Skip to main content

Posts

ಗ್ರಾಮ ಪಂಚಾಯತಿ ಚುನಾವಣೆ ಮತ್ತು ಚುನಾವಣಾ ಅಯೋಗದ ಮುಂದಿರುವ ಸವಾಲುಗಳು

ಗ್ರಾಮ ಪಂಚಾಯತಿ ಚುನಾವಣೆ ಮತ್ತು ಚುನಾವಣಾ ಅಯೋಗದ ಮುಂದಿರುವ ಸವಾಲುಗಳು. ಗ್ರಾಮ ಪಂಚಾಯತಿಗಳನ್ನು ದೇಶದ ಕೊನೆಯ ಮತ್ತು ಅಭಿವೃದ್ಧಿಯ ಬುನಾದಿಯ ಕೇಂದ್ರ ಎಂದು ಕರೆಯಲಾಗುತ್ತದೆ. ಕಳೆದ ೨೦೧೫ ರ ಜೂನ್ ೧೨ ರಂದು ನಡೆದ ಸುಮಾರು ೫೮೦೦ ಗ್ರಾಮ ಪಂಚಾಯಿತಿಗಳ ಅಧಿಕಾರವದಿ ಇದೆ ಬರುವ ಅಗಷ್ಟ್ ತಿಂಗಳಲ್ಲಿ ಕೊನೆಗೊಳ್ಳಲಿದೆ. ಈ ಹೊತ್ತಿನಲ್ಲಿ ಕರ್ನಾಟಕ ಚುನಾವಣಾ ಆಯೋಗವು ಅಧಿಕಾರವದಿ ಮುಗಿದ ಪಂಚಾಯತ್ ಗಳಿಗೆ ಹೊಸದಾಗಿ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಿ ಆದೇಶ ಹೊರಡಿಸಿದೆ. ಕೊರೋನ ರೋಗ ವ್ಯಾಪಕವಾಗಿ ವೇಗವಾಗಿ ಹೆಚ್ಚುತ್ತಿರುವುದರಿಂದ ಅಯಾ ಜಿಲ್ಲೆಯ ಸಿಯಿಓ ಹಾಗು ಜಿಲ್ಲಾಧಿಕಾರಿಗಳ ಅಭಿಪ್ರಾಯವನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆಂದು ಚುನಾವಣಾ ಅಯೋಗ ಸ್ಪಷ್ಟನೆ ನೀಡಿದೆ, ಇದರ ಹೊರತಾಗಿಯು ಅನೇಕ ಪ್ರಶ್ನೆ ಅನುಮಾನಗಳು ಏಳುತ್ತವೆ ಮತ್ತು ನಾವು ಅವುಗಳನ್ನು ಒಂದೊಂದು ಹಂತವಾಗಿ ಹೇಳುತ್ತಾ ಹೋಗೋಣ. ಇಲ್ಲಿ ಪ್ರಮುಖವಾಗಿ ಬರುವ ಪ್ರಶ್ನೆ ೧. ಅಧಿಕಾರಾವದಿ ಮುಗಿದ ಸದಸ್ಯರನ್ನು ಚುನಾವಣಾ ಆಯೋಗ ಮುಂದಿನ ಚುನಾವಣಾ ನಡೆಯುವ ತನಕ ಮುಂದುವರೆಸುತ್ತದೆಯೆ? ೨. ಚುನಾವಣಾ ಆಯೋಗ ಸರ್ಕಾರದ ಒತ್ತಡಕ್ಕೆ ಮಣಿಯಿತೆ? ೩. ನಾಮ ನಿರ್ದೇಶನ ಮಾಡುವುದಾದರೆ ಯಾವ ಆಧಾರದ ಮೇಲೆ ಮಾಡುತ್ತಾರೆ? ೪. ಕಾಂಗ್ರೆಸ್ ಆಯೋಗಕ್ಕೆ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ಉದ್ದೇಶ ಏನಿರಬಹುದು? ೫.ಚುನಾವಣಾ ಅಯೋಗದ ಈ ನಿರ್ಧಾರವನ್ನು ನ್ಯಾಯಾಲಯದಲ್ಲಿ  ಏನಾಗಬಹುದು? ಇನ...

ನಾನು ಕಣಪ್ಪಾ ಹೇಮಿ ಗಂಡ..!

