Skip to main content

ಜಾತಿ ವ್ಯವಸ್ಥೆ ಎಂಬ ಶನಿ ಭಾರತದಲ್ಲಿ ಇಲ್ಲದಿದ್ದರೆ...

ಒಂದು ವೇಳೆ ಭಾರತದಲ್ಲಿ ಜಾತಿ ವ್ಯವಸ್ಥೆ ಇಲ್ಲದಿದ್ದರೆ ಹೇಗಿರುತ್ತಿತ್ತು ಊಹಿಸಿಕೊಳ್ಳೋಣ............. ಮೊದಲಿಗೆ , ಅತಿಹೆಚ್ಚು ಲಾಭವಾಗುತ್ತಿದ್ದುದು ಪ್ರೀತಿಸುವ - ಮದುವೆಯಾಗುವ ಪ್ರೇಮಿಗಳಿಗೆ ಅಂದರೆ ಅವರಿಗೆ ಅಪರಿಮಿತ ಆಯ್ಕೆಗಳಿರುತ್ತಿದ್ದವು. ಸುಮಾರು 100 ಕೋಟಿ ಜನರಲ್ಲಿ ಮದುವೆಯ ಆಸಕ್ತಿ ಇರುವ ಯುವಕ ಯುವತಿಯರು ಮತ್ತು ಪೋಷಕರಿಗೂ ಸಹ ಜಾತಿಯ ಗೊಂದಲವಿಲ್ಲದೆ ತಮಗೆ ಒಪ್ಪಿತವಾದವರನ್ನು ಆರಿಸಿಕೊಳ್ಳಲು ಬಹಳಷ್ಟು ಆವಕಾಶಗಳಿರುತ್ತಿದ್ದವು. ಈಗ ಜಾತಿ ಉಪಜಾತಿ ಕುಲಗೋತ್ರಗಳಿಂದ ಕೆಲವು ಜಾತಿಗಳಲ್ಲಿ ಇರುವವನೇ ಮನ್ಮಥ ಅಥವಾ ಇರುವವಳೇ ಅಪ್ಸರೆ. ಎರಡನೆಯದಾಗಿ, ದಲಿತರು ಬ್ರಾಹ್ಮಣರು ಗೌಡರು ಲಿಂಗಾಯತರು ಕುರುಬರು ಹೀಗೆ ಯಾವ ಬೇದವೂ ಇಲ್ಲದೆ ಸಾಮಾಜಿಕ ವರ್ಗ ಸಂಘರ್ಷಗಳಿಲ್ಲದೆ ಬೌದ್ಧ ಧರ್ಮ - ಜೈನ ಧರ್ಮ - ಸಿಖ್ ಧರ್ಮ ಈಗ ಕೇಳಿಬರುತ್ತಿರುವ ಬಸವ ಧರ್ಮಗಳ ವಿಭಜನೆಯೇ ಇಲ್ಲದೆ ಇಡೀ ಭರತ ಖಂಡವೇ ಒಂದು ಐಕ್ಯತೆಯ ಗೂಡಾಗಿರುತ್ತಿತ್ತು. ಮೂರನೆಯದಾಗಿ, ಮೇಲು ಕೀಳು ಇರುತ್ತಲೇ ಇರಲಿಲ್ಲವಾದ್ದರಿಂದ ಜಾತಿ ಆಧಾರಿತ ಮೀಸಲಾತಿ ಪ್ರಶ್ನೆಯೇ ಬರುತ್ತಿರಲಿಲ್ಲ. ಕೇವಲ ಪ್ರತಿಭೆ ಒಂದೇ ಮಾನದಂಡವಾಗಿ ಪಾಶ್ಚಾತ್ಯ ದೇಶಗಳಂತೆ ನಾವೂ ಅಭಿವೃದ್ಧಿ ಸಾಧಿಸುತ್ತಿದ್ದೆವು. ಹಾಳಾದ ಜಾತಿ ವ್ಯವಸ್ಥೆಯಿಂದ ಮೀಸಲಾತಿ ಅನಿವಾರ್ಯವಾಗಿದೆ ಮತ್ತು ಅದು ಶೋಷಿತರ ಮೂಲಭೂತ ಹಕ್ಕು ಮತ್ತು ಅದನ್ನು ನೀಡುವುದು ಶೋಷಕರ ಕರ್ತವ್ಯ ಕೂಡ. ನಾಲ್ಕನೆಯದಾಗಿ, ಜಾತಿಯ ಕಾರಣಕ್ಕಾಗಿ ಗಬ್ಬೆದ್ದು ಹೋಗಿರುವ ಚುನಾವಣಾ ವ್ಯವಸ್ಥೆ ಒಂದಷ್ಟು ಪಾವಿತ್ರ್ಯವನ್ನು ಉಳಿಸಿಕೊಂಡು ಉತ್ತಮ ಆಡಳಿತಗಾರರು ಆಯ್ಕೆಯಾಗಿ ಪ್ರಜಾಪ್ರಭುತ್ವ ಸ್ವಲ್ಪ ಯಶಸ್ವಿಯಾಗಿ ಜನರ ಜೀವನಮಟ್ಟ ಸುಧಾರಿಸುತ್ತಿತ್ತು.( ಹಣದ ಪ್ರಭಾವ ಇದ್ದೇ ಇದೆ. ಕನಿಷ್ಠ ಜಾತಿ ಭ್ರಷ್ಟತೆ ಎಂಬ ವಿಷ ಇರುತ್ತಿರಲಿಲ್ಲ.) ಐದನೆಯದಾಗಿ, ಜಾತಿ Certificate ಗಳು, ಜಾತಿ ಗಣತೀಕರಣ, ಜಾತಿ ಸಂಘಟನೆಗಳು, ಜಾತಿಗಾಗಿ ಆಗುತ್ತಿರುವ ಅಮಾನವೀಯ ಕೊಲೆಗಳು, ಜಾತಿಗಳಿಂದಾಗುತ್ತಿರುವ ಮಾನಸಿಕ ಹಿಂಸೆ ಯಾವುದೂ ಇಲ್ಲದೇ ಎಷ್ಟೊಂದು ಆರಾಮವಾಗಿ ಇರಬಹುದಿತ್ತು. ಇದು ನನಗೆ ಗೋಚರಿಸಿದ ಕೆಲವು ಅಂಶಗಳಷ್ಟೆ. ಇನ್ನೂ ಅನೇಕ ಪ್ರತ್ಯಕ್ಷ ಮತ್ತು ಪರೋಕ್ಷ ಲಾಭಗಳು ಬಹಳಷ್ಟು ಇದೆ. ನಿಮಗೂ ಇತರೆ ಅಂಶಗಳು ಹೊಳೆದಲ್ಲಿ ದಯವಿಟ್ಟು ಹಂಚಿಕೊಳ್ಳಿ. ಜಾತಿ ಮುಕ್ತ ಭಾರತ ಆದಷ್ಟು ಶೀಘ್ರ ನಿಜವಾಗಲಿ , ಭಾರತವೆಂಬುದು ಸಮಾನತೆ ಮತ್ತು ಮಾನವೀಯತೆಯ ನಾಡಾಗಲಿ ಎಂದು ಆಶಿಸುತ್ತಾ..... ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ. ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಸ್ಸುಗಳ ಅಂತರಂಗದ ಚಳವಳಿ. ವಿವೇಕಾನಂದ. ಹೆಚ್.ಕೆ.

