Valentine,
ವ್ಯಾಲೆಂಟೈನ್............
ಧರ್ಮಗಳ ಹೊಡೆತಕ್ಕೆ ನಲುಗಿದ ಹೂವುಗಳು,
ನಾಗರಿಕತೆಯ ಭ್ರಮೆಗೆ ಕನಲಿದ ಚಿಗುರುಗಳು,
ಮನುಷ್ಯನ ಕ್ರೌರ್ಯಕ್ಕೆ ಬಲಿಯಾದ ಭಾವನೆಗಳು,
ಮುಖವಾಡಗಳಿಗೆ ಆಹುತಿಯಾದ ಪ್ರೇಮ ಕುಸುಮಗಳು,
ಸಮಾಜದ ತಿಕ್ಕಲುತನಕ್ಕೆ ಬಸವಳಿದ ನನ್ನ ಕಂದಮ್ಮಗಳು..........
ಅಯ್ಯೋ ಪಾಪಿಗಳ ಯಾವುದರಲ್ಲೂ ಶುಧ್ಧತೆಯೇ ಉಳಿಸಿಲ್ಲವಲ್ಲ ನಾವು,
ಪ್ರೀತಿ ಎಂದರೆ ನಾಟಕವೆನ್ನುವಿರಿ,
ಪ್ರೇಮವೆಂದರೆ ಕಾಮವೆನ್ನುವಿರಿ,
ಯಶಸ್ಸೆಂದರೆ ದುಡ್ಡೆನ್ನುವಿರಿ,
ಸಾಧನೆಯೆಂದರೆ ಅಧಿಕಾರವೆನ್ನುವಿರಿ....
ಆ ಪದಗಳ ಅರ್ಥಗಳನ್ನೇ ಕೆಡಿಸಿರುವಿರಿ......
ಪ್ರೀತಿ ನಮ್ಮ ಸಂಸ್ಕತಿ,
ಪ್ರೇಮ ನಮ್ಮ ಸಂಪ್ರದಾಯ,
ಕಾಮ ನಮ್ಮ ಧರ್ಮ,
ಸಂತೋಷ ನಮ್ಮ ಸ್ವಾತಂತ್ರ್ಯ,
ನೆನಪಿರಲಿ.....
ಹೌದು,
ಪ್ರೀತಿಗೂ - ಪ್ರೇಮಕ್ಕೂ, ಪ್ರಣಯಕ್ಕೂ ಒಂದು ಚೌಕಟ್ಟು ಇದೆ. ಅದು ನಮ್ಮ ಅಕ್ಕ ತಂಗಿ ಅಣ್ಣ ತಮ್ಮ ಮಗ ಮಗಳು ಕುಟುಂಬ ಸಮಾಜ ಎಲ್ಲಕ್ಕೂ ಅನ್ವಯ.......
ಆದರೆ,
ಕೆಲವೊಮ್ಮೆ ಯೌವ್ವನದಲ್ಲಿ ಆಗುವ ಮಾನಸಿಕ - ದೈಹಿಕ ಬೆಳವಣಿಗೆಗಳು ಒಂದಷ್ಟು ಚೌಕಟ್ಟು ಮೀರುವ ಪ್ರಯತ್ನ ಮಾಡುತ್ತವೆ. ಅದಕ್ಕೆ ಅಸಹ್ಯ ಅನೈತಿಕ ಎಂದು ಬರ್ಭರ ಕೊಲೆಯಂತ ಶಿಕ್ಷೆ ನೀಡುವಿರಿ. ನೀವು ನಿಜಕ್ಕೂ ಮನುಷ್ಯರೇ ?????
ಕಣ್ಣ ಮುಂದೆಯೇ ಲಂಚಕ್ಕೆ ಕೈ ಹಾಕುವಿರಿ,
ಬೆನ್ನ ಹಿಂದೆಯೇ ಕಳ್ಳತನ ಮಾಡುವಿರಿ,
ಬಾಯಿ ಬಿಟ್ಟರೆ ಹೊಲಸು ಮಾತನಾಡುವಿರಿ,
ಅಧಿಕಾರಕ್ಕಾಗಿ ಬೂಟು ನೆಕ್ಕುವಿರಿ,
ಹಣಕ್ಕಾಗಿ ತಲೆಹಿಡಿಯುವಿರಿ,
ನಿಮ್ಮ ಸ್ವಾರ್ಥಕ್ಕಾಗಿ ಹೇಳಲಾಗದ ಬರೆಯಲಾಗದ ಎಲ್ಲವನ್ನೂ ಮಾಡುವಿರಿ.
ಹಾಗಾದರೆ ನಿಮಗ್ಯಾವ ಶಿಕ್ಷೆ ನೀಡಬೇಕು.
ಎಳೆ ಮಕ್ಕಳ ಮುಗ್ಧ ಪ್ರೀತಿಯನ್ನು ಅದು ಯಾರಿಗೂ ಅಪಾಯಕಾರಿಯಲ್ಲದಿದ್ದರೂ ನೀವು ಸಹಿಸುವುದಿಲ್ಲ.
ಇನ್ನು ದೇಶ ದ್ರೋಹದ,
ಧರ್ಮ ದ್ರೋಹದ ನಿಮ್ಮ ಕೆಲಸಗಳು ಬಹಿರಂಗವಾಗಿ ನಡೆದರೂ ನಾವು ಸಹಿಸಬೇಕಿದೆ.
ದಯವಿಟ್ಟು ಒಂದು ನೆನಪಿಡಿ.
ಎಳೆ ಯುವಕ ಯುವತಿಯರ ಪ್ರೀತಿ ಪ್ರೇಮ ಪ್ರಣಯ ಪ್ರೋತ್ಸಾಹದಾಯಕವಲ್ಲ.
ಆದರೆ ಅದು ಶಿಕ್ಷಾರ್ಹ ಅಪರಾಧವೂ ಅಲ್ಲ.
ಇದನ್ನು ಹೆಚ್ಚು ನಾಗರಿಕ ಪ್ರಜ್ಞೆಯಿಂದ, ಪ್ರೀತಿಯಿಂದ, ಸಹನೆಯಿಂದ, ಸಭ್ಯತೆಯಿಂದ,
ವಾಸ್ತವತೆಯಿಂದ ನಿರ್ವಹಿಸಿ.
ಮನವೆಂಬ ಮರ್ಕಟದ ಕೈಗೆ ಮನಸ್ಸುಗಳನ್ನು ಕೊಟ್ಟು,
ಹುಚ್ಚು ಭಾವನೆಗಳಿಗೆ ಸಂಪ್ರದಾಯದ ಮುಖವಾಡ ತೊಡಿಸಿ ಪ್ರೇಮಿಗಳನ್ನು ದ್ವೇಷಿಸುವ ಮತ್ತು ಹತ್ಯೆಗೈಯುವ ಕೆಲಸಕ್ಕೆ ಕೈ ಹಾಕಬೇಡಿ.
ನೀವೂ ನಾಶವಾಗಿ,
ಅವರನ್ನೂ ನಾಶಮಾಡಿ,
ಸಮಾಜವನ್ನು ನಾಶಮಾಡಬೇಡಿ.....
ಪ್ರೀತಿಯ ಸಂಕೇತ ವ್ಯಾಲೆಂಟೈಳನ ನೆನಪಿನಲ್ಲಿ ಒಂದಷ್ಟು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯೋಣ.....
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಹೆಚ್.ಕೆ.

ಒಳ್ಳೆಯ ಸಂದೇಶ
ReplyDelete