"ನಾನು ಕಣಪ್ಪಾ ಹೇಮಿ ಗಂಡ" ಪದಬಂಧದ ಜೊತೆಗೆ ಅನುಬಂಧ ಹೊಂದಿದವನು ನಾನು, ಇವತ್ತಿನ ದಿನ ಹಾಗೆ ಪದಬಂಧ ಪೂರ್ತಿ ಮಾಡಿ ಪೇಪರ್‌ನ ಹಿಂದೆ ತಿರುಗಿಸಿದೆ ಹೆಂಡತಿಯ ಗುಣಗಾನ ಮಾಡೊ "wifeappriationday" ಬಗ್ಗೆ ಲಕ್ಷ್ಮಣರಾವ್ "ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ" ಲೇಖನ ಕಣ್ಣಿಗೆ ಬಿತ್ತು ಹಾಗೆ ಅದರಲ್ಲಿರೊ  ಕತೆನ ಇಲ್ಲಿ ಬರೀತಾ ಇದಿನಿ "ಪತ್ನಿಯನ್ನು ಅರ್ಥ ಮಾಡಿಕೊಳ್ಳೊವ ದಿನ ವರ್ಷದಲ್ಲಿ ಒಂದು ದಿನವಷ್ಟೇ ಅಲ್ಲ ೩೬೫ ದಿನಗಳು ಅದೇ ಆಗಿರಬೇಕು ಇಲ್ಲದಿದ್ದರೆ ಪತಿಗೆ ಉಳಿಗಾಲವೆ ಇಲ್ಲ" "ನಮ್ಮಲ್ಲಿ ಅರ್ಧನಾರೀಶ್ವರನ ಕಲ್ಪನೆಯೆ ಇದೆ, ಗಂಡು ಹೆಣ್ಣಿಲ್ಲದೆ ಅಪೂರ್ಣ ಹೆಣ್ಣು ಗಂಡಿಲ್ಲದೆ ಅಪೂರ್ಣ , ಇದರಲ್ಲಿ ಒಬ್ಬರಿಲ್ಲದೆ ಹೋದರೂ ಜೀವನ ಪ್ರಯಾಣವನ್ನು ಪೂರೈಸುವುದು ಸಾಧ್ಯವಿಲ್ಲ ಎತ್ತಿನ ಬಂಡೆಯ ಎರಡು ಗಾಲಿಗಳ ತರವೆಂಬ ಕಲ್ಪನೆ ನಮ್ಮಲ್ಲಿ ಹಿಂದಿನಿಂದಲೂ ಇದೆ" ಈ ಪರಿಕಲ್ಪನೆ ಮೆಚ್ಚುಗೆ ನಮ್ಮಲ್ಲಿ  ಮುದ್ದಣ ಮನೋರಮೆಯರ ಕಾಲದಿಂದ ನವಕಾವ್ಯದ ತನಕ ಎಲ್ಲರೂ ಬರೆದವರೆ. ಕುವೆಂಪು ಅವರದಂತು ಬಹಳ ಪ್ರಸಿದ್ಧವಾದ ಕವಿತೆಯೆ ಇದೆ, ಇದರಲ್ಲಿ ಕವಿ ಕನಸಲ್ಲಿ ಸ್ವರ್ಗಕ್ಕೆ ಹೋಗಿದ್ದರಂತೆ, ಅಲ್ಲಿ ಸ್ವರ್ಗದ ಬಾಗಿಲವರೆಗೆ ನೇರ ಪ್ರವೇಶ ಸಿಕ್ಕು ಅದರ ಮುಂದೆ ಹೋಗಿ ನಿಂತಾಗ ಅಲ್ಲಿನ ದ್ವಾರ ಪಾಲಕ ತಡೆಯುತ್ತಾನೆ. ನೀನ್ಯಾರು ಅಂದರೆ ಕವಿ "ಪುಟ್ಟಪ್ಪ" ಅನ್ನುತ್ತಾರೆ,...

Don't mess with old people #joke

George Phillips, an elderly man from Walled Lake, Michigan, was going up to bed, when his wife told him that he'd left the light on in  the garden shed, which she could see from the bedroom window. George opened the back door to go turnoff the light, but saw that there were people in the shed stealing things. He phoned the police, who asked "Is someone in your house?" He said "No, but some people are breaking into my garden shed and stealing from me." Then the police dispatcher said "All patrols are busy, you should lock your doors and an officer will be along when one is available" George said, "Okay." He hung up the phone and counted to 30. Then he phoned the police again. "Hello, I just called you a few seconds ago because there were people stealing things from my shed. Well, you don't have to worry about them now because I just shot and killed them both; the dogs are eating them right now," and he hung up. Wit...

ಮಂತ್ರಿ ವಿಷದ ಬಾಟಲಿಯನ್ನು ಹೇಗೆ ಕಂಡು ಹಿಡಿದ?

