Skip to main content

Posts

ತಲೆ ತಿನ್ನೊ ಪ್ರಶ್ನೆಗಳಿವು ಉತ್ತರ ಕೊಡ್ತಿರಾ?

 Q1:  ಮೂರು ಜನ ಹುಡುಗರು ಒಂದು ಮಠದಲ್ಲಿ ಓದುತ್ತಿದ್ದಾರೆ (ಮಕರಧ್ವಜ, ದಯಾನಂದ, ನಚಿಕೇತ). ಒಬ್ಬ ಆಗಮಶಾಸ್ತ್ರ ಕಲಿಯುತ್ತಿದ್ದಾನೆ, ಇನ್ನೊಬ್ಬ ಫಲಜ್ಯೋತಿಷ ಕಲಿಯುತ್ತಿದ್ದಾನೆ, ಮತ್ತೊಬ್ಬ ಪೌರೋಹಿತ್ಯ ಕಲಿಯುತ್ತಿದ್ದಾನೆ. ಆಗಮಿಕ ಯಾವಾಗಲೂ ಸತ್ಯವನ್ನೇ ಹೇಳುತ್ತಾನೆ. ಜ್ಯೋತಿಷಿ ಯಾವಾಗಲೂ ಸುಳ್ಳನ್ನೇ ಹೇಳುತ್ತಾನೆ. ಪುರೋಹಿತ ಒಮ್ಮೆ ಸತ್ಯ ಒಮ್ಮೆ ಸುಳ್ಳು ಹೇಳುತ್ತಾನೆ. ಮಕರಧ್ವಜ ಹೇಳ್ತಾನೆ, *‌ನಚಿಕೇತ ಜ್ಯೋತಿಷಿ* ಅಂತ. ದಯಾನಂದ ಹೇಳ್ತಾನೆ, *ಮಕರಧ್ವಜ ಆಗಮಿಕ* ಅಂತ. ನಚಿಕೇತ ಹೇಳ್ತಾನೆ, *ನಾನು ಪುರೋಹಿತ* ಅಂತ. ಇವರ statements ಗಮನಿಸಿ, ಯಾರು ಯವುದನ್ನು ಕಲಿಯುತ್ತಿದ್ದಾರೆ ಅಂತ ಗುರುತಿಸಿ. Q2:  ಒಬ್ಬ ರೈತನ ಹತ್ರ 7 ಹಸು ಇದ್ದವು. ಅವನು ಸಾಯೋ ಟೈಮಲ್ಲಿ ಆ ಹಸುಗಳನ್ನ ತನ್ನ ಮೂರು ಮಕ್ಕಳಿಗೆ ಹಂಚಲು ಒಂದು ವಿಲ್ ಬರೆದಿಟ್ಟ ಮೊದಲ ಮಗನಿಗೆ ಇರುವ ಹಸುಗಳಲ್ಲಿ ಅರ್ಧದಷ್ಟು ಹಸುಗಳು, ಎರಡನೇ ಮಗನಿಗೆ ಮೊದಲನೆಯವನ ಅರ್ಧದಷ್ಟು ಹಸುಗಳು, ಮೂರನೆಯವನಿಗೆ ಎರಡನೆಯವನ ಅರ್ಧದಷ್ಟು ಹಸುಗಳು ಸಿಗಬೇಕು ಅಂತ ಬರೆದಿದ್ದ. ಆ ಲೆಕ್ಕದಲ್ಲಿ ಮೊದಲನೆಯವನಿಗೆ 3½ ಹಸು, ಎರಡನೆಯವನಿಗೆ 1¾ ಹಸು, ಮೂರನೆಯವನಿಗೆ ⅞ ಹಸು ಸಿಗ್ಬೇಕು. ಈ ಮೂರು ಮಕ್ಕಳೂ ಕೇಸರಿ ಪಡೆಯವರು. ಹಸುಗಳನ್ನು ಕಡಿಯುವಂತಿಲ್ಲ. ಹಸುಗಳನ್ನು ಮಾರಿ ದುಡ್ಡು ಹಂಚೋಣ ಅಂದ್ರೆ ಮಕ್ಕಳು ಒಪ್ಪುತ್ತಿಲ್ಲ. ನಮಗೆ ಹಸುಗಳೇ ಬೇಕು ಅಂತಾರೆ. ನಿಮ್ಮ ಮುಂದೆ ಈ ವ್ಯಾಜ್ಯ ಬಂದಿದೆ. ಎಲ್...

