ಸಾಕ್ಷಿ ಮತ್ತು ಉದಾಹರಣೆ ಸಮೇತ ಮುಖವಾಡ ಬಯಲು ಮಾಡಿದ ಇಬ್ಬರು ಮಹಾನ್ ನಾಯಕರು.............
ಸನ್ಮಾನ್ಯ ನರೇಂದ್ರ ಮೋದಿ
ಸನ್ಮಾನ್ಯ ರಾಹುಲ್ ಗಾಂಧಿ
ರಾಹುಲ್ ಗಾಂಧಿ.......
ಕಾಂಗ್ರೆಸ್ ಮೂಲಭೂತವಾಗಿ ಜಾತ್ಯಾತೀತ ಸಿದ್ದಾಂತದ ಪಕ್ಷ. ಎಲ್ಲಾ ಜಾತಿ ಧರ್ಮ ಭಾಷೆ ಒಟ್ಟಾರೆ ಎಲ್ಲರೂ ಸಮಾನರು ಎಂದು ಹೇಳುತ್ತದೆ. ಧರ್ಮದ ಬಹಿರಂಗ ಬೆಂಬಲ ಮಾಡುವುದಿಲ್ಲ. ಆಂತರಿಕವಾಗಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮದವರನ್ನು ಅತಿಯಾಗಿ ಓಲೈಸುತ್ತದೆ ಎಂದು ಹೇಳಲಾಗುತ್ತದೆ.
ಯಾವಾಗ ಬಿಜೆಪಿ ಹಿಂದೂ ಮತ್ತು ಶ್ರೀರಾಮರ ಭಜನೆಯಲ್ಲಿ ತೊಡಗಿ ಮತದಾರರನ್ನು ಆಕರ್ಷಿಸಿತೋ ರಾಹುಲ್ ಗಾಂಧಿ ನಿಜ ರೂಪ ಮರೆತು ಟೆಂಪಲ್ ರನ್ ಶುರು ಮಾಡಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈಗ ಕುಂಭ ಮೇಳದಲ್ಲಿ ಮುಳುಗೇಳುತ್ತಿದ್ದಾರೆ. ಇದು ಖಚಿತವಾಗಿ ಮುಖವಾಡ ಮತ್ತು ಓಟಿನ ರಾಜಕೀಯ.ಆತ್ಮಸಾಕ್ಷಿಯ ಕೊಲೆ.
ನರೇಂದ್ರ ಮೋದಿ........
ಸಂಪೂರ್ಣ ಬಲಪಂಥೀಯ ಚಿಂತನೆಯ ಪಕ್ಷದ ನಿಷ್ಠಾವಂತ ವ್ಯಕ್ತಿ. ಧರ್ಮ ದೇವರು ಸನಾತನ ಸಂಸ್ಕೃತಿಯ ಶ್ರೇಷ್ಠತೆಯನ್ನು ನಂಬಿರುವವರು. ವ್ಯಾಪಾರಿ ಮನೋಭಾವದ ಮೋದಿಯವರು, ಬಡವರಿಗೆ ಉಚಿತವಾಗಿ ಏನನ್ನೂ ಕೊಡಲು ಇಷ್ಟಪಡದ ಆಂತರ್ಯದಲ್ಲಿ ಮೀಸಲಾತಿಯನ್ನು ವಿರೋಧಿಸುವ ಮನಸ್ಥಿತಿಯವರು.
ಯಾವಾಗ ರಾಹುಲ್ ಗಾಂಧಿ ಮೀಸಲಾತಿ ರೈತರ ಸಾಲಾ ಮನ್ನಾ ಬಡವರಿಗೆ ಉಚಿತ ಸೌಕರ್ಯಗಳನ್ನು ನೀಡುವುದಾಗಿ ಭರವಸೆ ನೀಡಿ ಉತ್ತರ ಭಾರತದ ಪ್ರಮುಖ ಮೂರು ರಾಜ್ಯಗಳ ಚುನಾವಣೆಯಲ್ಲಿ ಜಯಿಸಿದರೋ ಮೋದಿಯವರು ಕೂಡ ಆತ್ಮವಂಚನೆ ಮಾಡಿಕೊಂಡು ಮತ ಗಳಿಕೆಗಾಗಿ ತಾವು ನಂಬಿದ ವಿಚಾರಗಳನ್ನು ಅಡವಿಟ್ಟು ಬಡವರಿಗೆ ಉಚಿತ ಹಣ, ಉಚಿತ ಸೌಕರ್ಯಗಳು, ಮೇಲ್ವರ್ಗದ ಮೀಸಲಾತಿ ಮುಂತಾದ ತಾತ್ಕಾಲಿಕ ಜನಪ್ರಿಯ ಯೋಜನೆಗಳನ್ನು ಘೋಷಿಸಿದರು. ಇದು ಸಹ ಮತ ಗಳಿಕೆಗಾಗಿ ತೊಟ್ಟ ಸ್ವಾರ್ಥದ ಮುಖವಾಡವಲ್ಲವೇ ?
ಗೆಳೆಯರೇ ಈ ನಾಯಕರುಗಳು,
ಅಧಿಕಾರಕ್ಕಾಗಿ ಯಾವ ಮುಖವಾಡ ಸಹ ಧರಿಸಲು ಹಿಂಜರಿಯದ ಆತ್ಮವಂಚಕರು ಇವರು ಮತ್ತು ನಮ್ಮನ್ನು ಮೂರ್ಖರಾಗಿಸಲು ಸದಾ ಪ್ರಯತ್ನಿಸುವವರು.