ತುಂಬಾ ಹಿಂದೆ ಒಬ್ಬ ದೊಡ್ಡ ಚಕ್ರವರ್ತಿ ಇದ್ನಂತೆ. ಅವನು ಒಳ್ಳೆಯ ರಾಜ ಅನಿಸಿಕೊಂಡರೂ ಅವನಿಗೆ ವಿಪರೀತ ಹೆಂಡ ಕುಡಿಯುವ ಚಟ ಇತ್ತಂತೆ. ಒಂದ್ಸಲ ಅವನ ಬರ್ತ್‌ಡೇಯನ್ನು ಫುಲ್ ಗ್ರ್ಯಾಂಡಾಗಿ ಸೆಲೆಬ್ರೇಟ್ ಮಾಡ್ಕೋಬೇಕು ಅಂತ ಯೋಚ್ನೆ ಮಾಡಿ ಅವನ ಸಾಮ್ರಾಜ್ಯದ 1000 ಜನ VIPಗಳನ್ನ ಇನ್ವೈಟ್ ಮಾಡಿ ಒಂದು ಆಫರ್ ಇಡ್ತಾನಂತೆ. ಯಾರು ತುಂಬಾ ಟೇಸ್ಟಾಗಿರೋ ಹೆಂಡ ತರ್ತಾರೋ ಅವರಿಗೆ ಒಂದು ಸ್ಪೆಷಲ್ ಗಿಫ್ಟ್ ಅಂತ ಹೇಳಿರ್ತಾರೆ. VIPಗಳು ವಿಶೇಷವಾದ ಸ್ಕಾಚುಗಳು, ವಿಸ್ಕಿ, ರಮ್, ಜಿನ್, ಬ್ರಾಂಡಿ, ಬಿಯರ್, ಟಕೀಲಾಗಳನ್ನೆಲ್ಲ ತೊಗೊಂಡು ಎರಡು ದಿನ ಮೊದಲೇ ಅರಮನೆ ಸೇರ್ಕೊಂಡಿರ್ತಾರೆ. ಅವರು ತಂದ 1000 ಬಾಟ್ಲಿಗಳನ್ನೆಲ್ಲ ಒಂದ್ಕಡೆ ಇಟ್ಟಿರ್ತಾರೆ. ಅವುಗಳಲ್ಲಿ ಯಾರೋ ಒಬ್ಬ ಪಕ್ಕದ ರಾಜ್ಯದ ಸೈನಿಕ ರಾಜನನ್ನು ಸಾಯ್ಸೋದಕ್ಕೆ ಅಂತ ಒಂದು ಹೆಂಡದ ಬಾಟ್ಲಿಗೆ ವಿಷ ಸೇರಿಸಿಬಿಡ್ತಾನೆ. ಈ ವಿಷ ಎಷ್ಟು ಸ್ಟ್ರಾಂಗ್ ಅಂದ್ರೆ ಒಂದೇಒಂದು ಹನಿ ಕುಡಿದ್ರೂ ಸಾಕು, ಮನುಷ್ಯ 24 ಗಂಟೆಯೊಳಗೆ ಸತ್ತೋಗ್ತಾನೆ. ಈ ವಿಷಯ ಗೂಢಚಾರರ ಕಡೆಯಿಂದ ರಾಜನಿಗೆ ಗೊತ್ತಾಗಿಬಿಡತ್ತೆ. ಆದ್ರೆ ಯಾವುದರಲ್ಲಿ ವಿಷ ಇದೆ ಅಂತ ಗೊತ್ತಿಲ್ಲ!!! ನಾಳೆ ಅಲ್ಲ ನಾಡಿದ್ದು ಪ್ರೋಗ್ರಾಂ ಇದೆ.... ಏನ್ ಮಾಡೋದು? ಬಂದಿರೋ ಗೆಸ್ಟುಗಳಿಗೆ ತೊಂದ್ರೆ ಆಗ್ಬಾರ್ದು, ಪಾರ್ಟಿ ಕ್ಯಾನ್ಸಲ್ ಆಗ್ಬಾರ್ದು. ರಾಜ ಮಂತ್ರಿಯನ್ನು ಕರೆದು ಥೇಟ್ ಸಿಲ್ಲಿಲಲ್ಲಿ ಸೀರಿಯಲ್ ತರ ಜೇಡ ಬಲೆ ಕಟ್ಟಿರೋ ಮೂಲೆ ತೋರ್ಸಿ ಹಿಂಗಿಂಗೆ ಹಿಂಗ...

Dr. ರಾಜಕುಮಾರ್ ಅವರ ಪಿಚ್ಚರ್‌ಗಳನ್ನು ಗುರುತಿಸಿ. ಉತ್ತರಗಳು

*Home quarantine quiz* Identify Dr.Rajkumar Movies.... 1.(🏥✂🔪💉)💎🚀 2.🐅🍼🌾 3.⏰🎠 4.ka✌🐀🚫🌑🛂 5.(🏤💴💰💵💷)❓ 6.👤❓ 7.☁⛅☁ 8.🔫⛪ 9.🚫ra👀👨 10.🍼🍯 11.🌈 12.🗻💃 13.❤🎁 14.🎯 15.✌⭐⭐ 16.✌🙇 17.🙏👤 18.👑✋👑 19.va🎅🎼 20.💏🏆 Grades 10 correct: Kannada Abhimani 15 correct: Dr.Rajkumar Abhimani 20 correct: Parama Kannada Bhakta ಉತ್ತರಗಳು. 1. ಆಪರೇಷನ್ ಡೈಮಂಡ್ ರಾಕೆಟ್ 2. ಹುಲಿಯ ಹಾಲಿನ ಮೇವು 3. ಸಮಯದ ಗೊಂಬೆ 4. ಕವಿರತ್ನ ಕಾಳಿದಾಸ 5. ಸಂಪತ್ತಿಗೆ ಸವಾಲ್ 6. ಯಾರಿವನು 7. ಚಲಿಸುವ ಮೋಡಗಳು 8. ಗಂಧದ ಗುಡಿ 9. ಬೇಡರ ಕಣ್ಣಪ್ಪ 10. ಹಾಲು ಜೇನು 11. ಕಾಮನ ಬಿಲ್ಲು 12. ಗಿರಿ ಕನ್ಯೆ 13. ಪ್ರೇಮದ ಕಾಣಿಕೆ 14. ಗುರಿ 15. ಎರಡು ನಕ್ಷತ್ರಗಳು 16. ಎರಡು ಕನಸು 17. ದೇವತಾ ಮನುಷ್ಯ 18. ರಾಜ ನನ್ನ ರಾಜ 19. ವಸಂತ ಗೀತ 20. ಒಲವೇ ಗೆಲುವು

