ರಸ ಪ್ರಶ್ನೆ................
ಅತ್ಯಂತ ಕುತೂಹಲಕಾರಿ ಕಥೆ ಮತ್ತು ನಿಮ್ಮ ಆತ್ಮಸಾಕ್ಷಿ ಬಡಿದೆಬ್ಬಿಸುವ ಪ್ರಶ್ನೆ.........
ದಯವಿಟ್ಟು ತಪ್ಪದೆ ತಾಳ್ಮೆಯಿಂದ ಓದಿ.....
ಉತ್ತರಿಸಿ - ಬಹುಮಾನ ಗೆಲ್ಲಿರಿ.......
ನಿಮ್ಮ ಉತ್ತರ ಸರಿ ಇದ್ದರೆ ಭಾರತ ದೇಶ ಗೆಲ್ಲುತ್ತದೆ. ನಿಮ್ಮ ಉತ್ತರ ತಪ್ಪಾದರೆ ಭಾರತ ಸೋಲುತ್ತದೆ.
ಆಳವಾಗಿ ಯೋಚಿಸಿ ಉತ್ತರಿಸಬೇಕೆಂದು ಕಳಕಳಿಯ ಮನವಿ......
ಈ ಕೆಳಗಿನ ಸಣ್ಣ ಕಥೆ ಓದಿ ಅದರಲ್ಲಿ ಅಡಗಿರುವ ಮತ್ತು ಕೆಳಗೆ ಕೇಳಿರುವ ಪ್ರಶ್ನೆಗೆ ಉತ್ತರಿಸಿ.....
ಕಥೆ........
***********
ವಿಶ್ವದಲ್ಲಿ ನಡೆದ ಪ್ರಕೃತಿ ವಿಕೋಪ ಮತ್ತು ಯುದ್ದದ ಪರಿಣಾಮವಾಗಿ ಇಡೀ ವಿಶ್ವ
" ವಿಶ್ವಸಂಸ್ಥೆಯ " ನಿಯಂತ್ರಣಕ್ಕೆ ಒಳಪಡುತ್ತದೆ. ವಿಶ್ವಸಂಸ್ಥೆ ಎಲ್ಲಾ ದೇಶಗಳಲ್ಲೂ ಅಧ್ಯಕ್ಷೀಯ ಮಾದರಿಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಒಬ್ಬೊಬ್ಬ ನಾಯಕರನ್ನು ಆರಿಸಿ ಚುನಾವಣೆ ನಡೆಸಿ ಅವರಲ್ಲಿ ಶೇಕಡಾ ೯೦% ಮತ ಪಡೆದ ವ್ಯಕ್ತಿಯನ್ನು ಆ ದೇಶದ ಮುಖ್ಯಸ್ಥನಾಗಿ ಆಯ್ಕೆ ಮಾಡಲಾಗುತ್ತದೆ. ಶೇಕಡಾ ೯೦% ರಷ್ಟು ಬಹುಮತ ಬರದಿದ್ದರೆ ಪಕ್ಕದ ದೇಶದ ಅಧ್ಯಕ್ಷರನ್ನು ನೇಮಿಸಲಾಗುತ್ತದೆ. ಅಂದರೆ ಭಾರತಕ್ಕೆ ಪಾಕಿಸ್ತಾನ ಅಥವಾ ಚೀನಾದ ಮುಖ್ಯಸ್ಥರೇ ಪ್ರಧಾನಿಗಳಾಗುವರು.
ಭಾರತದಲ್ಲಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯ ನಡುವೆ ಸ್ಪರ್ಧೆ ಏರ್ಪಡುತ್ತದೆ. ಇಬ್ಬರ ಮಧ್ಯೆ ಜಿದ್ದಾ ಜಿದ್ದಿ ಪೈಪೋಟಿ ಇರುತ್ತದೆ.
ಎಂದಿನಂತೆ ಸಂಘ ಪರಿವಾರ, ಧಾರ್ಮಿಕ ಮುಖಂಡರು, ಬಲಪಂಥೀಯ ಚಿಂತಕರು ಮತ್ತು ಇತರರು ಮೋದಿಯ ಪರವಾಗಿಯೂ, ಜಾತ್ಯಾತೀಯರು, ದಲಿತ ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಎಡಪಂಥೀಯರು ಹಾಗು ಇತರರು ರಾಹುಲ್ ಪರವಾಗಿಯೂ ಪ್ರಚಾರ ಮಾಡುತ್ತಾರೆ.