ಮೇರು ವ್ಯಕ್ತಿಗಳೊಂದಿಗೆ ಆಕಾಶವಾಣಿ ಸಂದರ್ಶನ

 ಬೆಂಗಳೂರು ಆಕಾಶವಾಣಿ ಕೇಂದ್ರದವರು ಕೆಲವು ಸೊಗಸಾದ ಸಂದರ್ಶನಗಳ ಧ್ವನಿಮುದ್ರಿಕೆಗಳನ್ನು upload ಮಾಡಿದ್ದಾರೆ. ಆಸಕ್ತರು ಗಮನಿಸಿ.  https://youtu.be/PjUCnXZanwI   (ದ ರಾ ಬೇಂದ್ರೆಯವರಿಗೆ ಜ್ಞಾನ ಪೀಠ ಬಂದ ಸಂದರ್ಭದಲ್ಲಿ ಸಂದರ್ಶನ) https://youtu.be/FiRuF-r59ZI (ಕೆ ಎಸ್ ನರಸಿಂಹ ಸ್ವಾಮಿಗಳ ಸಂದರ್ಶನ ಕೀ.ರಂ. ನಾಗರಾಜ,ಶೂದ್ರ ಶ್ರೀನಿವಾಸ) https://youtu.be/Ay8Fc0TfNVI (ಕೆ ವಿ ಸುಬ್ಬಣ್ಣ ಸಂದರ್ಶನ -ಬಿ ವಿ ಕಾರಂತ್ ಮತ್ತು ಕಂಬಾರರಿಂದ ಮಾಗ್ಸಸ್ಸೇ ಪ್ರಶಸ್ತಿ ಬಂದ ಸಂದರ್ಭ) https://youtu.be/KYBBBtwaJ7Q (ಗೋರೂರು ರಾಮಸ್ವಾಮಿಗಳ ಸಂದರ್ಶನ ನಿಸಾರ್ ಅಹ್ಮದ್ ಅವರಿಂದ) https://youtu.be/2Amaype4VNI (ಗೋವಿಂದ ಪೈ ಗಳ ಸಂದರ್ಶನ) https://youtu.be/X5PL2Ux0ioo (ಶಿವರಾಮಕಾರಂತ ಮತ್ತು ವಿ ಕೃ ಗೋಕಾಕರ ಸಂದರ್ಶನ ಚೆನ್ನವೀರ ಕಣವಿಯವರಿಂದ) https://youtu.be/9oYgd4YHtvc (ಕುವೆಂಪು ಸಂದರ್ಶನ ಜವರೇಗೌಡರಿಂದ) https://youtu.be/w16yvp34XDM (ಗೋಪಾಲಕೃಷ್ಣಅಡಿಗರ ಸಂದರ್ಶನ ) https://youtu.be/xBRYC3TG8cU (ಮಲ್ಲಿಕಾರ್ಜುನ ಮನ್ಸೂರರ ಸಂದರ್ಶನ) https://youtu.be/OapTrVdLAXY (ಹಿರಣ್ಣಯ್ಯ ಸಂದರ್ಶನ ಎಂ ಎಸ ಕೆ ಪ್ರಭು ಮತ್ತು ತಂಡ) https://youtu.be/I86GMaiK2t0 (ಪುಟ್ಟಣ್ಣ ಕಣಗಾಲ್ ಸಂದರ್ಶನ) https://youtu.be/rwDzEW457JQ (ಡಾ ರಾಜಕುಮಾರ್ ಸಂದರ್ಶನ) 👆 ...

ಕಾಡಿನ ಚುನಾವಣೆಯ ಕಥೆ -- Interesting Story About Forest Election

ಒಂದು ಕಾಡಿನಲ್ಲಿ ಪ್ರತಿ ಬಾರಿಯಂತೆ ಐದು ವರ್ಷಕ್ಕೊಮ್ಮೆ ಚುನಾವಣೆ ಬಂದಿತು. ​ ​ಚುನಾವಣೆಗೆ ಹುಲಿ, ಎತ್ತು, ಕುರಿ ಮತ್ತು ಆನೆ ಸ್ಪರ್ಧಿಸಿದ್ದವು. ​ ​ಹುಲಿ ಮತ್ತು ಆನೆ ಪರಸ್ಪರ ಸ್ನೇಹಿತರಾಗಿದ್ದವು. ​ಕುರಿಗೆ ಇವರ ಒಗ್ಗಟ್ಟನ್ನು ಮುರಿದು ತಾನೆ  ಗೆಲ್ಲಬೇಕೆಂಬ ದುಷ್ಟ ಬುದ್ಧಿ ಬಂದಿತು. ​ಅದಲ್ಲದೆ ಈ ಕುರಿ ಬೇರೆ ಕಾಡಿನಿಂದ ವಲಸೆ ಬಂದಿದ್ದಾಗಿತ್ತು. ​ಇದಕ್ಕಾಗಿ ಕುರಿ ತನ್ನ ಬುದ್ದಿಮಾಂದ ಮಿತ್ರನಾದ ಮುಳ್ಳಕ್ಕಿಯ ಸಹಾಯ ಪಡೆದು ಕೊಂಡಿತು. ಹಾಗು ತನ್ನ ಜೊತೆಗೆ ಇತರ ಕೆಲವು ಕುರಿಗಳನ್ನು ಸೇರಿಸಿಕೊಂಡಿತು. ​ ​ಆದರೆ ಕಾಡಿನ ಪ್ರಾಣಿಗಳು ಉತ್ತಮವಾಗಿ ಕೆಲಸ ಮಾಡುವ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಿರ್ಧರಿಸಿದವು. ​ಇದನ್ನು ಕಂಡು ಕುರಿಗೆ ಸೋಲುವ ಭೀತಿಯಿಂದ ಹುಲಿಯ ಕಡೆಯವರೆ ಎತ್ತಿನ ಪರವಾಗಿ ಪ್ರಚಾರ ಮಾಡುತ್ತಿದೆ ಎಂದು ಹೋದಲೆಲ್ಲಾ ಕೂಗಿತು. ​ಜನ ಕುರಿಯ ಮಾತನ್ನು ಕೇಳಿ ನಕ್ಕರು. ​ಇದರಿಂದ ಕುರಿಗೆ ಅವಮಾನವೆನಿಸಿತು. ​ಹೇಗಾದರೂ ಮಾಡಿ ಹುಲಿ ಮತ್ತು ಆನೆಯ ಮಧ್ಯೆ ಜಗಳ ಹಚ್ಚಿಸಲು ​ಆನೆಗೆ ಕುರಿ 10000₹ ಆಮಿಷ ಒಡ್ಡಿ ಆನೆಯವರ ಗುಂಪಿನ ಮತಗಳೆಲ್ಲಾ ತನ್ನ ಕಡೆಗೆ ಬರುವಂತೆ ಕೇಳಿಕೊಂಡಿತು. ​ಆನೆ ಇವಾಗ ಇಕ್ಕಟ್ಟಿನ ಸ್ಥಿತಿಗೆ ಸಿಲುಕಿತು. ​ಆನೆ ಹೋಗಿ ತನ್ನ ಮಿತ್ರನಾದ ಹುಲಿಯ ಬಳಿ ಗುಟ್ಟಾಗಿ ಕುರಿಯ ವಿಚಾರದ ಕುರಿತು ಹೇಳಿತು. ​ಹುಲಿ‌ ಹಾಗು ಆನೆ ಎರಡು ಉಪಾಯ ಮಾಡಿದವು ​ಅದರ ಪ್ರಕಾರ ಆನೆ ಕುರಿಯ ಮಾತಿಗೆ ಒಪ್ಪಿ 10000₹ ರೂ ಪಡೆದು ತನ್ನೆಲ್ಲ...