ಬರುವೆ ಬಾಯಮ್ಮ.. ಎಲ್ಲಿದ್ದೀಯಮ್ಮ..?

ಕೊರೋನಾ ಕಾಯಿಲೆ ಇಡಿ ವಿಶ್ವಕ್ಕೆ ವಕ್ಕರಿಸಿ ತಿಂಗಳುಗಳೆ ಕಳೆದಿವೆ, ಇಡಿ ವಿಶ್ವದ ಜನ ನಾರಾಯಣನ ಸ್ವರೂಪವಾದ ವೈದ್ಯರಿಗೆ ಜಯಕಾರ ಹಾಕುತ್ತಿದ್ದಾರೆ, ಆದರೆ ಬರುವೆ ಕಿರತೋಡಿ ಏಳಿಗೆ ಜನರು ಸರ್ಕಾರ ನೇಮಿಸಿದ ವೈದ್ಯ ಸಹಾಯಕಿಗೆ ಸುಮಾರು ನಾಲ್ಕು ವರ್ಷಗಳಿಂದ ಹಿಡಿಶಾಪ ಹಾಕುತ್ತಿದ್ದಾರೆ. ಅಂತದಕ್ಕು ಅದೇನಪ್ಪ ಕತೆ ಅಂದರೆ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಬಾಯಮ್ಮನ ಹಿಂದೆ ಕೆಲಸ ಮಾಡಿದ್ದವರೆಲ್ಲ ಊರಿನವರ ಕೈಯಲ್ಲಿ ಶಹಭಾಷ್ ಪಡೆದು ಆತ್ಮೀಯತೆಯಿಂದ ಬೀಳ್ಕೊಂಡಿದ್ದರು, ಕಾಲ ಕಾಲಕ್ಕೆ ಹಳ್ಳಿಯ ಮನೆಗಳಿಗೆ ಭೇಟಿ ನೀಡಿ ಊರಿನವರ ಜೊತೆಗೆ ಹೊಂದಿಕೊಂಡು ನಿಸ್ವಾರ್ಥವಾಗಿ ತಮ್ಮ ಸೇವೆ ಸಲ್ಲಿಸಿ ಹೋಗಿದ್ದರು. ಕೇಳೋರಿಲ್ಲ ಆದರೆ ಇವಾಗ ಇರುವ ಬಾಯಮ್ಮನ ಕತೆಯೇ ಬೇರೆ, ಅವರು ಇಲ್ಲಿಗೆ ಬಂದ ಐದಾರು ವರ್ಷಗಳಲ್ಲಿ ಹೆಚ್ಚೆಂದರೆ ಒಂದು ಎರಡು ಬಾರಿ ಹಳ್ಳಿಯ ಮನೆಗಳಿಗೆ ಬೇಟಿ ನೀಡಿದ್ದಾರೆ ಅದೂ ಎಲ್ಲರ ಮನೆಗು ಅಲ್ಲ ಅನ್ನುವುದು ಗಮನಿಸಿಬೇಕಾದ ಅಂಶ. ಊರಿನ ಎಷ್ಟೋ ಮಂದಿಗೆ ನಮ್ಮ ಬರುವೆಗೆ ಬಾಯಮ್ಮ ಇದ್ದಾಳೆ ಎನ್ನುವುದೇ ಮರೆತು ಹೋಗಿದೆ ಅಷ್ಟರ ಮಟ್ಟಿಗಿದೆ ಇವರ ಕಾರ್ಯವೈಖರಿ, ಇನ್ನು ಹೆಚ್ಚಿನ ಜನರಿಗೆ ಬಾಯಮ್ಮನ ಹೆಸರು ಕೂಡ ಗೊತ್ತಿಲ್ಲ ಎನ್ನುವುದು ದುರಂತ, ಬಿಡಿ ಹೋಗಲಿ ಹೆಸರು ತಗೊಂಡು ಮಾಡೋದು ಏನಿದೆ, ಹಳ್ಳಿಯ ಜನ ತಂಡಿ ಜ್ವರ ತಲೆನೋವು ಬಂದಾಗ ಹೋಗುವುದು ಬಾಯಮ್ಮನ ಬಳಿ ಆದರೆ ನಮ್ಮ ಬರುವೆಯಲ್ಲಿ ಬಾಯಮ್ಮನ ಕೇಂದ್ರ ಓಪನ್ ಆಗಿರುವುದೆ ವಾರಕ್ಕೆ ಒಂದೊ ಎರಡ...

