿಸಿ ಅಲ್ಲೂ ನಿಂಗಿ ನೂರು ಕುಡಿಯುವ ಬದಲು ಎಲ್ಲ ಜನರಿಗು ಉಪಯೋಗ ಆಗುವ ಕಡೆಗೆ ಈ ಕಾಮಗಾರಿ ನಡೆಯಬೇಕೆಂಬುದು ನಮ್ಮ ಆಶಯ.
....…........
*ಈ ದಿನದ ಸ್ಪೆಷಲ್ ಕತೆ ನಿಮ್ಮ ಜತೆ*
ಇದು ಹರಕೆಯ ಕುರಿಯ ಕತೆ ಅಲ್ಲಲ್ಲ... ವ್ಯತೆ
ಮೊನ್ನೆ ಬರುವೆ ಪಂಚಾಯತಿ ಕಟ್ಟೆಯಲ್ಲಿ ಯಾರೋ ಈ ಕತೆ ಹೇಳ್ತಾ ಇದ್ರು ಕೇಳಿ ಸೊಗಸಾಗಿದೆ
ಒಂದೂರಲ್ಲಿ ಕುರಿ ಮರಿ ಇತ್ತು ಆ ಕುರಿಮರಿಗೆ ತನ್ನಪ್ಪ ಮಾತ್ರ ಸಾಚಾ ಎಂದು ತಿಳಿದುಕೊಂಡಿತ್ತು ಬೇರೆಯವರ ಅಪ್ಪನ ಬಗ್ಗೆ ಕೂಗುವ ಚಾಳಿ ಇತ್ತು.
ಅಪ್ಪ ಕುರಿಯ ಬಗ್ಗೆ ಮಾತಾಡಿದಾಗೆಲ್ಲ ಮರಿ ಕುರಿ ಗಂಟೆ ಹೊಡೆಯಲು ಕರೆಯುತಿತ್ತು.
ಮರಿ ಕುರಿ ಗೆ ಗೊತ್ತಿ(ದ್ದ)ರದ ಸಂಗತಿ ಏನೆಂದರೆ ತನ್ನಪ್ನನ ಕುರಿಯ ಗಂಟೆ ಹೊಡೆದಿದ್ದರೆ (ಒಡೆದಿದ್ದರೆ) ಇಷ್ಟೊತ್ತಿಗೆ ಕುರಿ ಹಗಲು ಹೊತ್ತು ಬಿಟ್ಟಿಯಾಗಿ ಮೇಯುವುದು ಒಂದು ಮನೆಯಲ್ಲಿ ರಾತ್ರಿ ಹೊತ್ತು ಕದ್ದು ಮೇಯುವುದು ಇನ್ನೊಂದು ಮನೆಯಲ್ಲಿ ತಪ್ಪುತ್ತಿತ್ತು ಎಂಬ ವಿಚಾರ. (ಇದನ್ನು ಮರಿ ಕುರಿ ಅರ್ತೈಸಿಕೊಂಡು ಕಂಡವರ ಮನೆಯ ವಿಚಾರಕ್ಕೆ ಬ್ಯಾ ಬ್ಯಾ ಬ್ಯಾ ಅನ್ನದೆ ಒಳ್ಳೆಯ ಮೇವನ್ನು ತಿಂದು ಬಾಳಿ ಬದುಕಬೇಕೆಂಬುದು ನಮ್ಮ ಆಶಯ) ಇದು ಕುರಿಯ ಪರ್ಸನಲ್ ವಿಚಾರ ನಮಗ್ಯಾಕೆ, ಆದರೆ.. ಆದರೆ.. ಸಾರ್ವಜನಿಕ ಹಣವನ್ನು ಕದ್ದು ತಿನ್ನಲು ಕುರಿ ಮತ್ತೊಮ್ಮೆ ಪ್ರಯತ್ನ ಪಟ್ಟರೆ.. ಪಟ್ಟರೆ.. ಹರಕೆಯ ಕುರಿಯನ್ನು ಬಲಿ ಹಾಕಲು ವಿದ್ಯಾವಂತ ಹಿರಿಯ ನಾಗರಿಕ ಮತ್ತು ಯುವ ಸಮುದಾಯ ನಮ್ಮಲ್ಲಿ ಇದೆ ನಾವು ಎಲ್ಲವನ್ನು ಸೂಕ್ಷ್ಮವಾಗಿ ಗಮನ ಹರಿಸುತ್ತಾ ಇರ್ತೇವೆ, ಕುರಿಯ ಗಂಟೆಯನ್ನು ಎಲ್ಲಿ ಒಡೆಯಬೇಕೊ ಅಲ್ಲೆ ಒಡೆಯುತ್ತೇವೆ ಎಂದು ಕೊಳ್ಳುತ್ತಾ ನಡೆದರು ಪಂಚಾಯ್ತಿ ಕಟ್ಟೆಯ ಜನರು.
...............
©️ಸಿರಿಗನ್ನಡನಾಡಿ ಮೀಡಿಯಾ (ನಕ್ಷತ್ರಾಕ್ಷ)
Comments
Post a Comment