ಗ್ರಾ.ಪಂ ಚುನಾವಣೆ ಬರುವೆ ವಾರ್ಡ್ ಯಾರಿಗೆ ಎಷ್ಟು ಮತ ಹಾಗು ಇತರ ವಿವರಗಳು

ಗ್ರಾ.ಪಂ ಚುನಾವಣೆ ಬರುವೆ ವಾರ್ಡ್ ಯಾರಿಗೆ ಎಷ್ಟು ಮತ? ಡಿಸೆಂಬರ್ ೨೭ ರಂದು ನಡೆದ ಪಂಚಾಯತ್ ಚುನಾವಣೆಯ ಫಲಿತಾಂಶ ಬಿಡುಗಡೆಯಾಗಿದೆ.   ಬರುವೆ ವಾರ್ಡ್ ನಿಂದ ಸ್ಪರ್ಧಿಸಿದ ಆಭ್ಯರ್ಥಿಗಳಿಗೆ ಬಂದ ಮತಗಳ ಸಂಖ್ಯೆ  ಲಲಿತ == 185 category sc ಇಂದ ಜಯ.   ಜಾಹ್ನವಿ == 110 ಮತಗಳು   ಶೇಖರಪ್ಪ == 175 ಮತಗಳು (ಸಾಮಾನ್ಯ ಕೆಟಗರಿ ಇಂದ ಗೆಲುವು. )  ಮಂಜಪ್ಪ == 142 ಮತಗಳು (ಸೋಲು)  ಸುಧಾಕರ್ ಭಟ್ == 129 ಮತಗಳು (ಸೋಲು)    ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?    ಮೊದಲು SC Votes ಎಣಿಕೆ ಆಗುತ್ತದೆ, ಅದರಲ್ಲಿ ಹೆಚ್ಚು ಮತ ಪಡೆದವರನ್ನು SC ಮೀಸಲಾತಿ ಇಂದ ವಿಜೇತರು ಎಂದು ಘೋಷಿಲಾಗುತ್ತದೆ.  SC ಇಂದ ಸೋತ ಅಭ್ಯರ್ಥಿ ಸಾಮಾನ್ಯ ಮೀಸಲಾತಿಗೆ ಬರುತ್ತಾರೆ , ಸಾಮಾನ್ಯ ಮೀಸಲಾತಿ ಯಲ್ಲಿ ಯಾರು ಹೆಚ್ಚು ಮತ ಪಡೆಯೊತ್ತಾರೋ ಅವರು ಸಾಮಾನ್ಯ ಮೀಸಲಾತಿಯಿಂದ ಆಯ್ಕೆ ಆಗುತ್ತಾರೆ.   ಒಂದೊಮ್ಮೆ SC ಇಂದ ಸೋತ ಸ್ಪರ್ಧಿ ಸಾಮಾನ್ಯ ಅಭ್ಯರ್ಥಿಗಿಂತ ಹೆಚ್ಚು ಮತ ಪಡೆದರೆ SC ಇಂದ ಸೋತ ಸ್ಪರ್ಧಿ ಜನರಲ್ ನಿಂದ ಆಯ್ಕೆ ಆಗುತ್ತಾರೆ.    ಕೊನೆ ಕ್ಷಣದಲ್ಲಿ ಗೊಂದಲ ಯಾಕಾಯಿತು?    ಸಾಮಾನ್ಯ ಮೀಸಲಾತಿಯಿಂದ ಸ್ಪರ್ಧೆ ಮಾಡಿದ್ದ ಅಭ್ಯರ್ಥಿ ಸೋತು ಹೋದ ಮತ್ಸರಕ್ಕೆ ಮತ್ತು ಚುನಾವಣಾ ಆಯ್ಕೆ ಪ್ರಕ್ರಿಯೆ ಬಗ್ಗೆ ಸರಿಯಾದ ತಿಳುವಳಿಕೆ ...

ಚುನಾವಣಾ ಡಿಜಿಟಲ್ ಪ್ರಣಾಳಿಕೆ ನ್ಯಾಯಕ್ಕಾಗಿ ಸಮಾನತೆಗಾಗಿ ಅಭಿವೃದ್ಧಿಗಾಗಿ....