ಕಿವಿ ಮಾತ್ರ ನಂಬದೆ ಕಣ್ಣು ತೆರೆದು ನೋಡಿದರೆ...... ಪರಮೇಶ್ವರ್ ಕರೂರು ಅವರ ಈ ಬರಹ ನಿಮಗಾಗಿ

ಕಿವಿ ಮಾತ್ರ ನಂಬದೆ ಕಣ್ಣು ತೆರೆದು ನೋಡಿದರೆ...... *ನಾನು ಶುಂಠಿ ಪರಮೇಶ್ ಕರೂರು*. ನನ್ನ ಊರಿನ ತುಮರಿ ಗ್ರಾಮ ಪಂಚಾಯಿತಿ ಮೇಲೆ ನಕಲಿ ರಸೀದಿ ಪುಸ್ತಕ ಆರೋಪ ಬಂದಿದೆ. ಮಾಧ್ಯಮದಲ್ಲಿ ದೊಡ್ಡ ಸುದ್ದಿ ಆಗಿದೆ. ಈ ಹೊತ್ತಿನಲ್ಲಿ ನಾನು ಮೌನ ಮುರಿಯದೇ ಇದ್ದರೆ ಅಪರಾಧ ಆಗುತ್ತದೆ ಎಂಬ ಕಾರಣಕ್ಕೆ ಯೋಚಿಸಿ ಈ ಬರಹ ಬರೆಯಲು ಕುಳಿತಿರುವೆ. ಮೊನ್ನೆ ಪ್ರಕರಣದಲ್ಲಿ ಎರಡೇ ಪ್ರಶ್ನೆ ಇರುವುದು, ಇದು ಪಂಚಾಯ್ತಿ ಆಡಳಿತ ವೈಪಲ್ಯವೋ ಅಥವಾ ಪಾಲುದಾರಿಕೆಯ ಹಗರಣವೋ...? ಎರಡನೇ ನಿರ್ಧಾರ ಬರಲು ನನಗೆ ಸುಲಭ ಸಾಧ್ಯ ಆಗಲಿಲ್ಲ. ಹೊಳೆಬಾಗಿಲು ತುಮರಿಯಿಂದ 7 ಕೀ ಮೀ ದೂರ ಇದೆ. ನಕಲಿ ಟಿಕೆಟ್ ನೀಡಿದ್ದಾರೆ ಎನ್ನುವ ಜಾಗ ಪಂಚಾಯತ್ ಕಾರ್ಯ ವ್ಯಾಪ್ತಿಯ ನೌಕರರ ಒಳಗೊಂಡ ಜಾಗ, ಇಲ್ಲಿ ನಕಲಿ ಟಿಕೆಟ್ ನಡೆಯುತ್ತಾ ಇದ್ದರೂ ಪತ್ತೆ ಹಚ್ಚುವುದು ಸುಲಭ ಅಲ್ಲ, ವಾರಕ್ಕೆ 3 ದಿನ ಇಲ್ಲಿ ಸಂಚರಿಸುವ ನನಗಾಗಲಿ ಅಥವಾ ಅಲ್ಲೇ ನಿತ್ಯ ಇರುವ ಜೀಪ್ ಚಾಲಕರು, ಅಂಗಡಿ ಮುಗ್ಗಟ್ಟು ಇತ್ಯಾದಿ ಬಹುತೇಕ ಜನರಿಗೆ ಈ ಬಗ್ಗೆ ಗೊತ್ತಾಗಿದ್ದು ಮೊನ್ನೆ ಪ್ರಕರಣ ಸುದ್ದಿ ಬಂದಾಗಲೇ. ಇದರ ಅರ್ಥ ಅಲ್ಲೇನು ನಡೆದಿಲ್ಲ ಎಂದು ಅಲ್ಲ. ಅಲ್ಲಿ ಯಾರಿಗೂ ಗೊತ್ತಿಲ್ಲದೆ ಘಟನೆ ವರ್ಷಾನುಗಟ್ಟಲೆ ನಡೆಯಲು ಸಾಧ್ಯವಿಲ್ಲ. ಅಲ್ಲಿರುವ ಜನರಿಗೆ ಮಾಹಿತಿ ಇಲ್ಲ ಎನ್ನುವುದಾದರೆ 7 ಕಿ ಮೀ ದೂರದ ಪಂಚಾಯತ್ ಗಮನಕ್ಕೆ ಬರುವುದು ಯಕ್ಷ ಪ್ರಶ್ನೆ ಆಗುತ್ತದೆ. ಇವೆಲ್ಲ ನಡುವೆ ಇದು ಆಡಳಿತ ವೈಫಲ್ಯ ಎಂದೇ ಕರೆಯಲಾಗುತ್ತ...

