ಬೋರ್ಡ್ ಕಳ್ಳ, ಸಾಗರ ಶಾಸಕ ಬೇಳೂರು ಬೆಂಬಲಿಗನಿಂದ ಮತ್ತೊಂದು ಮೋಸ?
ನಾನು ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣರ ಹಿತೈಷಿ ಮತ್ತು ಬೆಂಬಲಿಗ ಹಾಗು ಗ್ರಾಮ ಪಂಚಾಯಿತಿ ಸದಸ್ಯ ಎಂದು ಸುಳ್ಳು ಹೇಳಿಕೊಂಡು ಈ ಹಿಂದೆ ಹಲವಾರು ರೀತಿ ಜನರಿಗೆ ಮತ್ತು ಅಧಿಕಾರಿಗಳಿಗೆ ಮೋಸ ಮಾಡಿಕೊಂಡು ತಿರುಗುತ್ತಿದ್ದ ಈ ವ್ಯಕ್ತಿ ಮತ್ತೆ ಬರುವೆ ವಾರ್ಡಿನ ಜನರಿಗೆ ಮೋಸ ಮಾಡಿರುವುದು ಬಯಲಿಗೆ ಬಂದಿದೆ.
ಹಿಂದೆ ಕೂಡ ಬೋರ್ಡ್ ಕದ್ದು ಕಂಪ್ಲೆಂಟ್ ಕೊಡಲಾಗಿತ್ತು
ಕೆಲವು ತಿಂಗಳ ಹಿಂದಷ್ಟೇ ಪಕ್ಕದ ಊರಿನ ನಿಟ್ಟೂರು ಪಂಚಾಯಿತಿಗೆ ಸಂಬಂಧಿಸಿದ ಬೋರ್ಡ್ ಕದ್ದು ಸುದ್ದಿಯಾಗಿದ್ದ ಈತ ಈಗ ಕಿರತೋಡಿ ಸೇತುವೆಯಿಂದ ಶುರುವಾಗಿ ಜಲಂಧರ ಅವರ ಮನೆಯವರೆಗೆ ಜಿಪಿಎಸ್ ಮೂಲಕ ಮಂಜೂರಾದ ಕಾಂಕ್ರೀಟ್ ರಸ್ತೆಯನ್ನು ತನ್ನ ಮನೆಯ ಹತ್ತಿರ ಅಕ್ರಮವಾಗಿ ಅಧಿಕಾರಿಗಳಿಗೆ ಶಾಸಕರ ಕಣ್ಣಿಗೆ ಮಣ್ಣೆರಚಿ ಊರಿನ ಎಲ್ಲಾ ಜನರಿಗೆ ಉಪಯೋಗ ಆಗಬೇಕಾಗಿದ್ದ ರಸ್ತೆಯನ್ನು ತನ್ನ ಸ್ವ ಲಾಭಕ್ಕಾಗಿ ಉಪಯೋಗ ಮಾಡಿಕೊಳ್ಳುತ್ತಿದ್ದಾನೆ.
ಕಣ್ಣಿದ್ದು ಕುರುಡಾದರಾ ಇಂಜಿನಿಯರ್?
ಪರಿಶೀಲನೆ ನಡೆಸಲು ಬಂದಿದ್ದ ಇಂಜಿನಿಯರ್ ರವರು ಶಾಸಕರ ಬೆಂಬಲಿಗ ಎಂದು ಹೇಳಿಕೊಂಡು ಮೋಸ ಮಾಡುತ್ತಿರುವ ಈತನ ಕಾರಿನಲ್ಲೆ ಬಂದು ಜಿಪಿಎಸ್ ಆಗಿದ್ದ ಜಾಗದಲ್ಲಿ ಪರಿಶಿಲನೆ ನಡೆಸದೆ ಆತನ ಮನೆಯ ಹತ್ತಿರ ಹೋಗಿ ರಸ್ತೆ ನೋಡಿಕೊಂಡು ಬಂದಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ, ಊರಿನ ಜನರ ಒಳಿತಿಗೆ ಎಲ್ಲಿ ರಸ್ತೆ ಆಗಬೇಕಾಗಿತ್ತೊ ಅಲ್ಲಿ ಆಗದೆ ಬೇರೆಡೆ ಯಾಕೆ ಆಗುತ್ತಿದೆ ಎಂಬ ಪ್ರಶ್ನೆಗಳಿಗೆ ಇಂಜಿನಿಯರ್ ಏನು ಉತ್ತರ ಕೊಡುತ್ತಾರೆ ಕಾದು ನೋಡಬೇಕಾಗಿದೆ
ಬರುವೆ ವಾರ್ಡಿನ ಗ್ರಾಮ ಪಂಚಾಯತಿ ಸದಸ್ಯರು ಈ ಬಗ್ಗೆ ಇಂಜಿನಿಯರ್ ಬಳಿ ಪ್ರಶ್ನೆ ಮಾಡಿದಾಗ "ಸಾಹೇಬ್ರು ಬರ್ತಾರೆ" ಎಂಬ ಸಬೂಬು ನೀಡಿ ನುಣುಚಿಕೊಂಡಿದ್ದಾರೆ.