ಶೇಖರಪ್ಪ ಎಂ ಕೆ. ಆದ ನಾನು ಪ್ರಜ್ಞಾವಂತ ಮತದಾರ ಬಾಂಧವರಲ್ಲಿ ನನ್ನ ಈ ಡಿಜಿಟಲ್ ಪ್ರಣಾಳಿಕೆ ಹಾಗು ಕೆಲವು ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ. 2014-15 ರಿಂದ 2019-20 ರ ವರೆಗೂ ನಡೆದ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಾವು ಜನತೆಯ ಮುಂದೆ ಇಡುತ್ತಿದ್ದೇವೆ. ಸಂಧ್ಯಾ ಸುರಕ್ಷಾ ಯೋಜನೆಯಡಿ ತಿಂಗಳಿಗೆ ಒಂದು ಸಾವಿರದಂತೆ ಒಟ್ಟು 25 ಕುಟುಂಬಗಳ 35 ಜನರಿಗೆ (35000×5ವರ್ಷ) 21 ಲಕ್ಷ ಅನುದಾನ ಫಲಾನುಭವಿಗಳ ಕೈ ಸೇರಿದೆ.   ಅಂಗವಿಕಲ ಮತ್ತು ವಿಧವಾ ವೇತನದ ಪ್ರತಿ ತಿಂಗಳ 1000/500 ರೂ ಫಲಾನುಭವಿಗಳ ಕೈ ಸೇರುತ್ತಿದೆ. ತುಮರಿ ಪಂಚಾಯತಿಯಲ್ಲೆ ಅತಿ ಹೆಚ್ಚು ಅಂದರೆ ಬರುವೆ,ಚಿಮಲೆ ಮತ್ತು ತಲಗೋಡು ಗ್ರಾಮಕ್ಕೆ ಒಟ್ಟು 37 ಮನೆ[37×1,50,000 = 55 ಲಕ್ಷ 50 ಸಾವಿರ ಅನುದಾನ] ಮಂಜೂರಾಗಿ ನಿರ್ಮಿಸಲಾಗಿದೆ. ಒಟ್ಟು 70 (70×12000 =8ಲಕ್ಷ 40 ಸಾವಿರ) ಶೌಚಾಲಯಗಳನ್ನು ಮನೆ ಮನೆಯಲ್ಲಿ ನಿರ್ಮಿಸಿ ಗಾಂಧಿ ಕನಸಿನ ಸ್ವಚ್ಛ ಗ್ರಾಮ ಮಾಡಲಾಗಿದೆ. ಏಳಿಗೆ ಮತ್ತು ಬರುವೆಯಲ್ಲಿ 16 ಲಕ್ಷಗಳ ಎರಡು ಸುಸಜ್ಜಿತ ಅಂಗನವಾಡಿ ಕಟ್ಟಡಗಳು ತಲೆ ಎತ್ತಿ ನಿಂತಿದ್ದಾವೆ. ಪಡಿತರ ಮತ್ತು ಸೀಮೆ ಎಣ್ಣೆಯನ್ನು ಬರುವೆಯಲ್ಲೆ ಸಿಗುವಂತೆ ಮಾಡಲಾಗಿದೆ 30 ಹಿರಿಯ ನಾಗರಿಕ ಕಾರ್ಡ್ ಹಾಗು 5 ಕಾರ್ಮಿಕ ಕಾರ್ಡ್ ವಿತರಿಸಲಾಗಿದೆ. ಬರುವೆ ಚಿಮಲೆ ಮತ್ತು ತಲಗೋಡು ಗ್ರಾಮಗಳಲ್ಲಿ ಮಣ್ಣಿನ ರಸ್ತೆ ಮತ್ತು ಪೈಪ್ ಅಳವಡಿಸಲಾಗಿದೆ. SC/ST ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣ...