ಲಕ್ಷ ಕೋಟಿ ದಶಕೋಟಿ ಆದ ನಂತರಮುಂದೆ ಗೊತ್ತಾ..? ಇಲ್ಲಿದೆ ನೋಡಿ

ಬಿಡಿ (1) ಹತ್ತು ನೂರು ಸಾವಿರ ದಶಸಾವಿರ ಲಕ್ಷ ದಶಲಕ್ಷ ಕೋಟಿ ದಶಕೋಟಿ ಅಬ್ಜ ದಶ ಅಬ್ಜ ಖರ್ವ ದಶಖರ್ವ ಪದ್ಮ ದಶಪದ್ಮ ನೀಲ ದಶನೀಲ ಶಂಖ ದಶಶಂಖ ಕ್ಷಿತಿ ದಶಕ್ಷಿತಿ ಕ್ಷೋಭ ದಶಕ್ಷೋಭ ಋದ್ಧಿ ದಶಋದ್ಧಿ ಸಿದ್ಧಿ ದಶಸಿದ್ಧಿ ನಿಧಿ ದಶನಿಧಿ ಕ್ಷೋಣಿ ದಶಕ್ಷೋಣಿ ಕಲ್ಪ ದಶಕಲ್ಪ ತ್ರಾಹಿ ದಶತ್ರಾಹಿ ಬ್ರಹ್ಮಾಂಡ ದಶಬ್ರಹ್ಮಾಂಡ ರುದ್ರ ದಶರುದ್ರ ತಾಲ ದಶತಾಲ ಭಾರ ದಶಭಾರ ಬುರುಜ ದಶಬುರುಜ ಘಂಟಾ ದಶಘಂಟಾ ಮೀಲ ದಶಮೀಲ ಪಚೂರ ದಶಪಚೂರ ಲಯ ದಶಲಯ ಫಾರ ದಶಫಾರ ಅಷಾರ ದಶಅಷಾರ ವಟ ದಶವಟ ಗಿರಿ ದಶಗಿರಿ ಮನ ದಶಮನ ವವ ದಶವವ ಶಂಕು ದಶಶಂಕು ಬಾಪ ದಶಬಾಪ ಬಲ ದಶಬಲ ಝಾರ ದಶಝಾರ ಭೀರ ದಶಭೀರ ವಜ್ರ ದಶವಜ್ರ ಲೋಟ ದಶಲೋಟ ನಜೆ ದಶನಜೆ ಪಟ ದಶಪಟ ತಮೆ ದಶತಮೆ ಡಂಭ ದಶಡಂಭ ಕೈಕ ದಶಕೈಕ ಅಮಿತ ದಶಅಮಿತ ಗೋಲ ದಶಗೋಲ ಪರಿಮಿತ ದಶಪರಿಮಿತ ಅನಂತ ದಶ‌ಅನಂತ ಪ್ರತಿ ಸಾಲಿಗೂ ಒಂದೊಂದು ಸೊನ್ನೆ ಸೇರಿಸ್ಕೊಂಡು ಹೋಗಿ..... - ದರ್ಶನ್ ಕನ್ನಡಿಗ

ತೇಜಸ್ವಿ ಜನ್ಮದಿನದ #೨೦೧೯ ಸವಿನೆನಪಿನಲ್ಲಿ ಅವರ ನುಡಿಗಳು

ಬದುಕಿನ ಪ್ರಜ್ಞೆ ವಿಸ್ತರಿಸಿದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಜೀವನದ ನುಡಿಗಳು. “ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಿಲ್ಲ.” (The freedom to live as we wish is always a terrible fight since we will not get it easily) – ಕೆ.ಪಿ.ಪೂರ್ಣಚಂದ್ರ ತೇಜಸ್ವಿ “ನಾವು ಯಾವ ರೀತಿ ಬದುಕುವುದಿಲ್ಲವೋ ಆ ರೀತಿ ಬೇರೆಯವರು ಬದುಕಲಿ ಎಂದು ಹೇಳುವ ಅಧಿಕಾರ ನಮಗ್ಯಾರಿಗೂ ಇಲ್ಲ” – ಕೆ.ಪಿ.ಪೂರ್ಣಚಂದ್ರ ತೇಜಸ್ವಿ “ನಮ್ಮ ಮಾತಿಗೆ ಅರ್ಥ ಬರಬೇಕಾದರೆ ಮಾತನಾಡುವಷ್ಟೇ ಮಾತನಾಡದೆ ಇರುವುದೂ ಅಗತ್ಯ.” – ಕೆ.ಪಿ.ಪೂರ್ಣಚಂದ್ರ ತೇಜಸ್ವ”ನಮ್ಮ ಮಾತಿಗೆ ಅರ್ಥ ಬರುವುದು ನಮ್ಮ ನಡವಳಿಕೆಯಿಂದ” (Our behavior would make our words meaningful) – ಕೆ.ಪಿ.ಪೂರ್ಣಚಂದ್ರ ತೇಜಸ್ವಿ “ನನಗೆ ಕಾಲ ಕಳೆಯುವುದು ಹೇಗೆಂಬ ಚಿಂತೆಗಿಂತ ಕಾಲ ಕಳೆದು ಹೋಗುತ್ತದಲ್ಲಾ ಎನ್ನುವುದೇ ಚಿಂತೆ” – ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪರಿಸರದ ಕತೆ “ನನ್ನ ಹಾಗೆ ನೀನೂ ಬದುಕು ಎಂದು ಸಲಹೆ ನೀಡಬಹುದೇ ಹೊರತು, ನಾನು ಹೇಗಾದರೂ ಬದುಕುತ್ತೇನೆ, ನೀನು ಹೀಗೆ ಬದುಕು ಎಂದು ಹೇಳುವುದು ಸರಿಯಲ್ಲ.” – ಕೆ.ಪಿ.ಪೂರ್ಣಚಂದ್ರ ತೇಜಸ್ವಿ “ಬೇರೆಯವರನ್ನ ಕೊಂದು ಉಳಿಸಿಕೊಳ್ಳಬೇಕಾದ ಧರ್ಮವೇನಾದರು ಇದೆಯಾ?” – ಕೆ.ಪಿ.ಪೂರ್ಣಚಂದ್ರ ತೇಜಸ್ವಿ “ತಲೆ ತಪ್...