*ಹೋರಾಟ, RTI, ಮತ್ತು ತನಿಖೆ ಮಾಡಿಸಲು ಗ್ರಾಮಸ್ಥರ ಸಿದ್ಧತೆ.*
ಊರ ಅಭಿವೃದ್ಧಿಗೆ ಆಗಬೇಕಿದ್ದ ರಸ್ತೆಯನ್ನು ತನ್ನ ಮನೆಯ ಸ್ವಂತ ಹಿತಕ್ಕೆ ಬಳಸಿದಂತ ಈ ಮೋಸವನ್ನು ವಿರೋಧಿಸಿ ಊರ ಗ್ರಾಮಸ್ತರು ಈ ಬಗ್ಗೆ ಮೊದಲು ಶಾಸಕರಿಗೆ ಮಾಹಿತಿ ಸಲ್ಲಿಸಿ ನಂತರ RTI ಮೂಲಕ ಮಾಹಿತಿ ಪಡೆದು ಹೋರಟ ನಡೆಸಲು ಹಾಗು ಸಂಬಂದ ಪಟ್ಟವರ ವಿರುದ್ದ ತನಿಖೆ ನಡೆಸುವಂತೆ ಸಂಬಂಧಿಸಿದ ಇಲಾಖೆಗೆ ಮತ್ತು ಅಧಿಕಾರಿಗಳಿಗೆ ಮನವಿ ನೀಡಲು ಯೋಚಿಸಿದ್ದಾರೆ.
*ಈ ವಿಚಾರದಲ್ಲಿ ಶಾಸಕರ ಮತ್ತು ಇಂಜಿನಿಯರ್ ನಿಲುವು ಏನು?*
ಪದೇ ಪದೇ ಶಾಸಕರ ಬೆಂಬಲಿಗ ಎಂದು ಹೇಳಿಕೊಂಡು ಬರುವೆ ವಾರ್ಡಿನ ಏಳಿಗೆ, ಕಿರತೋಡಿ ಮತ್ತು ಬರುವೆ ಊರಿನಲ್ಲಿ ನಡೆಯಬೇಕಾಗಿದ್ದ ಅಭಿವೃದ್ಧಿ ಕೆಲಸಗಳಿಗೆ ಮೂಗು ತೂರಿಸಿ ಶಾಸಕರಿಗೆ ಕೆಟ್ಟ ಹೆಸರು ತರುತ್ತಿರುವ ಈತನ ನಡುವಳಿಕೆ ಬಗ್ಗೆ ಶಾಸಕರು ಗಮನಹರಿಸಿ ಈತ ನಡೆಸುತ್ತಿರುವ ದುಷ್ಕೃತ್ಯಗಳಿಗೆ ಕಡಿವಾಣ ಹಾಕಿಸಬೇಕಿದೆ.
ಈ ಬಗ್ಗೆ *ಮಾಹಿತಿ ಕೇಳಲು ನಾವು ಇಂಜಿನಿಯರ್ ಮತ್ತು ಶಾಸಕರನ್ನು ಸಂಪರ್ಕಿಸಿದಾಗ:*
*ಶಾಸಕರ ಕಛೇರಿ ಮಾಹಿತಿ* ಇಂತಿದೆ - "to be filled once get info."
*ಇಂಜಿನಿಯರ್* name to be filled ಸಂಪರ್ಕಿಸಿದಾಗ:
" ನಾವು ZP ಅಡಿಯಲ್ಲಿ ಮಂಜೂರಾದ ಐದು ಲಕ್ಷ ಹಣಕ್ಕೆ ಕಿರತೋಡಿ ಬಂಗಾರಪ್ಪನವರ ಮನೆಯ ಹತ್ತಿರ ಎಪ್ಪತ್ತು ಮೀಟರ್ ಕಾಮಗಾರಿ ನಡೆಸಲು ಅಲ್ಲೆ ಜಿಪಿಎಸ್ ಮಾಡಿದ್ದೇವೆ ಸಾಗರ ಶಾಸಕರ ಪಿ.ಎ ಆದ ಶ್ರಿನಿವಾಸರು ಸೂಚನೆ ಮೇರೆಗೆ ನಾವು ಜನವಸತಿ ಇರದ ( ಅಂದರೆ ಎಲ್ಲರಿಗು ಉಪಯೋಗ ಆಗಬೇಕಿದ್ದ ಸೇತುವೆಯಿಂದ ಸರ್ಕಲ್(ಜಲಂದರವರ ಮನೆ)) ಕಡೆಗೆ ರಸ್ತೆ ಮಾಡದೆ ಜನವಸತಿ(ಸ್ವಂತಕ್ಕೆ) ಇರುವಂತ ಬಂಗಾರಪ್ಪನವರ ಮನೆಯ ಬಳಿ ಮಾಡಿಸಲು ಅನುಮತಿ ದೊರಕಿದೆ ."
-- ಸಿರಿಗನ್ನಡನಾಡಿ ಸುದ್ದಿ ಮೀಡಿಯಾ ( *ನಕ್ಷತ್ರಾಕ್ಷ* )
Comments
Post a Comment