ಭಗತ್ ಸಿಂಗ್ ಜನ್ಮದಿನ ಹಾಗು ಅವರ ವಿಚಾರಧಾರೆಗಳು

 "ನಾವು ಪ್ರಭುತ್ವದ ವಿರುದ್ಧ ಸಮರ ಸಾರಿದ್ದೇವೆ. ಹಾಗಾಗಿ ಯುದ್ಧ ಖೈದಿಗಳಾಗಿದ್ದೇವೆ ಎಂದು ಹೇಳಲಿಚ್ಚಿಸುತ್ತೇನೆ. ನಮ್ಮನ್ನು ಯುದ್ಧ ಖೈದಿಗಳಂತೆಯೇ ಪರಿಗಣಿಸಲು ಆಗ್ರಹಿಸುತ್ತೇವೆ. ಅರ್ಥಾತ್ ನಮ್ಮನ್ನು ಗಲ್ಲಿಗೇರಿಸುವ ಬದಲು ನೇರವಾಗಿ ಗುಂಡಿಟ್ಟು ಕೊಲ್ಲುವಂತೆ ಕೋರುತ್ತೇವೆ.” ಇಂತಹ ಕೋರಿಕೆಯ ಮಾತುಗಳು ಬ್ರಿಟೀಷ್ ಸರ್ಕಾರಕ್ಕೆ ಮನವಿ ಪತ್ರದ ಮೂಲಕ ಹೇಳಿರುವ ಕ್ರಾಂತಿಕಾರಿ ವೀರ ಯಾರು ಗೊತ್ತಾ? ಭಗತ್ ಸಿಂಗ್…!! ಭಾರತದ ಇತಿಹಾಸದಲ್ಲಿ ಎಂದಿಗೂ ಚಿರಸ್ಥಾಯಿಯಾಗಿ ಉಳಿಯುವ ಅದಮ್ಯ ಚೇತನವೇ ಭಗತ್ ಸಿಂಗ್. ಕೇವಲ 23 ವಯಸ್ಸಿನಲ್ಲಿ ದೇಶಕ್ಕಾಗಿ ನೇಣುಗಂಬ ಏರಿದ ಏಕೈಕ ಸ್ವಾತಂತ್ರ್ಯ ಸಂಗ್ರಾಮದ ವೀರ ಭಗತ್ ಸಿಂಗ್ ಯುವ ಸಮುದಾಯಕ್ಕೆ ಪ್ರೇರಕ ಶಕ್ತಿಯಾಗಿದ್ದಾನೆ. ಭಗತ ‌ಸಿಂಗ್ ನ ಆದರ್ಶಗಳನ್ನು ಕೇವಲ ಹುತಾತ್ಮ ‌ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೀಮಿತಗೊಳಿಸುವ ಬದಲು ಆತನು ಪ್ರತಿಪಾದಿಸಿದ ಸಿದ್ಧಾಂತವನ್ನು ಇಂದಿನ ಸಮಾಜ ಅರ್ಥೈಸಿಕೊಳ್ಳಬೇಕಿದೆ. “ವ್ಯಕ್ತಿಗಳನ್ನು ಕೊಲ್ಲಬಹುದು, ಆದರೆ ಅವರ ವಿಚಾರಗಳನ್ನಲ್ಲ” ಎಂದು ನುಡಿದ ಭಗತ್‍ಸಿಂಗ್‍ ಮಾತಿನಂತೆ  ಭಗತ್ ಸಿಂಗ್ ಇಂದು ನಮ್ಮೊಂದಿಗೆ ಇಲ್ಲ. ಆದರೆ ಆತನ ವಿಚಾರ, ಆದರ್ಶ ಸಿದ್ಧಾಂತ, ಕ್ರಾಂತಿಯ ಕಿಡಿಗಳು ಇಂದಿಗೂ ಜೀವಂತವಾಗಿವೆ. ಭಗತ್ ಸಿಂಗ್ ನನ್ನು ನಾವು ಕೇವಲ ‘ದೇಶಪ್ರೇಮಿ’ ‘ಹುತಾತ್ಮ’ ಎಂದು ಬಿಂಬಿಸುವ ಮೂಲಕ ಆರಾಧನೆವಷ್ಟೇ ಮಾಡುವುದಲ್ಲ. ಭಗತ್ ಸಿಂಗ್ ಎಂದರೆ ಅದೊಂದು ಕ್ರಾಂತಿಯ ಚಿಲುಮೆ, ಅಮ...

ಗ್ರಾಮ ಪಂಚಾಯತಿ ಚುನಾವಣೆ ಮತ್ತು ಚುನಾವಣಾ ಅಯೋಗದ ಮುಂದಿರುವ ಸವಾಲುಗಳು

ಗ್ರಾಮ ಪಂಚಾಯತಿ ಚುನಾವಣೆ ಮತ್ತು ಚುನಾವಣಾ ಅಯೋಗದ ಮುಂದಿರುವ ಸವಾಲುಗಳು. ಗ್ರಾಮ ಪಂಚಾಯತಿಗಳನ್ನು ದೇಶದ ಕೊನೆಯ ಮತ್ತು ಅಭಿವೃದ್ಧಿಯ ಬುನಾದಿಯ ಕೇಂದ್ರ ಎಂದು ಕರೆಯಲಾಗುತ್ತದೆ. ಕಳೆದ ೨೦೧೫ ರ ಜೂನ್ ೧೨ ರಂದು ನಡೆದ ಸುಮಾರು ೫೮೦೦ ಗ್ರಾಮ ಪಂಚಾಯಿತಿಗಳ ಅಧಿಕಾರವದಿ ಇದೆ ಬರುವ ಅಗಷ್ಟ್ ತಿಂಗಳಲ್ಲಿ ಕೊನೆಗೊಳ್ಳಲಿದೆ. ಈ ಹೊತ್ತಿನಲ್ಲಿ ಕರ್ನಾಟಕ ಚುನಾವಣಾ ಆಯೋಗವು ಅಧಿಕಾರವದಿ ಮುಗಿದ ಪಂಚಾಯತ್ ಗಳಿಗೆ ಹೊಸದಾಗಿ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಿ ಆದೇಶ ಹೊರಡಿಸಿದೆ. ಕೊರೋನ ರೋಗ ವ್ಯಾಪಕವಾಗಿ ವೇಗವಾಗಿ ಹೆಚ್ಚುತ್ತಿರುವುದರಿಂದ ಅಯಾ ಜಿಲ್ಲೆಯ ಸಿಯಿಓ ಹಾಗು ಜಿಲ್ಲಾಧಿಕಾರಿಗಳ ಅಭಿಪ್ರಾಯವನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆಂದು ಚುನಾವಣಾ ಅಯೋಗ ಸ್ಪಷ್ಟನೆ ನೀಡಿದೆ, ಇದರ ಹೊರತಾಗಿಯು ಅನೇಕ ಪ್ರಶ್ನೆ ಅನುಮಾನಗಳು ಏಳುತ್ತವೆ ಮತ್ತು ನಾವು ಅವುಗಳನ್ನು ಒಂದೊಂದು ಹಂತವಾಗಿ ಹೇಳುತ್ತಾ ಹೋಗೋಣ. ಇಲ್ಲಿ ಪ್ರಮುಖವಾಗಿ ಬರುವ ಪ್ರಶ್ನೆ ೧. ಅಧಿಕಾರಾವದಿ ಮುಗಿದ ಸದಸ್ಯರನ್ನು ಚುನಾವಣಾ ಆಯೋಗ ಮುಂದಿನ ಚುನಾವಣಾ ನಡೆಯುವ ತನಕ ಮುಂದುವರೆಸುತ್ತದೆಯೆ? ೨. ಚುನಾವಣಾ ಆಯೋಗ ಸರ್ಕಾರದ ಒತ್ತಡಕ್ಕೆ ಮಣಿಯಿತೆ? ೩. ನಾಮ ನಿರ್ದೇಶನ ಮಾಡುವುದಾದರೆ ಯಾವ ಆಧಾರದ ಮೇಲೆ ಮಾಡುತ್ತಾರೆ? ೪. ಕಾಂಗ್ರೆಸ್ ಆಯೋಗಕ್ಕೆ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ಉದ್ದೇಶ ಏನಿರಬಹುದು? ೫.ಚುನಾವಣಾ ಅಯೋಗದ ಈ ನಿರ್ಧಾರವನ್ನು ನ್ಯಾಯಾಲಯದಲ್ಲಿ  ಏನಾಗಬಹುದು? ಇನ...