ಫಲಿತಾಂಶ ಬಂದಾಗ ಮೋದಿಗೆ ಶೇಕಡಾ ೫೫% ಮತ್ತು ರಾಹುಲ್ ಗೆ ಶೇ ೪೫℅ ಮತಗಳು ಬಂದಿರುತ್ತದೆ. ಯಾರಿಗೂ ೯೦% ಮತ ಬರುವುದಿಲ್ಲ.
ವಿಶ್ವಸಂಸ್ಥೆಗೆ ತಳಮಳ ಶುರುವಾಗುತ್ತದೆ. ಇಷ್ಟೊಂದು ವೈವಿಧ್ಯಮಯ ದೇಶಕ್ಕೆ ಪಾಕಿಸ್ತಾನದ ಇಮ್ರಾನ್ ಖಾನ್ ಅವರನ್ನು ಪ್ರಧಾನಿ ಮಾಡಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಆದರೂ ಅದು ಕೊನೆಯದಾಗಿ ಇನ್ನೊಂದು ಅವಕಾಶ ಕೊಡುತ್ತದೆ.
ಮತ್ತೆ ಮೋದಿಯನ್ನು ಮಾತ್ರ ಬೆಂಬಲಿಸುವವರನ್ನು ಮತ್ತು ರಾಹುಲ್ ಅನ್ನು ಬೆಂಬಲಿಸುವವರನ್ನು ಮಾತ್ರ ಪ್ರತ್ಯೇಕವಾಗಿ ವಿವೇಚನೆಯಿಂದ ಮತ ಚಲಾಯಿಸುವಂತೆ ಮನವಿ ಮಾಡಲಾಗುತ್ತದೆ.
ಈಗ ಮೊದಲಿಗೆ ಮೋದಿ ಪರ ಮತದಾನ.....
ಭಾರತದ ಜನ ಚಿಂತಿಸಿ ಇಮ್ರಾನ್ ಖಾನ್ ಗಿಂತ ಮೋದಿಯೇ ಉತ್ತಮ ಎಂದು ಪರಿಗಣಿಸಿ ಮೊದಲು ರಾಹುಲ್ ಬೆಂಬಲಿಸಿದ್ದ ೨೦% ಜನ ಮೋದಿಯನ್ನು ಬೆಂಬಲಿಸಿದ್ದ ೫೫% ಜೊತೆಗ ಒಟ್ಟು ೭೫% ಮತ ಮೋದಿಗೆ ಬರುತ್ತದೆ. ಉಳಿದ ೨೫% ಜನ ಮಾತ್ರ ಇಮ್ರಾನ್ ಖಾನ್ ಆದರೂ ಪರವಾಗಿಲ್ಲ ಮೋದಿ ಮಾತ್ರ ಈ ದೇಶದ ಪ್ರಧಾನಿ ಆಗಬಾರದು ಎಂದು ಅತ್ಯಂತ ಕಠಿಣ ನಿರ್ಧಾರ ಕೈಗೊಳ್ಳುತ್ತಾರೆ. ಮೋದಿ ಬಹುಮತ ಗಳಿಸಲು ವಿಫಲರಾಗುತ್ತಾರೆ.
ಮತ್ತೆ ರಾಹುಲ್ ಮಾತ್ರ ಬೆಂಬಲಿಸುವವರಿಗೆ ಮತದಾನ ಮಾಡಲಾಗುತ್ತದೆ......
ಈಗ ರಾಹುಲ್ ಬೆಂಬಲದ ೪೫% ಜೊತೆಗೆ ೩೦% ಮೋದಿಯ ಬೆಂಬಲಿಗರು ಮನಸ್ಸು ಬದಲಾಯಿಸಿ ರಾಹುಲ್ ಕೂಡಾ ನಮ್ಮವರೆ ಇಮ್ರಾನ್ ಗಿಂತ ಪರವಾಗಿಲ್ಲ ಎಂದು ಅವರ ಪರವಾಗಿ ಮತ ಚಲಾಯಿಸುತ್ತಾರೆ. ಆಗಲೂ ಅವರ ಮತ ಪ್ರಮಾಣ ೭೫% ಆಗುತ್ತದೆ. ಉಳಿದ ೨೫% ಜನ ಇಮ್ರಾನ್ ಆದರೂ ಪರವಾಗಿಲ್ಲ ರಾಹುಲ್ ಈ ದೇಶದ ಪ್ರಧಾನಿ ಆಗಬಾರದು ಎಂದೇ ಹಠ ಮಾಡುತ್ತಾರೆ. ರಾಹುಲ್ ಸಹ ೯೦% ಮತ ಪಡೆಯಲು ವಿಫಲರಾಗುತ್ತಾರೆ.