ಕುಮಾರಸ್ವಾಮಿ ಸಹ ೧೨
ವರ್ಷದ ಹಿಂದೆ ಬಿಜೆಪಿ ಮತ್ತು ಈಗ ಕಾಂಗ್ರೆಸ್ ಜೊತೆ ಸಂಸಾರ ಮಾಡುತ್ತಿದ್ದಾರೆ . ನಾಳೆ ಮತ್ತೇನೋ ????
ವ್ಯಕ್ತಿತ್ವವೇ ಟೊಳ್ಳಾಗಿ ಗೋಸುಂಬೆಯಂತ ವ್ಯಕ್ತಿಗಳಿಂದ ರಾಜ್ಯ ಅಥವಾ ರಾಷ್ಟ್ರದ ಉದ್ದಾರ ಹೇಗೆ ಸಾಧ್ಯ.
ನಾನೇ ನನ್ನ ಅನುಭವದ ಮಾಹಿತಿಯ ಪ್ರಕಾರ ಅಂದಾಜಿಸಿದಂತೆ,
ಇಡೀ ದೇಶದಲ್ಲಿ ದಿನಕ್ಕೆ ಪಿಕ್ ಪಾಕೆಟ್ ಸೇರಿದಂತೆ ಕನಿಷ್ಟ ಒಂದು ಲಕ್ಷಕ್ಕೂ ಹೆಚ್ಚು ಕಳ್ಳತನ ನಡೆಯುತ್ತದೆ. ಅದನ್ನು ತಡೆಯಲು ಸಾಧ್ಯವಾಗಿಲ್ಲ.
ದಿನವೊಂದಕ್ಕೆ ಸಾವಿರಾರು ಕೋಟಿ ಲಂಚ ನಮ್ಮ ಕಣ್ಣ ಮುಂದೆಯೇ ಬಹಿರಂಗವಾಗಿ ನಡೆಯುತ್ತದೆ. ಅದನ್ನು ಕಡಿಮೆ ಮಾಡಲು ಆಗುತ್ತಿಲ್ಲ.
ಎಲ್ಲಾ ರೀತಿಯ ದುರ್ಬಲರು ಮತ್ತು ಅಸಹಾಯಕ ಹೆಣ್ಣು ಮಕ್ಕಳ ಮೇಲೆ ಪ್ರತಿನಿತ್ಯ ಸಾವಿರಾರು ವಿವಿಧ ರೀತಿಯ ದೌರ್ಜನ್ಯ ನಡೆಯುತ್ತಿದೆ. ಅದಕ್ಕೆ ಪರಿಹಾರ ಕಾಣುತ್ತಿಲ್ಲ.
ಗಾಳಿ ನೀರು ಆಹಾರ ದಿನೇ ದಿನೇ ವಿಷವಾಗುತ್ತಿದೆ. ಅದರ ಬಗ್ಗೆ ಗಮನ ಹರಿಸುತ್ತಿಲ್ಲ.
ಇನ್ನೂ ಇನ್ನೂ ಏನೇನೋ ಇದೆ.
ಅಲ್ಲಿ ನೋಡಿದರೆ ಆತ್ಮ ವಂಚಕರು ನಾವು ಉತ್ತಮ ನಾವು ಉತ್ತಮ ಎಂದು ಕಚ್ಚಾಡುತ್ತಿದ್ದಾರೆ. ಮಾಧ್ಯಮಗಳು ವೇದಿಕೆ ಕಲ್ಪಿಸುತ್ತಿವೆ. ನಾವು ಮನರಂಜನೆ ನೋಡಿ ಚಪ್ಪಾಳೆ ತಟ್ಟುತ್ತಿದ್ದೇವೆ ಮತ್ತು ಒಬ್ಬರಿಗೊಬ್ಬರು ಒಂದೊಂದು ಪಕ್ಷದ ಬಾಲ ಹಿಡಿದು ಜಗಳವಾಡುತ್ತಿದ್ದೇವೆ.
ಇದಕ್ಕೆ ಪರಿಹಾರವೇನು ?
ಅದಕ್ಕಿರುವ ಸರಳ ಮಾರ್ಗ ..........
ಸಮಸ್ಯೆಗಳ ಮೂಲ ಗುಣಗಳನ್ನು ಸರಿಯಾಗಿ ಮತ್ತು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳತೊಡಗಿದರೆ ಪರಿಹಾರ ತನ್ನಿಂದ ತಾನೇ ತೆರೆದುಕೊಳ್ಳುತ್ತದೆ.
ಅದಕ್ಕಾಗಿ ನಮ್ಮ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು. ಆಗ ಮುಖವಾಡಗಳು ಕಳಚಿ ಬೀಳುತ್ತದೆ.
ಇವರುಗಳು ಆಟ ನಡೆಯುವುದಿಲ್ಲ.
ಬದುಕಿನ ಮತ್ತು ನಮ್ಮ ಸಂಬಂಧಗಳ ಘನತೆಯನ್ನು ಕಾಪಾಡಿಕೊಳ್ಳಬೇಕು.
ಆಗ ಖಂಡಿತ ರಾಜಕೀಯ ಮತ್ತು ಸಮಾಜದಲ್ಲಿ ಬದಲಾವಣೆ ಸಾಧ್ಯ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.br />
Jobs 2021 – Highlights SSC( Staff Selection Commission) invited applications for PUC Diploma Degree ITI Candidates to fill up the 3200+ Posts through online. Job seekers who are looking to join central government jobs can make use this opportunity. there is no Application fee for women, SC/ST, PWD Candidates. Read the full post comple tely to get Full Job details according to your education qualification. Name of the Board : Staff Selection Commission Name of the Post : SSC Phase 9 Advertisement Number : No of Vacancies : 3000+ Job Category ...
Comments
Post a Comment