ಕರ್ನಾಟಕದ ಹೊಸ ಮುಖ್ಯಮಂತ್ರಿಯಾಗಿ ನಾಲ್ಕನೆ ಬಾರಿಗೆ ಬಿ.ಎಸ್. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ್ದಾರೆ. ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ ಯಡಿಯೂರಪ್ಪ ಪೂರಕ ಬಜೆಟ್ ಗೂ ಅಂಗೀಕಾರ ಸಿಕ್ಕಿದೆ. ಕರ್ನಾಟಕ ಹೊಸ ಮುಖ್ಯಮಂತ್ರಿ ಹಾಗೂ ಶಾಸಕರಿಗೆ ಸಿಗುವ ಸಂಬಳವೆಷ್ಟು ಎಂಬುದರ ವಿವರ ಇಲ್ಲಿದೆ. ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳ ಹಾಗೂ ಶಾಸಕರ ಸಂಬಳ ಬೇರೆ ಬೇರೆಯಾಗಿರುತ್ತದೆ. ಆರ್ಟಿಕಲ್ 164 ರ ಪ್ರಕಾರ ವೇತನವನ್ನು ಆಯಾ ರಾಜ್ಯ ವಿಧಾನಸಭೆಗಳು ನಿರ್ಧರಿಸುತ್ತವೆ. ತೆಲಂಗಾಣದ ಶಾಸಕರಿಗೆ ಹೆಚ್ಚಿನ ಸಂಬಳ ಸಿಗುತ್ತದೆ. ತ್ರಿಪುರಾ ಹಾಗೂ ಮೇಘಾಲಯದ ಶಾಸಕರಿಗೆ ಕಡಿಮೆ ಸಂಬಳ ಸಿಗುತ್ತದೆ. ತೆಲಂಗಾಣ ಶಾಸಕರು ಪ್ರತಿ ತಿಂಗಳು 2.50 ಲಕ್ಷ ಸಂಬಳ ಪಡೆಯುತ್ತಾರೆ. ತ್ರಿಪುರಾ ಶಾಸಕರಿಗೆ ಪ್ರತಿ ತಿಂಗಳು 34 ಸಾವಿರ ರೂಪಾಯಿ ಸಂಬಳ ಸಿಗುತ್ತದೆ. ಕರ್ನಾಟಕದ ಹೊಸ ಮುಖ್ಯ ಮಂತ್ರಿ ಯಡಿಯೂರಪ್ಪನವರಿಗೆ ಪ್ರತಿ ತಿಂಗಳು 4 ಲಕ್ಷ 697 ರೂಪಾಯಿ ಸಿಗಲಿದೆ. ಇತರೆ ಭತ್ಯೆ ರೂಪದಲ್ಲಿ 18 ಲಕ್ಷ 14 ಸಾವಿರದ 709 ರೂಪಾಯಿ ಪ್ರತ್ಯೇಕವಾಗಿ ಸಿಗಲಿದೆ. ಕರ್ನಾಟಕದ ಪ್ರತಿಯೊಬ್ಬ ಶಾಸಕರಿಗೆ ಪ್ರತಿ ತಿಂಗಳು 25 ಸಾವಿರ ರೂಪಾಯಿ ಸಂಬಳ ಸಿಗುತ್ತದೆ. ದೂರವಾಣಿ ಬಿಲ್ ಗೆಂದು 20 ಸಾವಿರ ಪ್ರತ್ಯೇಕವಾಗಿ ಸಿಗುತ್ತದೆ. ಕ್ಷೇತ್ರದ ಭತ್ಯೆ ಹೆಸರಿನಲ್ಲಿ 40 ಸಾವಿರ ರೂಪಾಯಿ ಸಿಗುತ್ತದೆ. ಪೋಸ್ಟ್ ಖರ್ಚಿಗಾಗಿ 5 ಸಾವಿರ ರೂಪಾಯಿ ಸಿಗುತ್ತದೆ. ಪಿಎ ಹಾಗೂ ರೂಮ್ ಬಾಯ್ ಗೆ ನೀ...