Comments

ಪಾಪುಲರ್ ಪೋಸ್ಟ್‌

SSC Jobs 2021 Staff Selection Commission 3260 central government Jobs Apply now

  Jobs 2021 – Highlights SSC( Staff Selection Commission) invited applications for PUC Diploma Degree ITI Candidates to fill up the 3200+ Posts through online.  Job seekers who are looking to join central government jobs can make use this opportunity. there is no Application fee for women, SC/ST, PWD Candidates. Read the full post comple tely to get Full Job details according to your education qualification. Name of the Board         :     Staff Selection Commission Name of the Post                           :    SSC Phase 9 Advertisement Number              : No of Vacancies                               :   3000+ Job Category                     ...

CECRI Recruitment 2021 || 54 Vacancies || Apply online

                                            Jobs 2021 – Highlights Name of the Board Central Electrochemical Research Institute  Name of the Post Technical Assistants / Technicians Advertisement Number Advt_02_2021_Technical.pdf No of Vacancies 54  Job Category Central Govt Jobs  Starting Date to Apply September 2021 Last Date of Registration 27th September 2021  Application Mode  Apply Online  Job Location Karaikudi - 630003, Tamil Nadu  Official Website https://cecri.res.in/jobs/Advt_02_2021_Technical.pdf Eligibility Criteria    Educational Qualification   Technical Assistant:   1st Class B.Sc. degree / Diploma in Chemistry / Physics /                                    ...

IB Recruitment 2021 || 500+ vacancy || Within 60 days

                                            Jobs 2021 – Highlights Name of the Board Intelligence Bureau  Name of the Post Junior Intelligence Officer, MTS, Accountant & Other Advertisement Number No of Vacancies 500+  Job Category Central Govt Jobs  Starting Date to Apply 27th August 2021 Last Date of Registration Within 2 months  Application Mode  Apply Offline  Job Location All over India  Official Website mha.gov.in Vacancy details Name of the Post Name of the Post Multi Tasking Staff -24 Junior Intelligence Officer-II/Tech -168 Halwei cum Cook -11 Assistant Central Intelligence Officer-I / Executive -56 Security Assistant (Motor Transport) --20 Assistant Central Intelligence Officer-II / Executive -98 Junior Intelligence Officer – II (Motor Transport) -...

Best Work from Home jobs earn money online

Earn Money using Social Platforms :  Make Money through online Activities You can earn money through your online social activities like: Answer Quiz's, Post videos on Youtube,  Play Games, Install Mobile   Applications, Take Online Surveys, Complete offers,  Do Online Job Task, Watch Videos, Post On Instragram, Facebook etc.  But its not a Job, Its just create extra money for your online activities.  Best Free Make Money Online websites like Ysense, neobucks, Timebucks, FushionCash etc. timebucks.com Earn money through take Micro tasks, create tik tok videos, watch videos, Complete Offers etc. The site owned by Australian Clearing Pty Ltd. Minimum payout: $10 Payment methods: Paypal, Payeer etc. www.swagbucks.com: Earn money / rewards through take online surveys, Daily Poll, Tasks and complete online offers. The site owned by Prodege LLC, the company is one of leading online marketing company based in California, USA Minimum payout: $25...