ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೊದಲ ಲೋಕಸಭಾ ಸದಸ್ಯ ನಮ್ಮ ಸಾಗರದ ಶ್ರೀಯುತ ಕೆ ಜಿ ಒಡೆಯರ್ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾಗೋಡಿನ ಕೆ.ಜಿ.ಒಡೆಯರ್ ಶಿವಮೊಗ್ಗದ ಮೊದಲ ಸಂಸತ್ ಸದಸ್ಯರಾಗಿದ್ದರು. ಅವರು ಒಮ್ಮೆ ಗಾಂಧೀಜಿಯವರನ್ನು ಭೇಟಯಾದ ಮೇಲೆ ತಮ್ಮ ಸೂಟ್ ಬೂಟ್ ಬಿಟ್ಟು ಖಾದಿಧಾರಿಯಅಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಐದು ಬಾರಿ ಸೆರೆವಾಸ ಅನುಭವಿಸಿದ್ದರು. ಒಟ್ಟು ೫ ವರ್ಷ ಸೆರೆವಾಸ ಅನುಭವಿಸಿದ್ದರರು; ೫ ತಿಂಗಳ ಕಠಿಣ ಶಿಕ್ಷೆಯನ್ನೂ ಅನುಭವಿಸಿದ್ದರು. ಸಾಗರದಲ್ಲಿ ಮುಖ್ಯ ಬಸ್ ನಿಲ್ದಾಣದ ಹತ್ತಿರ ಅವರ ಮನೆ ಇತ್ತು/ಇದೆ . ಅವರು ನೆಹರೂ ಅವರ ನಿಕಟವರ್ತಿಗಳಾಗಿದ್ದು , ನೆಹರೂ ಅವರನ್ನು ಜೋಗಕ್ಕೂ ಕರೆತಂದಿದ್ದರು.ಕಾಗೋಡು ಸತ್ಯಾಗ್ರಹದ ನಂತರ 'ಗೇಣೀದಾರರಿಗೇ ಜಮೀನು' ಕಾನೂನು ಬರುವುದಕ್ಕೆ ಮೊದಲೇ,ರೈತರ ಸತ್ಯಾಗ್ರಹಕ್ಕೆ ಓಗೊಟ್ಟು. ತಮ್ಮ ೮೦೦ ಎಕರೆ ಜಮೀನನ್ನು ರೈತರ ಹೆಸರಿಗೆ ಮಾಡಿಕೊಟ್ಟರು. ಶಿವಮೊಗ್ಗದ ಮೊದಲ ಲೋಕಸಭಾ ಸದಸ್ಯರು, ಸಾಗರದ ಎಲ್ ಬಿ ಕಾಲೇಜು ಮತ್ತು ರಾಷ್ಟ್ರೀಯ ವಿದ್ಯಾವರ್ಧಕ ಪ್ರೌಢಶಾಲೆಯ (ಈಗಿನ ಎಚ್. ಶಿವಲಿಂಗಪ್ಪ ಪ್ರೌಢಶಾಲೆ) ಸಂಸ್ಥಾಪಕ ಅಧ್ಯಕ್ಷರಾಗಿದ್ದ ಶ್ರೀ ಕಾಗೋಡು ಗುರುಬಸಪ್ಪ ಒಡೆಯರ್ ಅವರ ಬಗ್ಗೆ ಸಾಗರೀಕರು ತಿಳಿದುಕೊಳ್ಳಲೇ ಬೇಕಾದ ಕೆಲವು ಸಂಗತಿಗಳು ಇವು. ಸಾಗರದ ಕಾಗೋಡಿನಲ್ಲಿ 1901ರಲ್ಲಿ ಶ್ರೀಯುತರ ಜನನವಾಯಿತು. ತಂದೆ ಗುರುವಯ...