ಕೊನೆಗೆ ವಿಶ್ವಸಂಸ್ಥೆ ವಿಧಿ ಇಲ್ಲದೆ ಭಾರತದ ಪ್ರಧಾನಿಯಾಗಿ ಪಾಕಿಸ್ತಾನದ ಇಮ್ರಾನ್ ಖಾನ್ ಅವರನ್ನು ನೇಮಿಸಲಾಗುತ್ತದೆ.
ಇಡೀ ವಿಶ್ವದಲ್ಲಿ ಶೇಕಡ ೯೦% ಜನರು ಒಬ್ಬರನ್ನೇ ಆರಿಸಲಾಗದ ಏಕೈಕ ಅತಿದೊಡ್ಡ ಭಿನ್ನಾಭಿಪ್ರಾಯದ ದೇಶವಾಗಿ ಭಾರತ ದಾಖಲಾಗುತ್ತದೆ.......
ಕಥೆ ಮುಕ್ತಾಯ...........
************
ಈಗ ನಿಮ್ಮ ಪ್ರಶ್ನೆ.
೧) ಬಲಪಂಥ ಎಂದರೇನು ? ಅದು ದೇಶಕ್ಕಿಂತ ಮುಖ್ಯವೇ ?
೨) ಎಡಪಂಥ ಎಂದರೇನು ?
ಅದು ದೇಶಕ್ಕಿಂತ ಮುಖ್ಯವೇ ?
೩) ಹಠ ಎಂದರೇನು ?
ಹೊಂದಾಣಿಕೆ ಎಂದರೇನು ? ದೇಶ ಬೇರೆ ವಿದೇಶಿಗರ ಗುಲಾಮಗಿರಿಗೆ ಒಳಗಾದರೂ ಹಠ ಮುಖ್ಯವೇ ?
೪) ವಿವೇಚನೆ ಇಲ್ಲದೇ ದೇಶ ಹಾಳಾದರೂ ಪಂಥಗಳೇ ಮುಖ್ಯ ಎಂದು ಭಾವಿಸುವಷ್ಟು ಮೂರ್ಖರೇ ಭಾರತೀಯರು ?
೫) ಸಣ್ಣ ಮನಸ್ಸಿನ, ಕೆಟ್ಟ ಹಠದ, ಅಸೂಯೆ ಸ್ವಭಾವದ, ಉಡಾಫೆ ಮನೋಭಾವದ ಸ್ವಾರ್ಥಿಗಳೇ ಭಾರತೀಯರು ?
೬) ಸಮನ್ವಯದ ಕೊರತೆಯಿಂದ ದೇಶವನ್ನು ಅಧೋಗತಿಗೆ ತೆಗೆದುಕೊಂಡು ಹೋಗುತ್ತಿರುವ ಶೇ ೨೫% ಜನರಿಗೆ ತಿಳಿ ಹೇಳುವುದು ಹೇಗೆ ?
ಪ್ರಶ್ನೆಗಳಿಗೆ ಉತ್ತರವನ್ನು ಅತ್ಯಂತ ವಿವೇಚನೆಯಿಂದ ಬರೆಯಿರಿ. ನಿಮ್ಮ ಉತ್ತರ ಭಾರತವೆಂಬ ಬೃಹತ್ ದೇಶವನ್ನು ಉಳಿಸುವಲ್ಲಿ ಮತ್ತು ಅಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಮತ್ತು ನಿಮ್ಮ ಇಡೀ ವ್ಯಕ್ತಿತ್ವವನ್ನೇ ಬದಲಿಸುವಂತ ಹಾಗೂ ಮುಂದಿನ ಪೀಳಿಗೆಯ ನಿಮ್ಮ ಮಕ್ಕಳಿಗೆ ಅನುಕೂಲವಾಗುವಂತ ಬಹುಮಾನ ನಿಮ್ಮದಾಗುತ್ತದೆ.
ಆತ್ಮಸಾಕ್ಷಿಯ ಉತ್ತರದ ನಿರೀಕ್ಷೆಯಲ್ಲಿ......
ಕಥೆ ನಿಜವಾಗುವ ಮುನ್ನ ಎಚ್ಚೆತ್ತುಕೊಳ್ಳಿ.........
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.

Comments
Post a Comment