ತ್ರಿವೇಣಿ ಮಹಾತಾಯಿಯ ಬೆಳ್ಳಿಬದುಕು..

ತ್ರಿವೇಣಿ ತ್ರಿವೇಣಿಯವರು ಕನ್ನಡದ ನವೋದಯದ ಮಾರ್ಗದಲ್ಲಿ ಬರೆಯಲು ಪ್ರಾರಂಭಿಸಿದ ಪ್ರಮುಖ ಕಾದಂಬರಿಕಾರರು. ಅವರು ತಮ್ಮ ಕಥೆ ಕಾದಂಬರಿಗಳ ಮೂಲಕ ಪ್ರಗತಿಪರ ಧೋರಣೆಯನ್ನು ಪ್ರತಿಪಾದಿಸಿದ ಬರಹಗಾರ್ತಿಯರಲ್ಲಿ ಪ್ರಮುಖರು. ಸುಮಾರು ಒಂದು ದಶಕದ ಅವಧಿಯಲ್ಲಿ ರಚಿತವಾದ ಅವರ ಕಥೆ-ಕಾದಂಬರಿಗಳು ಕನ್ನಡದಲ್ಲಿ ಓದುಗರ ಒಂದು ವರ್ಗವನ್ನೇ ಸೃಷ್ಟಿಸಿತು. ಬಿ. ಎಂ. ಶ್ರೀ ಅವರ ತಮ್ಮ ಬಿ. ಎಂ. ಕೃಷ್ಣಸ್ವಾಮಿಯವರ ಎರಡನೆಯ ಮಗಳಾದ ತ್ರಿವೇಣಿ ಅವರು ಜನಿಸಿದ್ದು ಸೆಪ್ಟೆಂಬರ್ 1, 1928ರಲ್ಲಿ. ಅವರ ಹುಟ್ಟು ಹೆಸರು ಭಾಗೀರಥಿ. ಅವರು ಶಾಲೆಗೆ ಸೇರಿದಾಗ ಅವರ ಹೆಸರು ‘ಅನಸೂಯ’ ಎಂದಾಯಿತು. ಕಾಲೇಜು ಶಿಕ್ಷಣ ಮೈಸೂರಿನಲ್ಲಿ ಆಯಿತು. 1947ರಲ್ಲಿ ಮಹಾರಾಜಾ ಕಾಲೇಜಿನಿಂದ ಮನ:ಶಾಸ್ತ್ರದಲ್ಲಿ ಚಿನ್ನದ ಪದಕದೊಂದಿಗೆ ಬಿ.ಎ.ಪದವಿ ಪಡೆದರು. ಅಂದಿನ ದಿನಗಳಲ್ಲಿ ನಮಗೆ ಶಾರದಾ ವಿಲಾಸ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಶ್ರೀ ಶಂಕರ್ ಅವರ ಪತಿ. ಮದುವೆಯ ನಂತರ ‘ಅನಸೂಯ ಶಂಕರ್’ ಆದರು. ಮನೆಯೊಳಗಿನ ಅನಸೂಯ ಶಂಕರ್ ಸಣ್ಣಕಥೆಗಳ ಮೂಲಕ ಕನ್ನಡ ಸಾಹಿತ್ಯ ರಂಗವನ್ನು ಪ್ರವೇಶಿಸಿ ಕಾದಂಬರಗಾರ್ತಿಯಾಗಿ ‘ತ್ರಿವೇಣಿ’ ಎಂಬ ಕಾವ್ಯನಾಮದಿಂದ ಪ್ರಖ್ಯಾತರಾದರು. ‘ಶರಪಂಜರ, ‘ಬೆಳ್ಳಿಮೋಡ’, ‘ಕೀಲುಗೊಂಬೆ, ‘ಹೃದಯ ಗೀತೆ, ‘ಬೆಕ್ಕಿನಕಣ್ಣು’, ‘ಬಾನುಬೆಳಗಿತು, ‘ಅವಳ ಮನೆ’, ‘ಕಾಶೀಯಾತ್ರೆ, ‘ಹಣ್ಣೆಲೆ ಚಿಗುರಿದಾಗ’, ‘ಹೂವು ಹಣ್ಣು’, ‘ಮುಕ್ತಿ’, ‘ದೂರದ ಬೆಟ್ಟ’,...