ನಾನು ಕಣಪ್ಪಾ ಹೇಮಿ ಗಂಡ..!

"ನಾನು ಕಣಪ್ಪಾ ಹೇಮಿ ಗಂಡ" ಪದಬಂಧದ ಜೊತೆಗೆ ಅನುಬಂಧ ಹೊಂದಿದವನು ನಾನು, ಇವತ್ತಿನ ದಿನ ಹಾಗೆ ಪದಬಂಧ ಪೂರ್ತಿ ಮಾಡಿ ಪೇಪರ್‌ನ ಹಿಂದೆ ತಿರುಗಿಸಿದೆ ಹೆಂಡತಿಯ ಗುಣಗಾನ ಮಾಡೊ "wifeappriationday" ಬಗ್ಗೆ ಲಕ್ಷ್ಮಣರಾವ್ "ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ" ಲೇಖನ ಕಣ್ಣಿಗೆ ಬಿತ್ತು ಹಾಗೆ ಅದರಲ್ಲಿರೊ  ಕತೆನ ಇಲ್ಲಿ ಬರೀತಾ ಇದಿನಿ "ಪತ್ನಿಯನ್ನು ಅರ್ಥ ಮಾಡಿಕೊಳ್ಳೊವ ದಿನ ವರ್ಷದಲ್ಲಿ ಒಂದು ದಿನವಷ್ಟೇ ಅಲ್ಲ ೩೬೫ ದಿನಗಳು ಅದೇ ಆಗಿರಬೇಕು ಇಲ್ಲದಿದ್ದರೆ ಪತಿಗೆ ಉಳಿಗಾಲವೆ ಇಲ್ಲ" "ನಮ್ಮಲ್ಲಿ ಅರ್ಧನಾರೀಶ್ವರನ ಕಲ್ಪನೆಯೆ ಇದೆ, ಗಂಡು ಹೆಣ್ಣಿಲ್ಲದೆ ಅಪೂರ್ಣ ಹೆಣ್ಣು ಗಂಡಿಲ್ಲದೆ ಅಪೂರ್ಣ , ಇದರಲ್ಲಿ ಒಬ್ಬರಿಲ್ಲದೆ ಹೋದರೂ ಜೀವನ ಪ್ರಯಾಣವನ್ನು ಪೂರೈಸುವುದು ಸಾಧ್ಯವಿಲ್ಲ ಎತ್ತಿನ ಬಂಡೆಯ ಎರಡು ಗಾಲಿಗಳ ತರವೆಂಬ ಕಲ್ಪನೆ ನಮ್ಮಲ್ಲಿ ಹಿಂದಿನಿಂದಲೂ ಇದೆ" ಈ ಪರಿಕಲ್ಪನೆ ಮೆಚ್ಚುಗೆ ನಮ್ಮಲ್ಲಿ  ಮುದ್ದಣ ಮನೋರಮೆಯರ ಕಾಲದಿಂದ ನವಕಾವ್ಯದ ತನಕ ಎಲ್ಲರೂ ಬರೆದವರೆ. ಕುವೆಂಪು ಅವರದಂತು ಬಹಳ ಪ್ರಸಿದ್ಧವಾದ ಕವಿತೆಯೆ ಇದೆ, ಇದರಲ್ಲಿ ಕವಿ ಕನಸಲ್ಲಿ ಸ್ವರ್ಗಕ್ಕೆ ಹೋಗಿದ್ದರಂತೆ, ಅಲ್ಲಿ ಸ್ವರ್ಗದ ಬಾಗಿಲವರೆಗೆ ನೇರ ಪ್ರವೇಶ ಸಿಕ್ಕು ಅದರ ಮುಂದೆ ಹೋಗಿ ನಿಂತಾಗ ಅಲ್ಲಿನ ದ್ವಾರ ಪಾಲಕ ತಡೆಯುತ್ತಾನೆ. ನೀನ್ಯಾರು ಅಂದರೆ ಕವಿ "ಪುಟ್ಟಪ್ಪ" ಅನ್ನುತ್ತಾರೆ,...

Don't mess with old people #joke

George Phillips, an elderly man from Walled Lake, Michigan, was going up to bed, when his wife told him that he'd left the light on in  the garden shed, which she could see from the bedroom window. George opened the back door to go turnoff the light, but saw that there were people in the shed stealing things. He phoned the police, who asked "Is someone in your house?" He said "No, but some people are breaking into my garden shed and stealing from me." Then the police dispatcher said "All patrols are busy, you should lock your doors and an officer will be along when one is available" George said, "Okay." He hung up the phone and counted to 30. Then he phoned the police again. "Hello, I just called you a few seconds ago because there were people stealing things from my shed. Well, you don't have to worry about them now because I just shot and killed them both; the dogs are eating them right now," and he hung up. Wit...

ಮಂತ್ರಿ ವಿಷದ ಬಾಟಲಿಯನ್ನು ಹೇಗೆ ಕಂಡು ಹಿಡಿದ?

