ನಾಚಿಕೆ ಆಗಬೇಕು ರಾಜ್ಯ ಸರ್ಕಾರಕ್ಕೆ..... ತೀರ ನಾಗರಿಕ ಸರ್ಕಾರಗಳು ಈ ಮಟ್ಟಿಗೆ ಲಜ್ಜೆಗೇಡಿತನಕ್ಕೆ ಇಳಿಯಬಾರದು. ಬೆಂಗಳೂರಿನ ದಾಹ ತಣಿಸಲು 300 ಕಿಮೀ ದೂರದ ಲಿಂಗನಮಕ್ಕಿ ಜಲಾಶಯದಿಂದ ನೀರು ಕೊಂಡೊಯ್ಯುವ ಬಗ್ಗೆ ಗಂಭೀರವಾಗಿ ಯೋಚನೆ ಯೋಜನೆ ಮಾಡಲು ಹಪ ಹಪಿತನ ತೋರುವ ರಾಜ್ಯದ ಸರ್ಕಾರ ಈ ನೆಲದಲ್ಲಿ ನಮ್ಮನ್ನ ಮುಳುಗಿಸಿ 60 ವರ್ಷ ಕಳೆದರೂ ನಾಗರಿಕ ಸಮಾಜದ ಅತಿಮುಖ್ಯ ಬೇಡಿಕೆಯಾದ ಸೇತುವೆ ಕೊಡದೇ, ಸಂತ್ರಸ್ತರು ಎಂಬ ಕಾರಣಕ್ಕೆ ವಿಶೇಷ ಅನುದಾನವನ್ನು ನೀಡದೆ, ಸಾಲದು ಎಂಬಂತೆ ನಾವು ನಿಂತಿರುವ ಜಾಗವನ್ನು ವನ್ಯಜೀವಿ, ಅಭಯಾರಣ್ಯ, ಇಂಡೀಕರಣ ಎಂದು ಒಕ್ಕಲೆಬ್ಬಿಸಲು ಯೋಜನೆ ರೂಪಿಸಿದ ಸರ್ಕಾರ ನಮ್ಮನ್ನು ಜೀವಂತ ಕೊಂದು ಆ ಸೂತಕದ ಮೇಲೆ ಬೆಂಗಳೂರಿಗೆ ನೀರು ಕೊಟ್ಟು ದೀಪಾವಳಿ ಆಚರಿಸಲು ಹೊರಟಿದೆ. ನಾಡಿನ ಬೆಳಕಿಗೆ ಬದುಕು ಮತ್ತು ಬೇರು ಕಳೆದುಕೊಂಡ ಜನರನ್ನು ಕಳೆದ 6 ದಶಕದಲ್ಲಿ ನಿರಂತರ ನರ ಮುರಿದ ರಾಜ್ಯ ಸರ್ಕಾರ ಈಗ ಹೊಸ ಅಂಗಿ ಹಾಕಿ ನೀರಿನ ಧಾಹ ತೀರಲು ನೀವು ತ್ಯಾಗಿ ಆಗಿ ಎಂದು ಹೇಳಲು ಹೊರಟಿದೆ. ಅದಕ್ಕೂ ಮೊದಲು ಈ ಹಿಂದೆ ಮಾಡಿದ ನಮ್ಮವರ ತ್ಯಾಗಕ್ಕೆ ರಾಜ್ಯದ ನಾಗರಿಕ ಸರ್ಕಾರವೊಂದು ಏನು ಋಣ ಸಂದಾಯ ಮಾಡಿದೆ ಎಂದು ಹೇಳಲಿ...? ತುಮರಿ ಸೇತುವೆಗೆ ಹಣ ಕೊಡಿ ಎಂದು ಕೇಳಿದರೆ ವಿಧಾನಸೌಧದ 3 ನೆ ಮಹಡಿಯಲ್ಲಿ ಏನು ಲಾಭ ಅಷ್ಟು ಹಣ ನೀಡಲು ಎಂಬುವ ಚರ್ಚೆಯೇ ದ್ವನಿಸುತ್ತದೆ.. ಬ್ರಿಟಿಷ್ ಅವಧಿಯಲ್ಲಿ ಹಿರೇಭಾಸ್ಕರ್ ಮಡೆನೂರು ಅಣೆಕಟ್ಟು ಕಟ್ಟಿದರೂ ನಮ...