ದಲೀಪ್ ಸಿಂಗ್‌ಗೆ ಹೇಗೆ The Great Khali ಎಂಬ ಹೆಸರು ಬಂತು ಗೊತ್ತಾ ನಿಮಗೆ???

ಕರ್ನಾಟಕದ ಸಿಎಂ, ಶಾಸಕರಿಗೆ ತಿಂಗಳ ಸಂಬಳವೆಷ್ಟು ಗೊತ್ತಾ! ನಿಮಗೆ??

ಕರ್ನಾಟಕದ ಹೊಸ ಮುಖ್ಯಮಂತ್ರಿಯಾಗಿ ನಾಲ್ಕನೆ ಬಾರಿಗೆ ಬಿ.ಎಸ್. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ್ದಾರೆ. ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ ಯಡಿಯೂರಪ್ಪ ಪೂರಕ ಬಜೆಟ್ ಗೂ ಅಂಗೀಕಾರ ಸಿಕ್ಕಿದೆ. ಕರ್ನಾಟಕ ಹೊಸ ಮುಖ್ಯಮಂತ್ರಿ ಹಾಗೂ ಶಾಸಕರಿಗೆ ಸಿಗುವ ಸಂಬಳವೆಷ್ಟು ಎಂಬುದರ ವಿವರ ಇಲ್ಲಿದೆ. ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳ ಹಾಗೂ ಶಾಸಕರ ಸಂಬಳ ಬೇರೆ ಬೇರೆಯಾಗಿರುತ್ತದೆ. ಆರ್ಟಿಕಲ್ 164 ರ ಪ್ರಕಾರ ವೇತನವನ್ನು ಆಯಾ ರಾಜ್ಯ ವಿಧಾನಸಭೆಗಳು ನಿರ್ಧರಿಸುತ್ತವೆ. ತೆಲಂಗಾಣದ ಶಾಸಕರಿಗೆ ಹೆಚ್ಚಿನ ಸಂಬಳ ಸಿಗುತ್ತದೆ. ತ್ರಿಪುರಾ ಹಾಗೂ ಮೇಘಾಲಯದ ಶಾಸಕರಿಗೆ ಕಡಿಮೆ ಸಂಬಳ ಸಿಗುತ್ತದೆ. ತೆಲಂಗಾಣ ಶಾಸಕರು ಪ್ರತಿ ತಿಂಗಳು 2.50 ಲಕ್ಷ ಸಂಬಳ ಪಡೆಯುತ್ತಾರೆ. ತ್ರಿಪುರಾ ಶಾಸಕರಿಗೆ ಪ್ರತಿ ತಿಂಗಳು 34 ಸಾವಿರ ರೂಪಾಯಿ ಸಂಬಳ ಸಿಗುತ್ತದೆ. ಕರ್ನಾಟಕದ ಹೊಸ ಮುಖ್ಯ ಮಂತ್ರಿ ಯಡಿಯೂರಪ್ಪನವರಿಗೆ ಪ್ರತಿ ತಿಂಗಳು 4 ಲಕ್ಷ 697 ರೂಪಾಯಿ ಸಿಗಲಿದೆ. ಇತರೆ ಭತ್ಯೆ ರೂಪದಲ್ಲಿ 18 ಲಕ್ಷ 14 ಸಾವಿರದ 709 ರೂಪಾಯಿ ಪ್ರತ್ಯೇಕವಾಗಿ ಸಿಗಲಿದೆ. ಕರ್ನಾಟಕದ ಪ್ರತಿಯೊಬ್ಬ ಶಾಸಕರಿಗೆ ಪ್ರತಿ ತಿಂಗಳು 25 ಸಾವಿರ ರೂಪಾಯಿ ಸಂಬಳ ಸಿಗುತ್ತದೆ. ದೂರವಾಣಿ ಬಿಲ್ ಗೆಂದು 20 ಸಾವಿರ ಪ್ರತ್ಯೇಕವಾಗಿ ಸಿಗುತ್ತದೆ. ಕ್ಷೇತ್ರದ ಭತ್ಯೆ ಹೆಸರಿನಲ್ಲಿ 40 ಸಾವಿರ ರೂಪಾಯಿ ಸಿಗುತ್ತದೆ. ಪೋಸ್ಟ್ ಖರ್ಚಿಗಾಗಿ 5 ಸಾವಿರ ರೂಪಾಯಿ ಸಿಗುತ್ತದೆ. ಪಿಎ ಹಾಗೂ ರೂಮ್ ಬಾಯ್ ಗೆ ನೀ...