ತುಂಬಾ ಹಿಂದೆ ಒಬ್ಬ ದೊಡ್ಡ ಚಕ್ರವರ್ತಿ ಇದ್ನಂತೆ. ಅವನು ಒಳ್ಳೆಯ ರಾಜ ಅನಿಸಿಕೊಂಡರೂ ಅವನಿಗೆ ವಿಪರೀತ ಹೆಂಡ ಕುಡಿಯುವ ಚಟ ಇತ್ತಂತೆ. ಒಂದ್ಸಲ ಅವನ ಬರ್ತ್‌ಡೇಯನ್ನು ಫುಲ್ ಗ್ರ್ಯಾಂಡಾಗಿ ಸೆಲೆಬ್ರೇಟ್ ಮಾಡ್ಕೋಬೇಕು ಅಂತ ಯೋಚ್ನೆ ಮಾಡಿ ಅವನ ಸಾಮ್ರಾಜ್ಯದ 1000 ಜನ VIPಗಳನ್ನ ಇನ್ವೈಟ್ ಮಾಡಿ ಒಂದು ಆಫರ್ ಇಡ್ತಾನಂತೆ. ಯಾರು ತುಂಬಾ ಟೇಸ್ಟಾಗಿರೋ ಹೆಂಡ ತರ್ತಾರೋ ಅವರಿಗೆ ಒಂದು ಸ್ಪೆಷಲ್ ಗಿಫ್ಟ್ ಅಂತ ಹೇಳಿರ್ತಾರೆ. VIPಗಳು ವಿಶೇಷವಾದ ಸ್ಕಾಚುಗಳು, ವಿಸ್ಕಿ, ರಮ್, ಜಿನ್, ಬ್ರಾಂಡಿ, ಬಿಯರ್, ಟಕೀಲಾಗಳನ್ನೆಲ್ಲ ತೊಗೊಂಡು ಎರಡು ದಿನ ಮೊದಲೇ ಅರಮನೆ ಸೇರ್ಕೊಂಡಿರ್ತಾರೆ. ಅವರು ತಂದ 1000 ಬಾಟ್ಲಿಗಳನ್ನೆಲ್ಲ ಒಂದ್ಕಡೆ ಇಟ್ಟಿರ್ತಾರೆ. ಅವುಗಳಲ್ಲಿ ಯಾರೋ ಒಬ್ಬ ಪಕ್ಕದ ರಾಜ್ಯದ ಸೈನಿಕ ರಾಜನನ್ನು ಸಾಯ್ಸೋದಕ್ಕೆ ಅಂತ ಒಂದು ಹೆಂಡದ ಬಾಟ್ಲಿಗೆ ವಿಷ ಸೇರಿಸಿಬಿಡ್ತಾನೆ. ಈ ವಿಷ ಎಷ್ಟು ಸ್ಟ್ರಾಂಗ್ ಅಂದ್ರೆ ಒಂದೇಒಂದು ಹನಿ ಕುಡಿದ್ರೂ ಸಾಕು, ಮನುಷ್ಯ 24 ಗಂಟೆಯೊಳಗೆ ಸತ್ತೋಗ್ತಾನೆ. ಈ ವಿಷಯ ಗೂಢಚಾರರ ಕಡೆಯಿಂದ ರಾಜನಿಗೆ ಗೊತ್ತಾಗಿಬಿಡತ್ತೆ. ಆದ್ರೆ ಯಾವುದರಲ್ಲಿ ವಿಷ ಇದೆ ಅಂತ ಗೊತ್ತಿಲ್ಲ!!! ನಾಳೆ ಅಲ್ಲ ನಾಡಿದ್ದು ಪ್ರೋಗ್ರಾಂ ಇದೆ.... ಏನ್ ಮಾಡೋದು? ಬಂದಿರೋ ಗೆಸ್ಟುಗಳಿಗೆ ತೊಂದ್ರೆ ಆಗ್ಬಾರ್ದು, ಪಾರ್ಟಿ ಕ್ಯಾನ್ಸಲ್ ಆಗ್ಬಾರ್ದು. ರಾಜ ಮಂತ್ರಿಯನ್ನು ಕರೆದು ಥೇಟ್ ಸಿಲ್ಲಿಲಲ್ಲಿ ಸೀರಿಯಲ್ ತರ ಜೇಡ ಬಲೆ ಕಟ್ಟಿರೋ ಮೂಲೆ ತೋರ್ಸಿ ಹಿಂಗಿಂಗೆ ಹಿಂಗ...

Dr. ರಾಜಕುಮಾರ್ ಅವರ ಪಿಚ್ಚರ್‌ಗಳನ್ನು ಗುರುತಿಸಿ. ಉತ್ತರಗಳು

*Home quarantine quiz* Identify Dr.Rajkumar Movies.... 1.(🏥✂🔪💉)💎🚀 2.🐅🍼🌾 3.⏰🎠 4.ka✌🐀🚫🌑🛂 5.(🏤💴💰💵💷)❓ 6.👤❓ 7.☁⛅☁ 8.🔫⛪ 9.🚫ra👀👨 10.🍼🍯 11.🌈 12.🗻💃 13.❤🎁 14.🎯 15.✌⭐⭐ 16.✌🙇 17.🙏👤 18.👑✋👑 19.va🎅🎼 20.💏🏆 Grades 10 correct: Kannada Abhimani 15 correct: Dr.Rajkumar Abhimani 20 correct: Parama Kannada Bhakta ಉತ್ತರಗಳು. 1. ಆಪರೇಷನ್ ಡೈಮಂಡ್ ರಾಕೆಟ್ 2. ಹುಲಿಯ ಹಾಲಿನ ಮೇವು 3. ಸಮಯದ ಗೊಂಬೆ 4. ಕವಿರತ್ನ ಕಾಳಿದಾಸ 5. ಸಂಪತ್ತಿಗೆ ಸವಾಲ್ 6. ಯಾರಿವನು 7. ಚಲಿಸುವ ಮೋಡಗಳು 8. ಗಂಧದ ಗುಡಿ 9. ಬೇಡರ ಕಣ್ಣಪ್ಪ 10. ಹಾಲು ಜೇನು 11. ಕಾಮನ ಬಿಲ್ಲು 12. ಗಿರಿ ಕನ್ಯೆ 13. ಪ್ರೇಮದ ಕಾಣಿಕೆ 14. ಗುರಿ 15. ಎರಡು ನಕ್ಷತ್ರಗಳು 16. ಎರಡು ಕನಸು 17. ದೇವತಾ ಮನುಷ್ಯ 18. ರಾಜ ನನ್ನ ರಾಜ 19. ವಸಂತ ಗೀತ 20. ಒಲವೇ ಗೆಲುವು

ಬರುವೆ ಬಾಯಮ್ಮ.. ಎಲ್ಲಿದ್ದೀಯಮ್ಮ..?

ಕೊರೋನಾ ಕಾಯಿಲೆ ಇಡಿ ವಿಶ್ವಕ್ಕೆ ವಕ್ಕರಿಸಿ ತಿಂಗಳುಗಳೆ ಕಳೆದಿವೆ, ಇಡಿ ವಿಶ್ವದ ಜನ ನಾರಾಯಣನ ಸ್ವರೂಪವಾದ ವೈದ್ಯರಿಗೆ ಜಯಕಾರ ಹಾಕುತ್ತಿದ್ದಾರೆ, ಆದರೆ ಬರುವೆ ಕಿರತೋಡಿ ಏಳಿಗೆ ಜನರು ಸರ್ಕಾರ ನೇಮಿಸಿದ ವೈದ್ಯ ಸಹಾಯಕಿಗೆ ಸುಮಾರು ನಾಲ್ಕು ವರ್ಷಗಳಿಂದ ಹಿಡಿಶಾಪ ಹಾಕುತ್ತಿದ್ದಾರೆ. ಅಂತದಕ್ಕು ಅದೇನಪ್ಪ ಕತೆ ಅಂದರೆ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಬಾಯಮ್ಮನ ಹಿಂದೆ ಕೆಲಸ ಮಾಡಿದ್ದವರೆಲ್ಲ ಊರಿನವರ ಕೈಯಲ್ಲಿ ಶಹಭಾಷ್ ಪಡೆದು ಆತ್ಮೀಯತೆಯಿಂದ ಬೀಳ್ಕೊಂಡಿದ್ದರು, ಕಾಲ ಕಾಲಕ್ಕೆ ಹಳ್ಳಿಯ ಮನೆಗಳಿಗೆ ಭೇಟಿ ನೀಡಿ ಊರಿನವರ ಜೊತೆಗೆ ಹೊಂದಿಕೊಂಡು ನಿಸ್ವಾರ್ಥವಾಗಿ ತಮ್ಮ ಸೇವೆ ಸಲ್ಲಿಸಿ ಹೋಗಿದ್ದರು. ಕೇಳೋರಿಲ್ಲ ಆದರೆ ಇವಾಗ ಇರುವ ಬಾಯಮ್ಮನ ಕತೆಯೇ ಬೇರೆ, ಅವರು ಇಲ್ಲಿಗೆ ಬಂದ ಐದಾರು ವರ್ಷಗಳಲ್ಲಿ ಹೆಚ್ಚೆಂದರೆ ಒಂದು ಎರಡು ಬಾರಿ ಹಳ್ಳಿಯ ಮನೆಗಳಿಗೆ ಬೇಟಿ ನೀಡಿದ್ದಾರೆ ಅದೂ ಎಲ್ಲರ ಮನೆಗು ಅಲ್ಲ ಅನ್ನುವುದು ಗಮನಿಸಿಬೇಕಾದ ಅಂಶ. ಊರಿನ ಎಷ್ಟೋ ಮಂದಿಗೆ ನಮ್ಮ ಬರುವೆಗೆ ಬಾಯಮ್ಮ ಇದ್ದಾಳೆ ಎನ್ನುವುದೇ ಮರೆತು ಹೋಗಿದೆ ಅಷ್ಟರ ಮಟ್ಟಿಗಿದೆ ಇವರ ಕಾರ್ಯವೈಖರಿ, ಇನ್ನು ಹೆಚ್ಚಿನ ಜನರಿಗೆ ಬಾಯಮ್ಮನ ಹೆಸರು ಕೂಡ ಗೊತ್ತಿಲ್ಲ ಎನ್ನುವುದು ದುರಂತ, ಬಿಡಿ ಹೋಗಲಿ ಹೆಸರು ತಗೊಂಡು ಮಾಡೋದು ಏನಿದೆ, ಹಳ್ಳಿಯ ಜನ ತಂಡಿ ಜ್ವರ ತಲೆನೋವು ಬಂದಾಗ ಹೋಗುವುದು ಬಾಯಮ್ಮನ ಬಳಿ ಆದರೆ ನಮ್ಮ ಬರುವೆಯಲ್ಲಿ ಬಾಯಮ್ಮನ ಕೇಂದ್ರ ಓಪನ್ ಆಗಿರುವುದೆ ವಾರಕ್ಕೆ ಒಂದೊ ಎರಡ...